Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಕೊಲೇಟ್ ಗ್ಯಾಂಗ್​ ಬೆನ್ನಲ್ಲೇ ಆ್ಯಕ್ಟೀವ್ ಆಯ್ತು ಜ್ಯೂಸ್ ಗ್ಯಾಂಗ್: ಕೆಎಸ್‌ಆರ್‌ಟಿಸಿ ಬಸ್​​ನಲ್ಲೇ ನಗನಾಣ್ಯ ದರೋಡೆ

ಇತ್ತೀಚೆಗೆ ಕರ್ನಾಟಕ ಗೋವಾ ಗಡಿಯಲ್ಲಿ ಓಡಾಡುವ ರೈಲಿನಲ್ಲಿ ಚಾಕೊಲೇಟ್ ಗ್ಯಾಂಗ್ ಆ್ಯಕ್ಟೀವ್​ ಆದ ಬೆನ್ನಲ್ಲೇ ಇದೀಗ ಜ್ಯೂಸ್ ಗ್ಯಾಂಗ್​ ಎಂಟ್ರಿ ಕೊಟ್ಟಿದೆ. ಜ್ಯೂಸ್​​ನಲ್ಲಿ ಮೂರ್ಛೆ ಬರುವ ಪದಾರ್ಥ ಮಿಶ್ರಣ ಮಾಡಿ ಪ್ರಜ್ಞೆ ತಪ್ಪಿಸಿ ಬಂಗಾರದ ಚೈನ್, ಬ್ಯಾಗ್, ಪರ್ಸ್ ಕದ್ದು ಪರಾರಿ ಆಗಿದ್ದಾರೆ. ಹುಬ್ಬಳ್ಳಿಯಿಂದ ಬೆಳಗಾವಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್​​ನಲ್ಲಿಯೇ ಕೃತ್ಯವೆಸಗಲಾಗಿದೆ.

ಚಾಕೊಲೇಟ್ ಗ್ಯಾಂಗ್​ ಬೆನ್ನಲ್ಲೇ ಆ್ಯಕ್ಟೀವ್ ಆಯ್ತು ಜ್ಯೂಸ್ ಗ್ಯಾಂಗ್: ಕೆಎಸ್‌ಆರ್‌ಟಿಸಿ ಬಸ್​​ನಲ್ಲೇ ನಗನಾಣ್ಯ ದರೋಡೆ
ಚಾಕೊಲೇಟ್ ಗ್ಯಾಂಗ್​ ಬೆನ್ನಲ್ಲೇ ಆ್ಯಕ್ಟೀವ್ ಆಯ್ತು ಜ್ಯೂಸ್ ಗ್ಯಾಂಗ್: ಕೆಎಸ್‌ಆರ್‌ಟಿಸಿ ಬಸ್​​ನಲ್ಲೇ ನಗನಾಣ್ಯ ದರೋಡೆ
Follow us
Sahadev Mane
| Updated By: ಗಂಗಾಧರ​ ಬ. ಸಾಬೋಜಿ

Updated on: May 22, 2024 | 3:12 PM

ಬೆಳಗಾವಿ, ಮೇ 22: ರಾಜ್ಯದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇತ್ತೀಚೆಗೆ ರೈಲಿನಲ್ಲಿ ಚಾಕೊಲೇಟ್ ಗ್ಯಾಂಗ್ ​​ಭಾರಿ ಸದ್ದು ಮಾಡಿತ್ತು. ಕಳೆದ ಕೆಲ ತಿಂಗಳ ಹಿಂದೆ ರೈಲಿನಲ್ಲಿ ಮತ್ತು ಬರುವ ಚಾಕಲೇಟ್​​ ನೀಡಿ ನಗನಾಣ್ಯವನ್ನು ಗ್ಯಾಂಗ್ ದೋಚಿತ್ತು. ಇದೀಗ ಆ ಗ್ಯಾಂಗ್ ಬಳಿಕ ಬಸ್​ನಲ್ಲಿ ಜ್ಯೂಸ್ ಗ್ಯಾಂಗ್ (Juice gang) ಆ್ಯಕ್ಟೀವ್ ಆಗಿದೆ. ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್​​ನಲ್ಲಿಯೇ ಜ್ಯೂಸ್ ಹಾಗೂ ಬಾಳೆ ಹಣ್ಣು ಕೊಟ್ಟು ನಗನಾಣ್ಯ ದೋಚಿ ಪರಾರಿಯಾಗಿರುವಂತಹ ಘಟನೆ ಹುಬ್ಬಳ್ಳಿಯಿಂದ ಬೆಳಗಾವಿಗೆ ಬರುತ್ತಿದ್ದ ಬಸ್ ನಲ್ಲಿ ನಡೆದಿದೆ.

ಸಂಜೀವ್ ಖೋತ (40) ಹಾಗೂ ಮತ್ತೋರ್ವ ಪ್ರಯಾಣಿಕರಿಂದ ಗ್ಯಾಂಗ್ ಸುಲಿಗೆ ಮಾಡಿದೆ. ಜ್ಯೂಸ್​​ನಲ್ಲಿ ಮೂರ್ಛೆ ಬರುವ ಪದಾರ್ಥ ಮಿಶ್ರಣ ಮಾಡಿ ಪ್ರಜ್ಞೆ ತಪ್ಪಿಸಿದ್ದು, ಬಂಗಾರದ ಚೈನ್, ಬ್ಯಾಗ್, ಪರ್ಸ್ ಕದ್ದು ಪರಾರಿ ಆಗಿದ್ದಾರೆ. ಸದ್ಯ ಹದಿನಾಲ್ಕು ಗಂಟೆಯಿಂದ ಸಂಪೂರ್ಣ ಪ್ರಜ್ಞಾಹೀನ‌ ಸ್ಥಿತಿಯಲ್ಲಿರುವ ಸಂಜೀವ್ ಖೋತಗೆ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಮತ್ತೋರ್ವನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಪ್ರಯಾಣಿಕರ ಸೊಗಿನಲ್ಲಿ ದರೋಡೆ: ಚಾಕೊಲೇಟ್ ಗ್ಯಾಂಗ್ ಬಂಧನ

ಇತ್ತೀಚೆಗೆ ಕರ್ನಾಟಕ ಗೋವಾ ಗಡಿಯಲ್ಲಿ ಓಡಾಡುವ ರೈಲಿನಲ್ಲಿ ಚಾಕೊಲೇಟ್ ಗ್ಯಾಂಗ್ ಆ್ಯಕ್ಟೀವ್ ಆಗಿತ್ತು. ರೈಲಿನಲ್ಲಿ ಪ್ರಯಾಣಿಕರ ಸೊಗಿನಲ್ಲಿ ಬಂದು ದರೋಡೆ ಮಾಡ್ತಿದ್ದ ಗ್ಯಾಂಗ್​​ನ ಮಸಲತ್ತಿಗೆ ಸಿಕ್ಕು ಎಂಟು ಜನ ನರಳಾಡಿ ಹೋಗಿದ್ದರು. ಬಳಿಕ ಆ ಖತರ್ನಾಕ್ ಚಾಕೊಲೇಟ್ ಗ್ಯಾಂಗ್ ಪೊಲೀಸರ ಖೆಡ್ಡಾಗೆ ಬಿದ್ದಿತ್ತು.

ಇದನ್ನೂ ಓದಿ: ಬೆಳಗಾವಿ: ರೈಲಿನಲ್ಲಿ ಪ್ರಯಾಣಿಸುವವರೇ ಎಚ್ಚರ, ಮತ್ತೆ ಆ್ಯಕ್ಟೀವ್ ಆಗಿದೆ ಚಾಕೊಲೇಟ್ ಗ್ಯಾಂಗ್; ಇಲ್ಲಿದೆ ವಿವರ

ಚಾಕೊಲೇಟ್ ಕರ್ನಾಟಕ ಗೋವಾ ಗಡಿಯಲ್ಲಿ ರೇಲ್ವೆ ಪೊಲೀಸರು ಮತ್ತು ಪ್ರಯಾಣಿಕರ ನಿದ್ದೆಗೆಡಸಿತ್ತು. ಪ್ರಯಾಣಿಕರ ಸೊಗಿನಲ್ಲಿ ಬರ್ತಿದ್ದ ಗ್ಯಾಂಗ್ ಬೇರೆ ಪ್ರಯಾಣಿಕರ ಜತೆಗೆ ಗೆಳೆತನ ಬೆಳಸಿ ತಮ್ಮವರಂತೆ ವರ್ತನೆ ಮಾಡಿ ಚಾಕೊಲೇಟ್ ನೀಡಿ ಪ್ರಜ್ಞೆ ತಪ್ಪಿಸುತ್ತಿದ್ದರು. ಹೀಗೆ ಪ್ರಜ್ಞೆ ತಪ್ಪಿದ ಬಳಿಕ ಪ್ರಯಾಣಿಕರ ಬಳಿ ಇದ್ದ ಹಣ, ಮೊಬೈಲ್, ಒಡವೆಗಳನ್ನ ದೋಚಿ ಪರಾರಿ ಆಗುತ್ತಿದ್ದರು.

ಇದನ್ನೂ ಓದಿ: ಇನ್ಸ್​ಪೆಕ್ಟರ್​, ಎಸಿಪಿಗೆ ಪೊಲೀಸ್​ ಪೇದೆಯಿಂದ ಕೊಲೆ ಬೆದರಿಕೆ!

ಆ ಗ್ಯಾಂಗ್ ರೈಲ್ವೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದು ಜೈಲು ಸೇರಿದೆ. ಈ ಖರ್ತನಾಕ್ ಖದೀಮರನ್ನ ಬಂಧಿಸಲು ಗೋವಾ, ಬೆಳಗಾವಿ ರೈಲ್ವೆ ಪೊಲೀಸರು ಎರಡು ವಾರಗಳಿಂದ ಹಗಲು ರಾತ್ರಿ ನಿದ್ದೆಯಿಲ್ಲದೆ ಕಾರ್ಯಾಚರಣೆ ನಡೆಸಿ ಕಡೆಗೂ ಮೂರು ಜನ ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
ಗ್ಲೋಬಲ್ ಕನ್ನಡಿಗನಿಗೆ ಯೂಟ್ಯೂಬ್​ನಿಂದ ಬರ್ತಿರೋದೆಷ್ಟು?
ಗ್ಲೋಬಲ್ ಕನ್ನಡಿಗನಿಗೆ ಯೂಟ್ಯೂಬ್​ನಿಂದ ಬರ್ತಿರೋದೆಷ್ಟು?
ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು