IT Raids: ಸಚಿವ ಶ್ರೀರಾಮುಲು, ಕೈಲಾಸ್ ವ್ಯಾಸ್ ಒಡೆತನದ ಫ್ಯಾಕ್ಟರಿ ಮೇಲೆ ಐಟಿ ದಾಳಿ

ಸಚಿವ ಶ್ರೀರಾಮುಲು ಪಾಲುದಾರನ ಮೇಲೆ ಐಟಿ ದಾಳಿಯಾಗಿದ್ದು, ಐಟಿ ಅಧಿಕಾರಿಗಳು ಶ್ರೀರಾಮುಲು ಪಾಲುದಾರಿಕೆಯ ಹರಿ ಇಸ್ಪಾತ್ ಫ್ಯಾಕ್ಟರಿ ಖರೀದಿ ಹಣದ ಮೂಲ ಕೆದಕುತ್ತಿದ್ದಾರೆ.

IT Raids: ಸಚಿವ ಶ್ರೀರಾಮುಲು, ಕೈಲಾಸ್ ವ್ಯಾಸ್ ಒಡೆತನದ ಫ್ಯಾಕ್ಟರಿ ಮೇಲೆ ಐಟಿ ದಾಳಿ
ಸಚಿವ ಶ್ರೀರಾಮುಲು
Edited By:

Updated on: Jan 14, 2023 | 5:19 PM

ಬಳ್ಳಾರಿ: ಸಾರಿಗೆ ಸಚಿವ ಶ್ರೀರಾಮುಲು(Sriramulu) ಹಾಗೂ ಮಾಜಿ ಶಾಸಕ ಸುರೇಶ್ ಬಾಬು ಪಾಲುದಾರನ ಮೇಲೆ ಐಟಿ ದಾಳಿಯಾಗಿದೆ(IT Raids).  ಶ್ರೀರಾಮುಲು, ಸುರೇಶ್ ಬಾಬು ಒಡೆತನದ ಫ್ಯಾಕ್ಟರಿ ನಡೆಸುತ್ತಿದ್ದ ಆಪ್ತರ ಮನೆ ಹಾಗೂ ಕಚೇರಿ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಸಚಿವ ಶ್ರೀರಾಮುಲು ಹಾಗೂ ಕೈಲಾಸ್ ವ್ಯಾಸ್ ಸೇರಿ ಖರೀದಿಸಿರುವ ಹರಿ ಇಸ್ಪಾತ್ ಫ್ಯಾಕ್ಟರಿ ಮೇಲೂ ಸಹ ಐಟಿ ದಾಳಿಯಾಗಿದ್ದು, ಫ್ಯಾಕ್ಟರ್ ಖರೀದಿ ಹಣದ ಮೂಲ ಕೆದಕುತ್ತಿದ್ದಾರೆ.

ಬೆಂಗಳೂರು, ಬಳ್ಳಾರಿ, ಕೊಪ್ಪಳದಲ್ಲಿರುವ ಕೈಗಾರಿಕೋದ್ಯಮಿ ಕೈಲಾಸ್ ವ್ಯಾಸ್ ಪಾಲುದಾರಿಕೆಯ ಕಂಪನಿಗಳ ಮೇಲೆ ದಾಳಿಯಾಗಿದ್ದು, ಬಳ್ಳಾರಿಯ ವಿದ್ಯಾನಗರದ ರಾಗಾಸ್ ಪೋರ್ಟ್ ಅಪಾರ್ಟ್ಮೆಂಟ್ ಫ್ಲಾಟ್ ನಂಬರ್ 310 ಮತ್ತು 510ಪ್ಲಾಟ್ ನಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಸಚಿವ ಶ್ರೀರಾಮುಲು ಹಾಗೂ ಕೈಗಾರಿಕಾ ಉದ್ಯಮಿ ಕೈಲಾಸ್ ವ್ಯಾಸ್ ಸೇರಿ ಖರೀದಿಸಿರುವ ನೂರಾರು ಕೋಟಿ ಬೆಲೆ ಬಾಳುವ ಫ್ಯಾಕ್ಟರಿ ಖರೀದಿಯ ಹಣದ ಮೂಲದ ಬಗ್ಗೆ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.

ಸಚಿವ ಶ್ರೀರಾಮುಲು ಮಾಜಿ ಶಾಸಕ ಸುರೇಶ್ ಬಾಬು ಹಾಗೂ ಲಾಡ್ ಕುಟುಂಬದ ಪ್ಲಾಂಟ್ ಗಳನ್ನು ಕೈಗಾರಿಕಾ ಉದ್ಯಮಿ ಕೈಲಾಸ್ ವ್ಯಾಸ್ ಬಾಡಿಗೆ ಹಾಗೂ ಲೀಜ್ ಮೇಲೆ ನಡೆಸುತ್ತಿದ್ದರು. ಈ ಕೈಗಾರಿಕೆಗಳು ತೆರಿಗೆ ವಂಚನೆ ಮಾಡಿದ ಆರೋಪದ ಐಟಿ ದಾಳಿಯಾಗಿದೆ.

ಯಾವ್ಯಾವ ಕಂಪನಿಗಳ ಮೇಲೆ ದಾಳಿಯಾಗಿದೆ ಎನ್ನುವುದನ್ನು ನೋಡುವುದಾದರೆ, ಮಾಜಿ ಶಾಸಕ ಸುರೇಶ್ ಬಾಬುಗೆ ಸೇರಿದ ಮಹಾ ಮನವ ವಾಷಿಂಗ್ ಪ್ಲಾಂಟ್ , ಕೊಪ್ಪಳದ ಸಿಮ್ಲಾ ಡಾಬ ಬಳಿಯ ವಾಷಿಂಗ್ ಪ್ಲಾಂಟ್ , ಬಳ್ಳಾರಿಯ ವೆಂಕಟೇಶ್ವರ, ಶ್ರೀಹರಿ ಮತ್ತು ಪಿಜಿಎಂ ಪ್ಲಾಂಟ್ ಮೇಲೆ ದಾಳಿಯಾಗಿದೆ.

Published On - 5:06 pm, Sat, 14 January 23

TV9 Web

TV9 Kannada

Read More
Loading...
Unable to load recommendations.
Follow Us