ಬರ್ತಡೇ ದಿನವೇ ಮಾಜಿ ಮೇಯರ್ ಮಗನ ಅಟ್ಟಹಾಸ, ತಲ್ವಾರ ಝಳಪಿಸಿ ಹುಂಬತನ, ಯುವಕ ಬೆಂಗಳೂರಿನಲ್ಲಿ ಸಾವು
ಹೌದು, ಮಾರ್ಚ್ 3ನೇ ತಾರೀಖು ರಾತ್ರಿ 10:30 ರ ಸುಮಾರಿಗೆ ಬಳ್ಳಾರಿಯ ಹುಸೇನ್ ನಗರದಲ್ಲಿ ಮಾಜಿ ಮೇಯರ್ ನಾಗಮ್ಮನ ಮಗ ರಘು ತನ್ನ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳುತ್ತಿದ್ದ.. ಏರಿಯಾ ತುಂಬ ಲೈಟಿಂಗ್, ಡಿಜೆ, ಯುವಕರ ಗುಂಪು ಹೀಗೆ ಹತ್ತು ಹಲವು ರೀತಿ ಸಂಭ್ರಮದಲ್ಲಿ ತೊಡಗಿದ್ದ.. ಆಗಲೇ ಈ ಅನಾಹುತ ಸಂಭವಿಸಿದ್ದು...
ಆತ ಮಾಜಿ ಮೇಯರ್ (Ex-mayor) ಮಗ, ತನ್ನ ಬರ್ತಡೇಯನ್ನ (Birthday) ಸಂಭ್ರಮದಿಂದ ಸೆಲೆಬ್ರೇಶನ್ ಮಾಡಬೇಕು ಅಂತ ತನ್ನ ಏರಿಯಾದಲ್ಲಿ ಡಿಜೆ ಹಾಕಿಸಿ, ತನ್ನ ಗ್ಯಾಂಗ್‌ನೊಂದಿಗೆ ಕೈಯಲ್ಲಿ ತಲ್ವಾರ್ ಹಿಡಿದು ಝಳಪಿಸಿದ್ದ (Bellary). ಕುಡಿದು ಕುಣಿದು ಕುಪ್ಪಳಿಸುತ್ತಿದ್ದ ಗ್ಯಾಂಗ್ ಮಧ್ಯೆ ಸ್ವಲ್ಪ ದಾರಿ ಬಿಡಿ ಅಂದಿದಕ್ಕೆ ಯುವಕನ ಮೇಲೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆಗೊಳಗಾದ ಯುವಕ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಬೆಂಗಳೂರಿನಲ್ಲಿ (Bengaluru) ಗುರುವಾರ ಸಾವನ್ನಪ್ಪಿದ್ದಾನೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ…
ಹೌದು, ಮಾರ್ಚ್ 3ನೇ ತಾರೀಖು ರಾತ್ರಿ 10:30 ರ ಸುಮಾರಿಗೆ ಬಳ್ಳಾರಿಯ ಹುಸೇನ್ ನಗರದಲ್ಲಿ ಮಾಜಿ ಮೇಯರ್ ನಾಗಮ್ಮನ ಮಗ ರಘು ತನ್ನ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಣೆ ಮಾಡಿಕೊಳ್ಳುತ್ತಿದ್ದ.. ಏರಿಯಾ ತುಂಬ ಲೈಟಿಂಗ್, ಡಿಜೆ, ಯುವಕರ ಗುಂಪು ಹೀಗೆ ಹತ್ತು ಹಲವು ರೀತಿ ಸಂಭ್ರಮದಲ್ಲಿ ತೊಡಗಿದ್ದ..
ಇದೇ ವೇಳೆ ತಿಪ್ಪೇಸ್ವಾಮಿ ತನ್ನ ಸಂಬಂಧಿಕರ ಮನೆಗೆ ಹೋಗಬೇಕು ಅಂತಾ ಬಳ್ಳಾರಿಯ ಕಪ್ಪಗಲ್ ರಸ್ತೆಯಲ್ಲಿರುವ ತನ್ನ ಮನೆಯಿಂದ ಹುಸೇನ್ ನಗರಕ್ಕೆ ಬೈಕ್ ನಲ್ಲಿ ತನ್ನ ಗೆಳೆಯರೊಂದಿಗೆ ಬಂದಿದ್ದಾನೆ. ಈ ವೇಳೆ ದಾರಿ ಮಧ್ಯೆ ರಘು ಆ್ಯಂಡ್ ಟೀಂ ಕೈಯಲ್ಲಿ ತಲ್ವಾರ ಹಿಡಿದು ಕೇಕ್ ಕಟ್ ಮಾಡುತ್ತಾ ಕುಣಿದು ಕುಪ್ಪಳಿಸುತಿದ್ರು.
ಈ ವೇಳೆ ಸ್ವಲ್ಪ ಜಾಗ ಬಿಡಿ ನಾನು ಆ ಕಡೆ ಹೋಗಬೇಕು ಅಂತಾ ರಘು ಆಂಡ್ ಗ್ಯಾಂಗ್‌ಗೆ ಮನವಿ ಮಾಡಿದ್ದಾನೆ. ಹಳೆಯ ದ್ವೇಷದ ಹಿನ್ನೆಲೆ ಗ್ಯಾಂಗ್ ನಡುವೆ ಮಾತಿಗೆ ಮಾತು ಬೆಳೆದಿದೆ. ಇದರ ಮಧ್ಯೆ ಕೈಯಲ್ಲಿ ಬಡಿಗೆ, ಸ್ಟಿಕ್, ತಲ್ವಾರ್ ಹಿಡಿದು ರಘು ಮತ್ತು ಅವರ ಗ್ಯಾಂಗ್ ತಿಪ್ಪೇಸ್ವಾಮಿ ಸ್ವಾಮಿ ಮೇಲೆ ಹಲ್ಲೆ ಮಾಡಿಬಿಟ್ಟಿದ್ದಾರೆ.
ಜನ್ರು ಬಂದು ಬಿಡಿಸಿಕೊಳ್ಳುವಷ್ಟರಲ್ಲಿ ತೆಲೆ ಭಾಗಕ್ಕೆ ಬೆನ್ನಿಗೆ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡಿದ ಪರಿಣಾಮ ತೀವ್ರ ರಕ್ತಸ್ರಾವವಾಗಿ ತಿಪ್ಪೇಸ್ವಾಮಿ ಅಲ್ಲಿಯೇ ರಸ್ತೆಯಲ್ಲಿ ಬಿದ್ದಿದ್ದಾನೆ. ನಂತರ ಆತನನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಿಪ್ಪೇಸ್ವಾಮಿ ಸಾವನ್ನಪ್ಪಿದ್ದಾನೆ.
ಇನ್ನು ತಿಪ್ಪೇಸ್ವಾಮಿ ಫೈನಾನ್ಸ್ (ಬಡ್ಡಿ ವ್ಯವಹಾರ) ಮಾಡುತ್ತಿದ್ದ ನೂರಕ್ಕೆ ಇಂತಿಷ್ಟು ಬಡ್ಡಿ ಅಂತಾ ಸಾಲ ಕೊಡುತ್ತಿದ್ದ. ಅದೇ ರೀತಿ ಹಲ್ಲೆ ಮಾಡಿದ ರಘುಗೂ ಬರ್ತಡೇ ಸೆಲೆಬ್ರೇಶನ್ಗೆ 20,000 ಸಾಲ ಕೊಟ್ಟಿದ್ದ. ಜೊತೆಗೆ ಮೇಯರ್ ಚುನಾವಣೆ ಸಂದರ್ಭದಲ್ಲಿ 10 ಲಕ್ಷ ರೂ ಕೊಟ್ಟಿದ್ದ ಎಂದು ಆರೋಪ ಮಾಡಲಾಗುತ್ತಿದೆ.
ಹೀಗಾಗಿ ದುಡ್ಡು ವಾಪಾಸ್ ಕೊಡಬೇಕಾಗುತ್ತೆ ಅಂತಾ ಈ ರೀತಿ ಪ್ರೀ ಪ್ಲಾನ್ ಮಾಡಿ ತಿಪ್ಪೇಸ್ವಾಮಿಯನ್ನ ಕೊಲೆ ಮಾಡಿದ್ದಾರೆ ಅಂತಾ ಆರೋಪ ಮಾಡಲಾಗುತ್ತಿದೆ. ತಿಪ್ಪೇಸ್ವಾಮಿಗೆ ಮದುವೆಯಾಗಿ ಎರಡು ಮಕ್ಕಳಿದ್ದಾರೆ. ಕಪ್ಪಗಲ್ ಬಳಿ ಇವರ ವಾಸ, ಒಬ್ಬ ಅಣ್ಣನಿದ್ದಾನೆ. ಕುಟುಂಬಕ್ಕೆ ಇತನೇ ಆಧಾರವಾಗಿದ್ದ.
Also Read: ನೀರಿನ ವಿಚಾರಕ್ಕೆ ಲೇಡಿಸ್ ಹಾಸ್ಟೆಲ್ನಲ್ಲಿ ರ‍್ಯಾಗಿಂಗ್; ಜೂನಿಯರ್ ವಿದ್ಯಾರ್ಥಿನಿಯನ್ನು ಕೂಡಿ ಹಾಕಿ ಹಲ್ಲೆ
ಆದರೆ ಹಳೆ ದ್ವೇಷ ಮತ್ತು ಬಡ್ಡಿ ವ್ಯವಹಾರದಿಂದ ಈ ರೀತಿ ಹಲ್ಲೆಗೊಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಇನ್ನ ಕೊಲೆಗೆ ಸಂಬಂಧಿಸಿದಂತೆ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಘು ಮತ್ತವನ ಸಹಚರರು ಸೇರಿ ಹತ್ತು ಜನರ ವಿರುದ್ಧ ದೂರು ದಾಖಲಾಗಿದ್ದು, ರಘು ಸೇರಿ ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. A1 ಆರೋಪಿ ರಘು, ಅನಿಲ್‌ಕುಮಾರ, ಮುತ್ತು, ಬಾಲು, ಬಾಸ್ಕರ್, ರಾಜು, ರಾಜಶೇಕರ್ ಆರೋಪಿಗಳನ್ನು ಬಂಧಿಸಲಾಗಿದೆ.
ಮಾರ್ಚ್ 3ನೇ ತಾರೀಖು ರಾತ್ರಿ 10:30 ರ ಸುಮಾರಿಗೆ ಹಲ್ಲೆಗೊಳಗಾಗಿದ್ದ ತಿಪ್ಪೇಸ್ವಾಮಿ ಸತತ 18 ದಿನಗಳ ಕಾಲ ನಿರಂತರ ಚಿಕಿತ್ಸೆಗೊಳಗಾದರು ಸಾವನ್ನಪ್ಪಿದ್ದಾನೆ. ಕುಟುಂಬಕ್ಕೆ ಆಧಾರವಾಗಿದ್ದ ತಿಪ್ಪೇಸ್ವಾಮಿಯನ್ನ ಕಳೆದುಕೊಂಡು ಇಡೀ ಕುಟುಂಬ ಅನಾಥವಾಗಿದೆ.
ಅಪರಾಧ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 10:01 am, Fri, 22 March 24