AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ಮುಂದೆ ಹುತಾತ್ಮ ಯೋಧರ ಕುಟುಂಬಸ್ಥರಿಗೆ ನೌಕರಿ ಕೊಡ್ತೇವೆ – ಗ್ರೂಪ್ ಡಿ ಹುದ್ದೆಗೆ ನೇರ ಸಂದರ್ಶನ ಆಯ್ಕೆ-ಸಚಿವ ಜೆ.ಸಿ.ಮಾಧುಸ್ವಾಮಿ

ಸೆಪ್ಟೆಂಬರ್ 12 ರಿಂದ ಹತ್ತು ದಿನಗಳ ಕಾಲ ಬೆಂಗಳೂರಿನಲ್ಲಿ ವಿಧಾನಮಂಡಲ ಅಧಿವೇಶನ. ಇನ್ಮುಂದೆ ಹುತಾತ್ಮ ಯೋಧರ ಕುಟುಂಬಸ್ಥರಿಗೆ ನೌಕರಿ ಕೊಡ್ತೇವೆ - ಗ್ರೂಪ್ ಡಿ ಹುದ್ದೆಗೆ ನೇರ ಸಂದರ್ಶನ ಆಯ್ಕೆ-ಸಚಿವ ಜೆ.ಸಿ.ಮಾಧುಸ್ವಾಮಿ

ಇನ್ಮುಂದೆ ಹುತಾತ್ಮ ಯೋಧರ ಕುಟುಂಬಸ್ಥರಿಗೆ ನೌಕರಿ ಕೊಡ್ತೇವೆ - ಗ್ರೂಪ್ ಡಿ ಹುದ್ದೆಗೆ ನೇರ ಸಂದರ್ಶನ ಆಯ್ಕೆ-ಸಚಿವ ಜೆ.ಸಿ.ಮಾಧುಸ್ವಾಮಿ
ಇನ್ಮುಂದೆ ಹುತಾತ್ಮ ಯೋಧರ ಕುಟುಂಬಸ್ಥರಿಗೆ ನೌಕರಿ ಕೊಡ್ತೇವೆ - ಗ್ರೂಪ್ ಡಿ ಹುದ್ದೆಗೆ ನೇರ ಸಂದರ್ಶನ ಆಯ್ಕೆ-ಸಚಿವ ಜೆ.ಸಿ.ಮಾಧುಸ್ವಾಮಿ
TV9 Web
| Updated By: ಸಾಧು ಶ್ರೀನಾಥ್​|

Updated on: Aug 25, 2022 | 2:40 PM

Share

ಬೆಂಗಳೂರು: ಇನ್ಮುಂದೆ ಹುತಾತ್ಮ ಯೋಧರ ಕುಟುಂಬಸ್ಥರಿಗೆ ಪರಿಹಾರ ಧನ ಮತ್ತು ಸೈಟ್ ಕೊಡುವುದರ ಬದಲು, ಅನಕಂಪದ ಆಧಾರದಲ್ಲಿ ಸರ್ಕಾರಿ ನೌಕರಿ ಕೊಡ್ತೇವೆ. ಇನ್ನು ಕೆಪಿಎಸ್ ಸಿ ಆಯ್ಕೆಯಲ್ಲಿ ಡಿ ಗ್ರೂಪ್ ಗೆ ವೈವಾ ಮಾಡದೇ, ನೇರ ಸಂದರ್ಶನ ಮೂಲಕ ನೇಮಕಾತಿ ಮಾಡಲು ಕಾಯ್ದೆಗೆ ತಿದ್ದುಪಡಿ ತರಲಾಗುವುದು ಎಂದು ಸಚಿವ ಸಂಪುಟ ಸಭೆ ನಂತರ ಕಾನೂನು ಮತ್ತು ಸಂಸದೀಯ ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ಭೂರಹಿತ ಕೃಷಿ ಕಾರ್ಮಿಕರ ಮಕ್ಕಳಿಗೂ ರೈತ ವಿದ್ಯಾ ನಿಧಿ ಯೋಜನೆ ವಿಸ್ತರಣೆ ಮಾಡಲು ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಚಾಮರಾಜನಗರ, ಬೀದರ್, ಹಾವೇರಿ, ಹಾಸನ, ಕೊಪ್ಪಳ, ಕೊಡಗು ಜಿಲ್ಲೆಯಲ್ಲಿ ವಿಶ್ವವಿದ್ಯಾಲಯ ತೆರೆಯಲು ಸಹ ತೀರ್ಮಾನ ಮಾಡಲಾಗಿದೆ ಎಂದು ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದ್ದಾರೆ.

ಸಂಪುಟ ನಿರ್ಣಯದ ಪ್ರಮುಖ ಅಂಶಗಳು:

ಮಲ್ಪೆ ಬಂದರು ಅಭಿವೃದ್ಧಿಗೆ ಅನುಮೋದನೆ

ಲೋಕಾಯುಕ್ತದಲ್ಲಿ ಹೊರಗುತ್ತಿಗೆ ಮೇಲೆ ನಿವೃತ್ತ ನಾಲ್ಕು ಸಿಬ್ಬಂದಿ ನೇಮಕಕ್ಕೆ ಅನುಮೋದನೆ

ಲೋಕಾಯುಕ್ತದಲ್ಲಿ ನಿವೃತ್ತರಾಗಿರುವ 7 ಪಬ್ಲಿಕ್ ಪಾಸಿಕ್ಯೂಟರ್ ಗಳಿಗೆ ಒಂದು ವರ್ಷದ ಅವಧಿಗೆ ಮುಂದುವರಿಕೆ

ಕೊಂಕಣ ರೈಲ್ವೇಗೆ ರಾಜ್ಯದ ಪಾಲು ೭೩.೫೬ ಕೋಟಿ ನೀಡಲು ಅನುಮೋದನೆ

ರಾಜ್ಯ ಯೋಜನಾ ಆಯೋಗವನ್ನು ನೀತಿ ಆಯೋಗದ ಮಾದರಿ ರಚನೆಗೆ ಘಟನೋತ್ತರ ಅನುಮೋದನೆ

ಹೊರ್ತಿ-ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಅನುಮೋದನೆ

ವಿಜಯಪುರ ನ್ಯಾಯಾಲಯ ಸಂಕೀರ್ಣದಲ್ಲಿ ಕಟ್ಟಡ ಅಂದಾಜು ವೆಚ್ಚ 12 ಕೋಟಿ ರೂ. ಗೆ ಅನುಮೋದನೆ

ಹೆಬ್ರಿ ಮತ್ತು ಕಾರ್ಕಳ ತಾಲೂಕಿನಲ್ಲಿ 69 ಗ್ರಾಮಗಳಿಗೆ ಕುಡಿಯುವ ನೀರಿಗೆ ಜಲ ಜೀವನ ಮಿಷನ್ ಅಡಿಯಲ್ಲಿ 1600 ಕೋಟಿ ರೂ. ಗೆ ಅನುಮೋದನೆ

ಇಂಡಿಯನ್ ಜಿಮ್ಖಾನಾ ಸಂಸ್ಥೆಯಿಂದ ಲೀಸ್ ಗೆ ನೀಡಲ್ಪಟ್ಟಿದ್ದ 3 ಎಕರೆ ಜಮೀನು ವಾಪಸ್ ಪಡೆದು ಸಾರ್ವಜನಿಕ ಉದ್ದೇಶಕ್ಕೆ ಮೈದಾನ ಮಾಡಲು ತೀರ್ಮಾನ

ಸೆಪ್ಟೆಂಬರ್ 12 ರಿಂದ ಹತ್ತು ದಿನಗಳ ಕಾಲ ಬೆಂಗಳೂರಿನಲ್ಲಿ ವಿಧಾನಮಂಡಲ ಅಧಿವೇಶನ

ಬೆಂಗಳೂರು ಉತ್ತರ ತಾಲ್ಲೂಕಿನ ಚಿಕ್ಕ ಬಾಣಾವರ ಶ್ರೀನಿವಾಸ ಚಾರಿಟೇಬಲ್ ಟ್ರಸ್ಟ್ ಗೆ 3 ಎಕರೆ ಜಮೀನು ಮಂಜೂರು

ಬೆಂಗಳೂರಿನ ಸಿಂಗೇನಹಳ್ಳಿ ಸಮೀಪ 42 ಎಕರೆಯಲ್ಲಿ 100 ಕೋಟಿ ಅನುದಾನದಲ್ಲಿ ಅತ್ಯಾಧುನಿಕ‌ ತರಕಾರಿ ಮಾರುಕಟ್ಟೆ ನಿರ್ಮಾಣ ಮಾಡಿ ಕಲಾಸಿಪಾಳ್ಯ ಮಾರುಕಟ್ಟೆ ಸ್ಥಳಾಂತರಕ್ಕೆ ನಿರ್ಧಾರ

ವೈಟ್‌ಫೀಲ್ಡ್ ರೈಲು ನಿಲ್ದಾಣದ ಬಳಿ ರಸ್ತೆ ಮೇಲ್ಸೇತುವೆಗೆ 27 ಕೋಟಿ ರೂ.

ಬಾಗಲಕೋಟೆ ಅನ್ನದಿನ್ನಿ ಏತ ನೀರಾವರಿ ಯೋಜನೆಗೆ 22 ಕೋಟಿ ರೂ.

ರಾಣೆಬೆನ್ನೂರಿನಲ್ಲಿ ರಸ್ತೆ ಅಭಿವೃದ್ಧಿಗೆ 14 ಕೋಟಿ ರೂ. ಮಂಜೂರು

ಶಿವಮೊಗ್ಗ, ಭದ್ರಾವತಿಯಲ್ಲಿ ಕುಡಿಯುವ ನೀರು ಯೋಜನೆಗೆ 48 ಕೋಟಿ ರೂ.

ಸೇಡಂನಲ್ಲಿ ಕೆಸ್ ಆರ್ ಟಿಸಿ ಚಾಲನಾ ಮತ್ತು ಮೆಕ್ಯಾನಿಕಲ್ ಟ್ರೈನಿಂಗ್ ಸೆಂಟರ್ ನಿರ್ಮಾಣಕ್ಕೆ 14 ಕೋಟಿ ರೂ.

ಬಿಬಿಎಂಪಿಯ ಪಂತರಪಾಳ್ಯದಲ್ಲಿ 150 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ 32 ಕೋಟಿ

ಹಾಸನದ ಅರಸೀಕೆರೆ, ದುದ್ದ ಭಾಗದಲ್ಲಿ ಕೆರೆಗಳನ್ನು ತುಂಬಿಸುವ ಕಾಮಗಾರಿಗಳಿಗೆ 48 ಕೋಟಿ ರೂ.

ಕುಂದಾಪುರದಲ್ಲಿ ಕುಡಿಯುವ ನೀರಿನ ಯೋಜನೆಗೆ 165 ಕೋಟಿ ರೂ.-

19 ಕೋಟಿ ವೆಚ್ಚದಲ್ಲಿ ಪೊಲೀಸ್ ಇಲಾಖೆಗೆ ಅಗತ್ಯ ವಾಹನಗಳ‌ ಖರೀದಿಗೆ ನಿರ್ಧಾರ

4244 ಹೊಸ ಅಂಗನವಾಡಿಗಳನ್ನು ತೆರೆಯಲು ನಿರ್ಧಾರ

ಸನ್ನಡತೆ ಆಧಾರದಲ್ಲಿ 84 ಜನ ಕೈದಿಗಳ ಬಿಡುಗಡೆಗೆ ಕೇಂದ್ರದಿಂದ ಒಪ್ಪಿಗೆ