Bangalore: ಸಿಗ್ನಲ್ ಜಂಪ್ ಮಾಡಿದ ವ್ಯಕ್ತಿಗೆ ಕಾಡಿದ ಪಾಪ ಪ್ರಜ್ಞೆ, ಟ್ವೀಟ್ ನೋಡಿ ಶಾಕ್ ಆದ ಪೊಲೀಸರು; ಮುಂದೇನಾಯ್ತು?
ಸಿಗ್ನಲ್ ಜಂಪ್ ಮಾಡಿದ ನಂತರ ವ್ಯಕ್ತಿಯೊಬ್ಬರು ಟ್ವಿಟರ್ನಲ್ಲಿ ತಾನು ದಂಡ ಕಟ್ಟುತ್ತೇನೆ ಎಂದು ಪೊಲೀಸರಲ್ಲಿ ಮನವಿ ಮಾಡಿದ್ದಾನೆ. ಈ ಟ್ವೀಟ್ ನೋಡಿದ ಬೆಂಗಳೂರು ಪೊಲೀಸರು ಶಾಕ್ ಆಗಿದ್ದಾರೆ.
ಬೆಂಗಳೂರು: ನಗರದಲ್ಲಿ ಸಂಚಾರ ನಿಮಯಗಳನ್ನು ಉಲ್ಲಂಘಿಸಿಕೊಂಡು ಹೋಗುವುದು ಸಾಮಾನ್ಯ. ಒಂದಷ್ಟು ಮಂದಿಗೆ ಫೈನ್ ಬಿದ್ದರೆ ಇನ್ನೊಂದಷ್ಟು ಮಂದಿ ಇದರಿಂದ ತಪ್ಪಿಕೊಳ್ಳುತ್ತಾರೆ. ಹೀಗಿದ್ದಾಗ ವಾಹನ ಸವಾರನೊಬ್ಬ ಸಿಗ್ನಲ್ ಜಂಪ್ (Signal Jump) ಮಾಡಿ ಮನೆಗೆ ತೆರಳಿದಾಗ ನಿಯಮ ಉಲ್ಲಂಘನೆಯ ಪಾಪಾ ಪ್ರಜ್ಞೆ ಕಾಡಲು ಆರಂಭವಾಗಿದೆ. ಈ ಬಗ್ಗೆ ಸ್ವತಃ ನಿಯಮ ಉಲ್ಲಂಘನೆ ಮಾಡಿದಾತನೇ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪೂರ್ವಭಾವಿಯಾಗಿ ದಂಡದ ಮೊತ್ತವನ್ನು ಕಟ್ಟಲು ಸಿದ್ಧರಿರುವುದಾಗಿ ಹೇಳಿದ್ದಾರೆ. ಈ ಟ್ವೀಟ್ ಅನ್ನು ನೋಡಿದ ಬೆಂಗಳೂರು ಪೊಲೀಸರು (Bangalore Police) ಶಾಕ್ ಆಗಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಮಾಡಿದ ನಂತರವೂ ಪ್ರಾಮಾಣಿಕತೆ ಮರೆಯಲು ಮುಂದಾದ ಘಟನೆ ಶಾಂತಿನಗರದಲ್ಲಿ ನಡೆದಿದೆ. ಅದೇನು ಅರ್ಜೆಂಟ್ ಇತ್ತೋ ಏನೋ ಗೊತ್ತಿಲ್ಲ, ಬಾಲ ಕೃಷ್ಣ್ ಬಿರ್ಲಾ ಎಂಬ ವ್ಯಕ್ತಿ ಶಾಂತಿನಗರದಲ್ಲಿ ಸಿಗ್ನಲ್ ಜಂಪ್ ಮಾಡಿ ಮನೆಗೆ ತೆರಳಿದ್ದಾರೆ. ಅಷ್ಟರಲ್ಲಾಗಲೇ ಸಿಗ್ನಲ್ ಜಂಪ್ ಮಾಡಿ ನಿಯಮ ಉಲ್ಲಂಘಿಸಿರುವ ಬಗ್ಗೆ ಪಾಪಾ ಪ್ರಜ್ಞೆ ಕಾಡಲು ಆರಂಭವಾಗಿದೆ. ಈ ಬಗ್ಗೆ ಟ್ವೀಟ್ ಮಾಡಿದ ಬಾಲ ಕೃಷ್ಣ್ ಬಿರ್ಲಾ, ಪ್ರಾಯಶ್ಚಿತವಾಗಿ ಫೈನ್ ಕಟ್ಟಬೇಕೆಂದು ಮುಂದೆ ಬಂದಿದ್ದಾರೆ.
ಅಷ್ಟೇ ಅಲ್ಲದೆ, ಪೂರ್ವಭಾವಿಯಾಗಿ ನಾನು ದಂಡ ಪಾವತಿಬಹುದೇ ಎಂದು ಬಾಲ ಕೃಷ್ಣ್ ಟ್ರಾಫಿಕ್ ಪೊಲೀಸರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ. ಈ ಟ್ವೀಟ್ ನೋಡಿದ ಬೆಂಗಳೂರು ಪೊಲೀಸರು, ಇವರ ಪ್ರಾಮಾಣಿಕತೆ ನೋಡಿ ಶಾಕ್ ಆಗಿದ್ದಾರೆ. ಅಲ್ಲದೆ ಬಹಳ ನಾಜೂಕಾಗಿ ರಿಪ್ಲೇ ಕೂಡ ನೀಡಿದ್ದಾರೆ. ಪೂರ್ವಭಾವಿಯಾಗಿ ದಂಡ ಕಟ್ಟಬಹುದೇ ಎಂಬ ಬಿರ್ಲಾ ಅವರ ಪ್ರಶ್ನೆಗೆ ಉತ್ತರಿಸಿದ ಪೊಲೀಸರು, ನಾವು ನೊಟೀಸ್ ಕೊಟ್ಟ ಮೇಲೆ ದಂಡದ ಮೊತ್ತ ಪಾವತಿಸಿ ಎಂದು ಹೇಳಿದ್ದಾರೆ.
ಪೊಲೀಸರು ಏನೋ ನೋಟಿಸ್ ಮನೆಗೆ ತಲುಪಿದ ನಂತರ ದಂಡ ಕಟ್ಟಲು ಸೂಚಿಸಿದ್ದಾರೆ. ಆದರೆ ಬಿರ್ಲಾ ಸಿಗ್ನಲ್ ಜಂಪ್ ಮಾಡಿದ್ದಲ್ಲಿ ಸಿಸಿ ಕ್ಯಾಮರಾ ಇತ್ತೇ? ಅಥವಾ ಸಿಸಿ ಕ್ಯಾಮರಾದಲ್ಲಿ ಜಿಗ್ನಲ್ ಜಂಪ್ ಮಾಡಿರುವುದು ಸೆರೆಯಾಗಿದೆಯೇ? ಎಂಬುದು ಮುಂದಿರುವ ಪ್ರಶ್ನೆ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:16 pm, Thu, 29 September 22