ಸಚಿವ ಆನಂದ ಸಿಂಗ್ ಆಯ್ತು ಈಗ ಆಪ್ತ ಸಹಾಯಕಿಯಿಂದಲೂ ಒತ್ತುವರಿ? ಎದುರು ಮನೆ ಆಸ್ತಿ ಕಬಳಿಕೆಗೆ ಮುಂದಾದ್ರಾ ಸಚಿವರ ಸಹಾಯಕಿ?

| Updated By: ಸಾಧು ಶ್ರೀನಾಥ್​

Updated on: Dec 06, 2022 | 2:51 PM

Anand Singh: 15/22 ಅಡಿ ಜಾಗಕ್ಕಾಗಿ ಎದುರುಬದರು ಮನೆಯವರ ಮಧ್ಯೆ ಜಗಳ ಶುರುವಾಗಿದೆ. ನ್ಯಾಯಾಲಯದ ಇಂಜೆಕ್ಷನ್ ಆರ್ಡರ್ ಇದ್ದರೂ ಸಚಿವರ ಕಚೇರಿಯ ಸಿಬ್ಬಂದಿಯಿಂದ ಬೇರೆಯವರ ಆಸ್ತಿ ಕಬಳಿಕೆ ವಿಚಾರ ಕೇಳಿಬಂದಿರುವುದರಿಂದ ಇದೀಗ ಸಚಿವರ ಮೇಲೂ ಅನುಮಾನ ಮೂಡಿಸುವಂತೆ ಮಾಡಿದೆ.

ಸಚಿವ ಆನಂದ ಸಿಂಗ್ ಆಯ್ತು ಈಗ ಆಪ್ತ ಸಹಾಯಕಿಯಿಂದಲೂ ಒತ್ತುವರಿ? ಎದುರು ಮನೆ ಆಸ್ತಿ ಕಬಳಿಕೆಗೆ ಮುಂದಾದ್ರಾ ಸಚಿವರ ಸಹಾಯಕಿ?
ಸಚಿವ ಆನಂದ ಸಿಂಗ್ ಆಪ್ತ ಸಹಾಯಕಿ ಎದುರು ಮನೆ ಆಸ್ತಿ ಕಬಳಿಕೆಗೆ ಮುಂದಾದ್ರಾ?
Follow us on

ಸರ್ಕಾರಿ‌ ಜಾಗ ಒತ್ತುವರಿ ಮಾಡಿ ವಿಜಯನಗರದಲ್ಲಿ (Vijayanagar) ಅರಮನೆ ಕಟ್ಟಿದ ಆರೋಪ‌ ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಮೇಲಿದೆ.‌ ಸಚಿವರ ವಿರುದ್ಧದ ಆರೋಪ ಮಾಸುವ ಮುನ್ನವೇ‌ ಸಚಿವರ (Anand Singh) ಕಚೇರಿಯ ಸಿಬ್ಬಂದಿ ವಿರುದ್ಧವೂ ಇದೀಗ ಇದೇ ಆರೋಪ ಕೇಳಿ ಬಂದಿದೆ. ಕೋರ್ಟ್ ನಿಂದ‌ ಇಂಜೆಕ್ಷನ್ ಆರ್ಡರ್ ಇದ್ದರೂ ಸಚಿವರ ಆಪ್ತ ಸಿಬ್ಬಂದಿಯೊಬ್ಬರು ಬೇರೆಯವರಿಗೆ ಸೇರಿದ ಜಾಗದಲ್ಲಿ ಕಟ್ಟಡ ಕಟ್ಟುತ್ತಿದ್ದಾರೆ (Land Encroachment) ಅನ್ನೋ ಆರೋಪ (Golmaal) ಕೇಳಿಬಂದಿದೆ ನೋಡಿ. ಅಷ್ಟಕ್ಕೂ ಏನಿದು ವಿವಾದ. ಆ ಕುರಿತಾದ ವರದಿಯೊಂದಿದೆ ನೋಡಿ.

ಕಾಮಗಾರಿ ವೇಳೆ ಅರ್ಧಕ್ಕೆ ನಿಂತಿರುವ ಕಟ್ಟಡ. ಕಟ್ಟಡದ ವಿಚಾರವಾಗಿ ದಾಖಲೆಗಳನ್ನ ಪ್ರದರ್ಶನ ಮಾಡ್ತಿರೋ ಮಹಿಳೆ. ನ್ಯಾಯಾಲಯದಿಂದ ಇಂಜೆಕ್ಷನ್ ಆರ್ಡರ್ ಇದ್ದರೂ ದೌರ್ಜನ್ಯ ಮಾಡಲಾಗ್ತಿದೆ ಅಂತಾ ಆರೋಪಿಸುತ್ತಿರುವ ನೊಂದ‌ ಮಹಿಳೆ. ಯೆಸ್, ಸಚಿವ ಆನಂದಸಿಂಗ್ ಕಚೇರಿಯ ಆಪ್ತ ಸಿಬ್ಬಂದಿಯೊಬ್ಬರ ವಿರುದ್ದ ಕೇಳಿ ಬರುತ್ತಿರುವ ಆರೋಪ ಇದಾಗಿದೆ.

ಎದುರು ಮನೆಯವರ ಆಸ್ತಿ ಕಬಳಿಕೆಗೆ ಮುಂದಾದ್ರಾ ಸಚಿವರ ಸಹಾಯಕಿ..!?

ಪ್ರವಾಸೋದ್ಯಮ ಸಚಿವ ಆನಂದಸಿಂಗ್ ಸರ್ಕಾರಿ ಜಾಗ ಕಬಳಿಸಿ ಬೃಹತ್ ಮನೆ ಕಟ್ಟಿದ್ದಾರೆ ಅನ್ನೋ ಆರೋಪ ಇತ್ತೀಚೆಗಷ್ಟೇ ಕೇಳಿಬಂದಿತ್ತು. ಸಚಿವರ ಮನೆ ನಿರ್ಮಾಣದ ವಿಚಾರ ಹೈಕೋರ್ಟ್ ಮೇಟ್ಟಿಲೇರಿದೆ. ಈ ಬೆನ್ನಲ್ಲೆ ಸಚಿವರೊಬ್ಬರೇ ಅಲ್ಲ ಸಚಿವರ ಕಚೇರಿಯಲ್ಲಿ ಕೆಲಸ ಮಾಡೋ ಮಹಿಳಾ‌ ಸಿಬ್ಬಂದಿಯೊಬ್ಬರ ವಿರುದ್ಧವೂ ಸಹ ಈಗ ಅದೇ ರೀತಿಯ ಆರೋಪ ಕೇಳಿಬಂದಿದೆ. ಹೊಸಪೇಟೆ ಪಟ್ಟಣದ ವಡಕರಾಯನ ದೇವಸ್ಥಾನದ ಮುಂಭಾಗದ ಬಳಿ ಜ್ಯೋತಿ ಪ್ರಕಾಶರಿಗೆ ಸೇರಿದ ಆಸ್ತಿಯಿದೆ.‌ ಸರ್ವೆ ನಂಬರ್ 272 ರಲ್ಲಿ 70/24 ಅಡಿ ಜಾಗದಲ್ಲಿ ಹೊಂದಿರುವ ಜ್ಯೋತಿ ಪ್ರಕಾಶ ಅವರ ಆಸ್ತಿಯನ್ನ ಸಚಿವರ ಸಿಬ್ಬಂದಿ ಕಬಳಿಕೆ‌ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

ಸಚಿವ ಆನಂದಸಿಂಗ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಪಾವನಿ ಪವನ್ ಕುಮಾರ್ ಎನ್ನುವವರು ಜ್ಯೋತಿ ಪ್ರಕಾಶರಿಗೆ ಸೇರಿದ ಜಾಗವನ್ನ ಕಬಳಿಕೆ ಮಾಡಲು ಮುಂದಾಗಿದ್ದಾರಂತೆ. ಜ್ಯೋತಿ ಪ್ರಕಾಶರ ತಾಯಿ ಹೆಸರಿನಲ್ಲಿದ್ದ ಆಸ್ತಿಯಲ್ಲಿ ನಾಲ್ಕು ಶೀಟಿನ ಹಾಗೂ ಒಂದು ಆರ್‌.ಸಿ.ಸಿ. ಮನೆ ಇದೆ. ಇದರ ಜೊತೆ ರಸ್ತೆಗೆ ಅಂಟಿಕೊಂಡಿರುವ 15/22 ಖಾಲಿ ಜಾಗದಲ್ಲಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ.‌ ಇದೇ ಕಟ್ಟಡದ ಸ್ಥಳವನ್ನ ಪಾವನಿ ಪವನಕುಮಾರ ಕಬಳಿಸಲು ಮುಂದಾಗಿದ್ದಾರೆ. ನ್ಯಾಯಾಲಯದಿಂದ ಇಂಜೆಕ್ಷನ್ ಆರ್ಡರ್ ಇದ್ದರೂ ಸಚಿವರ ಆಪ್ತ ಸಿಬ್ಬಂದಿ ಪಾವನಿ ತಮ್ಮ ಜಾಗವನ್ನ ಕಬಳಿಸಲು ಮುಂದಾಗಿದ್ದಾರೆ ಅಂತಾ ಜ್ಯೋತಿ ಪ್ರಕಾಶ ಆರೋಪಿಸಿದ್ದಾರೆ.

ನ್ಯಾಯಾಲಯದಿಂದ ಇಂಜೆಕ್ಷನ್ ಆರ್ಡರ್ ತಂದರೂ ಪಾವನಿ ಪವನಕುಮಾರ ತಮ್ಮ ಜಾಗದಲ್ಲಿ ಕಟ್ಟಡ ನಿರ್ಮಾಣ ಮಾಡ್ತಿದ್ದಾರೆ. ಅವರ ಹೆಸರಿನಲ್ಲಿ ದಾಖಲೆಗಳಿದ್ದರೆ ತೋರಿಸಲಿ. ನನ್ನ ಬಳಿ ನನ್ನ ಆಸ್ತಿಗೆ ಸಂಬಂಧಿಸಿದ ಎಲ್ಲ ದಾಖಲೆಗಳಿವೆ. ಪೊಲೀಸರಿಗೆ ದೂರು ನೀಡಿದರೂ ನನ್ನ ದೂರು ಸ್ವೀಕರಿಸದ ಕಾರಣ ಅಂಚೆ ಮೂಲಕ ದೂರು ಸಲ್ಲಿಸಿರುವೆ. ಒಂದೂವರೆ ತಿಂಗಳಾದರೂ ಪೊಲೀಸರಿಂದ ನ್ಯಾಯ ಸಿಕ್ಕಿಲ್ಲ ಅಂತಾ ಜ್ಯೋತಿ ಪ್ರಕಾಶ ಆರೋಪಿಸುತ್ತಿದ್ದಾರೆ.

ಆದ್ರೆ ಆಸ್ತಿ ಕಬಳಿಕೆ ಆರೋಪ ಹೊತ್ತಿರುವ ಸಚಿವರ ಕಚೇರಿಯ ಸಿಬ್ಬಂದಿ ಪಾವನಿ ಪವನಕುಮಾರ ಕುಟುಂಬ ಬೇರೆಯೇ ಹೇಳುತ್ತಿದೆ. ನಮ್ಮದೂ ಸರ್ವೆ ನಂಬರ್ 271ರಲ್ಲಿದೆ. ನಮ್ಮ ಬಳಿ ಫಾರ್ಮ್ 3 ಸಹ ಇದೆ. ಅದು ನಮ್ಮ ಜಾಗ. ನಮ್ಮ ಬಳಿಯೂ ದಾಖಲೆಗಳಿವೆ. ನಾವು ಯಾರ ಮೇಲೆಯೂ ದೌರ್ಜನ್ಯ ಎಸಗುತ್ತಿಲ್ಲ. ದಶಕಗಳಿಂದ ಇಲ್ಲದ ತಕರಾರು ಈಗ್ಯಾಕೆ? ನಮ್ಮದೇನೂ ತಪ್ಪಿಲ್ಲ. ನಾವೂ ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ ಅಂತಿದ್ದಾರೆ ಪಾವನಿ ಪವನಕುಮಾರ್ ಅತ್ತೆ ಸರಸ್ವತಿ ಅವರು.

15/22 ಅಡಿ ಜಾಗಕ್ಕಾಗಿ ಎದುರುಬದರು ಮನೆಯವರ ಮಧ್ಯೆ ಜಗಳ ಶುರುವಾಗಿದೆ. ಜೊತೆಗೆ ಸಚಿವರ ಕಚೇರಿಯಲ್ಲಿ ಕೆಲಸ ಮಾಡೋ ಪಾವನಿ ಪವನಕುಮಾರ್ ಅವರು ದೌರ್ಜನ್ಯ ಎಸಗುತ್ತಿದ್ದಾರೆ ಅನ್ನೋದು ಗಂಭೀರ ಆರೋಪವಾಗಿದೆ. ನ್ಯಾಯಾಲಯದ ಇಂಜೆಕ್ಷನ್ ಆರ್ಡರ್ ಇದ್ದರೂ ಸಚಿವರ ಕಚೇರಿಯ ಸಿಬ್ಬಂದಿಯಿಂದ ಬೇರೆಯವರ ಆಸ್ತಿ ಕಬಳಿಕೆ ವಿಚಾರ ಕೇಳಿಬಂದಿರುವುದರಿಂದ ಇದೀಗ ಸಚಿವರ ಮೇಲೂ ಅನುಮಾನ ಮೂಡಿಸುವಂತೆ ಮಾಡಿದೆ. ಇನ್ನಾದರೂ ಸಂಭಂದಪಟ್ಟ ಅಧಿಕಾರಿಗಳು ಜಾಗದ ವಿಚಾರದಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ. (ವರದಿ: ವಿರೇಶ್ ದಾನಿ, ಟಿವಿ 9, ವಿಜಯನಗರ)

ಇದನ್ನೂ ಓದಿ:
ಪ್ರಧಾನಿ ಕಚೇರಿ ಸೂಚನೆಗೂ ಡೋಂಟ್ ಕೇರ್: ದಾಬಸಪೇಟೆಯಿಂದ ದೇವನಹಳ್ಳಿ ಹೆದ್ದಾರಿ ನಿರ್ಮಾಣ ಅಪಘಾತಗಳ ತಾಣವಾಗುತ್ತಿದೆ!