ಸಂಸ್ಕೃತಿ, ಪರಂಪರೆ ಭೂತಕಾಲದ ಆಧಾರ ಸ್ತಂಭ ಮತ್ತು ಭವಿಷ್ಯಕ್ಕೆ ದಾರಿದೀಪ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿಮತ
Lambani items Guinness record: ಭಾರತದ ಪ್ರತಿ ಸಮುದಾಯ ಹಾಗೂ ಸಂಸ್ಕೃತಿಯ ರಕ್ಷಣೆ ಹಾಗೂ ಪೋಷಣೆಗೆ ಬದ್ಧವಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಆಡಳಿತಕ್ಕೆ ಇಂದಿನ ಈ ಸಾಧನೆ ಕನ್ನಡಿಯಾಗಿದೆ ಎಂದು ಇದೇ ವೇಳೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಅಭಿಪ್ರಾಯಪಟ್ಟರು.
ವಿಜಯನಗರ: ವಿಶ್ವಪ್ರಸಿದ್ಧಿ ಐತಿಹಾಸಿಕ ಹಂಪಿಯಲ್ಲಿ 20 ರಾಷ್ಟ್ರಗಳ ಶೃಂಗಸಭೆ (Hampi G 20 Summit) ನಡೆಯುತ್ತಿದ್ದು, ವಿವಿಧ ದೇಶಗಳ ಪ್ರತಿನಿಧಿಗಳು-ಗಣ್ಯರು ಭಾಗವಹಿಸಿದ್ದಾರೆ. ಇದೇ ಸಂದರ್ಭದಲ್ಲಿ ಲಂಬಾಣಿ ಕಸೂತಿ ಕಲೆ (Lambani items) ಗಿನ್ನೆಸ್ ರೆಕಾರ್ಡ್ಗೆ (Guinness record) ಪಾತ್ರವಾಗಿದೆ. ಗಿನ್ನಿಸ್ ರೆಕಾರ್ಡ್ ತಂಡದ ಜೊತೆಯಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಯವರು (Pralhad Joshi) ಲಂಬಾಣಿ ಕಸೂತಿ ಕಲೆ ತಂಡಕ್ಕೆ ಗಿನ್ನೆಸ್ ರೆಕಾರ್ಡ್ ಪ್ರಮಾಣಪತ್ರವನ್ನು ವಿತರಿಸಿದರು.
ಭಾರತದ ಅಧ್ಯಕ್ಷತೆಯಲ್ಲಿ ಜಿ-20 ಶೃಂಗಸಭೆ ನಡೆಯುತ್ತಿದ್ದು, ಇಲ್ಲಿಯ ಕಲೆ ಗಿನ್ನೆಸ್ ರೆಕಾರ್ಡ್ಗೆ ಪಾತ್ರವಾಗಿರುವುದು ಹೆಮ್ಮೆಯ ಸಂಗತಿ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಕಲೆ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಕಲೆಗಳಿಗೆ ಸದಾ ಬೆಂಬಲವಾಗಿದೆ ಎಂದು ಸಚಿವ ಜೋಶಿ ಹೇಳಿದರು.
ಜಿ-20 ರಾಷ್ಟ್ರಗಳ ಗಣ್ಯರನ್ನು ಲಂಬಾಣಿ ನೃತ್ಯದ ಅದ್ಧೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಲಂಬಾಣಿ ಕಸೂತಿ ಪ್ರದರ್ಶನಕ್ಕೆ ಚಾಲನೆ ನೀಡಿದ್ದು, 450 ಲಂಬಾಣಿ ಮಹಿಳೆಯರಿಂದ ತಯಾರಾದ 1300 ಕಸೂತಿ ಕಲೆಗಳ ಪ್ರದರ್ಶನ ನಡೆಯಿತು. ಸಂಡೂರು ಕುಶಲ ಕಲಾ ಕೇಂದ್ರದ ಕಸೂತಿ ಕಲೆ ಮಾಡುವ ಲಂಬಾಣಿ ಮಹಿಳೆಯರು ಇದರಲ್ಲಿ ಪಾಲ್ಗೊಂಡಿದ್ದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ವಿವಿಧ ಸಮುದಾಯ ಹಾಗೂ ಸಂಸ್ಕೃತಿಗಳ ತವರಾಗಿರುವ ಭಾರತ ಈ ಮೂಲಕ ಒಂದು ವಿಶಿಷ್ಟ ಗಿನ್ನಿಸ್ ದಾಖಲೆಯನ್ನು ನಿರ್ಮಿಸಿದಂತಾಗಿದೆ. ಸಂಡೂರ್ ಕೌಶಲ ಕಲಾ ಕೇಂದ್ರದ ಲಂಬಾಣಿ ಸಮುದಾಯದ ಶ್ರೀಮಂತ ಸಂಸ್ಕೃತಿಯನ್ನು ಉಳಿಸಲು ಹಾಗೂ ಬೆಳೆಸಲು ಕಳೆದ ಹಲವು ವರ್ಷಗಳಿಂದ ಶ್ರಮಿಸುತ್ತಿರುವ ಮಹಿಳೆಯರೇ ಈ ವಿಶಿಷ್ಟ ದಾಖಲೆಯನ್ನು ನಿರ್ಮಿಸಿರುವುದು ಗಮನಾರ್ಹ.
India’s #G20 Culture Working Group creates a Guinness Record
Under the visionary leadership of Prime Minister Shri @narendramodi Ji India earns a place for itself in the book of Guinness records for a very special achievement. pic.twitter.com/MUPl034720
— Pralhad Joshi (@JoshiPralhad) July 10, 2023
ಜಿ – 20ಯ ಕಲ್ಚರ್ ವರ್ಕಿಂಗ್ ಗ್ರೂಪ್ ನೇತೃತ್ವದಲ್ಲಿ ವಿಶ್ವದ ಬೃಹತ್ ಲಂಬಾಣಿ ಕರಕುಶಲ ವಸ್ತುಗಳ ಪ್ರದರ್ಶನ ಏರ್ಪಡಿಸಿ ಈ ವಿಶೇಷ ದಾಖಲೆಯನ್ನು ಭಾರತ ತನ್ನದಾಗಿಸಿಕೊಂಡಿದೆ. ಲಂಬಾಣಿ ಸಮುದಾಯದ ಗುರುತಾದ ಕಸೂತಿ ಕಲೆ ಇದರಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಹಂಪಿಯಲ್ಲಿ ನಡೆದ ಜಿ-20 ಕಲ್ಚರ್ ವರ್ಕಿಂಗ್ ಗ್ರೂಪ್ ಸಭೆಯಲ್ಲಿ ಸದಸ್ಯ ರಾಷ್ಟ್ರಗಳ ಸಮ್ಮುಖದಲ್ಲಿ ಕೇಂದ್ರ ಸಾಂಸ್ಕೃತಿಕ ಸಚಿವಾಲಯಕ್ಕೆ ಗಿನ್ನಿಸ್ ದಾಖಲೆಯ ಪ್ರಮಾಣ ಪತ್ರ ನೀಡಲಾಗಿದೆ.
ಭಾರತದ ಪ್ರತಿ ಸಮುದಾಯ ಹಾಗೂ ಸಂಸ್ಕೃತಿಯ ರಕ್ಷಣೆ ಹಾಗೂ ಪೋಷಣೆಗೆ ಬದ್ಧವಾಗಿದ್ದು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರದ ಆಡಳಿತಕ್ಕೆ ಇಂದಿನ ಈ ಸಾಧನೆ ಕನ್ನಡಿಯಾಗಿದೆ ಎಂದು ಇದೇ ವೇಳೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಅಭಿಪ್ರಾಯಪಟ್ಟರು.
The Guinness record for the largest display of Lambani items is a special feat for India. I congratulate the #G20 Culture Working Group and everyone involved in setting this record. pic.twitter.com/HmeGxfUGn0
— Pralhad Joshi (@JoshiPralhad) July 10, 2023
ರಾಜ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:46 am, Tue, 11 July 23