AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿಸಿ ಕ್ಯಾಮಮರಾ, ಸಿಬ್ಬಂದಿ ಸರ್ಪಗಾವಲು ಇದ್ದರೂ ಬಳ್ಳಾರಿ ಕೆಎಂಎಫ್ ಕಚೇರಿಯಲ್ಲಿ ನಡೆಯಿತು ವಾಮಾಚಾರ!

ಬಳ್ಳಾರಿ ನಗರದ ಕೆಎಂಎಫ್ ಆಡಳಿತ ಕಚೇರಿ ಮುಂದೆ ಕಿಡಿಗೇಡಿಗಳು ವಾಮಾಚಾರ ಮಾಡಿದ್ದು, ಬಳ್ಳಾರಿ ಜನತೆಯನ್ನು ಬೆಚ್ಚಿಬೀಳಿಸಿದೆ. ಸಿಸಿ ಕ್ಯಾಮರಾ, ಸಿಬ್ಬಂದಿಗಳ ಸರ್ಪಗಾವಲು ಮದ್ಯೆಯೇ ಕೆಎಂಎಫ್ ಆಡಳಿತ ಕಚೇರಿ ಮುಂದೆಯೇ ವಾಮಾಚಾರ ಮಾಡಿದ್ದಾರೆ. ಇದು ರಾಜಕೀಯ ಕಾರಣದಿಂದ ನಡೆಯಿತಾ ಅಥವಾ ಇದರ ಹಿಂದೆ ಬೇರೆ ಉದ್ದೇಶವಿತ್ತೇ ಎಂಬುದು ನಿಗೂಢವಾಗಿದೆ.

ಸಿಸಿ ಕ್ಯಾಮಮರಾ, ಸಿಬ್ಬಂದಿ ಸರ್ಪಗಾವಲು ಇದ್ದರೂ ಬಳ್ಳಾರಿ ಕೆಎಂಎಫ್ ಕಚೇರಿಯಲ್ಲಿ ನಡೆಯಿತು ವಾಮಾಚಾರ!
ಬಳ್ಳಾರಿ ಕೆಎಂಎಫ್ ಕಚೇರಿಯಲ್ಲಿ ವಾಮಾಚಾರ
ವಿನಾಯಕ ಬಡಿಗೇರ್​
| Updated By: Ganapathi Sharma|

Updated on: Jan 21, 2025 | 7:30 AM

Share

ಬಳ್ಳಾರಿ, ಜನವರಿ 21: ಗಣಿನಾಡು ಬಳ್ಳಾರಿ ಕೆಎಂಎಫ್ ಕಚೇರಿ ಬಳಿ ಕಪ್ಪು ಗೊಂಬೆ, ದೊಡ್ಡ ಕುಂಬಳಕಾಯಿ, ತೆಂಗಿನಕಾಯಿ, 8 ನಿಂಬೆ ಹಣ್ಣು, ಕುಂಕುಂಮ ಹಾಕಿ ಮೊಳೆ ಹೊಡೆದು ಭಯಂಕರ ಮಾಟಮಂತ್ರ ಮಾಡಿರುವ ಘಟನೆ ನಡೆದಿದೆ. ಇದು ಬಳ್ಳಾರಿ ಜನತೆಯನ್ನು ಬೆಚ್ಚಿಬೀಳುವಂತೆ ಮಾಡಿದೆ. ಸಿಸಿ ಕ್ಯಾಮರಾ, ಸಿಬ್ಬಂದಿ ಸರ್ಪಗಾವಲು ಮದ್ಯೆಯೇ ಕೆಎಂಎಫ್ ಆಡಳಿತ ಕಚೇರಿ ಮುಂದೆಯೇ ವಾಮಾಚಾರ ಮಾಡಿರುವುದು ಅಚ್ಚರಿಗೂ ಕಾರಣವಾಗಿದೆ.

ಕಪ್ಪುಗೊಂಬೆ, ನಿಂಬೆಹಣ್ಣು, ವಾಮಾಚಾರ!

ಸಣ್ಣ ಗಡಗಿಗೆ ದಾರ ಸುತ್ತಿ, ತೆಂಗಿನಕಾಯಿಗೆ ತಾಯತದ ತಗಡು ಕಟ್ಟಿ, ಗೊಂಬೆಯೊಂದನ್ನ ಇಟ್ಟು ಮತ್ತೊಂದು ಕವರ್​ನಲ್ಲಿ ಏನೋ ಬರೆದಿಟ್ಟು ವಾಮಾಚಾರ ಮಾಡಲಾಗಿದೆ. ಭಯಂಕರ ಮಾಟ ಮಂತ್ರ ನೋಡಿ ಕೆಎಂಎಫ್ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಇಡೀ ಕೆಎಂಎಫ್ ಕಚೇರಿ ಸುತ್ತಲೂ ಅಷ್ಟೆಲ್ಲಾ ಸಿಸಿ ಕ್ಯಾಮರಾಗಳ ಕಣ್ಗಾವಲು, ಭದ್ರತಾ ಸಿಬ್ಬಂದಿ ನಡುವೆ ಈ ವಾಮಾಚಾರ ಹೇಗೆ ನಡೆಯಿತು ಎಂಬುದೇ ಯಕ್ಷಪ್ರಶ್ನೆಯಾಗಿದೆ. ಸಿಸಿಟಿವಿ, ಭದ್ರತಾ ಸಿಬ್ಬಂದಿ ಮಧ್ಯೆ ಯಾರು? ಹೇಗೆ? ವಾಮಾಚಾರ ಮಾಡಿದರು ಎಂಬ ಪ್ರಶ್ನೆಗಳು ಮೂಡಿವೆ.

ಸದ್ಯ ಚುನಾಯಿತ ಆಡಳಿತ ಮಂಡಳಿ ಇಲ್ಲದೇ, ಹಿಂದಿನ ಆಡಳಿತ ಮಂಡಳಿಯನ್ನೇ ತಾತ್ಕಾಲಿಕವಾಗಿ ಮುಂದುವರೆಸಲಾಗಿದೆ. ಅದಕ್ಕೂ ಸಾಕಷ್ಟು ಅಸಮಾಧಾನ ಇದೆ ಎನ್ನಲಾಗ್ತಿದೆ. ಇನ್ನು ಕೆಎಂಎಫ್ ಬಗ್ಗೆ ಆಂತರಿಕ ಭಿನ್ನಾಭಿಪ್ರಾಯ ಇದ್ದವರು ಈ ಕಾರ್ಯ ಮಾಡಿದ್ದಾರೆಯೇ ಎಂಬ ಅನುಮಾನವೂ ಇದೆ.

50 ಸಿಬ್ಬಂದಿಯ ಕೆಲಸಕ್ಕೆ ಕುತ್ತು ಕಾರಣವೇ?

ನಷ್ಟದಿಂದಾಗಿ ವೆಚ್ಚ ಕಡಿಮೆ ಮಾಡಲು 50 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲು ಕೆಎಂಎಫ್ ಶಾರ್ಟ್ ಲಿಸ್ಟ್ ಮಾಡಿದೆ. ಹೀಗಾಗಿ ಅಸಮಾಧಾನದಿಂದ ಸಿಬ್ಬಂದಿಯೇ ಹೀಗೆ ಮಾಡಿದ್ದಾರೆ ಎಂದು ಕೆಎಂಎಫ್ ನಿರ್ದೇಶಕ ಪ್ರಭುಶಂಕರ ಆರೋಪಿಸಿದ್ದಾರೆ.

Kmf Office

ಬಳ್ಳಾರಿ ಕೆಎಂಎಫ್ ಕಚೇರಿ ಆವರಣ

ಈಗಾಗಲೇ ನಷ್ಟದಲ್ಲಿರುವ ಕೆಎಂಎಫ್ ಕಚೇರಿ ಮುಂದೆಯೇ ನಡೆದಿರುವ ವಾಮಾಚಾರ ಸಿಬ್ಬಂದಿಗೆ ಮಾತ್ರವಲ್ಲ, ಸ್ಥಳೀಯರಲ್ಲೂ ಸಾಕಷ್ಟು ಪ್ರಶ್ನೆ ಹುಟ್ಟುಹಾಕಿದೆ. ಬಳ್ಳಾರಿಯಲಿರುವ ಕೆಎಂಎಫ್ ನಾಲ್ಕು ಜಿಲ್ಲೆಗಳಿಗೆ ಸಂಬಂಧಪಟ್ಟಿದ್ದಾಗಿದೆ.

ಇದನ್ನೂ ಓದಿ: ಬೆಂಗಳೂರು: ಕೆಆರ್ ಮಾರ್ಕೆಟ್ ಬಳಿ ಮಹಿಳೆಯ ರೇಪ್, ಚಿನ್ನಾಭರಣ, ಹಣ ದೋಚಿದ ದುಷ್ಕರ್ಮಿಗಳು

ಮತ್ತೊಂದೆಡೆ, ರಾಜಕೀಯ ಹಿತಾಸಕ್ತಿಗೊಸ್ಕರ ವಾಮಾಚಾರ ನಡೆಸಲಾಗಿದೆ ಎಂಬ ಆರೋಪಗಳೂ ಕೇಳಿಬಂದಿವೆ. ವಾಮಾಚಾರದ ಹಿಂದೆ ಕಾಣದ ಕೈಗಳು ಕೆಲಸ ಮಾಡಿವೆ ಎನ್ನಲಾಗುತ್ತಿದೆ. ತನಿಖೆಯಿಂದ ಸತ್ಯ ತಿಳಿದುಬರಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು