AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಜಿ ಹಳ್ಳಿ -ಡಿಜೆ ಹಳ್ಳಿ ಗಲಭೆ ಮಾದರಿಯಲ್ಲಿ ಬಳ್ಳಾರಿಯಲ್ಲಿಯೂ ಅಶಾಂತಿ ಸೃಷ್ಟಿಸುವ ವಿಫಲ ಯತ್ನ ನಡೆದಿತ್ತು- NIA

ನವೆಂಬರ್ 22 ರ ಸಂಜೆ ಅನ್ಯಕೋಮಿನ ಯುವಕರ ದಂಡು ಕಟ್ಟಿಕೊಂಡು ಹೋಗಿ ಠಾಣೆಗೆ ಮುತ್ತಿಗೆ ಹಾಕಲು ಶಂಕಿತ ಐಸಿಸ್ ಉಗ್ರ ಸೈಯದ್ ಯತ್ನಿಸಿದ್ದ. ಬಳ್ಳಾರಿಯಲ್ಲಿ ಸಾವಿರಾರು ಜನ್ರನ್ನ ಸೇರಿಸಿ ಪೊಲೀಸ್​ ಠಾಣೆಗೆ ಮುತ್ತಿಗೆ ಹಾಕಿಸಿ ಭಯದ ವಾತಾವರಣ ಸೃಷ್ಟಿ ಮಾಡಿದ್ದ.

ಕೆಜಿ ಹಳ್ಳಿ -ಡಿಜೆ ಹಳ್ಳಿ ಗಲಭೆ ಮಾದರಿಯಲ್ಲಿ ಬಳ್ಳಾರಿಯಲ್ಲಿಯೂ ಅಶಾಂತಿ ಸೃಷ್ಟಿಸುವ ವಿಫಲ ಯತ್ನ ನಡೆದಿತ್ತು- NIA
ಬಳ್ಳಾರಿ: ಶಂಕಿತ ಐಸಿಸ್ ಉಗ್ರನಿಂದ ಕಾಲೇಜು ಯುವಕರನ್ನ ಸೆಳೆಯುವ ಯತ್ನ
ವಿನಾಯಕ ಬಡಿಗೇರ್​
| Edited By: |

Updated on:Dec 20, 2023 | 12:44 PM

Share

ಬಳ್ಳಾರಿ, ಡಿಸೆಂಬರ್​ 20: ಬಳ್ಳಾರಿಯಲ್ಲಿ ಶಂಕಿತ ಐಸಿಸ್ (ISIS) ಉಗ್ರನಿಂದ ಕಾಲೇಜು ಯುವಕರನ್ನ ತನ್ನ ಸಂಘಟನೆಗೆ ಸೆಳೆದುಕೊಳ್ಳುವ ಯತ್ನಗಳು ನಡೆದಿದ್ದವು ಎಂದು ತಿಳಿದುಬಂದಿದೆ. ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಮಾದರಿಯಲ್ಲಿ (KG Halli DJ Halli Violence) ಬಳ್ಳಾರಿಯ ಕೌಲ್ ಬಜಾರ್​ ಪೊಲೀಸ್​ ಠಾಣೆ ಎದುರೂ (Bellary) ದೊಡ್ಡ ಪ್ಲಾನ್ ನಡೆದಿತ್ತು. ಸ್ವಲ್ಪದರಲ್ಲೆ ಆ ಯತ್ನವನ್ನು ವಿಫಲಗೊಳಿಸಲಾಗಿತ್ತು. ಗಣಿನಾಡಿನಲ್ಲಿ ಶಂಕಿತ ಉಗ್ರರ ಇಂತಹ ಕರಾಳ ಕೃತ್ಯಗಳ ಬಗ್ಗೆ ತಿಳಿದು ಜನ ಈಗ ಆತಂಕಗೊಂಡಿದ್ದಾರೆ.

ನವೆಂಬರ್​ 22 ರಂದು ಬಳ್ಳಾರಿ ಖಾಸಗಿ ಕಾಲೇಜು ಒಂದರಲ್ಲಿ ಯುವಕರನ್ನ ಐಸಿಸ್‌ಗೆ ಸೆಳೆಯುವ ಯತ್ನ ನಡೆದಿತ್ತು. ಮೊಹಮ್ಮದ್ ಪೈಗಂಬರ್‌ಗೆ ಅಪಮಾನದ ನಡೆದಿದೆ ಎಂದು ನೆಪವಾಗಿಸಿಕೊಂಡು ಈ ಐಸಿಸ್ ಸೆಳೆತಕ್ಕೆ ಮೆಗಾ ಪ್ಲಾನ್ ನಡೆದಿತ್ತಾ ಎಂಬ ಅನುಮಾನ ಕಾಡುತ್ತಿದೆ. ರಾಷ್ಟ್ರೀಯ ತನಿಖಾ ದಳದಿಂದ (ಎನ್‌ಐಎ -NIA) ಬಂಧಿತನಾಗಿರುವ ಶಂಕಿತ ಉಗ್ರ ಸೈಯದ್‌ ಸಮೀರ್ ಪ್ಲಾನ್ ಸೂತ್ರಧಾರ ಎಂಬುದು ಬಯಲಾಗಿದೆ. ಬಳ್ಳಾರಿ ಮಾಡ್ಯೂಲ್ ಮಾಸ್ಟರ್ ಮೈಂಡ್ ಮಿನಾಸ್‌ನ ಸಹಚರ ಈ ಸೈಯದ್ (20).

ಅಂದಹಾಗೆ, ಸೈಯದ್ ಖಾಸಗಿ ಕಾಲೇಜ್‌ನಲ್ಲಿ ಬಿಸಿಎ ಸೆಕೆಂಡ್ ಇಯರ್ ಓದುತ್ತಿದ್ದ. ಎನ್.ಐ.ಎ ಪ್ರೆಸ್ ರಿಲೀಸ್​​ನಲ್ಲಿ ಸೈಯದ್ ನ ಈ ಕರಾಳ ಕೃತ್ಯವನ್ನು ಎಳೆ ಎಳೆಯಾಗಿ ಉಲ್ಲೇಖಿಸಲಾಗಿದೆ. ನವೆಂಬರ್​ 22 ರಂದು ತಾನು ಓದುವ ಕಾಲೇಜ್‌ನಲ್ಲಿ ಪೈಗಂಬರ್‌ಗೆ ಅಪಮಾನ ಮಾಡಲಾಗಿದೆ ಎಂದು ಸೈಯದ್ ಯುವಕರನ್ನು ಗುಂಪು ಕಟ್ಟಿದ್ದ. ಯುವಕ ಗುಂಪು ಕಟ್ಟಿ ಗಲಾಟೆಯನ್ನೂ ಮಾಡಿದ್ದ ಸೈಯದ್. ಬಳಿಕ ಬಳ್ಳಾರಿ ಜಿಲ್ಲಾ ಪೊಲೀಸ್​​ ಅಧೀಕ್ಷಕರ ಕಚೇರಿಗೆ ಬಂದು ದೂರು ನೀಡಿದ್ದ.

ಇದನ್ನೂ ಓದಿ: 4 ರಾಜ್ಯದ 19 ಸ್ಥಳಗಳಲ್ಲಿ ಎನ್​ಐಎ ದಾಳಿ: ಮುಖ್ಯಸ್ಥ ಸೇರಿದಂತೆ 8 ಜನರ ಬಂಧನ

ನವೆಂಬರ್ 22 ರ ಸಂಜೆ ಅನ್ಯಕೋಮಿನ ಯುವಕರ ದಂಡು ಕಟ್ಟಿಕೊಂಡು ಹೋಗಿ ಕೌಲ್ ಬಜಾರ್​ ಠಾಣೆಗೆ ಮುತ್ತಿಗೆ ಹಾಕಲು ಶಂಕಿತ ಐಸಿಸ್ ಉಗ್ರ ಸೈಯದ್ ಯತ್ನಿಸಿದ್ದ. ಸಾವಿರಾರು ಜನ್ರನ್ನ ಸೇರಿಸಿ ಠಾಣೆಗೆ ಮುತ್ತಿಗೆ ಹಾಕಿಸಿ ಭಯದ ವಾತಾವರಣ ಸೃಷ್ಟಿ ಮಾಡಿದ್ದ. ಮುಸ್ಲಿಂ ಸಮುದಾಯದ ಯುವಕರ ಮೈಂಡ್ ವಾಷ್​ ಮಾಡಿ ಗಲಭೆ ಎಬ್ಬಿಸಲು ಅಂದು ನಡೆದಿತ್ತು. ಅದು ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ಗಲಭೆ ಮಾದರಿಯಲ್ಲಿ ದೊಡ್ಡ ಪ್ಲಾನ್ ಹಾಕಿಕೊಂಡಿದ್ದನಂತೆ. ಸ್ವಲ್ಪದರಲ್ಲೆ ಆ ಯತ್ನ ವಿಫಲವಾಗಿತ್ತು. ಇದೀಗ, ಗಣಿನಾಡಿನಲ್ಲಿ ಶಂಕಿತ ಉಗ್ರರ ಕರಾಳ ಕೃತ್ಯಗಳ ಬಗ್ಗೆ ಜನ ಆತಂಕಗೊಂಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 12:13 pm, Wed, 20 December 23

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಲಕ್ಕುಂಡಿ ಚಿನ್ನದ ನಿಧಿಗೆ ಬಿಗ್ ಟ್ವಿಸ್ಟ್
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ಮನೆ ಎದುರು ನಿಗೂಢ ಬ್ಯಾಗ್ ಪತ್ತೆ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ
ರಕ್ಷಿತಾಗೆ ಕ್ಷಮೆ ಕೇಳಿದ ಅಶ್ವಿನಿ, ಗಿಲ್ಲಿಗೆ ಎಚ್ಚರಿಕೆ ಕೊಟ್ಟ ಕಾವ್ಯಾ