Bangalore Power Cut Today: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್​ ಕಟ್​: ಇಲ್ಲಿದೆ ಮಾಹಿತಿ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 18, 2024 | 7:52 AM

ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಇಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಪುಟ್ಟೇನಹಳ್ಳಿ ಸಬ್‌ಸ್ಟೇಷನ್‌ನಲ್ಲಿನ ನಿರ್ವಹಣಾ ಕಾರ್ಯದಿಂದಾಗಿ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಿರಲಿದೆ.

Bangalore Power Cut Today: ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್​ ಕಟ್​: ಇಲ್ಲಿದೆ ಮಾಹಿತಿ
ಬೆಂಗಳೂರಿನ ಈ ಪ್ರದೇಶಗಳಲ್ಲಿ ಇಂದು ಪವರ್​ ಕಟ್​: ಇಲ್ಲಿದೆ ಮಾಹಿತಿ
Follow us on

ಬೆಂಗಳೂರು, ನವೆಂಬರ್​ 18: ನಗರದ ಹಲವೆಡೆ ಇಂದು (ಸೋಮವಾರ) ವಿದ್ಯುತ್​ ವ್ಯತ್ಯಯ (Power Cut) ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. 66/11 ಕೆವಿ ಪುಟ್ಟೇನಹಳ್ಳಿ ಸಬ್‌ಸ್ಟೇಷನ್‌ನಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಿನ್ನೆಲೆ ಸೋಮವಾರ ಬೆಳಿಗ್ಗೆ 10: 30ರಿಂದ ಮಧ್ಯಾಹ್ನ 3 ಗಂಟೆ ವರೆಗೆ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ. ಈ ವಿದ್ಯುತ್ ವ್ಯತ್ಯಯವು ಹೆಬ್ಬಾಳ ನಗರ ಮೇಲೂ ಪರಿಣಾಮ ಬೀರಲಿದೆ.

ಎಲ್ಲೆಲ್ಲಿ ವಿದ್ಯುತ್​ ಕಟ್​

ವೆಂಕಟಾಲ, ಪಾಲನಹಳ್ಳಿ, ಕಟ್ಟಿಗೇನಹಳ್ಳಿ, ಸೆಂಚುರಿ ಲೇಔಟ್, ಅನಂತಪುರ ಗೇಟ್, ಏರ್‌ಫೋರ್ಸ್, ಮಾರಸಂದ್ರ. ಶ್ರೀರಾಮನಹಳ್ಳಿ, ನೆಲ್ಲಕುಂಟೆ, ಹನಿಯೂರು, ಚಲ್ಲಹಳ್ಳಿ, ಕರ್ಲಾಪುರ, ರಾಮ್ಮಿ ಉತ್ತರ-1. ಪ್ರೆಸ್ಟೀಜ್ ನಗರ, ಮಾರುತಿ ರಾಯಲ್ ಗಾರ್, ಕೋಗಿಲು, ಪೂಜಾ ಮಹಾಶಂ ಲೇಔಟ್, ಸಪ್ತಗಿರಿ ಲೇಔಟ್​, ಪ್ರಕೃತಿ ನಗರ, ಶ್ರೀನಿವಾಸಪುರ, ಅಯ್ಯಪ್ಪ ಎನ್​ ಕ್ಲೇವ್​, ಎನ್​ಎನ್​ ಹಳ್ಳಿ ಸುತ್ತಮುತ್ತಲಿನ ಪ್ರದೇಶಗಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಇದನ್ನೂ ಓದಿ: Bangalore Power Cut Today: ಬೆಂಗಳೂರಿನ ಈ ಪ್ರದೇಶಗಳಲ್ಲಿಂದು ಪವರ್ ಕಟ್; ಬೆಸ್ಕಾಂ ಮಾಹಿತಿ

ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ ಈ ಬಗ್ಗೆ ಅಧಿಕೃತ ಮಾಹಿತಿ ಹೊರಡಿಸಿದೆ. ವಿದ್ಯುತ್​ ಸಮಸ್ಯೆಯನ್ನು ಸುಧಾರಿಸುವ ಮತ್ತು ಈ ಪ್ರದೇಶಗಳಲ್ಲಿ ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ  ನಿರ್ವಹಣೆ ಕೆಲಸ ಅತ್ಯಗತ್ಯವಾಗಿದೆ. ಜನರು ಅಗತ್ಯ ಮುನ್ನೆಚ್ಚರಿಕೆಗಳನ್ನು ಗಮನದಲ್ಲಿಕೊಂಡು ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಈ ವಿದ್ಯುತ್ ಅಡಚಣೆಗಾಗಿ ಬೆಸ್ಕಾಂ ವಿಷಾದಿಸಿದೆ.


ಇನ್ನು ವಿದ್ಯುತ್ ಅಪಘಾತಗಳು ಮಾರಣಾಂತಿಕವಾಗಬಹುದು. ಹಾಗಾಗಿ ಯಾವುದೇ ವಿದ್ಯುತ್​ ವಾಹಕಗಳನ್ನು ಎಂದಿಗೂ ಬಿಟ್ಟುಬಿಡಬೇಡಿ ಮತ್ತು ಸುರಕ್ಷಿತವಾಗಿರಿ. ಯಾವುದೇ ವಿದ್ಯುತ್-ಸಂಬಂಧಿತ ತುರ್ತುಸ್ಥಿತಿಗಳಿಗಾಗಿ 1912 ರಲ್ಲಿ ಬೆಸ್ಕಾಂ 24X7 ಸಹಾಯವಾಣಿಗೆ ಕರೆ ಮಾಡುವಂತೆ ತಿಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:52 am, Mon, 18 November 24