ಗರ್ಭಗುಡಿಯಲ್ಲಿ ದೇವರ ಮೂರ್ತಿ ಕುರಿಸುವ ವಿಚಾರವಾಗಿ ಎರಡು ಸಮುದಾಯದ ನಡುವೆ ಕಲ್ಲು ತೂರಾಟ, ಪಿಎಸ್​ಐಗೆ ಗಾಯ

ಪವಾಡ ಪುರುಷ ಎರ್ರಿತಾತ ಸ್ವಾಮಿಯ ಮೂರ್ತಿ ಕೂರಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ಸಂಭವಿಸಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಬಳ್ಳಾರಿ ಜಿಲ್ಲೆ ಕೊಳಗಲ್ ಗ್ರಾಮದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದೆ. ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ನಿಯೋಜನೆ ಮಾಡಲಾಗಿದೆ.

ಗರ್ಭಗುಡಿಯಲ್ಲಿ ದೇವರ ಮೂರ್ತಿ ಕುರಿಸುವ ವಿಚಾರವಾಗಿ ಎರಡು ಸಮುದಾಯದ ನಡುವೆ ಕಲ್ಲು ತೂರಾಟ, ಪಿಎಸ್​ಐಗೆ ಗಾಯ
ಕಲ್ಲು ತೂರಾಟ
Follow us
| Updated By: ವಿವೇಕ ಬಿರಾದಾರ

Updated on:Apr 08, 2024 | 9:40 AM

ಬಳ್ಳಾರಿ, ಏಪ್ರಿಲ್​ 08: ದೇವರ ಮೂರ್ತಿ ಕುರಿಸುವ ವಿಚಾರವಾಗಿ ಎರಡು ಸಮುದಾಯದ ನಡುವೆ ಶುರುವಾದ ವಾಗ್ವಾದ ವಿಕೋಪಕ್ಕೆ ತಿರುಗಿ, ಕಲ್ಲು ತೂರಾಟವಾಗಿರುವ ಘಟನೆ ಬಳ್ಳಾರಿ (Ballari) ತಾಲೂಕಿನ ಕೊಳಗಲ್ ಗ್ರಾಮದಲ್ಲಿ ನಡೆದಿದೆ. ಪವಾಡ ಪುರುಷ ಎರ್ರಿತಾತಾ ಸ್ವಾಮಿಯ (Chellagurki Shree Yerrithatha Swamy) ಮೂರ್ತಿ ಕೂರಿಸುವ ವಿಚಾರವಾಗಿ ಈ ಗಲಾಟೆ ನಡೆದಿದೆ. 15 ದಿನಗಳ ಹಿಂದೆ ಎರ್ರಿಸ್ವಾಮಿ ಮಠದಲ್ಲಿ ರಾತ್ರೋರಾತ್ರಿ ಮೂರ್ತಿ ಕುರಿಸಲಾಗಿತ್ತು. ಈ ಮೂರ್ತಿಯನ್ನು ತೆರವುಗೊಳಿಸುವಂತೆ ಇನ್ನೊಂದು ಸಮುದಾಯದವರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯ ಮೂರ್ತಿ ತೆರವುಗೊಳಿಸಲು ಆದೇಶ ನೀಡಿತ್ತು. ಆದರೆ ಪವಾಡ ಪುರುಷನ ಮೂರ್ತಿಯನ್ನು ತೆರವುಗೊಳಿಸಲ್ಲ ಅಂತ ಮೊತ್ತೊಂದು ಸಮುದಾಯದವರು ಹಠ ಹಿಡಿದ್ದಾರೆ. ಇದರಿಂದ ಎರಡು ಸಮುದಾಯದ ಮಧ್ಯೆ ವಾಗ್ವಾದ ಸಂಭವಿಸಿದೆ. ವಾಗ್ವಾದ ವಿಕೋಪಕ್ಕೆ ತಿರುಗಿ ಕಲ್ಲು ತೂರಾಟ ಸಂಭವಿಸಿದೆ. ಈ ವಿಚಾರ ತಿಳಿದು ಗ್ರಾಮಕ್ಕೆ ಪಿಎಸ್ಐ ಸಂತೋಷ್ ಡಬ್ಬಿನ್, ಸಿಪಿಐ ಸತೀಶ್ ಸೇರಿದಂತೆ ಇನ್ನಿತರ ಪೊಲೀಸ್​ ಸಿಬ್ಬಂದಿ ಬಂದಿದ್ದಾರೆ.

ಕಲ್ಲು ತೂರಾಟವನ್ನು ನಿಲ್ಲಿಸಲು ಮುಂದಾದಾಗ ಕಿಡಿಗೇಡಿಗಳು ಪೊಲೀಸರ ಮೇಲೂ ಕಲ್ಲು ಎಸೆದಿದ್ದಾರೆ. ಇದರಿಂದ ಪಿಎಸ್ಐ ಸಂತೋಷ್ ಡಬ್ಬಿನ್ ತಲೆಗೆ, ಸಿಪಿಐ ಸತೀಶ್ ಸೇರಿದಂತೆ ಮೂವರಿಗೆ ಗಾಯವಾಗಿದೆ. ಕೂಡಲೆ ಪಿಎಸ್​ಐ ಸಂತೋಷ್ ಅವರನ್ನು ಬಳ್ಳಾರಿ ಟ್ರಾಮಾ ಕೇಕ್​ಸೆಂಟರ್​ಗೆ ಕರೆದುಕೊಂಡು ಹೋಗಿ, ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ-ಟಿಎಂಸಿ ನಡುವೆ ಘರ್ಷಣೆ; ಕಲ್ಲು ತೂರಾಟ

ಘಟನಾ ಸ್ಥಳಕ್ಕೆ‌ ಎಸ್ಪಿ ಮತ್ತು‌ ಎಎಸ್ಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎರಡು ಗುಂಪಿನ ಕಡೆಯಿಂದ 30ಕ್ಕೂ ಹೆಚ್ಚ ಜನರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎರ್ರಿಸ್ವಾಮಿ ಮಠದ ಸುತ್ತ 144 ಸೆಕ್ಷನ್ ಜಾರಿ ಮಾಡಲಾಗಿದೆ.

ಈ ಹಿಂದೆಯೂ ನಡೆದಿತ್ತು ಗಲಾಟೆ

ದೇವರ ಮೂರ್ತಿ ಕೂರಿಸುವ ವಿಚಾರವಾಗಿಯೇ ಎರಡು ಗುಂಪುಗಳ ಮಧ್ಯೆ ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲೂ ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿತ್ತು. ದೇವಸ್ತಾನ ಕಟ್ಟುವ ವಿಚಾರದಲ್ಲಿ ಎರಡು ಗುಂಪುಗಳು ನ್ಯಾಯಾಲಯದ ಮೆಟ್ಟಿಲೇರಿದ್ದವು. ನ್ಯಾಯಾಲಯ ಸದ್ಯಕ್ಕೆ ದೇವಸ್ತಾನದ ಗೋಪುರ ಹಾಗೂ ಕಾಂಪೌಂಡ್ ಕಟ್ಟಲು ಅನುಮತಿ ನೀಡಿತ್ತು. ಆದರೆ ಗೋಪುರ ಕಟ್ಟಿ, ಗರ್ಭಗುಡಿಯೊಳಗೆ ಮೂರ್ತಿ ಸ್ಥಾಪಿಸಲಾಗಿತ್ತು. ಇದಕ್ಕೆ ಇನ್ನೊಂದು ಗುಂಪಿನಿಂದ ಪ್ರಬಲ ವಿರೋಧ ವ್ಯಕ್ತಪಡಿಸಿತ್ತು. ಇದರಿಂದ ಗಲಾಟೆ ನಡೆದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:38 am, Mon, 8 April 24

ತಾಜಾ ಸುದ್ದಿ
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ನಿಜ ಜೀವನದಲ್ಲಿ ಆ ರೀತಿ ಪಾತ್ರ ಆಗಬಾರದು’: ದರ್ಶನ್​ ಬಗ್ಗೆ ಹಂಸಲೇಖ ಮಾತು
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
‘ದರ್ಶನ್ ನೋಡಿದ್ರೆ ಧರ್ಮಸ್ಥಳ ಮಂಜುನಾಥ ಸ್ವಾಮಿ ನೋಡಿದಂತೆ’: ಅಭಿಮಾನಿ
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
ಬಿಜೆಪಿಯವರು ಇದನ್ನ ಪ್ರೂವ್​ ಮಾಡಿದ್ರೆ ರಾಜಕೀಯ ನಿವೃತ್ತಿ: ಜಮೀರ್ ಅಹ್ಮದ್‌
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
‘6 ತಿಂಗಳಲ್ಲಿ ಕನ್ನಡಕ್ಕೆ ಹೊಸ ಒಟಿಟಿ’: ಸಿಹಿ ಸುದ್ದಿ ನೀಡಿದ ಸಾಧು ಕೋಕಿಲ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಲೋಕಲ್​ನವರನ್ನ ಹಿಡಿದ್ರೆ ಮನೆಗೆ ಕಳಿಸ್ತೇನೆ: ಪೊಲೀಸ್​ ಮೇಲೆ ಮಂಜು ದರ್ಪ
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಆಗಾಗ ಸಿಎಂ ಸಿದ್ದರಾಮಯ್ಯರ ತಲೆ ತಿನ್ನುತ್ತಿರಬೇಕು: ಜಗ್ಗೇಶ್
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಸಿದ್ದರಾಮಯ್ಯ-ಡಿಕೆಶಿ ವಿರಾಟ್ ಕೊಹ್ಲಿ-ರೋಹಿತ್ ಇದ್ದಂತೆ: ವಚನಾನಂದ ಶ್ರೀ
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಅಶೋಕ್​ ನಮ್ಮ ಪಕ್ಷದ ಆಂತರಿಕದ ಬಗ್ಗೆ ನಿಮಗ್ಯಾಕೆ ತೆವಲು?: ಪ್ರದೀಪ್​ ಈಶ್ವರ್
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಬಸ್​ ಪಲ್ಟಿ.. 20ಕ್ಕೂ ಹೆಚ್ಚು ಜನರಿಗೆ ಗಾಯ: ಆಕ್ಸಿಡೆಂಟ್ ಆಗಿದ್ದೇಗೆ?
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು
ಭೋರ್ಗರೆಯುತ್ತಿದೆ ಚುಂಚನಕಟ್ಟೆ ಜಲಪಾತ, ವೈಭವ ನೋಡಲು ಪ್ರವಾಸಿಗರ ದಂಡು