ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಬರಲು ಬಳ್ಳಾರಿ ಕಾರಣ, ಇಡೀ ಬಿಜೆಪಿ ಮೇಲೆ ಬಳ್ಳಾರಿ ಋಣ ಇದೆ: ಜನಾರ್ದನ ರೆಡ್ಡಿ
ಬಳ್ಳಾರಿ ಬಗ್ಗೆ ನಾನು ಅನೇಕ ಕನಸು ಕಂಡಿದ್ದೆ. ಎಲ್ಲವೂ ಅರ್ಧ ಆಗಿದೆ. ಇನ್ನು ಒಂದೂವರೆ ವರ್ಷ ಬಿಜೆಪಿ ಅಧಿಕಾರದಲ್ಲಿರತ್ತೆ. 10 ವರ್ಷದಲ್ಲಿ ಆಗದ ಕೆಲಸ ಮಾಡಬೇಕು ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ಬಳ್ಳಾರಿ: ರಾಜಕೀಯ ಕುತಂತ್ರದಿಂದ ನನ್ನನ್ನು ಬಳ್ಳಾರಿಯಿಂದ ದೂರವಿಟ್ರು. ಇದರ ನೋವು ನನಗಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಬರಲು ಬಳ್ಳಾರಿ ಕಾರಣ. ಇಡೀ ಬಿಜೆಪಿ ಮೇಲೆ ಬಳ್ಳಾರಿ ಋಣ ಇದೆ ಎಂದು ಬಳ್ಳಾರಿಯಲ್ಲಿ ಬಿಜೆಪಿ ಮಾಜಿ ಸಚಿವ ಜನಾರ್ದನರೆಡ್ಡಿ ಮಂಗಳವಾರ ಹೇಳಿಕೆ ನೀಡಿದ್ದಾರೆ. ಆಪ್ತರ ಮನೆಯಲ್ಲಿ 55 ಕೆ.ಜಿ.ಕೇಕ್ ಕಟ್ ಮಾಡಿಕೊಂಡು ಜನಾರ್ದನ ರೆಡ್ಡಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.
ಈ ಜನ್ಮದಲ್ಲಿ ನಾನು ಯಾವುದೇ ತಪ್ಪು ಮಾಡಿಲ್ಲ. ಹಿಂದಿನ ಜನ್ಮದಲ್ಲಿ ನಾನು ತಪ್ಪು ಮಾಡಿದಿನೋ ಇಲ್ಲೋ ಗೊತ್ತಿಲ್ಲ. ಹೀಗಾಗಿ ನಾನು 10 ವರ್ಷದಿಂದ ಬಳ್ಳಾರಿ ಇಂದ ದೂರ ಇದ್ದೆ. ಪ್ರತಿಯೊಬ್ಬ ಮನುಷ್ಯನ ಮೇಲೆ ಏಳು ಬೀಳು ಸಹಜ. ಬಳ್ಳಾರಿ ಬಗ್ಗೆ ನಾನು ಅನೇಕ ಕನಸು ಕಂಡಿದ್ದೆ. ಎಲ್ಲವೂ ಅರ್ಧ ಆಗಿದೆ. ಇನ್ನು ಒಂದೂವರೆ ವರ್ಷ ಬಿಜೆಪಿ ಅಧಿಕಾರದಲ್ಲಿರತ್ತೆ. 10 ವರ್ಷದಲ್ಲಿ ಆಗದ ಕೆಲಸ ಮಾಡಬೇಕು ಎಂದು ಜನಾರ್ದನ ರೆಡ್ಡಿ ತಿಳಿಸಿದ್ದಾರೆ.
ಬಿಜೆಪಿ ಮೇಲೆ ಬಳ್ಳಾರಿ ಖುಣ ತೀರಿಸಿಕೊಳ್ಳುವ ಅವಶ್ಯಕತೆ ಇದೆ. ಬೀದಿ ಬೀದಿಲಿ ಮುಖ್ಯಮಂತ್ರಿ ಸಚಿವರು ಓಡಾಡಿ ಕೆಲಸ ಮಾಡಬೇಕು. ದಕ್ಷಿಣ ಭಾರತದಲ್ಲಿ ಬಿಜೆಪಿ ಸರ್ಕಾರ ಬರಲಿಕ್ಕೆ ನಮ್ಮ ಬಳ್ಳಾರಿ ಕಾರಣ. ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ್ ಬೊಮ್ಮಾಯಿ ಅವರಿಗೆ ಬಳ್ಳಾರಿ ಮೇಲೆ ಪ್ರೀತಿ ಇದೆ ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.
ಬಳ್ಳಾರಿಯ ಹಲವು ಕಡೆ ಜನಾರ್ದನ ರೆಡ್ಡಿ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ರೆಡ್ಡಿ ಹುಟ್ಟುಹಬ್ಬ ಆಚರಣೆಯಲ್ಲಿ ಕೊವಿಡ್ ನಿಯಮ ಉಲ್ಲಂಘನೆ ಮಾಡಲಾಗಿದೆ. ದೈಹಿಕ ಅಂತರ, ಮಾಸ್ಕ್ ಇಲ್ಲದೆ ಗುಂಪು ಗುಂಪಾಗಿ ಜನ ಸೇರಿ ಹುಟ್ಟುಹಬ್ಬ ಆಚರಿಸಿದ್ದಾರೆ.
ಇದನ್ನೂ ಓದಿ: ಜನಾರ್ದನ ರೆಡ್ಡಿ ಹುಟ್ಟುಹಬ್ಬ: ಅಭಿಮಾನಿಗಳಿಂದ 55 ಬೆಳ್ಳಿ -55 ಬಂಗಾರದ ನಾಣ್ಯಗಳಿಂದ ತುಲಾಭಾರ, ಕೊವಿಡ್ ರೂಲ್ಸ್ ಬ್ರೇಕ್
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರದ ಒಬ್ಬ ಸಚಿವ ರಾಜೀನಾಮೆ; ಬಿಜೆಪಿ ಬಿಡುತ್ತಿದ್ದಂತೆ ಅಖಿಲೇಶ್ ಯಾದವ್ ಪಕ್ಷಕ್ಕೆ ಸೇರ್ಪಡೆ
Published On - 4:18 pm, Tue, 11 January 22