AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದುಳಿದ, SCST ಸಮುದಾಯಗಳನ್ನು ವರ್ಷಕ್ಕೊಮ್ಮೆ ಮೇಲೆತ್ತುವುದು, ಮತ್ತೆ ಬಾವಿಗೆ ಹಾಕುವುದು: ಕಾಂಗ್ರೆಸ್​ ವಿರುದ್ಧ ಸಿಎಂ ಬೊಮ್ಮಾಯಿ ಕಿಡಿ

ಹಿಂದುಳಿದ ಮತ್ತು ಎಸ್‌ಸಿಎಸ್‌ಟಿ ಸಮುದಾಯಗಳನ್ನ ಐದು ವರ್ಷಕ್ಕೊಮ್ಮೆ ಮೇಲೆತ್ತುವುದು ಚುನಾವಣೆ ಮುಗಿದ ನಂತರ ಮತ್ತೆ ಬಾವಿಗೆ ಹಾಕುತ್ತೀರಿ ಎಂದು ಕಾಂಗ್ರೆಸ್​ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ಮಾಡಿದರು.

ಹಿಂದುಳಿದ, SCST ಸಮುದಾಯಗಳನ್ನು ವರ್ಷಕ್ಕೊಮ್ಮೆ ಮೇಲೆತ್ತುವುದು, ಮತ್ತೆ ಬಾವಿಗೆ ಹಾಕುವುದು: ಕಾಂಗ್ರೆಸ್​ ವಿರುದ್ಧ ಸಿಎಂ ಬೊಮ್ಮಾಯಿ ಕಿಡಿ
ಸಿಎಂ ಬೊಮ್ಮಾಯಿ
ಗಂಗಾಧರ​ ಬ. ಸಾಬೋಜಿ
|

Updated on: Mar 15, 2023 | 5:23 PM

Share

ಬೆಳಗಾವಿ: ಹಿಂದುಳಿದ ಮತ್ತು ಎಸ್‌ಸಿಎಸ್‌ಟಿ ಸಮುದಾಯಗಳನ್ನ ಐದು ವರ್ಷಕ್ಕೊಮ್ಮೆ ಮೇಲೆತ್ತುವುದು ಚುನಾವಣೆ ಮುಗಿದ ನಂತರ ಮತ್ತೆ ಬಾವಿಗೆ ಹಾಕುತ್ತೀರಿ. ಅವರನ್ನ ಕತ್ತಲಲ್ಲಿ ಇಟ್ಟು ಬಿಟ್ಟಿದ್ದರು ಎಂದು ಕಾಂಗ್ರೆಸ್ (congress)​ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ಮಾಡಿದರು. ಜಿಲ್ಲೆಯ ರಾಮದುರ್ಗ ತಾಲೂಕಿನ ಬಟಕುರ್ಕಿ ಗ್ರಾಮದಲ್ಲಿ ಅವರು ಮಾನಾಡಿ, ಎಸ್‌ಸಿಎಸ್‌ಟಿ ಜನಾಂಗಕ್ಕೆ ಮೀಸಲಾತಿ ಹೆಚ್ಚಾಗಬೇಕು ಎಂದು 40ವರ್ಷ ಹೋರಾಟ ಮಾಡಿದ್ದರು. ಯಾರು ಏನೂ ಮಾಡಲಿಲ್ಲ. ನಿಮ್ಮ ರಕ್ಷಣೆ ನಾವೇ ಮಾಡುತ್ತೇವೆ ಬೇರೆ ಯಾರು ಇಲ್ಲಾ. ಮೀಸಲಾತಿ ಮಾಡಬೇಡಿದರೆ ಜೇನು ಗೂಡಿಗೆ ಕೈಹಾಕಿದಂತೆ ಎಂದರು. ಆದರೆ ನಾನು ಜೇನುಗೂಡಿಗೆ ಕೈ ಹಾಕುತ್ತೇನೆ. ನನ್ನ ಕೈಗೆ ಕಚ್ಚಲಿ, ರಕ್ತ ಬರಲಿ. ಆ ಜೇನು ತುಪ್ಪ ತಗೊಂಡು ಆ ಸಮುದಾಯಕ್ಕೆ ಕೊಡುವ ಕೆಲಸ ಮಾಡಿದ್ದೇನೆ ಎಂದರು.

ಸತತ 2 ಬಾರಿ ಬೆಳಗಾವಿ ಜಿಲ್ಲೆಯಲ್ಲಿ ದೊಡ್ಡ ಪ್ರವಾಹ ಬಂದಿತ್ತು. ದೊಡ್ಡ ಪ್ರಮಾಣದ ಬೆಳೆ ನಾಶವಾಗಿತ್ತು, ಮನೆಗಳು ಸಹ ಬಿದ್ದಿದ್ದವು. ಬಿ.ಎಸ್. ಯಡಿಯೂರಪ್ಪ 5 ಲಕ್ಷ ರೂ. ಪರಿಹಾರ ಕೊಡಲು ತೀರ್ಮಾನಿಸಿದರು. ರಾಜ್ಯ ಸರ್ಕಾರ ಅಂದು ಸುಮಾರು 4 ಲಕ್ಷ ರೂಪಾಯಿ ನೀಡಿತ್ತು. ಉಳಿದ ಯಾವ ಸರ್ಕಾರ ಇದ್ದಾಗ ಇಷ್ಟು ಹಣ ನೀಡಲು ಆಗಿಲ್ಲ. ಮಲಪ್ರಭಾ ನದಿಗೆ ರಕ್ಷಣಾ ಗೋಡೆ ಕಟ್ಟಲು 106 ಕೋಟಿ ಹಣ ನೀಡಲಾಗಿದೆ.

ಇದನ್ನೂ ಓದಿ: ಬೆಳಗಾವಿ ಗಡಿ ಭಾಗಕ್ಕೆ ಮಹಾರಾಷ್ಟ್ರ ಸರ್ಕಾರ ಹಣ ಬಿಡುಗಡೆ ಮಾಡಿದರೆ ನಾನೇಕೆ ರಾಜೀನಾಮೆ ನೀಡಲಿ; ಡಿಕೆಶಿಗೆ ಬೊಮ್ಮಾಯಿ ಪ್ರಶ್ನೆ

ನಮ್ಮ ಸರ್ಕಾರಕ್ಕೆ ಬೆಳಗಾವಿಯ ಜನರ ಮೇಲಿರುವ ಪ್ರೀತಿ

ಅಧಿವೇಶನ ವೇಳೆ ಬೆಳೆ ಪರಿಹಾರ ಎಷ್ಟು ಕೊಡುತ್ತಿರೆಂದು ಪ್ರಶ್ನಿಸಿದ್ದರು. ಕೇಂದ್ರದ 2 ಪಟ್ಟು ಕೊಟ್ಟೆ ಎಂದೆ, ಎಲ್ಲರೂ ಬಾಯಿ ಮುಚ್ಚಿಕೊಂಡರು. ಇದುವರೆಗೆ ಯಾವುದೇ ರಾಜ್ಯ ಸರ್ಕಾರ ಇಷ್ಟು ಪರಿಹಾರ ಕೊಟ್ಟಿಲ್ಲ. ಇದು ನಮ್ಮ ಬಿಜೆಪಿ ಸರ್ಕಾರದ ಬದ್ಧತೆ. ಬೆಳಗಾವಿ ಜಿಲ್ಲೆಯಲ್ಲಿ 7-8 ಸಾವಿರ ಜನರಿಗೆ ಪರಿಹಾರ ಸಿಕ್ಕಿರಲಿಲ್ಲ. ಮತ್ತೊಮ್ಮೆ ವರದಿ ಕಳಿಸಿದ ಕೂಡಲೇ 200 ಕೋಟಿ ರೂ. ಬಿಡುಗಡೆ ಮಾಡುತ್ತೇವೆ. 7,768 ಮನೆಗಳಿಗೆ ಹೆಚ್ಚುವರಿಯಾಗಿ ನಾವು ಪರಿಹಾರ ಕೊಟ್ಟಿದ್ದೇವೆ. ಇದು ನಮ್ಮ ಸರ್ಕಾರಕ್ಕೆ ಬೆಳಗಾವಿಯ ಜನರ ಮೇಲಿರುವ ಪ್ರೀತಿ ಎಂದು ಹೇಳಿದರು.

ಇದನ್ನೂ ಓದಿ: ಹೆಚ್​ಡಿ ರೇವಣ್ಣ, ಶಾಸಕ ಶಿವಲಿಂಗೇಗೌಡ ಆಡಿಯೋ ವೈರಲ್​: ಪಕ್ಷ ಬಿಟ್ಟು ಹೋಗದಂತೆ ಮನವೊಲಿಸಿರುವ ರೇವಣ್ಣ

ಹಿಂದಿನವರು ಬರೀ ಬಾಯಿ ಮಾತಿಂದ ಪರಿಹಾರ ಕೊಡುತ್ತಿದ್ದರು. ಕಷ್ಟದ ವೇಳೆ ಧಾವಿಸಿ ಪರಿಹಾರ ಕೊಡುವುದು ಸರ್ಕಾರದ ಜೀವಂತಿಕೆ. ಹಿಂದಿನ ಕಾಂಗ್ರೆಸ್​ ಸರ್ಕಾರ ಇಂತಹ ಸಂದರ್ಭದಲ್ಲಿ ಸತ್ತು ಹೋಗಿದ್ದವು ಎಂದು ಕಾಂಗ್ರೆಸ್ ವಿರುದ್ಧ ಸಿಎಂ ಬೊಮ್ಮಾಯಿ ತೀವ್ರ ವಾಗ್ದಾಳಿ ಮಾಡಿದರು.

ಉಚಿತ ಶಿಕ್ಷಣ ವ್ಯವಸ್ಥೆ

ಮುಂದಿನ ವರ್ಷದಿಂದ ಸರ್ಕಾರಿ ಕಾಲೇಜುಗಳಲ್ಲಿ ಎಲ್ಲಾ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುತ್ತಿದ್ದೇವೆ. 8 ಲಕ್ಷ 80 ಸಾವಿರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತೇವೆ. ಶಾಲೆಗೆ ಹೋಗಲು ಮಕ್ಕಳಿಗೆ ಬಸ್​ಗಳ ಸಮಸ್ಯೆಯಿದ್ದು, ಈ ವರ್ಷ ಎಲ್ಲಾ ಶಾಲಾ ಮಕ್ಕಳಿಗೆ ಎರಡು ಸಾವಿರ ಬಸ್‌ಗಳನ್ನು ನೀಡಲಾಗುತ್ತಿದೆ. ಹೀಗೆ ಜನಪರವಾಗಿರುವ ಕೆಲಸವನ್ನ ನಮ್ಮ ಸರ್ಕಾರ ಮಾಡಿದೆ. ಕಂದಾಯ ಗ್ರಾಮಗಳನ್ನ ಮಾಡಿ ಹಕ್ಕು ಪತ್ರ ಕೊಡುತ್ತಿದ್ದೇವೆ. ಇವತ್ತು ಹನ್ನೊಂದು ಸಾವಿರ ಜನರಿಗೆ ಹಕ್ಕು ಪತ್ರ ನೀಡಿದ್ದೇವೆ. ದಾವಣಗೆರೆಯಲ್ಲಿ ಒಂದು ಲಕ್ಷ ಹಕ್ಕು ಪತ್ರಗಳನ್ನ ನೀಡುತ್ತೇವೆ ಎಂದು ಮಾಹಿತಿ ನೀಡಿದರು.

ಐದು ವರ್ಷ ನಿಮ್ಮ ಕೈಯಲ್ಲಿ ಆಡಳಿತ ಇತ್ತು, ನೀವು ಮಾಡಿದ್ದರೆ ನಾವು ಮಾಡುತ್ತಿರಲಿಲ್ಲ. ಸಮಿತಿ ಮಾಡಿದ್ದೇವೆ ಅಂತೀರಿ, ಸಮಿತಿಯಿಂದ ಯಾವ ಪರಿಹಾರ ಆಗಿಲ್ಲ. ಕಾಡಂಚಿನಲ್ಲಿರುವವರಿಗೆ ಇದೇ ರೀತಿ ಹಕ್ಕು ಪತ್ರವನ್ನ ನಾನೇ ಬಂದು ವಿತರಣೆ ಮಾಡುತ್ತೇನೆ. ಬಡವರ ಕೆಲಸ ಮಾಡುವಾಗ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.