ಹೈದರಾಬಾದ್ ಟೆಕ್ಕಿಗೆ ಕೊರೊನಾ, ಬೆಂಗಳೂರಿನಲ್ಲಿ ಕಂಪನಿಗೆ ಬೀಗ, ಇತರೆ ಟೆಕ್ಕಿಗಳಿಗೆ WFH!
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪರಿಣಾಮಗಳು ಒಂದೊಂದೇ ಗೋಚರವಾಗತೊಡಗಿವೆ. ಕಳೆದ ವಾರ ಬೆಂಗಳೂರಿನಲ್ಲಿ ನೆಲೆಸಿದ್ದು ಹೈದರಾಬಾದಿಗೆ ತೆರಳಿದ 24 ವರ್ಷದ ಟೆಕ್ಕಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದೇ ತಡ, ಎಲ್ಲೆಡೆ ಕಟ್ಟೆಚ್ಚರ ಕ್ರಮಗಳು ಜಾರಿಯಾಗತೊಡಗಿವೆ. ಕೊರೊನಾ ಸೋಂಕು ಪೀಡಿತ ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪನಿಗೆ ತಾತ್ಕಾಲಿಕ ರಜೆ ಘೋಷಿಸಲಾಗಿದೆ. ಆತ ಕೆಲಸ ಮಾಡುತ್ತಿದ್ದ ಕಂಪನಿಗೆ ಬೀಗ ಹಾಕಲಾಗಿದೆ. ಆದ್ರೆ ಇತರೆ ಟೆಕ್ಕಿಗಳಿಗೆ ಮುಂಜಾಗರೂಕತಾ ಕ್ರಮವಾಗಿ ಮನೆಯಿಂದಲೇ ಕೆಲಸ ಮಾಡುವಂತೆ ಅಂದ್ರೆ Work From Home ಮಾಡುವಂತೆ ಕಂಪನಿ ಸೂಚನೆ […]

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪರಿಣಾಮಗಳು ಒಂದೊಂದೇ ಗೋಚರವಾಗತೊಡಗಿವೆ. ಕಳೆದ ವಾರ ಬೆಂಗಳೂರಿನಲ್ಲಿ ನೆಲೆಸಿದ್ದು ಹೈದರಾಬಾದಿಗೆ ತೆರಳಿದ 24 ವರ್ಷದ ಟೆಕ್ಕಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದೇ ತಡ, ಎಲ್ಲೆಡೆ ಕಟ್ಟೆಚ್ಚರ ಕ್ರಮಗಳು ಜಾರಿಯಾಗತೊಡಗಿವೆ.
ಕೊರೊನಾ ಸೋಂಕು ಪೀಡಿತ ಟೆಕ್ಕಿ ಕೆಲಸ ಮಾಡುತ್ತಿದ್ದ ಕಂಪನಿಗೆ ತಾತ್ಕಾಲಿಕ ರಜೆ ಘೋಷಿಸಲಾಗಿದೆ. ಆತ ಕೆಲಸ ಮಾಡುತ್ತಿದ್ದ ಕಂಪನಿಗೆ ಬೀಗ ಹಾಕಲಾಗಿದೆ. ಆದ್ರೆ ಇತರೆ ಟೆಕ್ಕಿಗಳಿಗೆ ಮುಂಜಾಗರೂಕತಾ ಕ್ರಮವಾಗಿ ಮನೆಯಿಂದಲೇ ಕೆಲಸ ಮಾಡುವಂತೆ ಅಂದ್ರೆ Work From Home ಮಾಡುವಂತೆ ಕಂಪನಿ ಸೂಚನೆ ನೀಡಿದೆ.
ನಮ್ಮಲ್ಲಿ ಕೆಲಸ ಮಾಡುತ್ತಿದ್ದ ತೆಲಂಗಾಣ ಮೂಲದ ಟೆಕ್ಕಿ ಸಧ್ಯ ಕೊರೊನಾ ವೈರಸ್ಗೆ ಒಳಗಾಗಿದ್ದಾರೆ. ಹೀಗಾಗಿ ಕಂಪನಿಯನ್ನೇ ತಾತ್ಕಾಲಿಕವಾಗಿ ಕ್ಲೋಸ್ ಮಾಡಿರುವುದಾಗಿ ಕಂಪನಿ ಆಡಳಿತ ಮಂಡಳಿ ತಿಳಿಸಿದೆ. ಟೆಕ್ಕಿ ವಾಸವಾಗಿದ್ದ ಅಪಾರ್ಟ್ಮೆಂಟ್ಗೆ ನೋಟಿಸ್: ತೆಲಂಗಾಣದ ಟೆಕ್ಕಿಯಲ್ಲಿ ಕೊರೊನಾ ಸೋಂಕು ಪತ್ತೆ ಹಿನ್ನೆಲೆ ಟೆಕ್ಕಿ ವಾಸವಾಗಿದ್ದ ಅಪಾರ್ಟ್ಮೆಂಟ್ಗೆ ಆರೋಗ್ಯ ಇಲಾಖೆ ನೋಟಿಸ್ ಜಾರಿ ಮಾಡಿದ್ದು, ಅಪಾರ್ಟ್ಮೆಂಟ್ನಲ್ಲಿ ತಪಾಸಣೆಗೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.
Published On - 5:47 pm, Tue, 3 March 20