ಬಳ್ಳಾರಿ: ರಾಜ್ಯಮಟ್ಟದ ಬೃಹತ್ ST ಸಮಾವೇಶಕ್ಕೆ ಸಿಎಂ ಬೊಮ್ಮಾಯಿ ಆಗಮನ; ಬೊಮ್ಮಾಯಿ ಸರ್ಕಾರವನ್ನು ಹೊಗಳಿದ ಬಾಲಚಂದ್ರ ಜಾರಕಿಹೊಳಿ
SC/ST ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವ ಸರ್ಕಾರ ಮೊದಲ ಬಾರಿಗೆ ರಾಜ್ಯ ಮಟ್ಟದ ಬೃಹತ್ ST ಸಮಾವೇಶ ಆಯೋಜನೆ ಮಾಡಿದೆ. ಬಳ್ಳಾರಿಯ ಬೆಳಗಲ್ ರಸ್ತೆಯ ಜಿ ಸ್ಕ್ವೇರ್ ಲೇಔಟ್ ನಲ್ಲಿ ಸಮಾವೇಶ ನಡೆಯುತ್ತಿದೆ.
ಬಳ್ಳಾರಿ: ಗಣಿ ನಾಡು ಬಳ್ಳಾರಿಯಲ್ಲಿ ಇಂದು (ನ.20) ರಾಜ್ಯಮಟ್ಟದ ಬೃಹತ್ STಸಮಾವೇಶ ನಡೆಯುತ್ತಿದೆ. SC/ST ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವ ಸರ್ಕಾರ ನವಶಕ್ತಿ ಸಮಾವೇಶ ಆಯೋಜಿಸಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಧಾರ್ಮಿಕ ಗ್ರಂಥ ನೀಡಿ ಬಿಜೆಪಿ ಕಾರ್ಯಕರ್ತರು ಸಮಾವೇಶಕ್ಕೆ ಸ್ವಾಗತಿಸಿದರು. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಸಿ.ಟಿ.ರವಿ, ಸಚಿವರಾದ ಶ್ರೀರಾಮುಲು, ಕಾರಜೋಳ, ಶಾಸಕ ರಾಜುಗೌಡ, ಕರುಣಾಕರ ರೆಡ್ಡಿ, ಲಕ್ಷ್ಮಣ ಸವದಿ ಸೇರಿದಂತೆ ಹಲವರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.
ಎಸ್ಟಿ ಸಮಾವೇಶದಿಂದ ದೂರ ಉಳಿದ ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ತಮ್ಮ ಸಮುದಾಯದ ಕಾರ್ಯಕ್ರಮಕ್ಕೂ ಗೈರಾಗಿದ್ದಾರೆ. ಮಂತ್ರಿ ಸ್ಥಾನ ಸಿಗದಿರುವುದಕ್ಕೆ ತೀವ್ರ ಬೇಸರಗೊಂಡಿರುವ ರಮೇಶ್ ಬಳ್ಳಾರಿ ಎಸ್ಟಿ ಸಮಾವೇಶಕ್ಕೆ ಹಾಜರಾಗಿಲ್ಲ.
ಬಸವರಾಜ ಬೊಮ್ಮಾಯಿ ಸರ್ಕಾರ ದೊಡ್ಡ ಉಪಕಾರ ಮಾಡಿದೆ
ಇನ್ನು ಸಮಾವೇಶದಲ್ಲಿ ಭಾಷಣ ಮಾಡಿದ ಬಾಲಚಂದ್ರ ಜಾರಕಿಹೊಳಿ, ನಮ್ಮ ವಾಲ್ಮೀಕಿ ಸಮುದಾಯದ ಜನತೆಗೆ ವಂದನೆಗಳು. ಬಸವರಾಜ ಬೊಮ್ಮಾಯಿ ಸರ್ಕಾರ ನಮ್ಮ ಸಮುದಾಯಕ್ಕೆ ದೊಡ್ಡ ಉಪಕಾರ ಮಾಡಿದೆ. ನಾವೂ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಬಲರಾಗಿರಬೇಕು. ನಾವೂ ಉಪಕಾರವನ್ನ ಏಪ್ರಿಲ್, ಮೇನಲ್ಲಿ ತೀರಿಸಬೇಕು. ನಮ್ಮ ಪಾರ್ಟಿ ಮೇಲೆ ನಿಮ್ಮ ಆಶೀರ್ವಾದ ಇರಬೇಕು ಅಂತಾ ಹೇಳಿ ಬಾಲಚಂದ್ರ ಜಾರಕಿಹೊಳಿ ಅವರು ತಮ್ಮ ಮಾತನ್ನ ಮುಗಿಸಿದರು.
ಮೀಸಲಾತಿ ಹೆಚ್ಚಿಸಿದ್ದಕ್ಕೆ ಕಾಂಗ್ರೆಸ್ ಹೊಟ್ಟೆಕಿಚ್ಚು ಪಡುತ್ತಿದೆ
ಬಿಜೆಪಿ ಎಸ್ಟಿ ಸಮಾವೇಶದಲ್ಲಿ ಸಿ.ಟಿ.ರವಿ ಮಾತನಾಡಿದ್ದು ಬಿಜೆಪಿ ಸರ್ಕಾರ ಇಚ್ಛಾ ಶಕ್ತಿಯಿಂದ ಎಸ್ಟಿ ಮೀಸಲು ಹೆಚ್ಚಿಸಿದೆ.ಎಸ್ಟಿ ಮೀಸಲಾತಿಗಾಗಿ ಸಮುದಾಯದ ಸ್ವಾಮೀಜಿ ಹೋರಾಟ ಮಾಡಿದರು. ಎಸ್ಟಿ ಸಮುದಾಯದ ನಾಯಕರು ಒತ್ತಡ ಹಾಕಿದ್ರು. ಸರ್ಕಾರದ ಇಚ್ಛಾಶಕ್ತಿಯಿಂದ ಎಸ್ಟಿ ಮೀಸಲಾತಿ ಹೆಚ್ಚಳ ಮಾಡಿದೆ. ಎಸ್ಟಿ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಏರಿಸಲಾಗಿದೆ. ಮೀಸಲಾತಿ ಹೆಚ್ಚಿಸಿದ್ದಕ್ಕೆ ಕಾಂಗ್ರೆಸ್ ಹೊಟ್ಟೆಕಿಚ್ಚು ಪಡುತ್ತಿದೆ. ಹೊಟ್ಟೆಕಿಚ್ಚಿಗೆ ಯಾವುದೇ ಔಷಧ ಇಲ್ಲ ಎಂದರು.
ಸಾರಿಗೆ ಸಚಿವ ಶ್ರೀರಾಮುಲು ಸಿಎಂ ಅಗಬೇಕು
ಇನ್ನು ಸಮಾವೇಶಕ್ಕೆ ಚಾಮರಾಜನಗರ, ಬೀದರ್, ಕಲಬುರಗಿ, ಕೊಪ್ಪಳ, ಗದಗ, ವಿಜಯನಗರ, ಚಿತ್ರದುರ್ಗ ಜಿಲ್ಲೆ ಸೇರಿದಂತೆ ಅನೇಕ ಕಡೆಯಿಂದ ಸಾವಿರಾರು ಬಸ್ಗಳ ಮೂಲಕ ಹರಿದು ಬಂದ ಜನ ಬಿಜೆಪಿ ಹೈಕಮಾಂಡ್ ನಮ್ಮ ಸಮುದಾಯದ ನಾಯಕನನ್ನ ಸಿಎಂ ಮಾಡಬೇಕು ಎಂದು ಒತ್ತಾಯಿಸಿದರು. ಈ ವೇಳೆ ಸಾರಿಗೆ ಸಚಿವ ಶ್ರೀರಾಮುಲು ಸಿಎಂ ಅಗಬೇಕು ಎಂಬ ಘೋಷಣೆಗಳು ಕೇಳಿಸಿದವು.
SC/ST ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವ ಸರ್ಕಾರ ಮೊದಲ ಬಾರಿಗೆ ರಾಜ್ಯ ಮಟ್ಟದ ಬೃಹತ್ ST ಸಮಾವೇಶ ಆಯೋಜನೆ ಮಾಡಿದೆ. ಬಳ್ಳಾರಿಯ ಬೆಳಗಲ್ ರಸ್ತೆಯ ಜಿ ಸ್ಕ್ವೇರ್ ಲೇಔಟ್ ನಲ್ಲಿ ಸಮಾವೇಶ ನಡೆಯುತ್ತಿದೆ. 130 ಎಕರೆ ಪ್ರದೇಶದ ಲೇಔಟ್ ನಲ್ಲಿ ದೊಡ್ಡ ಪೆಂಡಾಲ್, ಮೂರು ಮುಖ್ಯ ವೇದಿಕೆ ನಿರ್ಮಾಣ ಮಾಡಲಾಗಿದೆ. ಸಮಾವೇಶಕ್ಕಾಗಿ ಬರುವ ಜನರಿಗೆ ಹಳ್ಳಿ ಹಳ್ಳಿಗಳಿಂದ 8 ಸಾವಿರ ಸಾರಿಗೆ ಬಸ್. 25 ಸಾವಿರ ಟ್ರಾಕ್ಸ್ ಗಳನ್ನ ವ್ಯವಸ್ಥೆ ಮಾಡಲಾಗಿದೆ. 300 ಊಟದ ಕೌಂಟರ್ ನಿರ್ಮಾಣ ಮಾಡಿದ್ದಾರೆ. ಸಮಾವೇಶಕ್ಕೆ ಬರುವ ಜನರಿಗೆ ಪಲಾವ್. ಮೊಸರನ್ನ ಗೋದಿಹುಗ್ಗಿ ವ್ಯವಸ್ಥೆ ಮಾಡಲಾಗಿದೆ.