ಬಳ್ಳಾರಿ ಗೂಡಂಗಡಿಯಲ್ಲಿ ಗಾಂಜಾ ಮಿಶ್ರಿತ ಚಾಕಲೇಟ್ ಮಾರಾಟ: ಆರೋಪಿ ಅರೆಸ್ಟ್
ಗಾಂಜಾ, ಅಫೀಮ್, ಚರಸ್, ಡ್ರಗ್ಸ್ ವಿಚಾರದಲ್ಲಿ ಪಂಜಾಬ್ ಕುಖ್ಯಾತಿಗೆ ಪಾತ್ರವಾಗಿದೆ. ಅದೇ ರೀತಿ ರಾಜ್ಯದ ಕೆಲ ಭಾಗಗಳಲ್ಲಿ ಗಾಂಜಾ ಸಿಗುತ್ತದೆ. ಸದ್ಯ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಸಿಂಧನೂರ ಗ್ರಾಮದಲ್ಲಿ ಗಾಂಜಾ ಮಿಶ್ರಿತ ಚಾಕೊಲೇಟ್ ಮಾರಾಟ ಮಾಡುತ್ತಿದ್ದ ಘಟನೆಯೊಂದು ನಡೆದಿದ್ದು, ಓರ್ವ ಬಿಹಾರ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. 2,600 ಮೌಲ್ಯದ ಗಾಂಜಾ ಮಿಶ್ರಿತ ಚಾಕೊಲೇಟ್ ಜಪ್ತಿ ಮಾಡಲಾಗಿದೆ.
ಬಳ್ಳಾರಿ, ಜೂನ್ 2: ಗಾಂಜಾ (ganja) ಮಿಶ್ರಿತ ಚಾಕೊಲೇಟ್ ಮಾರುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ (arrested). ಜಿಲ್ಲೆಯ ಸಿರಗುಪ್ಪ ತಾಲೂಕಿನ ಸಿಂಧನೂರ ಗ್ರಾಮದಲ್ಲಿ ಘಟನೆ ನಡೆದಿದೆ. ಬಿಹಾರ ಮೂಲದ ಆರೋಪಿ ಕಪಾಲ್ ಪಾಸ್ವಾನಿ (38) ಬಂಧಿತ ವ್ಯಕ್ತಿ. ಆರೋಪಿ ಕಪಾಲ್ ಗೂಡಂಗಡಿಯಲ್ಲಿ ಚಾಕೊಲೇಟ್ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಅಬಕಾರಿ ಸಿಬ್ಬಂದಿ ದಾಳಿ ಮಾಡಿದ್ದು, 2,600 ಮೌಲ್ಯದ ಗಾಂಜಾ ಮಿಶ್ರಿತ ಚಾಕೊಲೇಟ್ ಜಪ್ತಿ ಮಾಡಲಾಗಿದೆ. ಸಿರಗುಪ್ಪ ಅಬಕಾರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಸ್ಕಿಟ್, ಹಣ್ಣುಗಳ ಜೊತೆಗೆ ಗಾಂಜಾ ಪ್ಯಾಕೆಟ್
ಉಡುಪಿ: ಜಿಲ್ಲೆಯ ಹಿರಿಯಡ್ಕ ಸಬ್ ಜೈಲಿನಲ್ಲಿ ವಿಚಾರಣಾ ಬಂಧಿಯಾಗಿದ್ದವನನ್ನು ನೋಡಲು ಬಂದ ಇಬ್ಬರು ಬಿಸ್ಕಿಟ್, ಹಣ್ಣುಗಳ ಜೊತೆಗೆ ಗಾಂಜಾ ಪ್ಯಾಕೆಟ್ ತಂದ ಆತಂಕಕಾರಿ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಈ ಕುರಿತು ಪ್ರಕರಣ ದಾಖಲಾಗಿತ್ತು. ಹಿರಿಯಡ್ಕ ಜೈಲಿನಲ್ಲಿದ್ದ ರೇವುನಾಥ ಅಲಿಯಾಸ್ ಪ್ರೇಮನಾಥ (23) ಈತನ ಸಂದರ್ಶನಕ್ಕೆ ಮೇ.20 ರಂದು ಸಂಜೆಗೆ ಆತನ ಸ್ನೇಹಿತರಾದ ಸುದೀಶ ಮತ್ತು ವರುಣ ಎನ್ನುವರು ಹಣ್ಣುಗಳು, ಬಿಸ್ಕೇಟ್‌ಗಳನ್ನು ತಂದಿದ್ದು ಮುಖ್ಯದ್ವಾರದಲ್ಲಿ ದ್ವಾರ ಪಾಲಕನಾಗಿ ಕರ್ತವ್ಯಕ್ಕೆ ಇದ್ದ ಸಂತೋಷ ದಗಾಟೆ ಅವರ ಬಳಿ ಕೊಟ್ಟು, ವಿಚಾರಣಾ ಬಂದಿ ರೇವುನಾಥರವರಿಗೆ ಕೊಡಲು ತಿಳಿಸಿದ್ದರು.
ಇದನ್ನೂ ಓದಿ: ಪಲ್ಲಕ್ಕಿ ಟ್ರ್ಯಾಕ್ಟರ್ಗೆ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವು
ನಂತರ ಅಲ್ಲಿಂದ ಬಂಧಿತನೊಂದಿಗೆ ಮಾತನಾಡಲು ಸಂದರ್ಶನ ಕೊಠಡಿಗೆ ಹೋಗಿ ಮಾತನಾಡಿ ಕಾರಾಗೃಹದಿಂದ ಹೊರ ನಡೆದಿದ್ದರು. ನಂತರ ವಿಚಾರಣಾ ಬಂಧಿಯ ಸ್ನೇಹಿತರು ತಂದಿದ್ದ ವಸ್ತುಗಳನ್ನು ಕಾರಗೃಹದ ಸಿಬ್ಬಂದಿಗಳಾದ ಸಹಾಯಕ ಜೈಲರ್, ದ್ವಾರಪಾಲಕರು ಮತ್ತು ದ್ವಾರ ಸಹಾಯಕರು ಪರಿಶೀಲಿಸಿದಾಗ ಬಿಸ್ಕೇಟ್ ಮತ್ತು ಹಣ್ಣುಗಳ ಮಧ್ಯದಲ್ಲಿ ಗಾಂಜಾದಂತಹ ಸೊಪ್ಪು ಇರುವುದಾಗಿ ಕಂಡುಬಂದಿದ್ದು ಜಿಲ್ಲಾ ಕಾರಾಗೃಹದ ಅಧೀಕ್ಷಕ ಸಿದ್ದರಾಮ ಪಾಟೀಲ ಅವರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: Cyber Crime: ಸೈಬರ್ ವಂಚನೆಯಲ್ಲಿ 2 ಕೋಟಿ ರೂ. ಕಳೆದುಕೊಂಡ ಕಾಫಿ ಬೆಳಗಾರ
ಅವರು ಪರಿಶೀಲಿಸಿದಾಗ ಬ್ಯಾಗ್ನಲ್ಲಿ ಹಣ್ಣು ಮತ್ತು ಬಿಸ್ಕೇಟ್ನ ಮದ್ಯ ಪ್ಲಾಸ್ಟಿಕ್ ತೊಟ್ಟೆಯಲ್ಲಿ 10 ರಿಂದ 15 ಗ್ರಾಂ ನಷ್ಟು ಗಾಂಜಾ ಸೊಪ್ಪು ಕಂಡು ಬಂದಿದ್ದು ನಿಷೇಧಿತ ವಸ್ತುಗಳನ್ನು ಬಿಸ್ಕೇಟ್ ಹಾಗೂ ಹಣ್ಣುಗಳ ಮಧ್ಯದಲ್ಲಿ ಸೇರಿಸಿ ಕಾರಾಗೃಹ ಒಳಗಡೆ ನುಸುಳಿಸಲು ಪ್ರಯತ್ನಿಸಿದ ವ್ಯಕ್ತಿಗಳ ವಿರುದ್ದ ಪ್ರಕರಣ ದಾಖಲಾಗಿತ್ತು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.