Ballari News: ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಇನ್ಮುಂದೆ ಬಿಮ್ಸ್ ಆಗಿ ಹೆಸರು ಬದಲಾವಣೆ ಮಾಡಲು ಮುಂದಾದ ಸರ್ಕಾರ
ಅದು ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ಕಾಲೇಜು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಆ ಆಸ್ಪತ್ರೆ ಮತ್ತು ಕಾಲೇಜಿಗೆ ತನ್ನದೇಯಾದ ಹೆಸರಿದೆ. ಆದ್ರೆ, ಅತಂಹ ಕಾಲೇಜಿನ ಹೆಸರನ್ನ ಬದಲಾವಣೆ ಮಾಡಲು ಕಾಂಗ್ರೆಸ್ ಇದೀಗ ಮುಂದಾಗಿದೆ. ಬಿಜೆಪಿ ಸರ್ಕಾರ ಜಿಲ್ಲೆಯನ್ನ ವಿಭಜನೆ ಮಾಡಿದ್ರೆ, ಕಾಂಗ್ರೆಸ್ ಸರ್ಕಾರ ಇದೀಗ ಹೆಸರು ಬದಲಾವಣೆ ಮಾಡಲು ಹೊರಟಿದೆ. ಅಷ್ಟಕ್ಕೂ ಅದ್ಯಾವ ಕಾಲೇಜು, ಕಾಂಗ್ರೆಸ್ ಯಾಕೆ ಹೆಸರು ಬದಲಾವಣೆ ಮಾಡುತ್ತಿದೆ. ಇಲ್ಲಿದೆ ನೋಡಿ.
ಬಳ್ಳಾರಿ: ಇಲ್ಲಿರುವ ವಿಜಯನಗರ(Vijayanagar) ವೈದ್ಯಕೀಯ ವಿಜ್ಷಾನ ಸಂಸ್ಥೆ. ಸಾಕಷ್ಟು ವಿವಾದ, ಆರೋಪ, ಅವ್ಯವಸ್ಥೆಯ ಮಧ್ಯೆಯೂ ಬಡ ರೋಗಿಗಳ ಪಾಲಿನ ಸಂಜೀವಿನಿಯಾಗಿರುವ ಆಸ್ಪತ್ರೆಯಿದು. ನೂರಾರು ವರ್ಷಗಳ ಇತಿಹಾಸ ಹೊಂದಿರುವ ವಿಮ್ಸ್(VIMS) ಆಸ್ಪತ್ರೆ ಇನ್ನು ಮುಂದೆ ಬಿಮ್ಸ್(BIMS) ಆಗಿ ಮಾರ್ಪಾಡಾಗಲಿದೆ. ಹೌದು, ಅಖಂಡ ಬಳ್ಳಾರಿ ಜಿಲ್ಲೆಯಲಿದ್ದ ವೇಳೆಯಲ್ಲಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಾಗಿದ್ದ ವಿಮ್ಸ್ ಆಸ್ಪತ್ರೆಯ ಹೆಸರನ್ನ ಇದೀಗ ಬದಲಾವಣೆ ಮಾಡಲಾಗುತ್ತಿದೆ. ಹಿಂದಿನ ಬಿಜೆಪಿ(BJP) ಸರ್ಕಾರ ಅಧಿಕಾರವಿದ್ದ ವೇಳೆ ಅಖಂಡ ಬಳ್ಳಾರಿ ಜಿಲ್ಲೆಯನ್ನ ವಿಭಜನೆ ಮಾಡಿ ವಿಜಯನಗರ ಜಿಲ್ಲೆಯನ್ನ ಪ್ರತೇಕವಾಗಿ ರಚನೆ ಮಾಡಿದೆ. ಹೀಗಾಗಿ ವಿಜಯನಗರ ಅನ್ನೋ ಹೆಸರಿನಲ್ಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೆಸರನ್ನ ಬಿಮ್ಸ್ ಆಗಿ ಬದಲಾಯಿಸಲು ಕಾಂಗ್ರೆಸ್(Congress) ಸರ್ಕಾರ ಇದೀಗ ಮುಂದಾಗಿದೆ.
ಬಿಜೆಪಿಯ ಮಾಜಿ ಸಚಿವ ಆನಂದ್ ಸಿಂಗ್ ವಿಜಯನಗರ ಜಿಲ್ಲೆಯನ್ನ ಪ್ರತ್ಯೇಕವಾಗಿ ರಚನೆ ಮಾಡಿಸಿದ್ರೆ, ಕಾಂಗ್ರೆಸ್ ಸಚಿವ ಬಿ ನಾಗೇಂದ್ರ ವಿಜಯನಗರ ಅನ್ನೋ ಹೆಸರಿನಲ್ಲಿರುವ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಹೆಸರನ್ನ ಬಿಮ್ಸ್ ಆಗಿ ಬದಲಾಯಿಸಲು ಮುಂದಾಗಿದ್ದಾರೆ. ವಿಜಯನಗರ ಜಿಲ್ಲೆ ಪ್ರತ್ಯೇಕವಾದ ನಂತರ ವಿಜಯನಗರದ ಹೆಸರಿನಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಬೇಡ. ನಮ್ಮ ಬಳ್ಳಾರಿಯ ಹೆಸರಿನಲ್ಲೆ ವಿಮ್ಸ್ ಅನ್ನು ಬಿಮ್ಸ್ ಆಗಿ ಮಾಡುತ್ತೇವೆ ಅಂತಿದ್ದಾರೆ. ಕಾಂಗ್ರೆಸ್ ಸಚಿವರ ನಿರ್ಧಾರಕ್ಕೆ ಜಿಲ್ಲೆಯ ಕಾಂಗ್ರೆಸ್ ಶಾಸಕರು ಸಹ ಇದೀಗ ಬೆಂಬಲ ನೀಡಿದ್ದು. ವಿಮ್ಸ್ ಹೆಸರನ್ನ ಬಿಮ್ಸ್ ಆಗಿ ಬದಲಾಯಿಸಲು ಮುಂದಾಗಿದೆ. ಅಲ್ಲದೇ ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ವೇಳೆ ಹೋರಾಟ ಮಾಡಿದವರು ಸಹ ಬಿಮ್ಸ್ ಹೆಸರಿನಲ್ಲಿ ವೈದ್ಯಕೀಯ ಕಾಲೇಜು ನಡೆಯಲಿ ಎಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತಿದ್ದಾರೆ.
ಇದನ್ನೂ ಓದಿ:Tumakuru News: ಸರ್ಕಾರಿ ವೈದ್ಯ, ಖಾಸಗಿ ಆಸ್ಪತ್ರೆಯಲ್ಲಿ ಕೆಲಸ: ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ತರಾಟೆ
ಇನ್ನು ಜಿಲ್ಲೆಯ ಜನರು ಹೆಸರು ಬದಲಾವಣೆಗಿಂತ ವಿಮ್ಸ್ ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಬದಲಾವಣೆ ಮಾಡಿ, ಬಡ ರೋಗಿಗಳಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ಕೊಡಿಸುವಂತೆ ಕ್ರಮ ಕೈಗೊಳ್ಳಲಿ ಅಂತಿದ್ದಾರೆ. ಆದ್ರೆ, ಹೆಸರು ಬದಲಾವಣೆಗೆ ಕೈ ಹಾಕಿರುವ ಕಾಂಗ್ರೆಸ್ ಶಾಸಕರು. ಸಚಿವರು ಮುಂದಿನ ದಿನಗಳಲ್ಲಿ ಬಿಮ್ಸ್ ಆಗಲಿರುವ ವಿಮ್ಸ್ ಆಸ್ಪತ್ರೆಯ ಅವ್ಯವಸ್ಥೆ ಸರಿಪಡಿಸುತ್ತಾರೋ ಇಲ್ಲವೋ, ಹೆಸರು ಬದಲಾವಣೆ ಮಾಡಿದ್ದೆ ಬಹುದೊಡ್ಡ ಸಾಧನೆ ಅಂತಾರೋ ಅನ್ನೋದನ್ನ ಕಾದು ನೋಡಬೇಕಿದೆ.
ವರದಿ: ವಿರೇಶ್ ದಾನಿ ಟಿವಿ9 ಬಳ್ಳಾರಿ
ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ