ಹಂಪಿ ವಿರೂಪಾಕ್ಷೇಶ್ವರ ದೇಗುಲ ಕಂಬಕ್ಕೆ ಮೊಳೆ ಹೊಡೆದ ಪ್ರಕರಣ; ದೇವಸ್ಥಾನದ ಗುಮಾಸ್ತ ಅಮಾನತ್ತು

ಹಂಪಿ ವಿರೂಪಾಕ್ಷೇಶ್ವರ ದೇಗುಲ ಕಂಬಕ್ಕೆ ಮೊಳೆ ಹೊಡೆದ ಪ್ರಕರಣ ಸಂಬಂಧ ಹಂಪಿ ದೇವಸ್ಥಾನದ ಗುಮಾಸ್ತ ಬಿ.ಜಿ ಶ್ರೀನಿವಾಸ್ ಅವರನ್ನು ಅಮಾನತ್ತುಗೊಳಿಸಿ ಹಿಂದೂ ಧಾರ್ಮಿಕ ದತ್ತಿ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಹಂಪಿಯ ಸ್ಮಾರಕಗಳ ಗುಚ್ಛವನ್ನು ಯುನೆಸ್ಕೊ ವಿಶ್ವಪರಂಪರೆ 1986ರಲ್ಲೇ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರ್ಪಡೆ ಮಾಡಿದೆ.

ಹಂಪಿ ವಿರೂಪಾಕ್ಷೇಶ್ವರ ದೇಗುಲ ಕಂಬಕ್ಕೆ ಮೊಳೆ ಹೊಡೆದ ಪ್ರಕರಣ; ದೇವಸ್ಥಾನದ ಗುಮಾಸ್ತ ಅಮಾನತ್ತು
ಹಂಪಿ ವಿರೂಪಾಕ್ಷೇಶ್ವರ ದೇಗುಲ
Follow us
| Updated By: ಆಯೇಷಾ ಬಾನು

Updated on: Nov 21, 2023 | 12:17 PM

ವಿಜಯನಗರ, ನ.21: ವಿಶ್ವ ವಿಖ್ಯಾತ ಹಂಪಿ (Hampi) ಅಂದರೆ ಸಾಕು ಅಲ್ಲಿನ ಸ್ಮಾರಕಗಳು ನಮ್ಮ ಕಣ್ಣ ಮುಂದೆ ಬರುತ್ತೆ.‌ ಶಿಲ್ಪ ಕಲೆಯ ತವರೂರು ಎಂದು ಕರೆಸಿಕೊಳ್ಳುವ ಹಂಪಿ ವಿರೂಪಾಕ್ಷ ದೇವಸ್ಥಾನದ (Hampi Virupaksha Temple) ಒಂದೊಂದು ಸ್ಮಾರಕಗಳು, ಕಲ್ಲಿನ ಕಂಬಗಳು ಒಂದೊಂದು ಕಥೆಯನ್ನು ಹೇಳುತ್ತೆ. ಇಷ್ಟು ಪುರಾತನ ಶ್ರೀಮಂತ ದೇವಸ್ಥಾನವನ್ನ ರಕ್ಷಣೆ ಮಾಡಬೇಕಿದ್ದ ಧಾರ್ಮಿಕ ದತ್ತಿ ಇಲಾಖೆ ಸ್ಮಾರಕವನ್ನು ಹಾಳು ಮಾಡಿತ್ತು. ಹಂಪಿ ವಿರೂಪಾಕ್ಷೇಶ್ವರ ದೇಗುಲ ಕಂಬಕ್ಕೆ ಮೊಳೆ ಹೊಡೆದಿತ್ತು. ಈ ಪ್ರಕರಣ ಸಂಬಂಧ ಹಂಪಿ ದೇವಸ್ಥಾನದ ಗುಮಾಸ್ತ ಬಿ.ಜಿ ಶ್ರೀನಿವಾಸ್ ಅವರನ್ನು ಅಮಾನತ್ತುಗೊಳಿಸಿ ಹಿಂದೂ ಧಾರ್ಮಿಕ ದತ್ತಿ ಸಹಾಯಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ವಿಜಯನಗರ ಜಿಲ್ಲೆಯ ಹೊಸಪೇಟೆ ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಗರ್ಭಗುಡಿಯ ಉತ್ತರ ದಿಕ್ಕಿನ ದ್ವಾರದ ಎರಡು ಕಂಬಗಳಲ್ಲಿ ಗೇಟ್ ಕೂರಿಸಲು ಧಾರ್ಮಿಕ ದತ್ತಿ ಇಲಾಖೆ ಮೊಳೆ ಹೊಡೆದಿತ್ತು. ಈ ಮೂಲಕ ಸ್ಮಾರಕಗಳಿಗೆ ಹಾನಿ ಉಂಟುಮಾಡಿದ್ದು, ಭಾರತೀಯ ಪುರಾತತ್ವ ಇಲಾಖೆ ಆಕ್ಷೇಪಿಸಿ ಧಾರ್ಮಿಕ ದತ್ತಿ ಇಲಾಖೆಗೆ ಪತ್ರ ಬರೆದಿತ್ತು. ಹಂಪಿಯ ಶ್ರೀವಿರೂಪಾಕ್ಷೇಶ್ವರ ದೇವಾಲಯದಲ್ಲಿ ಶ್ರೀ ವಿರೂಪಾಕ್ಷೇಶ್ವರ ದೇವರ ದರ್ಶನಕ್ಕೆ ದಕ್ಷಿಣ ಬಾಗಿಲಿನಿಂದ ಭಕ್ತರು ಪ್ರವೇಶ ಮಾಡಿ, ಉತ್ತರ ದಿಕ್ಕಿನ ಬಾಗಿಲಿನಿಂದ ಹೊರ ಬರುತ್ತಾರೆ. ಈಗ ಈ ಬಾಗಿಲಿಗೆ ಗೇಟ್ ಅಳವಡಿಸಲು ದೇವಾಲಯದ ಕಂಬಗಳಿಗೆ ಡ್ರಿಲ್ ಮಾಡಿ, ಕಬ್ಬಿಣದ ಮೊಳೆ ಹೊಡೆಯಲಾಗಿತ್ತು. ಈ ಕಾಮಗಾರಿ ಕೈಗೆತ್ತಿಕೊಳ್ಳುವ ಮುನ್ನ ಭಾರತೀಯ ಪುರಾತತ್ವ ಇಲಾಖೆರು ಧಾರ್ಮಿಕ ದತ್ತಿ ಇಲಾಖೆ ಪರವಾನಗಿ ಪಡೆದಿರಲಿಲ್ಲ. ಬರೀ ಪೂಜೆ-ಪುನಸ್ಕಾರ ಮಾಡಬೇಕಾದ ಧಾರ್ಮಿಕ ದತ್ತಿ ಇಲಾಖೆ ದೇವಾಲಯದಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಭಾರೀ ಎಡವಟ್ಟು ಮಾಡಿತ್ತು. ಹೀಗಾಗಿ ಈ ಬಗ್ಗೆ ನೋಟಿಸ್ ಕೂಡ ಜಾರಿ ಮಾಡಲಾಗಿತ್ತು. ಸದ್ಯ ಈಗ ದೇವಸ್ಥಾನದ ಗುಮಾಸ್ತ ಬಿ.ಜಿ ಶ್ರೀನಿವಾಸ್ ಅವರನ್ನು ಅಮಾನತಗೊಳಿಸಲಾಗಿದೆ.

ಇದನ್ನೂ ಓದಿ: ಹಂಪಿ ವಿರೂಪಾಕ್ಷ ದೇವಾಲಯ ಕಂಬಕ್ಕೆ ಮೊಳೆ ಹೊಡೆದ ದತ್ತಿ ಇಲಾಖೆಗೆ ಪುರಾತತ್ವ ಇಲಾಖೆ ನೋಟಿಸ್

ಹಂಪಿಯ ಜೀವಾಳವಾಗಿರುವ ಶ್ರೀ ವಿರೂಪಾಕ್ಷೇಶ್ವರ ದೇವಾಲಯಕ್ಕೆ ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆ ಇದೆ. ಈ ದೇವಾಲಯ ಸ್ಮಾರಕಗಳನ್ನು ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಗೆ ಬರುತ್ತದೆ. ಹೀಗಿದ್ದಾಗಲು ಧಾರ್ಮಿಕ ದತ್ತಿ ಇಲಾಖೆ ಕಂಬಗಳಿಗೆ ಮೊಳೆ ಹೊಡೆಯಲು ಡ್ರಿಲ್ ಮೂಲಕ ಹೊಲು ಮಾಡಿ ಸ್ಮಾರಕಕ್ಕೆ ದಕ್ಕೆ ಉಂಟುಮಾಡಿದ್ದು, ಇದು ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿತ್ತು. ಇನ್ನು ಐತಿಹಾಸಿ ಸ್ಮಾರಕವನ್ನ ರಕ್ಷಣೆ ಮಾಡಬೇಕಿದ್ದ ಅಧಿಕಾರಿಗಳು ತಾವೇ ಮುಂದೆ ನಿಂತು ಕಂಬಗಳಿಗೆ ಹಾನಿ ಮಾಡಿದ್ದಾರೆ. ಇಂತವರ ವಿರುದ್ಧ ಸೂಕ್ತ ಕ್ರಮ ಆಗಬೇಕು. ಯಾಕೆಂದರೆ ಇದನ್ನ ಸುಮ್ಮನೆ ಬಿಟ್ಟರೆ ಮುಂದಿನ ದಿನಗಳಲ್ಲಿ ಮತ್ತಷ್ಟು ದೇವಾಲಯಕ್ಕೆ ಹಾನಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ಯಾರು ಈ ಕೃತ್ಯ ಮಾಡಿದ್ದಾರೆ ಅಂತವರ ವಿರುದ್ಧ ಕ್ರಮ ಆಗಬೇಕು. ಇಲ್ಲವಾದರೆ ಹಂಪಿ ಸ್ಮಾರಕದ ಮುಂದೆ ಉಗ್ರ ಹೋರಾಟ ಮಾಡುತ್ತೆವೆ ಎಂದು ಹೋರಾಟಗಾರರು ಎಚ್ಚರಿಕೆ ನೀಡಿದ್ದರು. ಅವರ ಹೋರಾಟ ಫಲವಾಗಿ ಗುಮಾಸ್ತನ ಅಮಾನತ್ತಾಗಿದೆ.

1986ರಲ್ಲೇ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರ್ಪಡೆ

ಹಂಪಿಯ ಸ್ಮಾರಕಗಳ ಗುಚ್ಛವನ್ನು ಯುನೆಸ್ಕೊ ವಿಶ್ವಪರಂಪರೆ 1986ರಲ್ಲೇ ವಿಶ್ವ ಪರಂಪರೆ ತಾಣಗಳ ಪಟ್ಟಿಗೆ ಸೇರ್ಪಡೆ ಮಾಡಿದೆ. ಹಂಪಿಯ 57ಕ್ಕೂ ಅಧಿಕ ಸ್ಮಾರಕಗಳನ್ನು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವ್ಯಾಪ್ತಿಗೆ ನೀಡಲಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ