AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಂಪಿಯಲ್ಲಿ ದೇವಾಯತನಮ್ ಸಂಭ್ರಮ: ದೇಗುಲಗಳ ವಾಸ್ತುಶಿಲ್ಪ ಚಿಂತನೆಗೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಚಾಲನೆ

ದೇಗುಲಗಳು ಭಾರತದ ಸಂಸ್ಕೃತಿ ಮತ್ತು ಜೀವನ ಪದ್ಧತಿಯ ಸಂಕೇತಗಳಾಗಿವೆ. ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ನಾವೆಲ್ಲರೂ ಕೊಂಡಾಡಬೇಕಿದೆ, ಸಂರಕ್ಷಿಸಬೇಕಿದೆ ಎಂದು ಕೇಂದ್ರ ಸಚಿವ ಕಿಶನ್ ರೆಡ್ಡಿ ಹೇಳಿದರು.

ಹಂಪಿಯಲ್ಲಿ ದೇವಾಯತನಮ್ ಸಂಭ್ರಮ: ದೇಗುಲಗಳ ವಾಸ್ತುಶಿಲ್ಪ ಚಿಂತನೆಗೆ ಕೇಂದ್ರ ಸಚಿವ ಕಿಶನ್ ರೆಡ್ಡಿ ಚಾಲನೆ
ದೇವಾಯತನಮ್ ಕಾರ್ಯಕ್ರಮದಲ್ಲಿ ದೇಗುಲಗಳ ವಿವರದ ಪುಸ್ತಕವನ್ನು ಕೇಂದ್ರ ಸಚಿವ ಕಿಶನ್ ರೆಡ್ಡಿ ಬಿಡುಗಡೆ ಮಾಡಿದರು.
TV9 Web
| Edited By: |

Updated on: Feb 25, 2022 | 7:44 PM

Share

ಹೊಸಪೇಟೆ: ಕೇಂದ್ರ ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಹಾಗೂ ದಾನಿ ಜಿ.ಕಿಶನ್ ರೆಡ್ಡಿ (Kishan Reddy) ಹಂಪಿಯಲ್ಲಿ ಶುಕ್ರವಾರ ‘ದೇವಾಯತನಮ್’ (Devayatanam) ಹೆಸರಿನ ಭಾರತೀಯ ದೇಗುಲಗಳ ವಾಸ್ತುಶಿಲ್ಪ ಸಮಾವೇಶಕ್ಕೆ ಚಾಲನೆ ನೀಡಿದರು. ಭಾರತೀಯ ಪುರಾತತ್ವ ಇಲಾಖೆಯು ಹಂಪಿಯ ಪಟ್ಟಾಭಿರಾಮ ದೇಗುಲದಲ್ಲಿ ಸಮಾವೇಶವನ್ನು ಆಯೋಜಿಸಿದೆ. ಸಮಾವೇಶ ಉದ್ಘಾಟಿಸಿ ಮಾತನಾಡಿದ ಕಿಶನ್ ರೆಡ್ಡಿ, ‘ಪ್ರಧಾನಿ ನರೇಂದ್ರ ಮೋದಿ ಅವರು 5 V ದೃಷ್ಟಿಕೋನವು ಭಾರತವನ್ನು ವಿಶ್ವಗುರು ಸ್ಥಾನಕ್ಕೆ ಕರೆದೊಯ್ಯಲಿದೆ ಎಂದು ಹೇಳಿದರು. ವಿರಾಸತ್ (ಪರಂಪರೆ), ವಿಕಾಸ್ (ಅಭಿವೃದ್ಧಿ), ವಿಶ್ವಾಸ (ನಂಬಿಕೆ), ವಿಜ್ಞಾನ ಎಂಬ ಮಂತ್ರಗಳು ದೇಶದ ಅಭಿವೃದ್ಧಿಗೆ ಪೂರಕ ಎಂದರು.

ಕೇಂದ್ರ ಸಂಸ್ಕೃತಿ ಮತ್ತು ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅರ್ಜುಲ್ ರಾಮ್​ ಮೇಘ್​ವಾಲ್ ಕಾರ್ಯಕ್ರಮದಲ್ಲಿ ವರ್ಚುವಲ್ ಆಗಿ ಭಾಗಿಯಾದರು. ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಸಾರಿಗೆ ಸಚಿವ ಶ್ರೀರಾಮುಲು, ಬಳ್ಳಾರಿ ಶಾಸಕ ಜಿ.ಸೋಮಶೇಖರ ರೆಡ್ಡಿ ಮತ್ತು ಪುರಾತತ್ವ ಇಲಾಖೆ ನಿರ್ದೇಶಕಿ ವಿ.ವಿದ್ಯಾವತಿ ಪಾಲ್ಗೊಂಡಿದ್ದರು. ಕೇಂದ್ರ ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಗೋವಿಂದ ಮೋಹನ್ ಅವರು ಧ್ವನಿಮುದ್ರಿತ ಸಂದೇಶವನ್ನು ಸಮಾವೇಶದಲ್ಲಿ ಬಿತ್ತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಕಿಶನ್ ರೆಡ್ಡಿ, ‘ದೇಗುಲಗಳು ಭಾರತದ ಸಂಸ್ಕೃತಿ ಮತ್ತು ಜೀವನ ಪದ್ಧತಿಯ ಸಂಕೇತಗಳಾಗಿವೆ. ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ನಾವೆಲ್ಲರೂ ಕೊಂಡಾಡಬೇಕಿದೆ, ಸಂರಕ್ಷಿಸಬೇಕಿದೆ. ಇಂಥ ಸಮಾವೇಶಗಳು ದೇಗುಲ ಪರಂಪರೆ, ಕಲೆ ಮತ್ತು ವಾಸ್ತುಶಿಲ್ಪಗಳ ಚರ್ಚೆಗೆ ವೇದಿಕೆ ಒದಗಿಸುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನ ಮತ್ತು ಪರಿಶ್ರಮದಿಂದಾಗಿ ಭಾರತವು ವಿಶ್ವಗುರು ಸ್ಥಾನವನ್ನು ಅಲಂಕರಿಸುವ ಸಮಯ ಸನ್ನಿಹಿತವಾಗಿದೆ ಎಂದರು.

ಕೇಂದ್ರ ಸರ್ಕಾರವು ಕಡುಬಡವರಿಗೂ ಸರ್ಕಾರದ ಸವಲತ್ತುಗಳನ್ನು ತಲುಪಿಸಲು ಶ್ರಮಿಸುತ್ತಿದೆ. ಭಾರತದ ವಿಶಿಷ್ಟ ಮತ್ತು ಶ್ರೀಮಂತ ಪರಂಪರೆಯನ್ನು ಮುಂದಿನ ತಲೆಮಾರಿಗೆ ಉಳಿಸಿಕೊಡುವ ಉದ್ದೇಶದಿಂದ ಹಲವು ಕ್ರಮಗಳನ್ನು ಜಾರಿಗಳಿಸಿದೆ. ಕೇಂದ್ರ ಸರ್ಕಾರವು ನಂಬಿಕೆಯಿಂದ ಕೆಲಸ ಮಾಡಿ, ಭಾರತದ ಮತ್ತು ವಿಶ್ವದ ಜನರ ವಿಶ್ವಾಸ ಗಳಿಸಿಕೊಂಡಿದೆ. ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನದ ಸದುಪಯೋಗಕ್ಕೆ ಮುಂದಾಗಿದೆ. ಸಶಕ್ತ ಮತ್ತು ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಶ್ರಮಿಸುತ್ತಿದೆ ಎಂದು ಹೇಳಿದರು.

ಈ ನೆಲದ ದೇಗುಲಗಳನ್ನು ಹಲವು ದೃಷ್ಟಿಕೋನಗಳಿಂದ ಗಮನಿಸಬೇಕು. ಪಾರಮಾರ್ಥಿಕದ ಕಡೆಗಿನ ನಮ್ಮ ಪಯಣಕ್ಕೆ ನೆರವಾಗುವುದರೊಂದಿಗೆ ಸ್ಥಳೀಯ ಸಮುದಾಯಗಳಿಗೆ ಆರ್ಥಿಕ ಅನುಕೂಲಗಳನ್ನು ದೇಗುಲಗಳು ಒದಗಿಸುತ್ತವೆ. ಕುಶಲಕರ್ಮಿಗಳು, ಕಲಾವಿದರ ಕಲಾಭಿವ್ಯಕ್ತಿಗೆ ಅತ್ಯುತ್ತಮ ವೇದಿಕೆಯಷ್ಟೇ ಅಲ್ಲದೇ, ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯ ನೆಲೆವೀಡೂ ಆಗಿದೆ. ಶಿಲ್ಪಶಾಸ್ತ್ರ ಎನ್ನುವುದು ಕಲೆ ಮತ್ತು ವಿಜ್ಞಾನದ ಹದವರಿತ ಮಿಳಿತದಿಂದ ಬೆಳೆದು ಬಂದ ಜ್ಞಾನ ಪರಂಪರೆ. ದೇಗುಲಗಳು ಏಕತೆ, ಒಗ್ಗಟ್ಟು ಮತ್ತು ನಾಗರಿಕತೆಗಳ ದ್ಯೋತಕ. ಎಷ್ಟೋ ಕಡೆ ಸ್ವಾತಂತ್ರ್ಯ ಹೋರಾಟಗಳು ದೇಗುಲಗಳ ಮಂಗಳಾರತಿಯಿಂದ ಆರಂಭವಾದದ್ದು ವಾಡಿಕೆ ಎಂದು ನುಡಿದರು.

ಹಂಪಿಯ ದೇಗುಲ ಸಮುಚ್ಚಯಗಳು ಯುನೆಸ್ಕೊ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಬುದ್ಧಿವಂತಿಕೆ, ಕಲ್ಪನೆ ಮತ್ತು ವಾಸ್ತುಶಿಲ್ಪದ ಮಹಾನ್ ಕಲೆಯ ದ್ಯೋತಕವಾಗಿ ಈ ದೇಗುಲಗಳು ಇಂದಿಗೂ ನಮಗೆಲ್ಲರಿಗೂ ಪ್ರೇರಣೆ ಒದಗಿಸುತ್ತಿವೆ. ಭಾರತದಲ್ಲಿರುವ 40 ವಿಶ್ವ ಪಾರಂಪರಿಕ ಸ್ಥಾನಗಳ ಪೈಕಿ 10 ತಾಣಗಳು ದೇಗುಲಗಳೇ ಆಗಿರುವುದು ವಿಶೇಷ. ಈ ವರ್ಷ ಕೇಂದ್ರ ಸರ್ಕಾರವು ಬೇಲೂರು ಮತ್ತು ಸೋಮನಾಥಪುರದ ಹೊಯ್ಸಳ ದೇಗುಲಗಳನ್ನು ವಿಶ್ವ ಪಾರಂರಿಕ ಪಟ್ಟಿಗೆ ಸೇರಿಸಲು ಶಿಫಾರಸು ಮಾಡಿದೆ. ಅಯೋಧ್ಯೆಯಲ್ಲಿ ರಾಮನ ಭವ್ಯ ದೇಗುಲ ನಿರ್ಮಾಣ ಕಾರ್ಯ ಪ್ರಗತಿಯಲ್ಲಿರುವ ಬಗ್ಗೆಯೂ ಸಚಿವರು ಈ ವೇಳೆ ಮಾತನಾಡಿದರು. ಸುಮಾರು 250 ವರ್ಷಗಳ ನಂತರ ಭಾರತದ ಅಧ್ಯಾತ್ಮ ರಾಜಧಾನಿ ಕಾಶಿಯ ಜೀರ್ಣೋದ್ಧಾರ ಮಾಡಲಾಯಿತು. ಭಕ್ತರಿಗೆ ಹಲವು ಸೌಲಭ್ಯಗಳು ಮತ್ತು ಮೂಲಸೌಕರ್ಯಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ತೆಲಂಗಾಣ ಸರ್ಕಾರವು 2 ಬೃಹತ್ ಶಿಲಾ ದೇಗುಲಗಳನ್ನು ₹ 1000 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. ಭಾರತದಲ್ಲಿ ಪ್ರಸ್ತುತ ಅಸ್ತಿತ್ವದಲ್ಲಿರುವ ಅಧ್ಯಾತ್ಮ ಕೇಂದ್ರಗಳಲ್ಲಿ ಭಕ್ತರಿಗೆ ಸುಲಭ ಪ್ರವೇಶ ಮತ್ತು ಅಗತ್ಯ ಸೌಲಭ್ಯಗಳು ದೊರಕುವಂತೆ ಮಾಡಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶ. ಉತ್ತಮ ಮೂಲಸೌಕರ್ಯ ಮತ್ತು ವಿಶ್ವಮಟ್ಟದ ಸೌಲಭ್ಯಗಳನ್ನು ಒದಗಿಸಲು ಸರ್ಕಾರವು ಬದ್ಧವಾಗಿದೆ ಎಂದರು. ಪ್ರವಾಸೋದ್ಯಮ ಇಲಾಖೆಯು ಪ್ರಸಾದ್ ಮತ್ತು ಸ್ವದೇಶ್ ದರ್ಶನ್ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಿದೆ. ಧಾರ್ಮಿಕ ಕೇಂದ್ರಗಳಲ್ಲಿ ಸುಮಾರು ₹ 7000 ಕೋಟಿ ವೆಚ್ಚದಲ್ಲಿ ಅಗತ್ಯ ಸೌಕರ್ಯ ಒದಗಿಸಲು ಮುಂದಾಗಿದೆ ಎಂದು ಮಾಹಿತಿ ನೀಡಿದರು. ಭಾರತದ ದೇಗುಲಗಳ ಬಗ್ಗೆ ಸಿದ್ಧಪಡಿಸಿದ್ದ ಪುಸ್ತಕವನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು. ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಯ ಸಚಿವರು ಪಾಲ್ಗೊಂಡಿದ್ದರು.

ಇದನ್ನೂ ಓದಿ: Lord Ganesha: ಈ ಗಣಪತಿ ದೇವಾಲಯಗಳಿಗೆ ಭೇಟಿ ನೀಡಿ ಗಣೇಶನ ದರ್ಶನ ಮಾಡಿದ್ರೆ ನಿಮ್ಮ ದುಃಖ ನಿವಾರಣೆಯಾಗಿ ಇಷ್ಟಾರ್ಥಗಳು ಈಡೇರುತ್ತವೆ

ಇದನ್ನೂ ಓದಿ: ಅಯೋಧ್ಯೆಯ ಶ್ರೀರಾಮ ದೇಗುಲ ಭಾರತದ ರಾಷ್ಟ್ರ ಮಂದಿರವಾಗಲಿದೆ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​

ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಟೀಮ್ ಇಂಡಿಯಾ ವಿರುದ್ಧ ಭರ್ಜರಿ ಸೆಂಚುರಿ ಸಿಡಿಸಿದ ಸಮೀರ್
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
ಮನ್ರೇಗಾ ಯೋಜನೆ ಹೆಸ್ರು ಬದಲಾವಣೆ: ಕೇಂದ್ರದ ಕ್ರಮಕ್ಕೆ AICC ಅಧ್ಯಕ್ಷ ಕಿಡಿ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
2026 ಸಿಂಹ ರಾಶಿಯವರಿಗೆ ಹಲವು ಮಹತ್ವದ ಬದಲಾವಣೆಗಳನ್ನು ತರುವ ವರ್ಷ
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
Pulse Polio Campaign: ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿದ ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
ಡಿಕೆ ಶಿವಕುಮಾರ್​​​ ಭೇಟಿ ಬಗ್ಗೆ ಕೆಎನ್​ ರಾಜಣ್ಣ ಸ್ಫೋಟಕ ಹೇಳಿಕೆ
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
Ashes 2025: ಮೂರಕ್ಕೆ ಮೂರು... ಆಸ್ಟ್ರೇಲಿಯಾ ಪಾಲಾದ ಆ್ಯಶಸ್
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ಶೆಟ್ಟಿ ಗ್ಯಾಂಗ್ ಬಿರುಕು? ಮೊದಲ ಬಾರಿಗೆ ಮೌನ ಮುರಿದ ಪ್ರಮೋದ್ ಶೆಟ್ಟಿ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ
ನಾಯಕತ್ವ ಬದಲಾವಣೆ ಗೊಂದಲ ಬಗೆಹರಿಸಿ: ಖರ್ಗೆಗೆ VR ಸುದರ್ಶನ್ ಪತ್ರ