AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರವಿ ಚೆನ್ನಣ್ಣನವರ್ ಪ್ರಾಮಾಣಿಕ ವ್ಯಕ್ತಿ: ಸಾರಿಗೆ ಸಚಿವ ಶ್ರೀರಾಮುಲು

ಆರೋಪ ಯಾರನ್ನೂ ಬಿಡಲ್ಲ. ಆರೋಪಗಳು ಬಂದ ತಕ್ಷಣ ತಪ್ಪಿತಸ್ಥ ಅಲ್ಲ. ಆರೋಪ ಬಂದರು ಅವರು ಪ್ರಾಮಣಿಕ ಅಧಿಕಾರಿ ಎಂದು ನಾನು ಹೇಳುತ್ತೀನಿ ಎಂದು ಐಪಿಎಸ್​ ಅಧಿಕಾರಿ ರವಿ ಚೆನ್ನಣ್ಣನವರ್ ಪರ ಸಾರಿಗೆ ಸಚಿವ ಶ್ರೀರಾಮುಲು ಮಾತನಾಡಿದ್ದಾರೆ.

ರವಿ ಚೆನ್ನಣ್ಣನವರ್ ಪ್ರಾಮಾಣಿಕ ವ್ಯಕ್ತಿ: ಸಾರಿಗೆ ಸಚಿವ ಶ್ರೀರಾಮುಲು
ಬಿ. ಶ್ರೀರಾಮುಲು
TV9 Web
| Edited By: |

Updated on:Feb 01, 2022 | 2:19 PM

Share

ಬಳ್ಳಾರಿ: ರವಿ ಚೆನ್ನಣ್ಣನವರ್ ಚುನಾವಣೆಗೆ ಬರುವುದು ನನಗೆ ಗೊತ್ತಿಲ್ಲ. ಆದರೆ ರವಿ ಚೆನ್ನಣ್ಣನವರ್(Ravi Channannavar)  ಪ್ರಾಮಾಣಿಕ ವ್ಯಕ್ತಿ. ಅವರ ತಂದೆ- ತಾಯಿಯನ್ನು ನಾನು ನೋಡಿದ್ದೇನೆ. ಅವರು ಬೆಳೆದ ಬಂದ ರೀತಿ, ಅವರ ಶಿಕ್ಷಣ(Education) ಎಲ್ಲವನ್ನೂ ನೋಡಿದ್ದೇನೆ. ಅವರನ್ನು ತೀರಾ ಹತ್ತಿರದಿಂದ ನೋಡಿದ್ದೇನೆ. ಅವರು ಪ್ರಾಮಾಣಿಕ ಅಧಿಕಾರಿ. ಆರೋಪಗಳು ಬರುವುದು ಸಹಜ. ಆರೋಪ ಯಾರ ಮೇಲೆ ಇಲ್ಲ ಹೇಳಿ. ಆರೋಪ ಯಾರನ್ನೂ ಬಿಡಲ್ಲ. ಆರೋಪಗಳು ಬಂದ ತಕ್ಷಣ ತಪ್ಪಿತಸ್ಥ ಅಲ್ಲ. ಆರೋಪ ಬಂದರು ಅವರು ಪ್ರಾಮಣಿಕ ಅಧಿಕಾರಿ ಎಂದು ನಾನು ಹೇಳುತ್ತೀನಿ ಎಂದು ಐಪಿಎಸ್​ ಅಧಿಕಾರಿ ರವಿ ಚೆನ್ನಣ್ಣನವರ್ ಪರ ಸಾರಿಗೆ ಸಚಿವ ಶ್ರೀರಾಮುಲು (Sriramulu) ಮಾತನಾಡಿದ್ದಾರೆ.

ಕೊವಿಡ್ ಸಮಯದಲ್ಲಿ ಕೇಂದ್ರದಿಂದ ಒಳ್ಳೆಯ ಬಜೆಟ್‌ ಸಿಕ್ಕಿದೆ: ಶ್ರೀರಾಮುಲು

ಬಳಿಕ ಮಾತನಾಡಿದ ಅವರು, ಕೊವಿಡ್ ಸಮಯದಲ್ಲಿ ಕೇಂದ್ರದಿಂದ ಒಳ್ಳೆಯ ಬಜೆಟ್‌ ಸಿಕ್ಕಿದೆ. ಮೋದಿ ಹಾಗೂ ನಿರ್ಮಲಾ ಸಿತಾರಾಮನ್‌ರವರಿಗೆ ಅಭಿನಂದನೆ ಸಲ್ಲಿಸುವೆ. ಜನಪರ ಬಜೆಟ್, ದೇಶ ವೇಗವಾಗಿ ಬೆಳೆಯಲು ಬಜೆಟ್ ಪೂರಕವಾಗಿದೆ. 100 ಕೋಟಿ ವ್ಯಾಕ್ಸೀನ್ ಕೊಟ್ಟು ಜನರ ಪ್ರಾಣ ಉಳಿಸಿದ್ದಾರೆ. 5ಜಿ ತರಲು ಮುಂದಾಗಿದ್ದು ಕೂಡ ಬಹುದಿನದ ಕನಸು ನನಸಾಗಿಸಿದ್ದಾರೆ ಎಂದು ತಿಳಿಸಿದ್ದಾರೆ.

ರೈತರಿಗೆ ಅನೇಕ ಯೋಜನೆ ಕೊಟ್ಟು ರೈತ ಹಿತ ಕಾದಿದ್ದಾರೆ. ಆರೋಗ್ಯಕ್ಕೆ, ಶಿಕ್ಷಣಕ್ಕೆ, ರಸ್ತೆ, ಸಾರಿಗೆ, ಮೂಲಭೂತ ಸಮಸ್ಯೆಗೆ ಸ್ಪಂದಿಸಿದ್ದಾರೆ ಮೋದಿ. ರಕ್ಷಣಾ ಕ್ಷೆತ್ರದಲ್ಲಿ ಬದಲಾವಣೆ ಮಾಡಿದ್ದಾರೆ. ಇನ್ನೂ ದೇಶದಲ್ಲಿ ಎಲ್ಲೇ ಇದ್ರೂ ಭೂಮಿ ಖರಿದಿಸಲು, ರಿಜಿಸ್ಟರ್ ಮಾಡಿಸಲು ಅನುವು ಮಾಡಿರುವುದು ಒಳ್ಳೆಯದು. ಮಹಿಳೆಯ ಸಭಲಿಕರಣಕ್ಕಾರಿ ಮಿಷನ್ ಶಕ್ತಿ ಜಾರಿಗೆ ತಂದಿದ್ದಾರೆ. ಶಾಲಾ ವಿದ್ಯಾರ್ಥಿಗಳಿಗೆ ಬಸ್ ಉಚಿತ ಕೊಡಲು ಮುಂದಾಗಿದ್ದಾರೆ. ನದಿ ಜೋಡಣೆಗೆ ಪೂರಕವಾಗುವ ಪ್ರಸ್ತಾಪ ಮಾಡಿದ್ದಾರೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಸಚಿವ ಆನಂದ್‌ಸಿಂಗ್‌ರಿಂದ ಡಿ.ಕೆ.ಶಿವಕುಮಾರ್ ಭೇಟಿ ವಿಚಾರ

ಆನಂದ್ ಸಿಂಗ್ ನನ್ನ ಆತ್ಮೀಯ ಸ್ನೇಹಿತ. ಸಚಿವ ಅನಂದ್ ಸಿಂಗ್ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಡಿ.ಕೆ. ಶಿವಕುಮಾರನ್ನು ಬೇರೆ ಬೇರೆ ಕಾರಣಕ್ಕೆ ಭೇಟಿ ಆಗಿದ್ದಾರೆ. ಡಿಕೆಶಿಯನ್ನು ರಾಜಕೀಯವಾಗಿ ಆನಂದ್‌ ಸಿಂಗ್ ಭೇಟಿಯಾಗಿಲ್ಲ. ಆನಂದ್‌ಸಿಂಗ್ ಪಕ್ಷಕ್ಕೆ ಮೋಸ ಮಾಡುವ ವ್ಯಕ್ತಿ ಅಲ್ಲ. ಬಳ್ಳಾರಿಯ ಸಮಗ್ರ ಅಭಿವೃದ್ಧಿಗಾಗಿ ಅವರು ಶ್ರಮವಹಿಸುತ್ತಿದ್ದಾರೆ ಎಂದು ಬಳ್ಳಾರಿಯಲ್ಲಿ ಆನಂದ್‌ ಸಿಂಗ್ ಪರ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ರವಿ ಡಿ. ಚೆನ್ನಣ್ಣನವರ್ ಫೊಟೋ ಹಾಕಿಕೊಂಡು ಓಡಾಡಿದ ವಾಹನ ಚಾಲಕನಿಗೆ 500 ರೂಪಾಯಿ ದಂಡ

ಸಿಎಂ ಇಬ್ರಾಹಿಂಗೆ ರಾಜಕೀಯದಲ್ಲಿ ದೊಡ್ಡ ವ್ಯಾಲ್ಯೂ ಇದೆ, ಬಿಜೆಪಿಗೆ ಕರೆತರಲು ನಾಯಕರೊಂದಿಗೆ ಮಾತನಾಡುವೆ: ಸಚಿವ ಶ್ರೀರಾಮುಲು

Published On - 2:00 pm, Tue, 1 February 22

ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?