ಬಳ್ಳಾರಿ: ನಿವೃತ್ತ ಪೊಲೀಸ್​​ ಅಧಿಕಾರಿ ಜಮೀನಿನಲ್ಲಿ ರಾತ್ರೋರಾತ್ರಿ ಜೆಸಿಬಿಯಿಂದ ಬೋರ್​​ವೆಲ್ ನಾಶ ಪಡಿಸಿದ ಕಿರಾತಕರು!

ಹೌದು, ಅದು ಬರಡು ಭೂಮಿ.. ಈ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯಬೇಕು ಅಂತಾ ಬೋರವೆಲ್ ಕೊರೆಸಿದ್ದ ನಿವೃತ್ತ ASI ಪೋಲಿಸ್ ಅಧಿಕಾರಿ.. ಜಲದೇವನ ಕೃಪೆ ಎನ್ನುವಂತೆ ಬೀರು ಬೇಸಿಗೆಯಲ್ಲಿ ಮೂರು ಇಂಚು ನೀರು ಸಹ ಬಿದಿತ್ತು. ಆದರೆ ಯಾರೋ ಕಿಡಗೇಡಿಗಳು ರಾತ್ರೋರಾತ್ರಿ ಜಮೀನಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊರೆಸಿದ್ದ ಬೋರವೆಲ್‌ ಅನ್ನು, ಜೆಸಿಬಿ ಮೂಲಕ ನೆಲ ಸಮಮಾಡಿದ್ದಾರೆ!

Follow us
| Updated By: ಸಾಧು ಶ್ರೀನಾಥ್​

Updated on:Mar 18, 2024 | 6:10 PM

ಆತ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದವರು. ನಿವೃತ್ತಿ ಜೀವನವನ್ನ ಉತ್ತಮ ಕೃಷಿ (Agriculture) ಮಾಡುತ್ತಾ ಕಳೆಯಬೇಕು ಅಂತಾ ಯೋಚನೆ ಮಾಡಿದ್ದಾತ.. ಅದರಂತೆ ತಮ್ಮ ಜಮೀನಿನಲ್ಲಿ (Bellary) ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೋರವೆಲ್ ಸಹ ಕೊರಸಿದ್ದರು. ಉತ್ತಮ ನೀರು ಸಹ ಬಿದ್ದಿತ್ತು. ಆದರೆ ಯಾರೋ ಕಿಡಗೇಡಿಗಳು ರಾತ್ರೋರಾತ್ರಿ ಅವರ ಜಮೀನಿನಲ್ಲಿನ ಬೋರವೆಲ್ (borewell) ನಾಶ ಮಾಡಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಹೌದು, ಅದು ಬರಡು ಭೂಮಿ.. ಈ ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯಬೇಕು ಅಂತಾ ಬೋರವೆಲ್ ಕೊರೆಸಿದ್ದ ನಿವೃತ್ತ ASI ಪೋಲಿಸ್ ಅಧಿಕಾರಿ.. ಜಲದೇವನ ಕೃಪೆ ಎನ್ನುವಂತೆ ಬೀರು ಬೇಸಿಗೆಯಲ್ಲಿ ಮೂರು ಇಂಚು ನೀರು ಸಹ ಬಿದಿತ್ತು. ಆದರೆ ಯಾರೋ ಕಿಡಗೇಡಿಗಳು ರಾತ್ರೋರಾತ್ರಿ ಜಮೀನಿಗೆ ನುಗ್ಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊರೆಸಿದ್ದ ಬೋರವೆಲ್‌ ಅನ್ನು, ಜೆಸಿಬಿ ಮೂಲಕ ನೆಲ ಸಮಮಾಡಿದ್ದಾರೆ!

ಎಸ್ ಈ ದುರಂತ ಘಟನೆ ನಡೆದಿರುವುದು ಬಳ್ಳಾರಿ ನಗರ ಸಮೀಪದ ಬಂಡೆಹಟ್ಟಿಯಲ್ಲಿ… ವೆಂಕಟರಮಣ ಎನ್ನುವ ನಿವೃತ್ತಿ ಪೊಲೀಸ್ ಅಧಿಕಾರಿ ವೈಜ್ಞಾನಿಕ ಪದ್ದತಿಯ ಕೃಷಿ ಮಾಡಿ ಉತ್ತಮ ಜೀವನ ಮಾಡಬೇಕು ಅಂತಾ ಯೋಜನೆ ರೂಪಿಸಿದ್ದರು. ಅದರಂತೆ ಬರಡು ಭೂಮಿಯನ್ನ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೃಷಿ ಯೋಗ್ಯ ಭೂಮಿಯನ್ನಾಗಿ ಮಾಡಿಕೊಂಡಿದ್ದರು. ಜೊತೆಗೆ 50,000 ರೂ ಖರ್ಚು ಮಾಡಿ ಇದೇ ಮಾರ್ಚ್​​​ 12 ನೇ ತಾರೀಕು ಬೋರವೆಲ್ ಸಹ ಕೊರೆಸಿದ್ದರು. ಅದರಲ್ಲಿ ಮೂರು ಇಂಚು ಉತ್ತಮ ನೀರು ಸಹ ಬಿದ್ದಿತ್ತು. ನೀರು ಬಿದ್ದ ಖುಷಿಯಲ್ಲಿ ಗಂಗಾ ಮಾತೆಗೆ ಪೂಜೆ ಮಾಡಿ ಹರಕೆ ಸಹ ನೀಡಿದ್ದರು. ಆದರೆ ಮಾರ್ಚ್ 13 ನೇ ತಾರೀಕು ಅದೇ ಜಮೀನಿಗೆ ಬಂದು ತಾವು ಕೊರೆಸಿದ್ದ ಬೋರವೆಲ್ ಮಂಗಮಾಯವಾಗಿತ್ತು.

ಅಂದ್ಹಾಗೆ ಬಳ್ಳಾರಿ ನಗರ ಸಮೀಪದ ಬಂಡಿಹಟ್ಟಿ ಬಳಿಯ 2 ಎಕರೆ 54 ಸೆಂಟ್ಸ್ ಭೂಮಿಯಲ್ಲಿ ಇದೇ ಮಾರ್ಚ್​​​ 12 ರಂದು 50,000 ರೂ ಖರ್ಚು ಮಾಡಿ ಬೋರವೆಲ್ ಕೊರೆಸಿದ್ದ ನಿವೃತ್ತಿ ಅಧಿಕಾರಿಗೆ.. ಇಂತಹ ಬಿರು ಬೇಸಿಗೆಯಲ್ಲಿ ನೀರು ಬಂದಿದ್ದು ನೋಡಿ ಸಂತಸವಾಗಿತ್ತು. ಜೊತೆಗೆ ಮನೆ ಮಂದಿಗೆಲ್ಲ ಹೇಳಿ ಗಂಗಾ ಮಾತೆಗೆ ಹರಕೆ ಸಹ ತೀರಿಸಿದ್ದರು. ಇನ್ನೇನೂ ಉತ್ತಮ ಸಿಹಿ ನೀರು ಬಂದಿದೆ. ಹಣ್ಣು, ತರಕಾರಿ ಹೀಗೆ ಉತ್ತಮ ಬೆಳೆ ಬೆಳೆದು ನಿವೃತ್ತಿ ಜೀವನವನ್ನ ಭೂ ತಾಯಿ ಸೇವೆ ಮಾಡುತ್ತಾ ಕಳೆಯಬೇಕು ಎಂದುಕೊಂಡಿದ್ದರು.

ಆದರೆ ಮಾರ್ಚ್​​12 ರ ಮರುದಿನ ತನ್ನ ಸ್ನೇಹಿತರಿಗೆ ಬೋರವೆಲ್ ತೋರಿಸಬೇಕು ಅಂತಾ ಜಮೀನಿಗೆ ಬಂದಿದ್ದರು. ಆದರೆ ಅವರಿಗೆ ಶಾಕ್ ಎದುರಾಗಿತ್ತು. ರಾತ್ರೋರಾತ್ರಿ ಯಾರೋ ಕಿಡಗೇಡಿಗಳು ಹೊಸ ಬೋರವೆಲ್ ನಾಶ ಮಾಡಿ ಜಮೀನು ಹಾಳು ಮಾಡಿ ಪೈಪ್‌ಗಳನ್ನ ಕಿತ್ತು ಹಾಕಿ ಕ್ರೌರ್ಯ ಮೆರೆದಿದ್ದಾರೆ. ಆ ಹೀನ ದೃಶ್ಯ ಕಂಡ ನಿವೃತ್ತ ಅಧಿಕಾರಿ ಕಂಗಾಲಾಗಿ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ. ಇನ್ನು ಇಂತಹ ಘಟನೆ ಮಾಡಿದವರ ವಿರುದ್ಧ ಕಠಿಣ ಕ್ರಮ ಆಗಬೇಕು ಅಂತಾ ಜನ್ರು ಒತ್ತಾಯ ಮಾಡಿದ್ದಾರೆ.

ಒಟ್ಟಿನಲ್ಲಿ ನಿವೃತ್ತಿ ಬಳಿಕ ಪೊಲೀಸ್ ಅಧಿಕಾರಿ ಕೃಷಿ ಮಾಡಬೇಕು ಅಂತಾ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಭೂಮಿ ಸಮ ಮಾಡಿಸಿ ಬೋರವೆಲ್ ಕೊರೆಸಿದ್ದರು. ಆದರೆ ಯಾರೋ ಕಿಡಗೇಡಿಗಳು ಈ ರೀತಿ ಬೋರವೆಲ್ ಕಿತ್ತು ಹಾಕಿ ತಮ್ಮ ಕ್ರೌರ್ಯ ಮೆರೆದಿದ್ದಾರೆ ಅಂತಹವರ ವಿರುದ್ಧ ಕಠಿಣ ಕ್ರಮ ಆಗಬೇಕು ಅಂತಾ ಜನ್ರು ಸಹ ಒತ್ತಾಯ ಮಾಡುತ್ತಿದ್ದಾರೆ. ಇನ್ನು ಪೊಲೀಸ್ ಅಧಿಕಾರಿಗಳು ನಿರ್ಲಕ್ಷ್ಯ ತೋರದೆ ಕಿಡಿಗೇಡಿಗಳನ್ನ ಬಂಧಿಸಬೇಕಿದೆ.

Published On - 6:07 pm, Mon, 18 March 24

ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಮಾರ್ಟಿನ್​ ಸಿನಿಮಾದ ಅದ್ದೂರಿ ಪ್ರೀ-ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
ಉಡುಪಿಯ ಹೆಬ್ರಿಯಲ್ಲಿ ಮೇಘಸ್ಫೋಟ; ಭೀಕರ ಪ್ರವಾಹ ಸೃಷ್ಟಿ
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
‘ಡೆವಿಲ್​’ ಎದುರು ‘ಕರ್ನಾಟಕದ ಅಳಿಯ’ ಸಿನಿಮಾ ಬರೋದು ಫಿಕ್ಸ್: ಪ್ರಥಮ್
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಉತ್ತರ ಕನ್ನಡ: ಮುರುಡೇಶ್ವರ ಕಡಲತೀರಕ್ಕೆ ಪ್ರವಾಸಿಗರಿಗೆ ನಿರ್ಬಂಧ
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಬಿಗ್​ಬಾಸ್​ನಲ್ಲಿ ಮನೆಯಲ್ಲಿ ಯಾರು ಹಿಟ್? ಫ್ಲಾಪ್ ಆಗಿದ್ದು ಯಾರು?
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಮುಡಾ ಹಗರಣದ ಬಗ್ಗೆ ಪದೇ ಪದೆ ಮಾತಾಡೋದು ಬೇಡ: ಸಚಿವ ವಿ ಸೋಮಣ್ಣ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ದರಲ್ಲ ಈಗೇನಾಯ್ತು: ಹೆಚ್​ಡಿಕೆ
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
ರಾಮಲೀಲಾ ನಾಟಕ ಪ್ರದರ್ಶನದ ವೇಳೆ ರಾಮ ಪಾತ್ರಧಾರಿ ಹೃದಯಾಘಾತದಿಂದ ಸಾವು
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು
ಸಿದ್ದರಾಮಯ್ಯ ವಾಹನಕ್ಕೆ ವಿರುದ್ಧ ದಿಕ್ಕಿನಲ್ಲಿ ಬಂದ ಜನಾರ್ದನ ರೆಡ್ಡಿ ಕಾರು