ಬಳ್ಳಾರಿ ವಿಮ್ಸ್ ಎಡವಟ್ಟು: 24 ಗಂಟೆ ಕಳೆದರೂ ಸರಿಯಾಗದ ವಿದ್ಯುತ್​ ಸಮಸ್ಯೆ, ಐಸಿಯು ವಾರ್ಡ್​ನಲ್ಲಿದ್ದ ರೋಗಿಗಳು ಬೇರೆಡೆಗೆ ಶಿಫ್ಟ್​

ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು 24 ಗಂಟೆ ಕಳೆದರೂ ವಿದ್ಯುತ್ ಸಮಸ್ಯೆ ಸರಿಯಾಗಿಲ್ಲ. ಸದ್ಯ ಬಾಡಿಗೆ ಜನರೇಟರ್ ಮೂಲಕ ತಾತ್ಕಾಲಿಕ ವಿದ್ಯುತ್​ ಪೂರೈಕೆ ಮಾಡಲಾಗುತ್ತಿದೆ.

ಬಳ್ಳಾರಿ ವಿಮ್ಸ್ ಎಡವಟ್ಟು: 24 ಗಂಟೆ ಕಳೆದರೂ ಸರಿಯಾಗದ ವಿದ್ಯುತ್​ ಸಮಸ್ಯೆ, ಐಸಿಯು ವಾರ್ಡ್​ನಲ್ಲಿದ್ದ ರೋಗಿಗಳು ಬೇರೆಡೆಗೆ ಶಿಫ್ಟ್​
ಬಳ್ಳಾರಿ ವಿಮ್ಸ್
Follow us
TV9 Web
| Updated By: ಆಯೇಷಾ ಬಾನು

Updated on:Sep 15, 2022 | 2:40 PM

ಬಳ್ಳಾರಿ: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ(Bellary Vims Hospital) ವಿದ್ಯುತ್ ಸಂಪರ್ಕ ಕಡಿತಗೊಂಡು ಐಸಿಯು ವಾರ್ಡ್ ನಲ್ಲಿದ್ದ ಇಬ್ಬರು ರೋಗಿಗಳ ದಾರುಣ ಸಾವಾಗಿದೆ. ಈ ಘಟನೆ ಕಳೆದು 24 ಗಂಟೆ ಆದರೂ ವಿದ್ಯುತ್ ಸಮಸ್ಯೆ ಸರಿಯಾಗಿಲ್ಲ. ಹೀಗಾಗಿ ವಿಮ್ಸ್ ಆಡಳಿತ ಮಂಡಳಿ ವಿರುದ್ಧ ರೋಗಿಗಳು, ಸಂಬಂಧಿಕರು ಆಕ್ರೋಶ ಹೊರ ಹಾಕಿದ್ದಾರೆ.

ವಿವಿಧ ವಾರ್ಡ್ ಹಾಗೂ ಆಸ್ಪತ್ರೆಗೆ ವಿದ್ಯುತ್ ಸರಬರಾಜು ಮಾಡುವ ಮೇನ್ ಕೇಬಲ್ ಬ್ಲಾಸ್ಟ್ ಆದ ಪರಿಣಾಮ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹೀಗಾಗಿ ವಿಮ್ಸ್ ಆಸ್ಪತ್ರೆಯ ರೋಗಿಗಳು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ. ಇಬ್ಬರು ರೋಗಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟೆಲ್ಲಾ ಆದ್ರೂ ಇನ್ನೂ ಕೂಡ ಸಮಸ್ಯೆ ಬಗೆಹರಿದಿಲ್ಲ. 24 ಗಂಟೆ ಕಳೆದರೂ ವಿದ್ಯುತ್ ಸಮಸ್ಯೆ ಸರಿಯಾಗಿಲ್ಲ. ಸದ್ಯ ಬಾಡಿಗೆ ಜನರೇಟರ್ ಮೂಲಕ ತಾತ್ಕಾಲಿಕ ವಿದ್ಯುತ್​ ಪೂರೈಕೆ ಮಾಡಲಾಗುತ್ತಿದೆ. ಐಸಿಯುನಲ್ಲಿದ್ದ ರೋಗಿಗಳನ್ನು OT ವಾರ್ಡ್ ಹಾಗೂ ಟ್ರಾಮ್ ಕೇರ್ ಸೆಂಟರ್ ಸೇರಿದಂತೆ ಬೇರೆ ಬೇರೆ ವಾರ್ಡ್​​ಗಳಿಗೆ ಶಿಫ್ಟ್​ ಮಾಡಲಾಗುತ್ತಿದೆ. ವಿದ್ಯುತ್ ಸಮಸ್ಯೆಯಿಂದ ಎಕ್ಸರೇ, ಸ್ಕ್ಯಾನಿಂಗ್ ಎಲ್ಲವೂ ಬಂದ್ ಆಗಿದೆ.

ಬಾಡಿಗೆ ಜನರೇಟರ್ ಹಾಗೂ ವಿದ್ಯುತ್ ಕಂಬಗಳಿಂದ ತಾತ್ಕಾಲಿಕವಾಗಿ ವಿದ್ಯುತ್ ಪೂರೈಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಆಸ್ಪತ್ರೆಯ ಕೆಲವು ಕಡೆ ಮಾತ್ರ ವಿದ್ಯುತ್ ಪೂರೈಕೆ ಇದ್ದು ಮತ್ತಷ್ಟು ಕೊಠಡಿಗಳಲ್ಲಿ ಯತಾ ಸ್ಥಿತಿ ಇದೆ. ಇದನ್ನೂ ಓದಿ: ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ವಿದ್ಯುತ್ ಸಮಸ್ಯೆ, ವೆಂಟಿಲೇಟರ್ ಸ್ಥಗಿತ: ಮೂವರು ರೋಗಿಗಳ ದಾರುಣ ಸಾವು

ವಿಮ್ಸ್‌ನಲ್ಲಿ ವಿದ್ಯುತ್ ಅವಘಡದಿಂದ ಸಾವು ಸಂಭವಿಸಿಲ್ಲ

ಇನ್ನು ಘಟನೆ ಸಂಬಂಧ ಬಳ್ಳಾರಿ ವಿಮ್ಸ್‌ ನಿರ್ದೇಶಕ ಡಾ.ಗಂಗಾಧರಗೌಡ ಸ್ಪಷ್ಟನೆ ನೀಡಿದ್ದು ವಿಮ್ಸ್‌ನಲ್ಲಿ ವಿದ್ಯುತ್ ಅವಘಡದಿಂದ ಸಾವು ಸಂಭವಿಸಿಲ್ಲ ಎಂದಿದ್ದಾರೆ. ಓರ್ವ ವ್ಯಕ್ತಿ ವಿಷಪೂರಿತ ಹಾವಿನ ಕಡಿತದಿಂದ ಮೃತಪಟ್ಟಿದ್ದಾರೆ. ಮತ್ತೋರ್ವ ಬಹು ಅಂಗಾಂಗ ವೈಫಲ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು ಕೊನೆಗೆ ಮೆದುಳಿನ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದಾರೆ ಎಂದು ವಿಮ್ಸ್‌ ನಿರ್ದೇಶಕ ಡಾ.ಗಂಗಾಧರ ಗೌಡ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ವಿದ್ಯುತ್ ಸಮಸ್ಯೆ ಸರಿಪಡಿಸಲು ಇನ್ನೂ 5 ಗಂಟೆ ಕಾಲಾವಕಾಶ ಬೇಕು. ಸದ್ಯಕ್ಕೆ ಬಾಡಿಗೆ ಜನರೇಟರ್ ನಿಂದ ಪವರ್ ಸಪ್ಲೈ ಮಾಡುತ್ತಿದ್ದೇವೆ. ರೋಗಿಗಳಿಗೆ ಎಕ್ಸರೇ, ಸ್ಕಾನಿಂಗ್ ವ್ಯವಸ್ಥೆ ಬೇಕಾದಲ್ಲಿ ಟ್ರಾಮಾ ಕೇರ್ ಸೆಂಟರ್ ನಲ್ಲಿ ಸೌಲಭ್ಯ ಕಲ್ಪಿಸಲಾಗುವುದು. ಮೃತ ರೋಗಿಗಳು ಕೊನೆಯ ಸ್ಟೇಜ್ ನಲ್ಲಿದ್ದಾಗ ಆಸ್ಪತ್ರೆಗೆ ದಾಖಲಾಗಿದ್ರು ಎಂದು ಗಂಗಾಧರ ಗೌಡ ತಿಳಿಸಿದ್ರು.

ಹಾವು ಕಡಿತದಿಂದ ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಬಳ್ಳಾರಿ ತಾಲೂಕಿನ ಚಾಗನೂರು ಗ್ರಾಮದ ಚೆಟ್ಟೆಮ್ಮ, ಸೆಪ್ಟೆಂಬರ್ 13 ರಂದು ವಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ರು. ಮೌಲಾ ಹುಸೇನ್ ಸೆಪ್ಟೆಂಬರ್ 11 ರಂದು ಕಿಡ್ನಿ ವೈಫಲ್ಯದಿಂದ ವಿಮ್ಸ್ ಗೆ ದಾಖಲಾಗಿದ್ರು. ಇಬ್ಬರು ರೋಗಿಗಳು ಕೊನೆಯ ಸ್ಟೇಂಜ್ ನಲ್ಲಿದ್ದ ಪರಿಣಾಮ ರೋಗಿಗಳ ಸಾವನ್ನಪ್ಪಿದ್ದಾರೆಂದು ವಿಮ್ಸ್ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ಇನ್ನು ಐಸಿಯುನಲ್ಲಿದ್ದ ರೋಗಿಗಳ ಸಾವಿನ ಬಗ್ಗೆ ವರದಿ ನೀಡುವಂತೆ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹಾಗೂ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಸೂಚಿಸಿದ್ದಾರೆ.

ಮತ್ತೊಂದು ಸಾವಿನ ವಿಡಿಯೋ ವೈರಲ್

ವಿದ್ಯುತ್ ಸಂಪರ್ಕ ಕಡಿತದಿಂದ ಇಬ್ಬರು ಸಾವನ್ನಪ್ಪಿದ ಪ್ರಕರಣದ ನಂತರ ಮತ್ತೊಂದು ಸಾವು ಬೆಳಕಿಗೆ ಬಂದಿದೆ. ಬಳ್ಳಾರಿ ತಾಲೂಕಿನ ಜೋಳದರಾಶಿಯ ಮನೋಜ್ ಮೃತ ಯುವಕ. ಮನೋಜ್ ಗೆ ಚೇಳು ಕಡಿದ ಪರಿಣಾಮ 6 ರಂದು ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದ್ರೆ ನಿನ್ನೆ ಮೆಡಿಸಿನ್ ವಿಭಾಗದ ಐಸಿಯು ವಾರ್ಡ್ ನಲ್ಲಿ ಮನೋಜ್ ಮೃತಪಟ್ಟಿದ್ದಾರೆ. ಮನೋಜ್ ಸಾವಿಗೆ ವಿದ್ಯುತ್ ಸಂಪರ್ಕ ಕಡಿತವೇ ಕಾರಣ ಎಂದು ಮನೋಜ್ ಸಹೋದರರಿಂದ ವಿಮ್ಸ್ ಆಡಳಿತ ಮಂಡಳಿ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಮನೋಜ್ ಸಾವಿನಪ್ಪಿದ ನಂತರವೂ ವೈದ್ಯರು ಸಾವಿನ ವಿಚಾರ ತಿಳಿಸಿಲ್ಲ. ರಾತ್ರಿ ವೇಳೆಗೆ ನಮ್ಮ ಮನೋಜ್ ಸಾವಿನ ಸುದ್ದಿ ತಿಳಿಸಿದ್ದಾರೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 8:27 am, Thu, 15 September 22

ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ