AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

KV Ushashri Charan: ಕೂಡ್ಲಿಗಿ ತಾಲೂಕಿನ ಮೊಮ್ಮಗಳು ನೆರೆಯ ವೈಎಸ್ಆರ್ ಜಗನ್ ಸಂಪುಟದಲ್ಲಿ ಇಂದಿನಿಂದ ಸಚಿವೆ!

ತಾಯಕನಹಳ್ಳಿಯಲ್ಲಿ ತಮ್ಮೂರಿನ ಮಗಳು ಆಂಧ್ರದಲ್ಲಿ ಸಚಿವೆಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸುತ್ತಾಳೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ ಉಷಾ ಅವರ ಸಂಬಂಧಿಕರು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿ ಸಂಭ್ರಮಿಸಿದ್ದರು. ಉಷಾ ಅವರ ಕುಟುಂಬಸ್ಥರು ಸ್ವಗ್ರಾಮದಲ್ಲಿ ಈಗಿಲ್ಲವಾಗಿದ್ದರೂ ಇವರ ತಂದೆ ಹಾಗೂ ಹಿರಿಯರ ಸಮಾಧಿಗಳು ಇಲ್ಲಿಯೇ ಇರುವುದರಿಂದ ವರ್ಷಕ್ಕೆ ಒಂದೆರಡು ಬಾರಿ ಬಂದು, ಹಿರಿಯರಿಗೆ ಗೌರವ ಸಲ್ಲಿಸಿ ಹೋಗುವುದನ್ನು ಉಷಾ ಅವರು ಮರೆತಿಲ್ಲ.

KV Ushashri Charan: ಕೂಡ್ಲಿಗಿ ತಾಲೂಕಿನ ಮೊಮ್ಮಗಳು ನೆರೆಯ ವೈಎಸ್ಆರ್ ಜಗನ್ ಸಂಪುಟದಲ್ಲಿ ಇಂದಿನಿಂದ ಸಚಿವೆ!
ವಿಜಯನಗರದ ಕೂಡ್ಲಿಗಿ ತಾಲೂಕಿನ ಮೊಮ್ಮಗಳು ನೆರೆಯ ವೈಎಸ್ಆರ್ ಜಗನ್ ಸಂಪುಟದಲ್ಲಿ ಇಂದಿನಿಂದ ಸಚಿವೆ!
TV9 Web
| Updated By: ಸಾಧು ಶ್ರೀನಾಥ್​|

Updated on: Apr 11, 2022 | 3:32 PM

Share

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಗಡಿ ಗ್ರಾಮ ತಾಯಕನಹಳ್ಳಿಯ ಉಷಾ ಚರಣ್ (K. V. Ushashri Charan) ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈಎಸ್ ಆರ್ ಜಗನ್ ಸಂಪುಟದಲ್ಲಿ (YSR Jagan cabinet) ಸಚಿವೆಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆಂಧ್ರದ ಕಲ್ಯಾಣದುರ್ಗ ವಿಧಾನಸಭಾ ಕ್ಷೇತ್ರದಿಂದ ಶಾಸಕಿಯಾಗಿ ಆಯ್ಕೆಯಾಗುವ ಮೂಲಕ ಕೂಡ್ಲಿಗಿ ತಾಲೂಕಿನ ಹೆಮ್ಮೆಯನ್ನು ಎತ್ತಿ ಹಿಡಿದಿದ್ದ ಉಷಾಚರಣ್, ಈಗ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವುದರಿಂದ ತವರು ಮನೆ ಕೂಡ್ಲಿಗಿ ತಾಲೂಕಿನ ತಾಯಕನಹಳ್ಳಿಯಲ್ಲಿ ಸಂಭ್ರಮ ಮನೆ ಮಾಡಿದೆ (Andhra Pradesh Chief Minister).

ಕೂಡ್ಲಿಗಿ ತಾಲೂಕು ತಾಯಕನಹಳ್ಳಿಯ (Thayakanahalli in Kudligi) ಕೆ. ವಿರುಪಾಕ್ಷಪ್ಪ ಅವರ ಪುತ್ರಿಯಾದ ಉಷಾ ಅವರು ಚರಣ್ ಅವರ ಕೈಹಿಡಿದು ಆಂಧ್ರದ ಕಲ್ಯಾಣದುರ್ಗದಲ್ಲಿ ವಾಸಿಸುತ್ತಿದ್ದರು. ಉಷಾ ಅವರ ತಾಯಿಯ ತವರು ಮನೆ ಆಂಧ್ರ ಪ್ರದೇಶವಾಗಿದ್ದರಿಂದ ಆಂಧ್ರ ಪ್ರದೇಶದಲ್ಲಿ ಜನಸೇವೆ ಮಾಡುತ್ತಾ ಜನಾನುರಾಗಿಯಾಗಿ ಶಾಸಕಿಯಾಗಿ ಆಯ್ಕೆಯಾಗುವ ಮೂಲಕ ಕೂಡ್ಲಿಗಿ ತಾಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದರು.

ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಸಚಿವೆಯಾಗುವ ಮೂಲಕ ತವರು ಕೂಡ್ಲಿಗಿ ತಾಲೂಕಿನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ಉಷಾ ಅವರ ತಂದೆ ಮರಣ ಹೊಂದಿದ್ದು, ಅವರ ಚಿಕ್ಕಪ್ಪ ಅಂಜಿನಪ್ಪ ಸಹ ತಾಯಕನಹಳ್ಳಿ ತೊರೆದು ಚಿತ್ರದುರ್ಗದಲ್ಲಿ ವಾಸಿಸುತ್ತಿದ್ದಾರೆ. ಉಷಾ ಅವರ ತಂದೆಯ ಅಕ್ಕ ಅಂದರೆ ಉಷಾ ಅವರ ಅತ್ತೆ ಗುರಮ್ಮ ಈಗಲೂ ತಾಯಕನಹಳ್ಳಿಯಲ್ಲಿ ವಾಸಿಸುತ್ತಿದ್ದು ಗುರಮ್ಮನ ಮಗ ಕೃಷ್ಣಪ್ಪಗೂ ಉಷಾ ಅವರು ಮಂತ್ರಿಯಾಗುವ ಮುನ್ಸೂಚನೆ ದೊರೆತಿತ್ತು. ಹೀಗಾಗಿ ತವರಿನಲ್ಲಿ ಉಷಾ ಅವರ ಸಂಬಂಧಿಕರು ಸಂತಸದಿಂದ ಸಂಭ್ರಮಿಸಿದ್ದಾರೆ.

ತವರು ಮರೆಯದ ಉಷಾ ಚರಣ್: ತಾಯಕನಹಳ್ಳಿಯಲ್ಲಿ ತಮ್ಮೂರಿನ ಮಗಳು ಆಂಧ್ರದಲ್ಲಿ ಸಚಿವೆಯಾಗಿ ಸೋಮವಾರ ಪ್ರಮಾಣ ವಚನ ಸ್ವೀಕರಿಸುತ್ತಾಳೆ ಎನ್ನುವ ಸುದ್ದಿ ಹಬ್ಬುತ್ತಿದ್ದಂತೆ ಉಷಾ ಅವರ ಸಂಬಂಧಿಕರು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿ ಸಂಭ್ರಮಿಸಿದ್ದರು. ಉಷಾ ಅವರ ಕುಟುಂಬಸ್ಥರು ಸ್ವಗ್ರಾಮದಲ್ಲಿ ಈಗಿಲ್ಲವಾಗಿದ್ದರೂ ಇವರ ತಂದೆ ಹಾಗೂ ಹಿರಿಯರ ಸಮಾಧಿಗಳು ಇಲ್ಲಿಯೇ ಇರುವುದರಿಂದ ವರ್ಷಕ್ಕೆ ಒಂದೆರಡು ಬಾರಿ ಬಂದು, ಹಿರಿಯರಿಗೆ ಗೌರವ ಸಲ್ಲಿಸಿ ಹೋಗುವುದನ್ನು ಉಷಾ ಅವರು ಮರೆತಿಲ್ಲ. ಊರಲ್ಲಿ ಸಹ ತಮ್ಮ ಸಂಬಂಧಿಕರು, ಒಡನಾಡಿಗಳ ಜೊತೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ.

ಉಷಾ ಚರಣ್ ಅವರು ತವರು ಮನೆಯನ್ನು ಮರೆತಿಲ್ಲ. ಅವರ ಅಪ್ಪ ಮುಂತಾದವರ ಸಮಾಧಿಗಳಿಗೆ ಪೂಜೆ ಸಲ್ಲಿಸಲು ಹಾಗೂ ತವರಿನ ಸಂಬಂಧಿಕರನ್ನು ನೋಡಲು ವರ್ಷಕ್ಕೆ ಎರಡು ಮೂರು ಭಾರಿ ಬಂದು ಹೋಗುತ್ತಾರೆ. ಇತ್ತೀಚೆಗೆ ಉಷಾ ಚರಣ್ ನಮ್ಮೂರಿಗೆ ಬಂದು ಹೋಗಿದ್ದಾರೆ. ಅವರ ಚಿಕ್ಕಪ್ಪ ಅಂಜಿನಪ್ಪ ಸಹ ಭಾನುವಾರ ತಾಯಕನಹಳ್ಳಿಗೆ ಬಂದು ಹೋಗಿದ್ದಾರೆ. ಉಷಾ ಚರಣ್ ಆಂಧ್ರದಲ್ಲಿ ಮಂತ್ರಿಯಾಗುವ ಯೋಗ ಬಂದಿರುವುದಕ್ಕೆ ನಮ್ಮೆಲ್ಲರಿಗೂ ಹಾಗೂ ನಮ್ಮೂರಿನವರೆಲ್ಲರಿಗೂ ಸಂತಸ ಇದೆ ಎನ್ನುತ್ತಾರೆ ಕೂಡ್ಲಿಗಿ ತಾಲೂಕು ತಾಯಕನಹಳ್ಳಿ ಗ್ರಾಮದ ಕುರುಬ ಸಮಾಜದ ಮುಖಂಡ ಮಂಜುನಾಥ. -ವೀರಪ್ಪ ದಾನಿ, ಟಿವಿ 9, ಬಳ್ಳಾರಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ