ಬಳ್ಳಾರಿ ಉತ್ಸವಕ್ಕೆ 20 ಕೋಟಿ ರೂ. ಮೌಲ್ಯದ ಶ್ವಾನ ಭಾಗಿ, ಹೇಗಿದ್ದಾನೆ ನೋಡಿ ಕೆಡಬಾಮ್ಸ್ ಹೈದರ್

ಜಿಲ್ಲಾಡಳಿತ ವತಿಯಿಂದ ಇದೇ ಮೊದಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದಲ್ಲಿ ಈಗಾಗಲೇ ಹಲವಾರು ಕಾರ್ಯಕ್ರಮಗಳು ನಡೆಯುತ್ತಿವೆ. ಉತ್ಸವದ ಮೆರಗನ್ನು ಇನ್ನಷ್ಟು ಹೆಚ್ಚಿಸಲು ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ ಜನವರಿ 22 ರಂದು ಬೆಳಗ್ಗೆ 8ರಿಂದ ವಿವಿಧ ತಳಿಯ ಶ್ವಾನ ಪ್ರದರ್ಶನ ಕಾರ್ಯಕ್ರಮವನ್ನು ನಗರದ ವಾಡ್ರ್ಲಾ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ಈ ಉತ್ಸವದಲ್ಲಿ 20 ಕೋಟಿ ರೂ. ಮೌಲ್ಯದ ಶ್ವಾನ ಭಾಗಿಯಾಗುತ್ತಿರುವುದು ವಿಶೇಷ.

TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Jan 19, 2023 | 10:51 PM

ಇದೇ ಮೊದಲ ಬಾರಿಗೆ ಜನವರಿ 21 ಮತ್ತು 22ರಂದು ಬಳ್ಳಾರಿ ಉತ್ಸವ ಆಯೋಜನೆ ಮಾಡಲಾಗಿದೆ. ಉತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದ್ದು,   ಉತ್ಸವದ ಭಾಗವಾಗಿ ನಡೆಯುತ್ತಿರೋ ಶ್ವಾನ ಪ್ರದರ್ಶನದಲ್ಲಿ 20ಕೋಟಿ ಬೆಲೆ ಬಾಳುವ ಶ್ವಾನವೊಂದನ್ನು‌ ಪ್ರದರ್ಶನ ಮಾಡಲಾಗುತ್ತಿದೆ.

1 / 7
 ದೇಶದ ನಾನಾ ಪ್ರದರ್ಶನದಲ್ಲಿ ಪಾಲ್ಗೊಂಡು ನೋಡುಗರ ಗಮನ ಸೆಳೆದಿರುವ 20 ಕೋಟಿ ರೂ.ಮೌಲ್ಯದ ಶ್ವಾನ ಬಳ್ಳಾರಿ ಉತ್ಸವದ ಮೆರಗನ್ನು ಹೆಚ್ಚಿಸಲು ಜ.22ರಂದು ನಡೆಯುವ ಶ್ವಾನ ಪ್ರದರ್ಶನದಲ್ಲಿ ಭಾಗವಹಿಸಲಿದೆ.

2 / 7
ಸಿಂಹದಂತೆ ಕಾಣುವ ಅಪರೂಪದ ಈ ಶ್ವಾನದ ತೂಕ 100 ಕೆಜಿ ಇದೆ. ನಿಂತಾಗ ಎತ್ತರದಲ್ಲೂ 6 ಅಡಿ ಇದ್ದು, ಉಳಿದ ಸಾಮಾನ್ಯ ನಾಯಿಗಳಿಗಿಂತ ತುಂಬಾ ದೊಡ್ಡದಾಗಿರುವುದು ಮತ್ತೊಂದು ಆಕರ್ಷಣೆಯಾಗಿದೆ.

3 / 7

4 / 7
ಕಕೇಶಿಯಾ ಶೆಫರ್ಡ್ ತಳಿಯ ನಾಯಿಯು ರಾಜ್ಯದಲ್ಲಿ ಅತ್ಯಂತ ದುಬಾರಿ ಬೆಲೆಯ ಶ್ವಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಾಜ್ಯ ಸೇರಿ ದೇಶದ ನಾನಾ ಪ್ರದರ್ಶನದಲ್ಲಿ ಪಾಲ್ಗೊಂಡು ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

5 / 7
ಬಳ್ಳಾರಿ ಉತ್ಸವದ ಅಂಗವಾಗಿ ಬಳ್ಳಾರಿ ವಿಭಾಗದ ಸೈಕಲ್ ಅಸೋಸಿಯೇಷನ್ ವತಿಯಿಂದ ಗುರುವಾರ ಸೈಕಲ್ ಜಾಥಾ ನಡೆಯಿತು.

6 / 7
ಮೊದಲ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವಕ್ಕೆ ಕ್ಷಣಗಣನೆ ಬಾಕಿ ಇದ್ದು, ಉತ್ಸವದ ಪ್ರಯುಕ್ತ ನಗರದ ವಿವಿಧೆಡೆಯ ಮುಖ್ಯ ವೃತ್ತಗಳು ಹಾಗೂ ಮುಖ್ಯ ರಸ್ತೆಗಳಲ್ಲಿ ವಿಶೇಷ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿದ್ದು, ನೋಡಲು ಸಿಂಗಾರಗೊಂಡ ಮಧುವಣಗಿತ್ತಿಯಂತೆ ಕಾಣುತ್ತಿದೆ.

7 / 7

Published On - 10:49 pm, Thu, 19 January 23

Follow us