ಕೋರ್ಟ್‌ನಿಂದ ಮಹತ್ವದ ಆದೇಶ! ವಂಚಕ ಯುವರಾಜ್ ಆಸ್ತಿ ಜಪ್ತಿಗೆ ಆದೇಶ ನೀಡಿದ ಜಡ್ಜ್ ಕಾತ್ಯಾಯಿನಿ
ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಹಾಸನ, ಮದ್ದೂರು, ದ್ವಾರ ಕೊತ್ತನಹಳ್ಳಿಯಲ್ಲಿ ನಿವೇಶನ, ಮನೆಗಳು, ಜಮೀನು ಸೇರಿ ಒಟ್ಟು 26 ಆಸ್ತಿ ಮುಟ್ಟುಗೋಲಿಗೆ ಆದೇಶ ಹೊರಡಿಸಲಾಗಿದೆ.
ಬೆಂಗಳೂರು: ಕೋಟ್ಯಾಂತರ ರೂಪಾಯಿ ವಂಚನೆ ಆರೋಪ ಹೊತ್ತಿರುವ ಯುವರಾಜ್ ಆಸ್ತಿ ಜಪ್ತಿಗೆ ಬೆಂಗಳೂರಿನ ಸಿಸಿಹೆಚ್ 67ನೇ ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಿದೆ. ಹೀಗಾಗಿ, ಯುವರಾಜ್‌ಗೆ ಸೇರಿದ ಸುಮಾರು 80 ರಿಂದ 90 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಜಪ್ತಿ ಆಗಲಿದೆ.
ಆಸ್ತಿ ಜಪ್ತಿಗೆ ಸಿಸಿಬಿ ಪೊಲೀಸರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಸಿಸಿಹೆಚ್ 67ನೇ ನ್ಯಾಯಾಲಯ, ಆಸ್ತಿ ಜಪ್ತಿ ಮಾಡಲು ಒಪ್ಪಿಗೆ ನೀಡಿ ಯುವರಾಜ್‌ಗೆ ನೋಟಿಸ್ ಜಾರಿ ಮಾಡಿದೆ.
ಪತ್ನಿಯ ಆಸ್ತಿ ಕೂಡ ಜಪ್ತಿ ಆಗಲಿದೆ ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಹಾಸನ, ಮದ್ದೂರು, ದ್ವಾರ ಕೊತ್ತನಹಳ್ಳಿಯಲ್ಲಿ ನಿವೇಶನ, ಮನೆಗಳು, ಜಮೀನು ಸೇರಿ ಒಟ್ಟು 26 ಆಸ್ತಿ ಮುಟ್ಟುಗೋಲಿಗೆ ಆದೇಶ ಹೊರಡಿಸಲಾಗಿದೆ. ಯುವರಾಜ್ ಜೊತೆ ಆತನ ಪತ್ನಿ ಆಸ್ತಿ ಕೂಡ ಜಪ್ತಿ ಆಗಲಿದೆ.
ಯುವರಾಜ್ ಹಲವರಿಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿರುವ ಆರೋಪ ಇದೆ. ಈತ ನಿವೃತ್ತ ಮಹಿಳಾ ನ್ಯಾಯಮೂರ್ತಿಗೆ ಗವರ್ನರ್ ಹುದ್ದೆ ಕೊಡಿಸುವುದಾಗಿ ಆಸೆ ತೋರಿಸಿ ಕೋಟ್ಯಂತರ ರೂಪಾಯಿ ವಂಚಿಸಿದ್ದಾನೆ ಎಂದು ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.