ಕೊಟ್ಟೂರು ತರಳಬಾಳು ಹುಣ್ಣಿಮೆ: ಈಗ ಕುರುಕ್ಷೇತ್ರ ಧರ್ಮ ಕ್ಷೇತ್ರ ಆಗಿದೆ ಎಂದ ಶಿವಾಚಾರ್ಯ ಶ್ರೀ

ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ತರಳುಬಾಳು ಹುಣ್ಣಿಮೆ ನಡೆಯಿತು. ಇದರ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಗಿಯಾಗಿ ಕನ್ನಡದಲ್ಲಿ ಭಾಷಣ ಆರಂಭಿಸಿದರು.

ಕೊಟ್ಟೂರು ತರಳಬಾಳು ಹುಣ್ಣಿಮೆ: ಈಗ ಕುರುಕ್ಷೇತ್ರ ಧರ್ಮ ಕ್ಷೇತ್ರ ಆಗಿದೆ ಎಂದ ಶಿವಾಚಾರ್ಯ ಶ್ರೀ
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಮತ್ತು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್
Edited By: Rakesh Nayak Manchi

Updated on: Feb 04, 2023 | 11:06 PM

ವಿಜಯನಗರ: ಕುರುಕ್ಷೇತ್ರದಲ್ಲೂ ಧರ್ಮದ ತಳಹದಿಯ ಮೇಲೆ ಯುದ್ಧ ನಡೆದಿದೆ. ಆದರೆ ಇಂದು ಕುರುಕ್ಷೇತ್ರ ಧರ್ಮಕ್ಷೇತ್ರ ಆಗಿದೆ ಎಂದು ಸಿರಿಗೆರೆ ಪೀಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ (Dr.Shivamurthy Shivacharya Swamiji) ಹೇಳಿದ್ದಾರೆ. ವಿಜಯನಗರ ಜಿಲ್ಲೆಯ ಕೊಟ್ಟೂರಿನಲ್ಲಿ ನಡೆದ ತರಳಬಾಳು ಹುಣ್ಣಿಮೆ (Kotturu Taralabalu Hunnime) ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಇವತ್ತಿನ ವಿಧಾನಸಭೆ ಹಾಗೂ ಸಂಸತ್ ಕುರುಕ್ಷೇತ್ರ ಆಗಿದೆ. ಅಧಿವೇಶನಗಳು ಧರ್ಮದ ತಳಹದಿ ಮೇಲೆ ನಡೆದಿದ್ದರೆ ಕಿತ್ತಾಡುತ್ತಿರಲಿಲ್ಲ. ರಾಜಕೀಯ ಧರ್ಮದ ಬುನಾದಿಯ ಮೇಲೆ ಅದು ನಡೆಯಬೇಕು ಎಂದರು.

ರಾಜಕಾರಣದಲ್ಲಿ ಧರ್ಮ ಇರಬೇಕು ಅಂತಾ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಾದ ಮಂಡಿಸಿದ್ದಾರೆ. ಇದಕ್ಕೆ ನಮ್ಮ ಅಭಿಪ್ರಾಯ ಭಗವದ್ಗೀತೆ ಉದ್ಘರಿಸಿ ಅವರ ಮಾತನ್ನ ನಾವೂ ಅನುಮೋದಿಸುತ್ತೇವೆ. ಭಗವದ್ಗೀತೆಯಲ್ಲಿ ಧರ್ಮ ಕ್ಷೇತ್ರ ಕುರುಕ್ಷೇತ್ರ ಅನ್ನೋ ಶ್ಲೋಕವಿದೆ. ಇವತ್ತು ಕುರುಕ್ಷೇತ್ರದಲ್ಲಿ ಎನಾಯ್ತು ಅಂತಾ ಹಿಂದೆ ಮಹಾಭಾರತದಲ್ಲಿ ದೃತರಾಷ್ಟ್ರ ಕೇಳುತ್ತಾನೆ. ಅದು ಎತಂಹ ಯುದ್ಧಭೂಮಿ ಅಂದರೆ ಧರ್ಮ ಕ್ಷೇತ್ರ ಅಂತಾ ಭಗವದ್ಗೀತೆ ಹೇಳುತ್ತದೆ. ಕುರಕ್ಷೇತ್ರದಲ್ಲೂ ಧರ್ಮದ ಆಧಾರದ ತಳಹದಿಯ ಮೇಲೆ ಯುದ್ಧಗಳು ನಡೆದಿವೆ ಎಂದರು.

ಇದನ್ನೂ ಓದಿ: ವಿಧವೆಯನ್ನು ವರಿಸಿದ ನುಡಿ ಹೇಳಿದ ದೈವಪಾತ್ರಿ; ಆರೋಪ ತಳ್ಳಿಹಾಕಿದ ದೈವನರ್ತಕನ ಸಹೋದರ ಹೇಳಿದ್ದೇನು ನೋಡಿ

ಹಿಂದೆ ಯುದ್ಧಭೂಮಿಯಲ್ಲೂ ಒಂದು ಧರ್ಮ ಇತ್ತು. ಆದರೆ ಇವತ್ತಿನ ವಿಧಾನಸಭೆ, ಸಂಸತ್ತು ಕುರುಕ್ಷೇತ್ರ ಆಗಿದೆ. ಆದರೆ ಧರ್ಮ ಕ್ಷೇತ್ರಗಳು ಕುರುಕ್ಷೇತ್ರ ಆಗಿಲ್ಲ. ಅಧಿವೇಶನಗಳು ಧರ್ಮದ ತಳಹದಿಯ ಮೇಲೆ ನಡಿದಿದ್ದರೆ ಯಾರು ಕಿತ್ತಾಡುತ್ತಿರಲಿಲ್ಲ, ಕೂಗಾಡುತ್ತಿರಲಿಲ್ಲ. ಒಂದು ನಿಯಮ ಬದ್ದ ಹೋರಾಟ ಕುರುಕ್ಷೇತ್ರದಲ್ಲಿತ್ತು. ಈಗ ಕುರುಕ್ಷೇತ್ರ ಧರ್ಮ ಕ್ಷೇತ್ರ ಆಗಿದೆ. ಧರ್ಮ ಇವತ್ತು ಕೆಟ್ಟ ರಾಜಕೀಯ ಆಗಿದೆ. ಎಲ್ಲ ರಾಜಕಾರಣಿಗಳನ್ನ ಮನೆಗೆ ಕಳುಹಿಸಿ. ಅವರ ಬದಲಿಗೆ ಮಠಾಧೀಶರನ್ನ ಸ್ವಾಮೀಜಿಗಳನ್ನ ವಿಧಾನಸಭೆಗೆ ಕಳುಹಿಸಿದರೆ ಬೆಂಕಿ ಹತ್ತುತ್ತೆ. ರಾಜಕೀಯ ಧರ್ಮದ ಬುನಾದಿಯ ಮೇಲೆ ಅದು ನಡೆಯಬೇಕು. ಸಂವಿಧಾನ ಸಹ ಧರ್ಮದ ಬುನಾದಿಯ ಮೇಲೆ ನಿಂತಿದೆ ಎಂದರು.

ಕನ್ನಡದಲ್ಲಿ ಭಾಷಣ ಮಾಡಿದ ರಾಜ್ಯಪಾಲ

ಇನ್ನು ಕಾರ್ಯಕ್ರಮದಲ್ಲಿ ಭಾಗಿಯಾಗಿ ಕನ್ನಡದಲ್ಲಿ ಮಾತನಾಡಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ನಾನು ಭಾಗ್ಯಶಾಲಿ ಆಗಿದ್ದೇನೆ. ಹಾಗಾಗಿ ತರಳುಬಾಳು ಹುಣ್ಣಿಮೆಯಲ್ಲಿ ಭಾಗಿಯಾಗಿದ್ದೇನೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಸಿರಿಗೇರಿ ಮಠ ಯೋಗದಾನದ ಮೂಲಕ ಕ್ರಾಂತಿ ಮಾಡಿದೆ. ಸಂಸ್ಕೃತಿ, ಆದ್ಯಾತ್ಮದ ಮೂಲಕ ಮಠ ಕೊಡುಗೆ ನೀಡಿದೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:06 pm, Sat, 4 February 23

Web contact

TV9 Kannada

Read More
Follow Us