AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ: ಆರು ತಿಂಗಳಿಂದ ವಿವಿಯಲ್ಲಿ ಕೊಳೆಯುತ್ತಿವೆ 70 ಸಾವಿರ ಅಂಕಪಟ್ಟಿ; ಪ್ರಾಂಶುಪಾಲರ ನಿರ್ಲಕ್ಷ್ಯಕ್ಕೆ ದೂಳು ಹಿಡಿದ ಮಾರ್ಕ್ಸ್ ಕಾರ್ಡ್

ಬಳ್ಳಾರಿ ವಿಕೆಎಸ್​ ವಿಶ್ವವಿದ್ಯಾಲಯದ ಅಡಿಯಲ್ಲಿನ 80 ಕಾಲೇಜುಗಳ ಸುಮಾರು 70 ಸಾವಿರ ಡಿಗ್ರಿ ಅಂಕಪಟ್ಟಿಗಳು ಕಳೆದ 6 ತಿಂಗಳಿಂದ ವಿಶ್ವವಿದ್ಯಾಲಯದಲ್ಲೇ ಕೊಳೆಯುತ್ತಿವೆ. ಕಾಲೇಜು ಪ್ರಾಂಶುಪಾಲರು ಮಾರ್ಕ್ಸ್ ಕಾರ್ಡ್ ಸಂಗ್ರಹಿಸಲು ನಿರ್ಲಕ್ಷ್ಯ ತೋರಿದ್ದಾರೆ. ಇದೀಗ ವಿವಿ ಸ್ವತಃ ಅಂಕಪಟ್ಟಿಗಳನ್ನು ಕಾಲೇಜುಗಳಿಗೆ ಅಂಚೆ ಮೂಲಕ ಕಳುಹಿಸಲು ನಿರ್ಧರಿಸಿದೆ.

ಬಳ್ಳಾರಿ: ಆರು ತಿಂಗಳಿಂದ ವಿವಿಯಲ್ಲಿ ಕೊಳೆಯುತ್ತಿವೆ 70 ಸಾವಿರ ಅಂಕಪಟ್ಟಿ; ಪ್ರಾಂಶುಪಾಲರ ನಿರ್ಲಕ್ಷ್ಯಕ್ಕೆ ದೂಳು ಹಿಡಿದ ಮಾರ್ಕ್ಸ್ ಕಾರ್ಡ್
ಸಾವಿರಾರು ಅಂಕಪಟ್ಟಿಗಳು
ವಿನಾಯಕ ಬಡಿಗೇರ್​
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 19, 2025 | 12:56 PM

Share

ಬಳ್ಳಾರಿ, ಅಕ್ಟೋಬರ್​​ 19: ಎಲ್ಲರೂ ಡಿಗ್ರಿ ಪರೀಕ್ಷೆ ಮುಗಿಸಿ, ಫಲಿತಾಂಶ ಬಂದ ಮೇಲೆ ಮಾರ್ಕ್ಸ್ ಕಾರ್ಡ್​​ (Mark Sheets) ಪಡೆಯುತ್ತಾರೆ. ಆದರೆ ಬಳ್ಳಾರಿಯ ವಿಎಸ್​ಕೆ ವಿವಿ (VSK University) ಅಡಿಯಲ್ಲಿ ಬರುವ 80 ಕಾಲೇಜುಗಳ ವಿದ್ಯಾರ್ಥಿಗಳ ಅಂಕ ಪಟ್ಟಿ ಮಾತ್ರ ವಿಶ್ವವಿದ್ಯಾಲಯದಲ್ಲೇ ಕೊಳೆಯುತ್ತಿವೆ. 6 ತಿಂಗಳಿಂದ ಮಾರ್ಕ್ಸ್ ಕಾರ್ಡ್​ಗಳನ್ನ ತೆಗೆದುಕೊಂಡು ಹೊಗಲು ಯಾರು ಬಂದಿಲ್ಲ. ಇಂತಹದೊಂದು ಘಟನೆಗೆ ಬಳ್ಳಾರಿಯ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಸಾಕ್ಷಿಯಾಗಿದೆ.

ವಿಎಸ್ ಕೆ ವಿವಿ ಅಡಿ ಬಳ್ಳಾರಿ, ವಿಜಯನಗರ, ಕೊಪ್ಪಳ‌ ಹಾಗೂ ರಾಯಚೂರು ಜಿಲ್ಲೆಯ ಕಾಲೇಜು ಸೇರಿ ಒಟ್ಟು 80 ಕಾಲೇಜುಗಳು ಬರುತ್ತವೆ. ಸುಮಾರು 1 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಓದುತ್ತಿದ್ದಾರೆ.‌ ತಾಂತ್ರಿಕ ಕಾರಣದಿಂದ ಎರಡು ಸೆಮಿಸ್ಟರ್ ಮಾರ್ಕ್ ಕಾರ್ಡ್ಗಳು ಬಂದಿರಲಿಲ್ಲ. ಕಳೆದ ಆರು ತಿಂಗಳ ಹಿಂದೆ ಎಲ್ಲ ಮಾರ್ಕ್ಸ್ ಕಾರ್ಡ್ಗಳು ಬಂದಿದ್ದು, ವಿವಿಯ ಪರೀಕ್ಷಾಂಗ ವಿಭಾಗದಲ್ಲಿವೆ.

ಇದನ್ನೂ ಓದಿ: ಬಳ್ಳಾರಿ: ಅಂಕಪಟ್ಟಿಯಲ್ಲಿ ತನ್ನ ಬದಲಿಗೆ ಸ್ವಾಮೀಜಿ ಫೋಟೋ, ದಂಗಾದ ವಿದ್ಯಾರ್ಥಿ!

ನಿಯಮದ ಪ್ರಕಾರ ಆಯಾ ಕಾಲೇಜಿನ ಪ್ರಾಂಶುಪಾಲರು ಅಥವಾ ಸಿಬ್ಬಂದಿ ಬಂದು ಈ ಮಾರ್ಕ್ಸ್ ಕಾರ್ಡ್ ಗಳನ್ನ ತೆಗೆದುಕೊಂಡು ಹೋಗಿ, ವಿದ್ಯಾರ್ಥಿಗಳಿಗೆ ವಿತರಣೆ ಮಾಡಬೇಕು. ‌ದುರಂತ ಅಂದರೆ 6 ತಿಂಗಳಿಂದ ಈ ಮಾರ್ಕ್ಸ್ ಕಾರ್ಡ್​​ಗಳನ್ನ ತೆಗೆದುಕೊಂಡು ಹೊಗಲು ಯಾರು ಬಂದಿಲ್ಲ.

ಇನ್ನು ಮಾರ್ಕ್ಸ್ ಕಾರ್ಡ್​​ಗಳನ್ನ ತೆಗೆದುಕೊಂಡು ಹೊಗ್ರಪ್ಪಾ ಅಂತಾ ವಿವಿಯಿಂದ ಮೂರು ಬಾರಿ ಸುತ್ತೋಲೆ ಹೊರಡಿಸಲಾಗಿದೆ. ಅಲ್ಲದೇ ಎರಡು ಬಾರಿ ಪ್ರಾಂಶುಪಾಲರ ಸಭೆ ಮಾಡಲಾಗಿದೆ. ಹೀಗಿದ್ದರೂ ನಿರ್ಲಕ್ಷ್ಯ ಮಾಡಲಾಗಿದೆ. ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮಾರ್ಕ್ಸ್ ಕಾರ್ಡ್ಗಳನ್ನ ಕೇಳಿದರೆ ಇನ್ನೂ ವಿವಿಯಿಂದ ಬಂದಿಲ್ಲ ಅಂತಾ ವಿವಿ ಮೇಲೆ ಹಾಕುತ್ತಿದ್ದಾರಂತೆ ಕಾಲೇಜು ಆಡಳಿತ ಮಂಡಳಿ. ಹೀಗಾಗಿ ವಿವಿಗೆ ಕೆಟ್ಟ ಹೆಸರು ಬರುತ್ತಿದ್ದು, ಅದನ್ನ ತಪ್ಪಿಸೋದಕ್ಕೆ 70 ಸಾವಿರ ಮಾರ್ಕ್ಸ್ ಕಾರ್ಡ್ಗಳನ್ನ ಆಯಾ ಕಾಲೇಜಿಗೆ ಪೋಸ್ಟ್ ಮಾಡಲು ವಿವಿ ತಯಾರಿ ನಡೆಸಿರುವುದಾಗಿ ಮೌಲ್ಯ ಮಾಪನ ಕುಲಸಚಿವ ಎನ್ ಎಂ ಸಾಲಿ ಹೇಳಿದ್ದಾರೆ.

ಇದನ್ನೂ ಓದಿ: ಶಿಥಿಲಗೊಂಡ ಶಾಲಾ ಕಟ್ಟಡ, ಬಯಲಿನಲ್ಲೇ ಪಾಠ! ಬಳ್ಳಾರಿಯ ಈ ಶಾಲೆಯ 600 ವಿದ್ಯಾರ್ಥಿಗಳಿಗೆ ಸಂಕಷ್ಟ

ಒಟ್ಟಾರೆ ಮಾರ್ಕ್ಸ್ ಕಾರ್ಡ್​ಗಳ ವಿಚಾರದಲ್ಲಿ ಕಾಲೇಜುಗಳ ಪ್ರಾಂಶುಪಾಲರ ನಿರ್ಲಕ್ಷ್ಯ ಎದ್ದು ಕಾಣುತ್ತಿದ್ದು, ಈಗಲಾದರೂ ಎಚ್ಚೆತ್ತು ಸರಿಯಾಗಿ ವಿದ್ಯಾರ್ಥಿಗಳಿಗೆ ವಿತರಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.