Karnataka Assembly election: ಮತದಾರರನ್ನ ಸೆಳೆಯಲು ಸೀರೆ ಹಂಚಿದಾಯ್ತು, ಈಗ ಆಟೋ ಚಾಲಕರಿಗೆ ಇನ್ಸೂರೆನ್ಸ್ ಭಾಗ್ಯ

ರಾಜ್ಯ ವಿಧಾನಸಭೆ ಚುನಾವಣೆಗೆ ದಿನಗಣನೇ ಶುರುವಾಗಿದೆ. ರಾಜಕೀಯ ನಾಯಕರು ಮತದಾರರನ್ನ ಸೆಳೆಯಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲೂ ಗಣಿ ನಾಡು ಬಳ್ಳಾರಿಯಲ್ಲಿ ಈ ಭಾರಿ ಭರ್ಜರಿ ಗಿಫ್ಟ್ ಪಾಲಿಟಿಕ್ಸ್ ಶುರುವಾಗಿದೆ. ಮಹಿಳೆಯರಿಗೆ ಸೀರೆ ಹಂಚಿದ ಬೆನ್ನಲ್ಲೆ ಇದೀಗ ಕೆಆರ್​ಪಿಪಿ ಪಕ್ಷ ಮತ್ತೊಂದು ಗಿಫ್ಟ್ ಹಂಚಿಕೆ ಮಾಡುತ್ತಿದೆ.‌ ಅಷ್ಟಕ್ಕೂ ಅದ್ಯಾವ ಗಿಫ್ಟ್ ಅಂತೀರಾ? ಇಲ್ಲಿದೆ ನೋಡಿ.

Karnataka Assembly election: ಮತದಾರರನ್ನ ಸೆಳೆಯಲು ಸೀರೆ ಹಂಚಿದಾಯ್ತು, ಈಗ ಆಟೋ ಚಾಲಕರಿಗೆ ಇನ್ಸೂರೆನ್ಸ್ ಭಾಗ್ಯ
ಬಳ್ಳಾರಿ ಗಿಫ್ಟ್​ ಪಾಲಿಟಿಕ್ಸ್​
Follow us
ಕಿರಣ್ ಹನುಮಂತ್​ ಮಾದಾರ್
|

Updated on: Mar 27, 2023 | 8:20 AM

ಬಳ್ಳಾರಿ: ವಿಧಾನಸಭೆ ಚುನಾವಣೆ ಇನ್ನೇನು ಕೆಲವೇ ದಿನ ಬಾಕಿ ಇರುವಾಗಲೇ  ಅದರ ಕಾವು ಜೋರಾಗಿದೆ. ಹೇಗಾದರೂ ಮತದಾರರನ್ನ ಓಲೈಸಲು ಶಥಾಯ ಗತಾಯ ಪ್ರಯತ್ನ ಉಭಯ ಪಕ್ಷಗಳು ಮಾಡುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಕಾಂಗ್ರೆಸ್​ ಟಿಕೆಟ್ ಆಕಾಂಕ್ಷಿ ಕುಕ್ಕರ್ ಕೊಟ್ಟಿದ್ದಾಯಿತು. ಬಿಜೆಪಿಯವರು ಮನೆ ಮನೆಗಳಿಗೆ ಪಟ್ಟಾ ಹಂಚಿದ್ದಾಯಿತು. ಇದೀಗ ಕೆಆರ್​ಪಿಪಿ ಪಕ್ಷದಿಂದ ಮಹಿಳೆಯರಿಗೆ ಸೀರೆ, ಆಟೋ ಚಾಲಕರಿಗೆ ವಿಮಾ ಭಾಗ್ಯ ಕರುಣಿಸಲಾಗಿದೆ. ಹೌದು ಗಣಿ ನಾಡು ಬಳ್ಳಾರಿಯಲ್ಲೀಗ ಗಿಫ್ಟ್​ ಪಾಲಿಟಿಕ್ಸ್ ಶುರುವಾಗಿದೆ. ಕುಕ್ಕರ್, ಮನೆ ಪಟ್ಟಾ, ಸೀರೆ, ಇನ್ಸೂರೆನ್ಸ್ ಪಾಲಸಿಗಳನ್ನ ವಿತರಣೆ ಮಾಡಿ ಮತದಾರರ ಮನಸ್ಸು ಗೆಲ್ಲಲು ರಣತಂತ್ರ ಶುರುವಾಗಿದೆ. ರಾಜ್ಯ ರಾಜಕಾರಣದಲ್ಲಿ ಹೊಸ ಬಿರುಗಾಳಿ ಎಬ್ಬಿಸಿರುವ ಗಾಲಿ ಜನಾರ್ದನ ರೆಡ್ಡಿ ನೇತೃತ್ವದ ಕೆಆರ್​ಪಿಪಿ ಪಕ್ಷ ಇದೀಗ ಮತದಾರರನ್ನ ಸೆಳೆಯಲು ಹೊಸ ತಂತ್ರಕ್ಕೆ ಮುಂದಾಗಿದೆ. ಬಳ್ಳಾರಿ ನಗರದಲ್ಲಿನ ಮಹಿಳಾ ಮತದಾರರನ್ನ ಸೆಳೆಯಲು ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರು ಮಹಿಳೆಯರಿಗೆ ಉಡಿ ತುಂಬಿ ಸೀರೆ ಹಂಚಿಕೆ ಮಾಡಿದ ಬೆನ್ನಲ್ಲೆ, ಮತ್ತೊಂದು ರೀತಿ ಮತದಾರರನ್ನ ಸೆಳೆಯಲು ಮುಂದಾಗಿದ್ದಾರೆ.

ಮತದಾರರನ್ನ ಸೆಳೆಯಲು ಗಿಫ್ಟ್​ ಪಾಲಿಟಿಕ್ಸ್

ಹೌದು ನಗರದಲ್ಲಿರುವ ಆಟೋಗಳಿಗೆ ಇನ್ಸೂರೆನ್ಸ್ ಪಾಲಿಸಿ ಮಾಡಿಸಿ ಆಟೋ ಚಾಲಕರ ಮೂಲಕ ಪ್ರಚಾರ ಕೈಗೊಳ್ಳುವ ಮೂಲಕ ಮತದಾರರ ಮನಸ್ಸು ಗೆಲ್ಲಲು ರೆಡ್ಡಿ ಮುಂದಾಗಿದ್ದಾರೆ. ಆ ಹಿನ್ನಲೆಯಲ್ಲಿ ಈಗಾಗಲೇ 2 ಸಾವಿರ ಆಟೋಗಳಿಗೆ ವಿಮಾ ಪಾಲಿಸಿ ಮಾಡಿಸಿದ ಕೆಆರ್​ಪಿಪಿ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರು ಆಟೋ ಚಾಲಕರಿಗೆ ಇನ್ಸೂರೆನ್ಸ್ ಬಾಂಡ್ ವಿತರಣೆ ಮಾಡಿದ್ದಾರೆ. ಬೃಹತ್ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಆಟೋ ಚಾಲಕರಿಗೆ ವಿಮಾ ಪಾಲಸಿ ವಿತರಣೆ ಮಾಡಿದ ಲಕ್ಷ್ಮೀ ಅರುಣಾ ಅವರು ಮಾತನಾಡಿ ‘ ಆಟೋ ಚಾಲಕರಿಗೆ ಬಿಜೆಪಿ ಕೈ ಕೊಟ್ಟಿದೆ ಆದರೆ ಜನಾರ್ದನ ರೆಡ್ಡಿ ಕೊಟ್ಟ ಮಾತು ಪೂರ್ಣಗೊಳಿಸಲು ನಾನು ಬಂದಿದ್ದೇನೆ. ಜನಾರ್ದನ ರೆಡ್ಡಿಯವರು ಬಳ್ಳಾರಿಯ ಹುಲಿ, ಕೊಟ್ಟ ಮಾತು ಯಾವತ್ತೂ ಮೀರಲ್ಲ. ಸಿಂಗಲ್ ಆಗಿದ್ರು ಹುಲಿ ಹುಲಿಯೇ. ಯಾವ ನಾಯಕರು ನಮ್ಮ ಜೊತೆಗೆ ಇಲ್ಲದೇ ಇದ್ರೂ ನಾವು ಗೆಲ್ಲುತ್ತೇವೆ. ಜೆಡಿಎಸ್ ಮಾದರಿಯಲ್ಲಿ ಸರ್ಕಾರ ರಚನೆ ಮಾಡಲು ನಿಮ್ಮ ಸಹಕಾರ ಬೇಕು. ಆ ಸ್ಥಿತಿ‌ ನಿರ್ಮಾಣವಾಗುತ್ತದೆ. ಜನಾರ್ದನ ರೆಡ್ಡಿ ದೂರದೃಷ್ಟಿ ಇರುವ ನಾಯಕ. ಸ್ವತಂತ್ರ ನಂತರ ಜನಾರ್ದನ ರೆಡ್ಡಿ ಬಂದ ಮೇಲೆಯೇ ಅಭಿವೃದ್ಧಿಯಾಗಿರುವುದು ಎಂದು ಪತಿಯನ್ನ ಹಾಡಿ ಹೊಗಳಿದ್ದಾರೆ.

ಇದನ್ನೂ ಓದಿ:ರಾಜಕೀಯ ಲಾಭದ ದುರುದ್ದೇಶದ ಪರಿಷ್ಕೃತ ಮೀಸಲಾತಿ ನೀತಿಯಿಂದ ಯಾವ ಸಮುದಾಯಕ್ಕೂ ಲಾಭ ಇಲ್ಲ: ಸಿದ್ದರಾಮಯ್ಯ

ಕುಕ್ಕರ್, ಮನೆಯ ಪಟ್ಟಾ, ಸೀರೆ ಇದೀಗ ಆಟೋಗಳಿಗೆ ಇನ್ಸೂರೆನ್ಸ್ ಭಾಗ್ಯ

ಬಳ್ಳಾರಿ ನಗರದ ಕಾಂಗ್ರೆಸ್​ ಟಿಕೆಟ್​ ಆಕಾಂಕ್ಷಿ ಭರತರೆಡ್ಡಿ ಈಗಾಗಲೇ ಮನೆ ಮನೆಗಳಿಗೆ ಕುಕ್ಕರ್ ಹಂಚಿಕೆ ಮಾಡಿದ್ದಾರೆ. ನಗರದಲ್ಲಿನ ಸ್ಲಂ ಮತದಾರರನ್ನ ಸೆಳೆಯಲು ಬಿಜೆಪಿ ಶಾಸಕ ಸೋಮಶೇಖರರೆಡ್ಡಿ ಸ್ಲಂ ನಿವಾಸಿಗಳಿಗೆ ಪಟ್ಟಾ ವಿತರಣೆ ಮಾಡಿದ್ದಾರೆ. ಹೀಗಾಗಿ ಕಾಂಗ್ರೆಸ್​ ಬಿಜೆಪಿ ಗಿಫ್ಟ್​ ಪಾಲಿಟಿಕ್ಸ್ ಶುರು ಮಾಡಿದ ಬೆನ್ನಲ್ಲೆ ಕೆಆರ್​ಪಿಪಿ ಪಕ್ಷದ ಅಭ್ಯರ್ಥಿ ಲಕ್ಷ್ಮೀ ಅರುಣಾ ಸಹ ಮತದಾರರನ್ನ ಪಕ್ಷದತ್ತ ಸೆಳೆಯಲು ವಿನೂತನವಾಗಿ ಗಿಫ್ಟ್​ ಹಂಚಿಕೆ ಮಾಡುತ್ತಿದ್ದಾರೆ. ನಗರದಲ್ಲಿರುವ 1 ಲಕ್ಷಕ್ಕೂ ಅಧಿಕ ಮಹಿಳಾ ಮತದಾರರಿಗೆ ಇಳಕಲ್ ಸೀರೆ ವಿತರಣೆ ಮಾಡಿದ ಬೆನ್ನಲ್ಲೆ ಇದೀಗ ಹೊಸದಾಗಿ 8 ಸಾವಿರ ಆಟೋಗಳಿಗೆ ಇನ್ಸೂರೆನ್ಸ್ ಭಾಗ್ಯ ಕಲ್ಪಿಸುತ್ತಿದ್ದಾರೆ.

ಪ್ರತಿ ಆಟೋಗಳಿಗೆ 6 ಸಾವಿರ ರೂಪಾಯಿಯ ಪ್ರೀಮಿಯಂ ಕಟ್ಟಿ ಎಲ್ಲ ಆಟೋಗಳಿಗೆ ವಿಮೆ ಮಾಡಿಸುತ್ತಿದ್ದಾರೆ. ಇದರಿಂದ ಆಟೋ ಚಾಲಕರಿಗೆ ಎನಾದ್ರು ಅನಾಹುತವಾದ್ರೆ ಆಟೋ ಚಾಲಕರ ಕುಟುಂಬಗಳಿಗೆ ಹತ್ತು ಲಕ್ಷ ರೂಪಾಯಿ ಪರಿಹಾರ ದೊರೆಯಲಿದೆ. ಹೀಗಾಗಿ ನಗರದಲ್ಲಿನ ಎಲ್ಲ ಆಟೋ ಚಾಲಕರು ಇದೀಗ ಕೆಆರ್​ಪಿಪಿ ಪಕ್ಷದ ವಿಮೆ ಸೌಲಭ್ಯಕ್ಕಾಗಿ ಮುಗಿಬಿದ್ದು ಇನ್ಸೂರೆನ್ಸ್ ಪಾಲಸಿಗಳನ್ನ ಮಾಡಿಸುತ್ತಿದ್ದಾರೆ. ಜೊತೆಗೆ ಆಟೋಗಳಿಗೆ ಕೆಆರ್​ಪಿಪಿ ಪಕ್ಷದ ಪೊಸ್ಟರ್ ಅಂಟಿಸಿಕೊಂಡು ಪ್ರಚಾರ ನಡೆಸಲು ಸಜ್ಜಾಗಿದ್ದಾರೆ.

ಇದನ್ನೂ ಓದಿ:ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿ ದೋಷಿ ಎಂದ ಸೂರತ್ ಕೋರ್ಟ್; ರಾಜಕೀಯ ನಾಯಕರ ಪ್ರತಿಕ್ರಿಯೆ ಹೀಗಿದೆ

ಒಟ್ಟಾರೆ ರಾಜ್ಯದಲ್ಲಿ ಈ ಭಾರಿ ವಿಧಾನಸಭೆಯ ಚುನಾವಣೆಗೂ ಮುನ್ನವೇ ಎಲ್ಲ ಪಕ್ಷಗಳ ನಾಯಕರು ಮತದಾರರನ್ನ ಸೆಳೆಯಲು ಗಿಪ್ಟ್ ಹಂಚಿಕೆ ಮಾಡುತ್ತಿದ್ದಾರೆ. ಅದರಲ್ಲೂ ಕೆಆರ್​ಪಿಪಿ ಪಕ್ಷದಿಂದ ಸೀರೆ, ಆಟೋಗಳಿಗೆ ವಿಮೆ ಸೌಲಭ್ಯ ಇದೀಗ ನಗರದಲ್ಲಿ ಸಾಕಷ್ಟು ಸದ್ದು ಮಾಡುತ್ತರೋದು ಮಾತ್ರ ಸುಳ್ಳಲ್ಲ.

ವರದಿ: ವಿರೇಶ್​ ದಾನಿ ಟಿವಿ9 ಬಳ್ಳಾರಿ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ
Daily Devotional: ಮಾಘ ಸ್ನಾನದ ಹಿಂದಿನ ರಹಸ್ಯ ಹಾಗೂ ಮಹತ್ವ ತಿಳಿಯಿರಿ