ಬ್ಯಾಂಕ್ ಕ್ಯಾಶಿಯರ್ ವಿರುದ್ಧ 1 ಕೋಟಿ 60 ಲಕ್ಷ ರೂಪಾಯಿ ವಂಚನೆ ಆರೋಪ; ಬ್ಯಾಂಕ್ ಕ್ಯಾಶಿಯರ್ ಸೇರಿದಂತೆ ಕೆಲ ಸಿಬ್ಬಂದಿ ಅಮಾನತು

ಸಿಸಿಟಿವಿ ಸೇರಿದಂತೆ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಪರಿಶೀಲನೆಗೆ ಬೆಂಗಳೂರಿನಿಂದ ತಂಡ ಆಗಮಿಸಿದೆ. ಬ್ಯಾಂಕಿನಲ್ಲಿನ ಚಸ್ಟ್ ಖಾತೆಯಲ್ಲಿ ಇರುವ ಹಣ ಪರಿಶೀಲನೆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಬ್ಯಾಂಕ್ ಕ್ಯಾಶಿಯರ್ ವಿರುದ್ಧ 1 ಕೋಟಿ 60 ಲಕ್ಷ ರೂಪಾಯಿ ವಂಚನೆ ಆರೋಪ; ಬ್ಯಾಂಕ್ ಕ್ಯಾಶಿಯರ್ ಸೇರಿದಂತೆ ಕೆಲ ಸಿಬ್ಬಂದಿ ಅಮಾನತು
ಬ್ಯಾಂಕ್ ಕ್ಯಾಶಿಯರ್ ವಿರುದ್ಧ 1 ಕೋಟಿ 60 ಲಕ್ಷ ರೂಪಾಯಿ ವಂಚನೆ ಆರೋಪ
TV9kannada Web Team

| Edited By: Ayesha Banu

Jun 09, 2022 | 7:29 AM

ಬಾಗಲಕೋಟೆ: ಜಿಲ್ಲೆಯ ನವನಗರದ ಎಸ್ಬಿಐ ಬ್ಯಾಂಕ್ ಕ್ಯಾಶಿಯರ್ ವಿರುದ್ಧ ವಂಚನೆ ಆರೋಪ ಕೇಳಿ ಬಂದಿದೆ. ಬ್ಯಾಂಕ್ ಕ್ಯಾಶಿಯರ್ ಸಂತೋಷ ಕಬಾಡೆ 1 ಕೋಟಿ 60 ಲಕ್ಷ ರೂಪಾಯಿ ವಂಚಿಸಿದ್ದಾರೆ ಎನ್ನಲಾಗುತ್ತಿದೆ. ಪತ್ನಿ, ತಾಯಿ ಹಾಗೂ ತನ್ನ ಹೆಸರಿಗೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರಂತೆ. ಸದ್ಯ ಬ್ಯಾಂಕ್ ಕ್ಯಾಶಿಯರ್ ಸೇರಿದಂತೆ ಕೆಲ ಸಿಬ್ಬಂದಿ ಅಮಾನತುಗೊಳಿಸಲಾಗಿದ್ದು ವಂಚನೆ ಸಂಬಂಧ ಬಾಗಲಕೋಟೆಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ವ್ಯವಸ್ಥಾಪಕ ದೂರು ದಾಖಲಿಸಿದ್ದಾರೆ.

ಬ್ಯಾಂಕ್ ಕ್ಯಾಶಿಯರ್ ಸಂತೋಷ, ಚೆಸ್ಟ್ ನಲ್ಲಿ ಇರುವ ಹಣವನ್ನು ಯಾರಿಗೂ ಗೊತ್ತಾಗದಂತೆ ತನ್ನ ಸಂಬಂಧಿಕರ ಖಾತೆಗೆ ಹಣ ವರ್ಗಾಹಿಸುತ್ತಿದ್ದ ಎನ್ನಲಾಗಿದೆ. ಈ ಬಗ್ಗೆ ಬ್ಯಾಂಕಿನ ವ್ಯವಸ್ಥಾಪಕ ಬಾಗಲಕೋಟೆ ಸಿಇಎನ್ ಠಾಣೆಗೆ ದೂರು ನೀಡಿದ್ದು ಸಿಇಎನ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ಸೇರಿದಂತೆ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಪರಿಶೀಲನೆಗೆ ಬೆಂಗಳೂರಿನಿಂದ ತಂಡ ಆಗಮಿಸಿದೆ. ಬ್ಯಾಂಕಿನಲ್ಲಿನ ಚಸ್ಟ್ ಖಾತೆಯಲ್ಲಿ ಇರುವ ಹಣ ಪರಿಶೀಲನೆ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ದೆಹಲಿ: ಹೋಮ್‌ವರ್ಕ್ ಮಾಡಲಿಲ್ಲ ಎಂಬ ಕಾರಣಕ್ಕೆ ಉರಿ ಬಿಸಿಲಿನಲ್ಲಿ ಮಗಳ ಕೈಕಾಲು ಕಟ್ಟಿಹಾಕಿದ ತಾಯಿ

ಸೋಲಾರ್ ಪ್ಲೇಟ್ ಗಳನ್ನ ಕಳ್ಳತನ ಮಾಡಿದ್ದ ಕಳ್ಳ ಅರೆಸ್ಟ್ ಸೋಲಾರ್ ಪ್ಲೇಟ್ ಗಳನ್ನ ಕಳ್ಳತನ ಮಾಡಿದ್ದ ವಿಜಯಪುರ ಜಿಲ್ಲೆಯ ಬಬಲೇಶ್ವರ ಮೂಲದ ಕಳ್ಳ ಅಶೋಕ್ನನ್ನು (33) ಯಾದಗಿರಿ ಜಿಲ್ಲೆಯ ಕೆಂಭಾವಿ ಪೊಲೀಸರು ಬಂಧಿಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಯಾಳಗಿ ಗ್ರಾಮದಲ್ಲಿ ಇದೆ‌ ಮೇ 29 ರಂದು ಕಳ್ಳತನ ನಡೆದಿತ್ತು. 3.3 ಲಕ್ಷ ಮೌಲ್ಯದ 22 ಸೋಲಾರ್ ಪ್ಲೇಟ್ ಗಳನ್ನ ಕಳ್ಳತನ ಮಾಡಲಾಗಿತ್ತು. ಈ ಸಂಬಂಧ ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಸದ್ಯ ಪೊಲೀಸರು ಕಳ್ಳನನ್ನು ಬಂಧಿಸಿದ್ದು ಕಳ್ಳನಿಂದ‌ 14 ಸೋಲಾರ್ ಪ್ಲೇಟ್ ಹಾಗೂ 2.1 ಲಕ್ಷ ರೂ. ಜಪ್ತಿ ಮಾಡಿದ್ದಾರೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada