ಹೊಸಕೋಟೆ ಖಾಸಗಿ ಆಸ್ಪತ್ರೆ ಮೇಲೆ ಡಿಸಿ ದಿಢೀರ್ ದಾಳಿ; ರೆಮ್​ಡೆಸಿವಿರ್ ಅಕ್ರಮ ಮಾರಾಟ ಜಾಲ ಪತ್ತೆ

ಸೋಂಕಿತರಿಗೆ ಮಾತ್ರವೇ ನೀಡಬೇಕು ಎಂಬ ನಿಯಮವಿರುವ ಔಷಧಿಯನ್ನು ಖಾಸಗಿಯವರಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಈ ಸಂಬಂಧ ಪಾರ್ಮಸಿ ನೌಕರನ ವಿರುದ್ದ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಹೊಸಕೋಟೆ ಖಾಸಗಿ ಆಸ್ಪತ್ರೆ ಮೇಲೆ ಡಿಸಿ ದಿಢೀರ್ ದಾಳಿ; ರೆಮ್​ಡೆಸಿವಿರ್ ಅಕ್ರಮ ಮಾರಾಟ ಜಾಲ ಪತ್ತೆ
ಹೊಸಕೋಟೆಯ ಕೋವಿಡ್ ಆಸ್ಪತ್ರೆಯ ಮೇಲೆ ಜಿಲ್ಲಾಧಿಕಾರಿ ಶ್ರೀನಿವಾಸ್ ಸೋಮವಾರ ದಾಳಿ ನಡೆಸಿದರು.
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 19, 2021 | 10:37 PM

ಬೆಂಗಳೂರು: ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸುವ ರೆಮ್​ಡೆಸಿವಿರ್ ಔಷಧಿಯನ್ನು ಅಕ್ರಮವಾಗಿ ಸಂಗ್ರಹಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ ಜಾಲವೊಂದು ಸೋಮವಾರ ಪತ್ತೆಯಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯ ಖಾಸಗಿ ಕೊವಿಡ್ ಆಸ್ಪತ್ರೆ ಮೇಲೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ದಿಢೀರ್ ದಾಳಿ ನಡೆಸಿ ಈ ಜಾಲ ಬಯಲು ಮಾಡಿದ್ದಾರೆ. ದಾಳಿಯ ವೇಳೆ ಖಾಸಗಿ ಮೆಡಿಕಲ್ ಶಾಪ್​ನಲ್ಲಿ ಅಕ್ರಮವಾಗಿ ರೆಮ್​ಡಿಸಿವರ್ ಮಾರುತ್ತಿದ್ದ ವಿಷಯ ಬಯಲಿಗೆ ಬಂದಿತ್ತು.

ಸೋಂಕಿತರಿಗೆ ಮಾತ್ರವೇ ನೀಡಬೇಕು ಎಂಬ ನಿಯಮವಿರುವ ಈ ಔಷಧಿಯನ್ನು ಹೊಸಕೋಟೆ ನಗರದ ಎಂವಿಜೆ ಮೆಡಿಕಲ್ ಕಾಲೇಜಿನ ಖಾಸಗಿ ಪಾರ್ಮಸಿಯಲ್ಲಿ ಸೊಂಕಿತರಿಗೆ ಹೊರತುಪಡಿಸಿ ಖಾಸಗಿಯವರಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡಲಾಗುತ್ತಿತ್ತು. ಕೋವಿಡ್ ಸೊಂಕಿತರ ಹೆಸರಲ್ಲಿ ತರಿಸಿಕೊಂಡು‌ ಖಾಸಗಿಯವರಿಗೆ ಮಾರಲಾಗುತ್ತಿತ್ತು. ಈ ಸಂಬಂಧ ಪಾರ್ಮಸಿ ನೌಕರನ ವಿರುದ್ದ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Remdesivir Vial

ರೆಮ್​ಡೆಸಿವಿರ್ ಔಷಧ

ಮೈಸೂರು: ನಕಲಿ ರೆಮ್‌ಡೆಸಿವಿರ್ ಔಷಧ ಮಾರಾಟ ಮೈಸೂರಿನಲ್ಲಿ ನಕಲಿ ರೆಮ್​ಡೆಸಿವಿರ್ ಔಷಧ ಮಾರಾಟ ಜಾಲವೊಂದು ಸೋಮವಾರ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎಸ್‌ಎಸ್ ಆಸ್ಪತ್ರೆಯ ಸ್ಟಾಫ್‌ನರ್ಸ್ ಗಿರೀಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 800ರಿಂದ 900 ಬಾಟಲ್‌ ನಕಲಿ ರೆಮ್‌ಡೆಸಿವಿರ್ ಬಗ್ಗೆ ದಾಖಲೆಗಳು ಪತ್ತೆಯಾಗಿವೆ. ಆರೋಪಿಯಿಂದ ₹ 2.82 ಲಕ್ಷ ವಶಕ್ಕೆ ಪಡೆದುಕೊಳ್ಳಲಾಗಿದೆ. ಆ್ಯಂಟಿಬಯೋಟಿಕ್ ಪೌಡರ್ ಬಳಸುತ್ತಿದ್ದ ಆರೋಪಿ ಕೇವಲ ₹ 100 ಖರ್ಚು ಮಾಡಿ ನಕಲಿ ಔಷಧಿಯ ದ್ರಾವಣ ಸಿದ್ಧಪಡಿಸಿ, ₹ 4000ಕ್ಕೆ ಮಾರಾಟ ಮಾಡುತ್ತಿದ್ದ ಎಂದು ಮೈಸೂರು ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ

ಕೆಲ ಮೆಡಿಕಲ್ ಪ್ರತಿನಿಧಿಗಳ ಸಂಪರ್ಕ ಹೊಂದಿದ್ದ ಆರೋಪಿಯು ಸಾರ್ವಜನಿಕರು ಹಾಗೂ ಆಸ್ಪತ್ರೆಗೂ ಸರಬರಾಜು ಮಾಡುತ್ತಿದ್ದ. ಪ್ರಕರಣ ಸಂಬಂಧವ ಶಿವಪ್ಪ, ಮಂಗಳ, ಮಂಜುನಾಥ್, ಪ್ರಶಾಂತ್ ಎನ್ನುವವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಆರೋಪಿಗಳಿಂದ ನಕಲಿ ಬಾಟಲಿಗಳನ್ನು ವಶಪಡಿಸಿಕೊಂಡಿದ್ದಾರೆ. ಕಾಳಸಂತೆ ಮಾರಾಟದ ಬಗ್ಗೆ ತನಿಖೆ ಮಾಡುವಾಗ ನಕಲಿ ಜಾಲ ಪತ್ತೆಯಾಗಿದೆ ಎಂದು ಡಾ.ಚಂದ್ರಗುಪ್ತ ಹೇಳಿದ್ದಾರೆ.

ಇಂದೋರ್​ನಲ್ಲಿ ₹ 70 ಸಾವಿರಕ್ಕೆ ರೆಮ್​ಡೆಸಿವಿರ್ ಮಾರಾಟ ಮಧ್ಯಪ್ರದೇಶದ ಇಂದೋರ್​ನಲ್ಲಿ ₹ 70 ಸಾವಿರಕ್ಕೆ ರೆಮ್‌ಡೆಸಿವಿರ್ ಲಸಿಕೆ ಮಾರಾಟ ಮಾಡಲಾಗುತ್ತಿದೆ. ಔಷಧಿಗೆ ಬೇಡಿಕೆ ಹೆಚ್ಚಾಗಿದ್ದು ಗಮನಿಸಿದ್ದ ದುಷ್ಕರ್ಮಿಗಳು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದರು. ಕೊರೊನಾ ಸೋಂಕು ನಿರೋಧಕ ಲಸಿಕೆಯನ್ನೂ ನರ್ಸ್​ ಒಬ್ಬರು ಮಾರಾಟ ಮಾಡಿದ್ದು ಪತ್ತೆಯಾಗಿತ್ತು. ನರ್ಸ್ ಸೇರಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

(Bangalore Rural DC Raids Private hospital in Hoskote curbs Remdesivir Racket)

ಇದನ್ನೂ ಓದಿ: ನುಂಗುವ ಔಷಧದ ರೂಪದಲ್ಲಿ ರೆಮ್​ಡೆಸಿವಿರ್​: ಔಷಧ ನಿಯಂತ್ರಕರ ಅನುಮತಿಗೆ ಅರ್ಜಿ

ಇದನ್ನೂ ಓದಿ: ಜನರು ತಾವಾಗಿಯೇ ರೆಮ್‌ಡೆಸಿವಿರ್ ಕೊಳ್ಳಬಾರದು, ಕೃತಕ ಉಸಿರಾಟ ಹೊಂದಿದ ರೋಗಿಗಳಿಗೆ ವೈದ್ಯರು ನೀಡುವ ಔಷಧಿ ಅದು: ಡಾ. ವಿ.ಕೆ.ಪೌಲ್

Published On - 10:35 pm, Mon, 19 April 21

ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM