Viral Video: ಅಬ್ಬಬ್ಬಾ! ಒಂದೇ ಬೈಕ್‌ನಲ್ಲಿ 9 ಜನರ ಸವಾರಿ; ವಿಡಿಯೋ ನೋಡಿ
ಗಿಣಗೇರಾದಿಂದ ಗಂಗಾವತಿ ಕಡೆ ಹೊರಟಿದ್ದ ಕುಟುಂಬ ಸದಸ್ಯರು ಒಂದೇ ಬೈಕ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ನಾಲ್ಕು ಜನ ಹಿರಿಯರು, ಐದು ಜನ ಮಕ್ಕಳು ಒಂದೇ ಬೈಕ್ ನಲ್ಲಿ ಸವಾರಿ ಮಾಡಿದ್ದಾರೆ. ಹೀರೋ ಹೊಂಡಾ ಸ್ಪೆಂಡರ್ ಬೈಕ್‌ನಲ್ಲಿ 9 ಜನ ಸವಾರಿ ಮಾಡಿರೋದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಕೊಪ್ಪಳ: ಒಂದು ಬೈಕ್ ನಲ್ಲಿ ಅಬ್ಬಬ್ಬಾ ಅಂದ್ರೆ ಮೂರು ಜನ, ತಪ್ಪಿದರೆ ನಾಲ್ಕು ಜನ ಹತ್ತಿರೋದನ್ನು ನೀವು ನೋಡಿರಬಹುದು. ಆದ್ರೆ ಇಲ್ಲಿ ಒಂದೇ ಬೈಕ್ ನಲ್ಲಿ ಸುಮಾರು 9 ಜನ ಸವಾರಿ ಮಾಡಿದ್ದಾರೆ. ಕೊಪ್ಪಳದ ಗಿಣಗೇರಾ ಬಳಿ ಒಂದೇ ಬೈಕ್ ನಲ್ಲಿ 9 ಜನ ಸವಾರಿ ಮಾಡಿರೋ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಗಿಣಗೇರಾದಿಂದ ಗಂಗಾವತಿ ಕಡೆ ಹೊರಟಿದ್ದ ಕುಟುಂಬ ಸದಸ್ಯರು ಒಂದೇ ಬೈಕ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ನಾಲ್ಕು ಜನ ಹಿರಿಯರು, ಐದು ಜನ ಮಕ್ಕಳು ಒಂದೇ ಬೈಕ್ ನಲ್ಲಿ ಸವಾರಿ ಮಾಡಿ ನೋಡುಗರನ್ನ ತಮ್ಮತ್ತ ಸೆಳೆದಿದ್ದಾರೆ. ಹೀರೋ ಹೊಂಡಾ ಸ್ಪೆಂಡರ್ ಬೈಕ್‌ನಲ್ಲಿ 9 ಜನ ಸವಾರಿ ಮಾಡಿರೋದು ಎಲ್ಲರ ಹುಬ್ಬೇರುವಂತೆ ಮಾಡಿದೆ.
ಆದ್ರೆ ಕಾನೂನು ಪ್ರಕಾರ ಇದು ತಪ್ಪು. ಮೇಲಾಗಿ ಇಷ್ಟು ಜನ ಒಂದೇ ಬೈಕ್‌ನಲ್ಲಿ ಕುಳಿತು ಸವಾರಿ ಮಾಡುವುದು ಜೀವಕ್ಕೇ ಸಂಚಕಾರ ತಂದೊಡ್ಡಬಹುದು. ಇಂಥ ಕೆಲಸ ಯಾರೂ ಮಾಡಬಾರದು.
ಕಾರವಾರ: ನದಿ ಬಿಟ್ಟು ಕೆಎಸ್ಆರ್ಟಿಸಿ ಡಿಪೋಗೆ ಬಂದ ಮೊಸಳೆ!
ಇತ್ತ ದಾಂಡೇಲಿಯ ದೇಶಪಾಂಡೆ ನಗರದ ಬಳಿ ಕೆಎಸ್ಆರ್ಟಿಸಿ ಡಿಪೋದಲ್ಲಿ ಬೃಹದಾಕಾರದ ಮೊಸಳೆಯೊಂದು ಕಾಣಿಸಿಕೊಂಡಿದೆ. ಮೊಸಳೆಗಳು ನದಿಬಿಟ್ಟು ದಡಕ್ಕೆ ಬಾರದಂತೆ ಕ್ರಮವಹಿಸಲು ಅಧಿಕಾರಿಗಳಿಗೆ ಜನರು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು,ತಹಶಿಲ್ದಾರರು ಭೇಟಿ ನೀಡಿದ್ದಾರೆ. ಮೊಸಳೆಯನ್ನ ಹಗ್ಗದಿಂದ ಕಟ್ಟಿ ಕಾಳಿ ನದಿಗೆ ಬಿಡಲು ಅಧಿಕಾರಿಗಳು ಮುಂದಾಗಿದ್ದಾರೆ.
ಇದನ್ನೂ ಓದಿ: Viral Video: ಟ್ರೆಡ್‌ಮಿಲ್ ಮೇಲೆ ವಾಕ್ ಮಾಡಿದ ಬಾತುಕೋಳಿ; ಮುದ್ದಾದ ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?
ಇದನ್ನೂ ಓದಿ: ಭಾರಿ ಗಾತ್ರದ ಹೆಬ್ಬಾವು ರಸ್ತೆ ದಾಟಲು ನಿಮಿಷಗಳೇ ಬೇಕಾಯ್ತು, ವೈರಲ್ ಆಗಿರುವ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ!

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ

ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ

ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್ನಲ್ಲಿ ಕಳೆದ ಕೊನೆಯ ಕ್ಷಣಗಳು

ಕೆಆರ್ಎಸ್ ಕ್ರೆಸ್ಟ್ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
