ಕುಡುತಿನಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಗೂಂಡಾವರ್ತನೆ;ಮೂಲಭೂತ ಸೌಕರ್ಯ ಕೇಳಿದಕ್ಕೆ ವ್ಯಕ್ತಿ ಮೇಲೆ ಹಲ್ಲೆ

ಸರ್ಕಾರಿ ಕೆಲಸ ಅಂದ್ರೆ‌ ದೇವರ ಕೆಲಸ ಅಂತಾರೇ, ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕಾದ ಅಧಿಕಾರಿಯೇ ಜನರ ಮೇಲೆ ದರ್ಪ ಮಾಡಿದ್ರೆ ಹೇಗೆ?, ಇಲ್ಲೊಬ್ಬ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮೂಲಸೌಲಭ್ಯ ಕೇಳಿದಕ್ಕೆ ಅವಾಚ್ಯ ಪದಗಳನ್ನ ಬಳಸುವುದಲ್ಲದೇ ವ್ಯಕ್ತಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ.

ಕುಡುತಿನಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಗೂಂಡಾವರ್ತನೆ;ಮೂಲಭೂತ ಸೌಕರ್ಯ ಕೇಳಿದಕ್ಕೆ ವ್ಯಕ್ತಿ ಮೇಲೆ ಹಲ್ಲೆ
ಕುಡುತಿನಿ ಪಟ್ಟಣ ಪಂಚಾಯತಿ ಅಧಿಕಾರಿ ದರ್ಪ
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 21, 2023 | 7:54 PM

ಬಳ್ಳಾರಿ, ನ.21: ಜಿಲ್ಲೆಯ ಬಳ್ಳಾರಿ(Ballari) ತಾಲೂಕಿನ ಕುಡುತಿನಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ತೀರ್ಥಪ್ರಸಾದ್​, ಜನರ ಸೇವೆ ಮಾಡಬೇಕಾದ ಈ ಅಧಿಕಾರಿಯೇ ರೌಡಿ ಆಗಿ ಬಿಟ್ಟಿದಾನೆ. ‘ಸರ್ ನಮ್ಮನೆಗೆ ನೀರು ಬರುತ್ತಿಲ್ಲ ಎಂದು ಕೇಳಿದರೆ, ಇತ ದರ್ಪದ ಮಾತುಗಳನ್ನಾಡಿದ್ದಾನೆ. ಕುಡಿತಿನಿಯ ಮಂಜುನಾಥ ಎಂಬುವರ ಮೇಲೂ ಗೂಂಡಾ ವರ್ತನೆ ತೋರಿಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾನೆ. ಜೊತೆಗೆ ನಾನು ನಿಮ್ಮ ಕೆಲಸ ಮಾಡೋದಿಲ್ಲ ಎನ್ನುತ್ತಲೇ ಮಂಜುನಾಥ್​ ಮೇಲೆ ಹಲ್ಲೆ ಮಾಡಿದ್ದಾನೆ. ಇದರಿಂದ ಮಂಜುನಾಥ್​ನ ಮುಖಕ್ಕೆ ತೀವ್ರ ಗಾಯವಾಗಿದೆ. ಬಳ್ಳಾರಿ ವಿಮ್ಸ್‌ನಲ್ಲಿ ಟ್ರೀಟ್ಮೇಂಟ್ ಪಡೆದುಕೊಂಡು ಮನೆಗೆ ಹೋಗಿದ್ದಾರೆ. ಈ ದರ್ಪ ಹಲ್ಲೆ ಮಾಡುವ ಅಧಿಕಾರಿಯನ್ನು ಕೂಡಲೇ ಸಸ್ಪೆಂಡ್ ಮಾಡುವಂತೆ ಮಂಜುನಾಥ್​ ಆಗ್ರಹಿಸಿದ್ದಾರೆ.

ಇನ್ನು ಈ ತೀರ್ಥ ಪ್ರಸಾದ್​ ಗೂಂಡಾಗಿರಿ ಇದೆ ಮೊದಲಲ್ಲ, ಜನರ ಕಷ್ಟದಲ್ಲಿ ತೀರ್ಥ ಹಾಗೂ ಪ್ರಸಾದಂತಿರಬೇಕಾದ ಈ ಅಧಿಕಾರಿ, ಕುಡಿತಿನಿ ಪಟ್ಟಣದಲ್ಲಿ ಇವನು ಆಡಿದ್ದೇ ಆಟ, ಮಾಡಿದ್ದೇ ರೂಲ್ಸ್ ಆಗಿದೆ. ಕಳೆದ ಅಕ್ಟೋಬರ್ 03 ರಂದು ಇದೆ ಊರಿನ ಗಿರೀಶ್ ಎಂಬ ವ್ಯಕ್ತಿ, ಮನೆ ಮುಂದಿನ ಕಸ ವಿಲೇವಾರಿ ಮಾಡಿ ಸರ್ ಎಂದು ಹೇಳಿದಕ್ಕೆ, ಆತನ ಮೇಲೂ ದರ್ಪ ತೋರಿ ಹಲ್ಲೆಗೆ ಯತ್ನಸಿರುವ ವಿಡಿಯೋ ವೈರಲ್ ಆಗುತ್ತಿದೆ. ಈ ಮಹಾಶಯ ಅಧಿಕಾರಿಯ ಗೂಂಡಾಗಿರಿ ಕುಡುತಿನ ಜನರಿಗೆ ಬೇಸರ ತರಿಸಿದೆ.

ಇದನ್ನೂ ಓದಿ:ಟೋಲ್ ಶುಲ್ಕ ಕಟ್ಟದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ ಮೂರ್ತಿಯ ಗೂಂಡಾವರ್ತನೆ, ಟೋಲ್ ಗೇಟ್ ಮುರಿದು ಪರಾರಿ

ಇವನ ಆಟಾಟೋಪಕ್ಕೆ ಕಡಿವಾಣ ಹಾಕಬೇಕಾದ ಅಧಿಕಾರಿಗಳೇ ಮೌನ ವಹಿಸುತ್ತಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿದೆ. ಅಭಿವೃದ್ಧಿ ಮಾಡಿ ಎಂದು ಹೇಳಿದರೆ, ಸಾಕು ಕಚ್ಚೋ ಪ್ರಾಣಿಯಂತೆ ತೀರ್ಥ ಪ್ರಸಾದನ ವರ್ತನೆ ಇರುತ್ತದೆ. ಇತ್ತ ಕೂಡಲೇ ರೌಡಿ ಅಧಿಕಾರಿ ವರ್ತನೆಯಿಂದ ಕಛೇರಿಗೆ ಹೋಗೋಕೆ ಜನರು ಭಯ ಪಡಬೇಕಾಗಿದೆ. ಕೂಡಲೇ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಿ ಶಿಕ್ಷೆ ನೀಡುವಂತೆ ಘಟನೆ ಪ್ರತ್ಯಕ್ಷದರ್ಶಿ ಯೋಗೇಶ್ ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ. ಒಟ್ಟಿನಲ್ಲಿ ಪ್ರಜೆಗಳ ಯೋಗಕ್ಷೇಮ ಕಾಳಜಿ ತೋರ್ಬಾಕಾದ ಅಧಿಕಾರಿಗಳೇ ಹೀಗೆ ರಾಕ್ಷಸರಂತೆ ಸರ್ವಾಧಿಕಾರಿಗಳಾದ್ರೆ ಹೇಗೆ? ಇನ್ನಾದ್ರೂ ಮೇಲಾಧಿಕಾರಿಗಳು ಕುಡಿತಿನಿ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ತೀರ್ಥ ಪ್ರಸಾದ್ ಮೇಲೆ ಕ್ರಮ ವಹಿಸುತ್ತಾ ಕಾದು ನೋಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:54 pm, Tue, 21 November 23

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್