ಬೆಳಗಾವಿ ರೈತರ ಪ್ರತಿಭಟನಾ ಹಾದಿಯೂ ಭಿನ್ನ, ನಡಿಗೆಯೂ ಭಿನ್ನ
ಬೆಳಗಾವಿ: ಕೃಷ್ಣಾ ನದಿಯ ಪ್ರವಾಹಕ್ಕೆ ಸಿಕ್ಕಿ ಜಿಲ್ಲೆಯ ರೈತರ ಜೀವನ ಪತರಗುಟ್ಟಿದೆ. ಪರಿಹಾರವನ್ನೇ ಕಾಣದೆ ಜನ ಜೀವನ ತತ್ತರಿಸಿದೆ. ಈ ಮಧ್ಯೆ, ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ಕಾಂಗ್ರೆಸ್ ಭಾರಿ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಸಲುವಾಗಿ ರೈತನೊಬ್ಬ ತನ್ನ ಕಾಲಿಗೆ ಕಟ್ಟಿಗೆ ಕಟ್ಟಿಕೊಂಡು ಜಮಖಂಡಿಯಿಂದ ನಗರಕ್ಕೆ ನಡೆದುಬಂದಿದ್ದಾನೆ. ಪ್ರತಿಭಟನೆಯ ಹಾದಿಯೂ ಭಿನ್ನ, ನಡಿಗೆಯೂ ಭಿನ್ನ ಜಮಖಂಡಿ ಮೂಲದ ರೈತ ಬಾಹುಬಲಿ ನೆರೆ ಪರಿಹಾರ ಕೋರಿ ಹೀಗೆ ವಿಭಿನ್ನ ನಡಿಗೆ ಹಾಕಿದ್ದಾನೆ. ಮಾಜಿ ಸಚಿವ ಎಸ್.ಆರ್.ಪಾಟೀಲ್ ಮತ್ತು ಶಾಸಕ ಆನಂದ […]
ಬೆಳಗಾವಿ: ಕೃಷ್ಣಾ ನದಿಯ ಪ್ರವಾಹಕ್ಕೆ ಸಿಕ್ಕಿ ಜಿಲ್ಲೆಯ ರೈತರ ಜೀವನ ಪತರಗುಟ್ಟಿದೆ. ಪರಿಹಾರವನ್ನೇ ಕಾಣದೆ ಜನ ಜೀವನ ತತ್ತರಿಸಿದೆ. ಈ ಮಧ್ಯೆ, ನೆರೆ ಪರಿಹಾರಕ್ಕಾಗಿ ಆಗ್ರಹಿಸಿ ಕಾಂಗ್ರೆಸ್ ಭಾರಿ ಪ್ರತಿಭಟನೆ ಹಮ್ಮಿಕೊಂಡಿದೆ. ಈ ಸಲುವಾಗಿ ರೈತನೊಬ್ಬ ತನ್ನ ಕಾಲಿಗೆ ಕಟ್ಟಿಗೆ ಕಟ್ಟಿಕೊಂಡು ಜಮಖಂಡಿಯಿಂದ ನಗರಕ್ಕೆ ನಡೆದುಬಂದಿದ್ದಾನೆ.
ಪ್ರತಿಭಟನೆಯ ಹಾದಿಯೂ ಭಿನ್ನ, ನಡಿಗೆಯೂ ಭಿನ್ನ ಜಮಖಂಡಿ ಮೂಲದ ರೈತ ಬಾಹುಬಲಿ ನೆರೆ ಪರಿಹಾರ ಕೋರಿ ಹೀಗೆ ವಿಭಿನ್ನ ನಡಿಗೆ ಹಾಕಿದ್ದಾನೆ. ಮಾಜಿ ಸಚಿವ ಎಸ್.ಆರ್.ಪಾಟೀಲ್ ಮತ್ತು ಶಾಸಕ ಆನಂದ ನ್ಯಾಮಗೌಡ ನೇತೃತ್ವದಲ್ಲಿ ಆಗಮಿಸಿದ ರೈತ ಬಾಹುಬಲ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದಾನೆ.
ನೆರೆ ಪರಿಹಾರಕ್ಕಾಗಿ ಆಗ್ರಹಿಸಿ, ಬಾಗಲಕೋಟೆ ಜಿಲ್ಲೆಯಿಂದ ಬೆಳಗಾವಿಗೆ ಆಗಮಿಸಿ ಕಾಂಗ್ರೆಸ್ ಪ್ರತಿಭಟನಾ ರ್ಯಾಲಿ ನಡೆಸಿದೆ. ಬಾಗಲಕೋಟೆ ಜಿಲ್ಲೆಯೂ ಪ್ರವಾಹಕ್ಕೆ ತುತ್ತಾಗಿದ್ದು, ಶಾಸಕ ಆನಂದ ನ್ಯಾಮಗೌಡರ್ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದೆ. ರ್ಯಾಲಿ, ಸೆ.21ರಂದು ಜಮಖಂಡಿಯಿಂದ ಹೊರಟಿತ್ತು. ಕಾಂಗ್ರೆಸ್ ಬಾವುಟ ಹಾಕಿಕೊಂಡು ಹಲಗಿ ಮತ್ತು ಸನಾಯಿ ಬಾರಿಸುತ್ತಾ ಸ್ಥಳೀಯ ಕೈ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಕಾಂಗ್ರೆಸ್ ರ್ಯಾಲಿಗೆ ಚುನಾವಣಾ ನೀತಿಸಂಹಿತೆ ತೊಡರುಗಾಲು ನೆರೆ ಪರಿಹಾರ ತರುವಲ್ಲಿ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯತೆಗೆ ರ್ಯಾಲಿಯಲ್ಲಿ ಭಾರಿ ಖಂಡನೆ ವ್ಯಕ್ತವಾಗಿದೆ. ಆದ್ರೆ ಕಾಂಗ್ರೆಸ್ ಪಕ್ಷದ ಈ ಪ್ರತಿಭಟನಾ ರ್ಯಾಲಿಗೆ ಚುನಾವಣಾ ನೀತಿಸಂಹಿತೆ ಅಡ್ಡಿಯಾಗಿದೆ. ಡಿಸಿ ಕಚೇರಿ ಮುಂದೆ ರ್ಯಾಲಿಗೆ ಅನುಮತಿ ಸಿಗದ ಹಿನ್ನೆಲೆ, ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನಾ ರ್ಯಾಲಿ ಮುಕ್ತಾಯಗೊಳ್ಳುವ ಅಂದಾಜಿದೆ.