ಯತ್ನಾಳ್ ವಿರುದ್ಧ ವಿಪಕ್ಷದ ಸಮರ, ರಾಜಭವನದ ಕದ ತಟ್ಟಲು ಕಾಂಗ್ರೆಸ್ ನಿರ್ಧಾರ

|

Updated on: Mar 04, 2020 | 7:40 AM

ಬೆಂಗಳೂರು: ವಿಧಾನಮಂಡಲದ ಅಧಿವೇಶನ ಕಳೆದರಡು ದಿನಗಳಿಂದ ಗದ್ದಲ ಗಲಾಟೆಯಲ್ಲೇ ಮುಳುಗಿದೆ. ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡಿರೋ ಯತ್ನಾಳ್ ವಿರುದ್ಧ ವಿಪಕ್ಷಗಳ ಹೋರಾಟ ತಾರಕಕ್ಕೇರಿದೆ. ಹೀಗಾಗಿ, ಇಂದಿನ ಕಲಾಪವೂ ಸುಗಮವಾಗಿ ನಡೆಯುತ್ತಾ ಇಲ್ವಾ ಅನ್ನೋ ಅನುಮಾನ ಹುಟ್ಟು ಹಾಕಿದೆ. ಬೆಳಗ್ಗೆ ಕಲಾಪ ಶುರುವಾದಾಗಿಂದ ಹಿಡಿದು ಸಂಜೆವರೆಗೂ ಬರೀ ಗದ್ದಲ.. ಗಲಾಟೆ.. ಕೋಲಾಹಲ.. ನಾಯಕರ ಮಾತಿನ ಚಕಮಕಿ. ಇಂಥಾ ರೋಚಕ ಕಾದಾಟದಿಂದಲೇ 2 ದಿನದ ಅಧಿವೇಶನ ವ್ಯರ್ಥವಾಗಿ ಹೋಗಿದ್ದು, ಇಂದೂ ಕೂಡ ಸಮರ ಸದ್ದು ಮಾಡಲಿದೆ. ನಿಜ.. ಸ್ವಾತಂತ್ರ್ಯ ಹೋರಾಟಗಾರ […]

ಯತ್ನಾಳ್ ವಿರುದ್ಧ ವಿಪಕ್ಷದ ಸಮರ, ರಾಜಭವನದ ಕದ ತಟ್ಟಲು ಕಾಂಗ್ರೆಸ್ ನಿರ್ಧಾರ
Follow us on

ಬೆಂಗಳೂರು: ವಿಧಾನಮಂಡಲದ ಅಧಿವೇಶನ ಕಳೆದರಡು ದಿನಗಳಿಂದ ಗದ್ದಲ ಗಲಾಟೆಯಲ್ಲೇ ಮುಳುಗಿದೆ. ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡಿರೋ ಯತ್ನಾಳ್ ವಿರುದ್ಧ ವಿಪಕ್ಷಗಳ ಹೋರಾಟ ತಾರಕಕ್ಕೇರಿದೆ. ಹೀಗಾಗಿ, ಇಂದಿನ ಕಲಾಪವೂ ಸುಗಮವಾಗಿ ನಡೆಯುತ್ತಾ ಇಲ್ವಾ ಅನ್ನೋ ಅನುಮಾನ ಹುಟ್ಟು ಹಾಕಿದೆ.

ಬೆಳಗ್ಗೆ ಕಲಾಪ ಶುರುವಾದಾಗಿಂದ ಹಿಡಿದು ಸಂಜೆವರೆಗೂ ಬರೀ ಗದ್ದಲ.. ಗಲಾಟೆ.. ಕೋಲಾಹಲ.. ನಾಯಕರ ಮಾತಿನ ಚಕಮಕಿ. ಇಂಥಾ ರೋಚಕ ಕಾದಾಟದಿಂದಲೇ 2 ದಿನದ ಅಧಿವೇಶನ ವ್ಯರ್ಥವಾಗಿ ಹೋಗಿದ್ದು, ಇಂದೂ ಕೂಡ ಸಮರ ಸದ್ದು ಮಾಡಲಿದೆ.

ನಿಜ.. ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿ ವಿರುದ್ಧದ ಯತ್ನಾಳ್ ಹೇಳಿಕೆಯನ್ನೇ ಅಸ್ತ್ರವನ್ನಾಗಿಸಿಕೊಂಡಿರೋ ವಿಪಕ್ಷಗಳು, ಸದನದಲ್ಲಿ ಹೋರಾಟಕ್ಕಿಳಿದಿವೆ. ಬಿಜೆಪಿ ಶಾಸಕ ಯತ್ನಾಳ್​ರನ್ನು ಅಮಾನತು ಮಾಡ್ಲೇಬೇಕು ಅಂತಾ ಪಟ್ಟು ಹಿಡಿದಿವೆ. ಇದೇ ಕೋಲಾಹಲಕ್ಕೆ ಎರಡು ದಿನ ಕಲಾಪ ಬಲಿಯಾಗಿದೆ.

ಯತ್ನಾಳ್ ವಿರುದ್ಧ ವಿಪಕ್ಷ ನಾಯಕರ ಸಮರ!
ಕಳೆದ 2 ದಿನಗಳಿಂದ ನಡೆಯುತ್ತಿರೋ ಅಧಿವೇಶನ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ. 2ದಿನಗಳಿಂದ ಬರೀ ಗದ್ದಲ, ಗಲಾಟೆಯಲ್ಲೇ ಸದನ ಕಲಾಪ ವ್ಯರ್ಥವಾಗಿದೆ. ಹೀಗಾಗಿ, ಇಂದಿನ ಕಲಾಪದ ಮೇಲೆ ಪ್ರತಿಭಟನೆಯ ಕರಿ ನೆರಳು ಬೀಳೋ ಸಾಧ್ಯತೆಯೇ ಹೆಚ್ಚಾಗಿದೆ.

ಅದ್ರಲ್ಲೂ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮೇಲೆ ಕಾಂಗ್ರೆಸ್ ಗರಂ ಆಗಿದ್ದು, ಯತ್ನಾಳ್ ಹೇಳಿಕೆ ವಿಚಾರದಲ್ಲಿ ಚರ್ಚೆಗೆ ಅವಕಾಶ ಕೊಡುತ್ತಿಲ್ಲ ಅಂತಾ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯಪಾಲರನ್ನ ಭೇಟಿಯಾಗಿ ದೂರು ನೀಡಲು ಮುಂದಾಗಿದೆ. ಬೆಳಗ್ಗೆ 10.45ಕ್ಕೆ ಸಿಎಲ್​ಪಿ ನಾಯಕ ಸಿದ್ದರಾಮಯ್ಯ ನೇತೃತ್ವದ ನಿಯೋಗ ರಾಜ್ಯಪಾಲರನ್ನ ಭೇಟಿಯಾಗಿ ದೂರು ನೀಡಲಿದೆ.

ಇಂದೂ ‘ದೊರೆ ಕದನ’ಕ್ಕೆ ಕಲಾಪ ಬಲಿ..?
ಕಲಾಪ ನಡೆಸುವ ವಿಚಾರದಲ್ಲಿ ಇಂದು ಮತ್ತೊಮ್ಮೆ ಸ್ಪಿಕರ್ ಕಚೇರಿಯಲ್ಲಿ ಸದನ ಸಲಹಾ ಸಮಿತಿ ಸಭೆ ನಡೆಯಲಿದೆ. ಎಲ್ಲಾ ಪಕ್ಷಗಳನ್ನ ವಿಶ್ವಾಸಕ್ಕೆ ತೆಗೆದುಕೊಳ್ಳೋ ಪ್ರಯತ್ನ ನಡೆಯಲಿದೆ. ಸದನದಲ್ಲಿ ಸಂವಿಧಾನದ ಮೇಲಿನ ಚರ್ಚೆಯಲ್ಲಿ ಕಾಂಗ್ರೆಸ್ ಭಾಗಿಯಾಗುತ್ತೆ ಅಂತಾ ಹೇಳಲಾದ್ರೂ, ಯತ್ನಾಳ್ ವಿಚಾರವಾಗಿ ಮತ್ತೊಮ್ಮೆ ಪಟ್ಟು ಹಿಡಿಯೋ ಸಾಧ್ಯತೆ ಹೆಚ್ಚಾಗಿದೆ.

ಈಗಾಗ್ಲೇ ಎಲ್ಲಾ ರೀತಿಯ ವಾದ ವಿವಾದಗಳು ಚರ್ಚೆಯಾಗಿದ್ರೂ ಸದನ ನಡೆಯುತ್ತಾ ಅನ್ನೋ ಅನುಮಾನ ಎದ್ದಿದೆ. ಅತ್ತ ವಿಧಾನಪರಿಷತ್​ನಲ್ಲೂ ಇದೇ ದೊರೆಸ್ವಾಮಿ ದಂಗಲ್ ಸದ್ದು ಮಾಡಲಿದ್ದು, ಕಲಾಪ ನಡೆಯೋ ಸಾಧ್ಯತೆ ಕಮ್ಮಿ ಇದೆ.

ಇನ್ನು, ಪರಿಷತ್​ನಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಯೇ ನಡೆದಿಲ್ಲ. ಅದಕ್ಕೆ ಸಿಎಂ ಬಿಎಸ್​ವೈ ಕೂಡ ಉತ್ತರ ನೀಡಿಲ್ಲ. ಯತ್ನಾಳ್ ಹೇಳಿಕೆಯೇ 2 ದಿನದ ಕಲಾಪವನ್ನ ನುಂಗಿ ಹಾಕಿದೆ. ಹೀಗಿರುವಾಗ ಇಂದು ಕೂಡ ಸದನದಲ್ಲಿ ಯತ್ನಾಳ್ ಕ್ಷಮಾಪಣೆ ಕೇಳಬೇಕು ಅಂತಾ ಪಟ್ಟು ಹಿಡಿಯೋ ಸಾಧ್ಯತೆ ಹೆಚ್ಚಿದೆ. ಒಟ್ನಲ್ಲಿ, ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡಿರೋ ಯತ್ನಾಳ್ ವಿರುದ್ಧ ಇಂದೂ ಹೋರಾಟ ಭುಗಿಲೇಳೋ ಸಾಧ್ಯತೆ ಇದ್ದು, ಇವತ್ತಿನ ಕಲಾಪವೂ ಬಲಿಯಾಗೋದು ಬಹುತೇಕ ಪಕ್ಕಾ!

Published On - 7:38 am, Wed, 4 March 20