AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು ಮಹಾಲಕ್ಷ್ಮಿ ಕೊಲೆ ಕೇಸ್​ಗೆ ಮತ್ತಷ್ಟು ಟ್ವಿಸ್ಟ್: ಪದೇ ಪದೇ ಗಂಡನಿಗೆ ಕಿರುಕುಳ

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ಕೊಲೆಯಾದ ಮಹಾಲಕ್ಷ್ಮೀ ಕಿರುಕುಳಕ್ಕೆ ಪತಿ ಹೇಮಂತ್‌ ಬೇಸತ್ತಿದ್ದ. ಪದೇಪದೆ ಗಂಡನಿಗೆ ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು. ಮಹಾಲಕ್ಷ್ಮೀ ಆಗಾಗ ಹಣ ಬೇಕೆಂದು ಗಂಡನನ್ನು ಪೀಡಿಸುತ್ತಿದ್ದಳು. ಹಣ ಕೊಡದಿದ್ದರೆ ಮೊಬೈಲ್ ಶಾಪ್ ಬಳಿಯೇ ಹಲ್ಲೆ ಮಾಡುತ್ತಿದ್ದಳು ಎನ್ನಲಾಗಿದೆ. ಆ ಮೂಲಕ ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ‌ ಮತ್ತಷ್ಟು ಟ್ವಿಸ್ಟ್ ಸಿಕ್ಕಿದೆ.

ಬೆಂಗಳೂರು ಮಹಾಲಕ್ಷ್ಮಿ ಕೊಲೆ ಕೇಸ್​ಗೆ ಮತ್ತಷ್ಟು ಟ್ವಿಸ್ಟ್: ಪದೇ ಪದೇ ಗಂಡನಿಗೆ ಕಿರುಕುಳ
ಬೆಂಗಳೂರು ಮಹಾಲಕ್ಷ್ಮಿ ಕೊಲೆ ಕೇಸ್​ಗೆ ಮತ್ತಷ್ಟು ಟ್ವಿಸ್ಟ್: ಪದೇ ಪದೇ ಗಂಡನಿಗೆ ಕಿರುಕುಳ
ಬಿ ಮೂರ್ತಿ, ನೆಲಮಂಗಲ
| Edited By: |

Updated on: Sep 22, 2024 | 8:02 PM

Share

ನೆಲಮಂಗಲ, ಸೆಪ್ಟೆಂಬರ್​ 22: ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ಮಹಾಲಕ್ಷ್ಮೀ ಕೊಲೆ ಪ್ರಕರಣಕ್ಕೆ (Bengaluru Mahalakshmi Murder). ಸಂಬಂಧಿಸಿದಂತೆ ಇದೀಗ ಹಲವು ಅನುಮಾನಗಳು ಹುಟ್ಟಿಕೊಂಡಿವೆ. ಪರಸಂಗದ ಪೀಕಲಾಟಕ್ಕೆ ಮಹಿಳೆ ಕೊಲೆಯಾದಳಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಸದ್ಯ ಈ ಪ್ರಕರಣ ಪೊಲೀಸರಿಗೆ ಚಾಲೆಂಜಿಂಗ್​ ಆಗಿದೆ. ಇದರ ಮಧ್ಯೆ ಮಹಾಲಕ್ಷ್ಮಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಪದೇಪದೆ ಗಂಡನಿಗೆ ಕಿರುಕುಳ

ಬೆಂಗಳೂರಿನ ವೈಯಾಲಿಕಾವಲ್‌ನಲ್ಲಿ ಕೊಲೆಯಾದ ಮಹಾಲಕ್ಷ್ಮೀ ಕಿರುಕುಳಕ್ಕೆ ಪತಿ ಹೇಮಂತ್‌ ಬೇಸತ್ತಿದ್ದ. ಪದೇಪದೆ ಗಂಡನಿಗೆ ಕಿರುಕುಳ ನೀಡಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಳು. ಮಹಾಲಕ್ಷ್ಮೀ ಆಗಾಗ ಹಣ ಬೇಕೆಂದು ಗಂಡನನ್ನು ಪೀಡಿಸುತ್ತಿದ್ದಳು. ಹಣ ಕೊಡದಿದ್ದರೆ ಮೊಬೈಲ್ ಶಾಪ್ ಬಳಿಯೇ ಹಲ್ಲೆ ಮಾಡುತ್ತಿದ್ದಳು. ಹೇಮಂತ್ ದಾಸ್‌ನ ಎದೆ ಹಾಗೂ ಹೊಟ್ಟೆಗೆ ಕಚ್ಚುತ್ತಿದ್ದಳು. ಹಣದ ವಿಚಾರಕ್ಕೆ, ದಾಂಪತ್ಯದಲ್ಲಿ ಖುಷಿ ಇಲ್ಲವೆಂದು ಪದೇಪದೆ ಜಗಳ ನಡೆಯುತ್ತಿತ್ತು. ಪತ್ನಿ ಕಿರುಕುಳದಿಂದ ಬೇಸತ್ತ ಪತಿ ಹೇಮಂತ್ 2023ರ ಡಿಸೆಂಬರ್‌ 1ರಂದು ನೆಲಮಂಗಲ ಟೌನ್ ಠಾಣೆಗೆ ದೂರು ನೀಡಿದ್ದರು. ಪೊಲೀಸ್ ಠಾಣೆಯಲ್ಲಿ ಇಡೀ ದಿನ ರಾಜಿ ಪಂಚಾಯಿತಿ ನಡೆಸಲಾಗಿತ್ತು.

ಇದನ್ನೂ ಓದಿ: ಬೆಂಗಳೂರು ಮಹಾಲಕ್ಷ್ಮೀ ಕೊಲೆ: ಸ್ನೇಹಿತ ಅಶ್ರಫ್​ ಸೇರಿದಂತೆ ನಾಲ್ವರ ಮೇಲೆ ಕುಟುಂಬಸ್ಥರ ಅನುಮಾನ

ನೆಲಮಂಗಲ ಟೌನ್ ಇನ್ಸ್‌ಪೆಕ್ಟರ್ ಶಶಿಧರ್ ಇಬ್ಬರಿಗೂ ವಾರ್ನ್‌ ಮಾಡಿದ್ದರು. ಬುದ್ಧಿವಾದ ಹೇಳಿ ಎನ್​ಸಿಆರ್​ ದಾಖಲಿಸಿದ್ದರು. ಪತ್ನಿ ಜೊತೆ ಒಂದಾಗಲು ಪತಿ ಪ್ರಯತ್ನಿಸಿದ್ದ. ಆದರೆ ಪತಿ ತೊರೆದು ಬೇರೊಬ್ಬನ ಜೊತೆ ಮಹಾಲಕ್ಷ್ಮೀ ಪರಾರಿಯಾಗಿದ್ದಳು. ನೆಲಮಂಗಲ ಬಿಟ್ಟು ಬೆಂಗಳೂರಿಗೆ ಬಂದಿದ್ದಳು.

ಪತಿ ಹೇಮಂತ್ ನೆಲಮಂಗಲದಲ್ಲಿ ಮೊಬೈಲ್‌ ಶಾಪ್ ಇಟ್ಟುಕೊಂಡಿದ್ದ. ಆಗಾಗ ಪತ್ನಿಯನ್ನು ಶಾಪ್‌ನಲ್ಲಿ ಕೂರಿಸುತ್ತಿದ್ದ. ಈ ವೇಳೆ ಬಿಹಾರದ ವಾಹಿಬ್‌ನನ್ನು ಪರಿಚಯ ಮಾಡಿಕೊಂಡಿದ್ದಳು. ಕಟಿಂಗ್ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ವಾಹಿಬ್‌ ಜೊತೆ ಸ್ನೇಹ ಬಳಿಕ ಪ್ರೀತಿಸುತ್ತಿದ್ದಳು. ವಾಹಿಬ್‌ನನ್ನು ಪ್ರೀತಿಸುತ್ತಿದ್ದ ವಿಷಯ ತಿಳಿದು ಬೆಂಗಳೂರಿಗೆ ಕಳುಹಿಸಲಾಗಿತ್ತು. ಬೆಂಗಳೂರಿಗೆ ಬಂದ ನಂತರ ಮೂವರ ಜೊತೆ ಸ್ನೇಹ ಹೊಂದಿದ್ದು, 5ಕ್ಕೂ ಹೆಚ್ಚು ಮೊಬೈಲ್‌ ನಂಬರ್​ನ್ನು ಮಹಾಲಕ್ಷ್ಮೀ ಬಳಸುತ್ತಿದ್ದಳು.

ಮಹಾಲಕ್ಷ್ಮಿ ಪತಿ ಹೇಮಂತ್ ಹೇಳಿದ್ದಿಷ್ಟು 

ಕೊಲೆಯಾದ ಮಹಾಲಕ್ಷ್ಮಿ ಪತಿ ಹೇಮಂತ್ ದಾಸ್ ಟಿವಿ9ಗೆ ಹೇಳಿಕೆ ನೀಡಿದ್ದು, ಅಶ್ರಫ್ ಎಂಬಾತನ ವಿರುದ್ಧ ನನ್ನ ಪತ್ನಿ ಈ ಹಿಂದೆ ಬ್ಲ್ಯಾಕ್ ಮೇಲ್ ದೂರು ನೀಡಿದ್ದರು. ಉತ್ತರಖಂಡ್ ಮೂಲದ ವ್ಯಕ್ತಿ ವಿರುದ್ಧ ದೂರು ನೀಡಿದ್ದರು. ನಾನು, ನನ್ನ ಪತ್ನಿ ಜೊತೆ ಸಂಪರ್ಕದಲ್ಲಿ ಇರಲಿಲ್ಲ. ವೈಯಕ್ತಿಕ ವಿಚಾರಕ್ಕೆ ಇಬ್ಬರು ದೂರಾಗದ್ದೆವು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮಹಿಳೆ ಕೊಲೆಗೆ ಪರಸಂಗದ ಅನುಮಾನ? 50 ತುಂಡುಗಳನ್ನು ಜೋಡಿಸಿ ವರದಿ ಸಿದ್ಧ ಮಾಡುವುದೇ ಸವಾಲು

ನಿನ್ನೆ ಮನೆ ಮಾಲೀಕರು ಕರೆ ಮಾಡಿ ಕೆಟ್ಟವಾಸನೆ ಬರುತ್ತಿರುವುದಾಗಿ ಹೇಳಿದರು. ನನ್ನ ಅವರ ನಡುವೆ ಸರಿಯಿಲ್ಲ. ಹೀಗಾಗಿ ಅವರ ಕುಟುಂಬಕ್ಕೆ ತಿಳಿಸುವಂತೆ ನಾನು ಹೇಳಿದೆ. ಆ ಮೇಲೆ ಅವರ ಕುಟುಂಬ ಹೊಗಿ ಮೃತದೇಹ ನೋಡಿದ್ದಾರೆ. ಬಳಿಕ ವಿಡಿಯೋದಲ್ಲಿ ನಾನು ಮೃತದೇಹ ನೋಡಿದೆ. ದೇಹ ಸಂಪೂರ್ಣ ಕಟ್ ಮಾಡಿ ಫ್ರಿಡ್ಜ್​ನಲ್ಲಿ ಇಡಲಾಗಿತ್ತು. ಯಾರು ಮಾಡಿದ್ದಾರೆಂಬುದು ಗೊತ್ತಿಲ್ಲ. ಪೊಲೀಸರು ತನಿಖೆ ಮಾಡುತಿದ್ದಾರೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.