BBMP: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಬಿಎಂಪಿ ಪೌರ ಕಾರ್ಮಿಕರಿಂದ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ

| Updated By: ಗಂಗಾಧರ​ ಬ. ಸಾಬೋಜಿ

Updated on: Mar 10, 2022 | 3:50 PM

ವೇತನ ಹೆಚ್ಚಳ, ಆರೋಗ್ಯ ಕಾರ್ಡ್, ಗರ್ಭಿಣಿಯರಿಗೆ ಆರು ತಿಂಗಳ ರಜೆ ಸೇರಿದಂತೆ ವಿವಿಧ ಬೇಡಿಕೆಗೆ ಒತ್ತಾಯಿಸಿದ್ದು, ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮಾಡುವುದಾಗಿ ನಿರ್ಧಾರ ಮಾಡಲಾಗಿದೆ.

BBMP: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬಿಬಿಎಂಪಿ ಪೌರ ಕಾರ್ಮಿಕರಿಂದ ಫ್ರೀಡಂಪಾರ್ಕ್‌ನಲ್ಲಿ ಪ್ರತಿಭಟನೆ
ಬಿಬಿಎಂಪಿ ಪೌರ ಕಾರ್ಮಿಕರಿಂದ ಪ್ರತಿಭಟನೆ.
Follow us on

ಬೆಂಗಳೂರು: ಬಿಬಿಎಂಪಿ (BBMP protest) ಪೌರ ಕಾರ್ಮಿಕರಿಂದ ನಗರದಲ್ಲಿ ಬೃಹತ್ ಪ್ರತಿಭಟನೆ ಮಾಡಲಾಯಿತು. 18,500 ಪೌರಕಾರ್ಮಿಕರು, ಮೇಲ್ವಿಚಾರಕರನ್ನು ಕಾಯಂಗೊಳಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಫ್ರೀಡಂಪಾರ್ಕ್‌ನಲ್ಲಿ ಬಿಬಿಎಂಪಿಯ ಸಾವಿರಾರು ಪೌರಕಾರ್ಮಿಕರಿಂದ ಪ್ರತಿಭಟನೆ ಮಾಡಿದ್ದಾರೆ. 198 ವಾರ್ಡ್‌ಗಳಲ್ಲಿ ಕೆಲಸಕ್ಕೆ ಗೈರಾಗಿ ಪೌರಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ವೇತನ ಹೆಚ್ಚಳ, ಆರೋಗ್ಯ ಕಾರ್ಡ್, ಗರ್ಭಿಣಿಯರಿಗೆ ಆರು ತಿಂಗಳ ರಜೆ ಸೇರಿದಂತೆ ವಿವಿಧ ಬೇಡಿಕೆಗೆ ಒತ್ತಾಯಿಸಿದ್ದು, ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮಾಡುವುದಾಗಿ ನಿರ್ಧಾರ ಮಾಡಲಾಗಿದೆ. ಸ್ಥಳಕ್ಕೆ ಬಿಬಿಎಂಪಿ ಕಮಿಷಿನರ್ ಗೌರವ್ ಗುಪ್ತ ಬರುವಂತೆ ಆಗ್ರಹಿಸಿದ್ದಾರೆ.

ವಿಧಾನಪರಿಷತ್: ಕರ್ನಾಟಕದಲ್ಲಿ ಬಾಲ್ಯವಿವಾಹ ಹೆಚ್ಚಾಗಿದೆ. ಶೇಕಡಾ 66 ರಷ್ಟು ಹೆಚ್ಚಾಗಿದೆ ಎಂದು ಎನ್‌.ಸಿ.ಆರ್‌.ಬಿ ಹೇಳಿದೆ. 2020ನೇ ಸಾಲಿನಲ್ಲಿ 180 ಪ್ರಕರಣ ದಾಖಲಾಗಿತ್ತು. ಬಾಲ್ಯ ವಿವಾಹ ತಡೆಯಲು ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಕಠಿಣ ಕಾನೂನು ರೂಪಿಸಬೇಕು ಎಂದು ಶೂನ್ಯವೇಳೆಯಲ್ಲಿ ಎಸ್.ವಿ.ಸಂಕನೂರು ಪ್ರಸ್ತಾಪಿಸಿದ್ದಾರೆ. ಮೈಸೂರು ಜಿಲ್ಲೆ ಹನೂರು ತಾಲೂಕಿನ ಕೆರೆದಿಂಬ ಸೋಲಿಗರ ಹಾಡಿ ಇದೆ. ಅಲ್ಲಿ ರಸ್ತೆ ಮತ್ತು ಚಿಕಿತ್ಸೆಗೆ ಸೌಲಭ್ಯ ಇಲ್ಲ. ಜನರು ಆಸ್ಪತ್ರೆ ತಲುಪಲು ಒದ್ದಾಡುತ್ತಿದ್ದಾರೆ. ಗರ್ಭಿಣಿ ಮಹಿಳೆಯನ್ನು ಕಿಲೋ ಮೀಟರ್​ ಗಟ್ಟಲೆ ಕಂಬಳಿಯಲ್ಲಿ ಹೊತ್ತು ಸಾಗಿದ್ದಾರೆ. ಬುಡಕಟ್ಟು ಹಾಡಿಗಳಲ್ಲಿ ರಸ್ತೆ ಹಾಗೂ ಮೂಲಭೂತ ಸೌಕರ್ಯ ಇಲ್ಲ. ಇದನ್ನು ಸರ್ಕಾರ ಸರಿಪಡಿಸಬೇಕು ಎಂದು ವಿಧಾನಪರಿಷತ್​ನ ಶೂನ್ಯ ವೇಳೆಯಲ್ಲಿ ಶಾಂತಾರಾಂ ಸಿದ್ದಿ ಪ್ರಸ್ತಾಪ ಮಾಡಿದ್ದಾರೆ.

ಬೆಂಗಳೂರು ನಗರದಲ್ಲಿ ರಸ್ತೆಗಳ ನಿರ್ಮಾಣಕ್ಕೆ ಪ್ರತ್ಯೇಕ ತಂತ್ರಜ್ಞಾನದ ಅವಶ್ಯಕತೆ ಇದೆ. ಸರಿಯಾದ ರಸ್ತೆ ವಿನ್ಯಾಸ ಬೇಕಿದೆ ಎಂದು ಸದಸ್ಯ ಪಿ.ಆರ್.ರಮೇಶ್ ಕೇಳಿದ ಪ್ರಶ್ನೆಗೆ ಸಿಎಂ ಬಸವರಾಜ ಬೊಮ್ಮಾಯಿ ಉತ್ತರಿಸಿದ್ದು, ರಸ್ತೆಗಳ ನಿರ್ಮಾಣಕ್ಕೆ ಪ್ರತ್ಯೇಕ ತಂತ್ರಜ್ಞಾನ ಅವಶ್ಯಕತೆ ಇದೆ. ಸರಿಯಾದ ರೋಡ್ ಡಿಸೈನಿಂಗ್ ಮಾಡುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ:

Virat Kohli: ಎಲ್ಲರೆದುರು ತರಲೆ ಮಾಡಿಕೊಂಡಿರುವ ವಿರಾಟ್, ಅನುಷ್ಕಾ ಎದುರು ಬಂದರೆ ಹೇಗೆ ವರ್ತಿಸುತ್ತಾರಂತೆ ಗೊತ್ತಾ?

Viral Video: ಅಬ್ಬಬ್ಬಾ! ಒಂದೇ ಬೈಕ್​ನಲ್ಲಿ 9 ಜನರ ಸವಾರಿ; ವಿಡಿಯೋ ನೋಡಿ