AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಜಾಹೀರಾತು ಕಾಯ್ದೆ ಜಾರಿಗೊಳಿಸಿದ ಬಿಬಿಎಂಪಿ: ಸರ್ಕಾರಿ, ಖಾಸಗಿ ಕಟ್ಟಡಗಳ ಮೇಲೆ ಜಾಹೀರಾತಿಗೆ ಅವಕಾಶ

ವೈಜ್ಞಾನಿಕವಾಗಿ ಹಾಗೂ ನಗರದ ಸೌಂದರ್ಯ ಹಾಳಾಗದಂತೆ ಜಾಹೀರಾತು ಕಾಯ್ದೆ ಜಾರಿಗೆ ಸರ್ಕಾರ ಅನುಮೋದನೆ ನೀಡಿದೆ. ಸರ್ಕಾರದ ರಾಜ್ಯಪತ್ರದ ಮೂಲಕ ಕರಡು ಪ್ರತಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಿಡುಗಡೆ ಮಾಡಿದೆ. ಆಕ್ಷೇಪಣೆ ಸಲ್ಲಿಸುವುದಕ್ಕೆ ಸಾರ್ವಜನಿಕರಿಗೆ 30 ದಿನ ಕಾಲಾವಕಾಶ ನೀಡಲಾಗಿದೆ.

ಹೊಸ ಜಾಹೀರಾತು ಕಾಯ್ದೆ ಜಾರಿಗೊಳಿಸಿದ ಬಿಬಿಎಂಪಿ: ಸರ್ಕಾರಿ, ಖಾಸಗಿ ಕಟ್ಟಡಗಳ ಮೇಲೆ ಜಾಹೀರಾತಿಗೆ ಅವಕಾಶ
ಹೊಸ ಜಾಹೀರಾತು ಕಾಯ್ದೆ ಜಾರಿಗೊಳಿಸಿದ ಬಿಬಿಎಂಪಿ: ಸರ್ಕಾರಿ, ಖಾಸಗಿ ಕಟ್ಟಡಗಳ ಮೇಲೆ ಜಾಹೀರಾತಿಗೆ ಅವಕಾಶ
ಶಾಂತಮೂರ್ತಿ
| Edited By: |

Updated on:Jul 20, 2024 | 6:38 PM

Share

ಬೆಂಗಳೂರು, ಜುಲೈ 20: ವೈಜ್ಞಾನಿಕವಾಗಿ ಮತ್ತು ನಗರದ ಸೌಂದರ್ಯ ಹಾಳಾಗದಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಹೊಸ ಜಾಹೀರಾತು (Advertisement) ಕಾಯ್ದೆ ಜಾರಿಗೊಳಿಸಿದೆ. ಈ ಹೊಸ ಜಾಹೀರಾತು ಕರಡು ನೀತಿಗೆ ಸರ್ಕಾರದಿಂದ ಅನುಮೋದನೆ ಸಿಕ್ಕಿದೆ. ಸರ್ಕಾರದ ರಾಜ್ಯಪತ್ರದ ಮೂಲಕ ಕರಡು ಪ್ರತಿಯನ್ನು ಪಾಲಿಕೆ ಬಿಡುಗಡೆ ಮಾಡಿದೆ. ಆಕ್ಷೇಪಣೆ ಸಲ್ಲಿಸುವುದಕ್ಕೆ ಸಾರ್ವಜನಿಕರಿಗೆ 30 ದಿನ ಕಾಲಾವಕಾಶ ನೀಡಲಾಗಿದೆ.

ಹೊಸ ಜಾಹೀರಾತು ನೀತಿಯ ಪ್ರಮುಖ ಅಂಶಗಳು

  • ಜಾಹೀರಾತು ಟೆಂಡರ್‌ನಲ್ಲಿ ಭಾಗವಹಿಸಲು ಪಾಲಿಕೆಯಲ್ಲಿ ನೋಂದಣಿ ಕಡ್ಡಾಯ
  • ಟೆಂಡರ್‌ನಲ್ಲಿ ಭಾಗವಹಿಸಲು ನೋಂದಣಿ ಶುಲ್ಕ 5 ಲಕ್ಷ ರೂ. ನಿಗದಿ ಮಾಡಲಾಗಿದೆ.
  • ಒಮ್ಮೆ ನೋಂದಣಿ ಪಡೆದವರು ಪ್ರತಿ 3 ವರ್ಷಕ್ಕೆ ನವೀಕರಣ ಮಾಡಬೇಕು.
  • ರಸ್ತೆ, ಸರ್ಕಲ್, ವಲಯವಾರು ಪ್ಯಾಕೇಜ್ ಮಾದರಿಯಲ್ಲಿ ಟೆಂಡರ್​ ನೀಡಲಾಗುತ್ತದೆ.
  • ರಸ್ತೆ ಅಗಲ, ಸರ್ಕಲ್ ಗಾತ್ರಕ್ಕೆ ಅನುಗುಣವಾಗಿ ಜಾಹೀರಾತು ಫಲಕಕ್ಕೆ ಅವಕಾಶ.
  • ಒಂದು ಜಾಹೀರಾತು ಫಲಕದಿಂದ ಮತ್ತೊಂದಕ್ಕೆ 100 ಮೀಟರ್ ಅಂತರ ಕಡ್ಡಾಯ.

ಇದನ್ನೂ ಓದಿ: ಆದಾಯ ಹೆಚ್ಚಿಸಿಕೊಳ್ಳಲು ಜಾಹೀರಾತು ನಿಯಮ ತಿದ್ದುಪಡಿಗೆ ಮುಂದಾದ ಬಿಬಿಎಂಪಿ

  • ಜಾಹೀರಾತು ಫಲಕ ಅಳವಡಿಕೆಗೆ ಸಬ್ ರಿಜಿಸ್ಟರ್(ಮಾರ್ಗಸೂಚಿ) ದರ ಆಧರಿಸಿ ಶುಲ್ಕ ನಿಗದಿ.
  • ಮಾರ್ಗಸೂಚಿ ಪ್ರಕಾರ ಹೆಚ್ಚಿನ ಬಿಡ್ ಮಾಡಿದವರಿಗೆ ಗುತ್ತಿಗೆ ನೀಡಲಾಗುತ್ತೆ.
  • ನೂತನ ಜಾಹೀರಾತು ನೀತಿಯಲ್ಲಿ ಪರಿಸರ ಸ್ನೇಹಿ ವಸ್ತುಗಳ ಬಳಕೆ.
  • ಸರ್ಕಾರಿ ಹಾಗೂ ಖಾಸಗಿ ಕಟ್ಟಡಗಳ ಮೇಲೆ ಜಾಹೀರಾತಿಗೆ ಅವಕಾಶ.
  • ಬಿಬಿಎಂಪಿಗೆ ತೆರಿಗೆ ನೀಡಿ ಖಾಸಗಿ ಕಟ್ಟಡಗಳು ಜಾಹೀರಾತಿಗೆ ಬಾಡಿಗೆ ನೀಡಬಹುದು.
  • ಹೊಸ ಜಾಹೀರಾತು ನೀತಿಯಿಂದ 1 ಸಾವಿರ ಕೋಟಿ ರೂ. ವಾರ್ಷಿಕ ಆದಾಯ ನಿರೀಕ್ಷೆ.
  • ವಿಧಾನಸೌಧ, ಹೈಕೋರ್ಟ್, ರಾಜಭವನ ರಸ್ತೆ, ಕುಮಾರಕೃಪಾ ರಸ್ತೆ, ಅಂಬೇಡ್ಕರ್ ಬೀದಿ, ನೃಪತುಂಗ ರಸ್ತೆ ಸೇರಿದಂತೆ ಹಲವೆಡೆ ಜಾಹೀರಾತು ನಿಷೇಧಿಸಲಾಗಿದೆ.
  • ಆಟೋ, ಬಸ್‌, ಮೆಟ್ರೋ ಪಿಲ್ಲರ್, ಮೆಟ್ರೋ ರೈಲು, ಟ್ಯಾಕ್ಸಿ, ಬಸ್ ಶೆಲ್ಟರ್‌ ಮೇಲೆ ಜಾಹೀರಾತಿಗೆ ಬಿಬಿಎಂಪಿ ಅವಕಾಶ ನೀಡಿದೆ.

ಇದನ್ನೂ ಓದಿ: ಬೆಂಗಳೂರು: ಅಕ್ರಮ ಬ್ಯಾನರ್​​, ಹೋರ್ಡಿಂಗ್ಸ್​, ಫ್ಲೆಕ್ಸ್​ ಕಂಡರೆ ಬಿಬಿಎಂಪಿಯ ಈ ನಂಬರ್​ಗೆ ವಾಟ್ಸಪ್​ ಮಾಡಿ

ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತಿಗೆ ಕಡಿವಾಣ ಹಾಕಲು ಹಾಗೂ ಸರ್ಕಾರದ ಖಜಾನೆ ಭರ್ತಿ ಮಾಡುವ ನಿಟ್ಟಿನಲ್ಲಿ ಜಾಹೀರಾತು ನಿಯಮ ತಿದ್ದುಪಡಿ ಮಾಡಿ ಹೊಸ ಜಾಹೀರಾತು ನಿಯಮ ಜಾರಿಗೆ ತರುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿತ್ತು. ಇದರ ಬೆನ್ನಲ್ಲೇ ಇಂದು ಹೊಸ ಜಾಹೀರಾತು ಕಾಯ್ದೆ ಜಾರಿ ಮಾಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 6:12 pm, Sat, 20 July 24

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ