Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Rains: ಬೆಂಗಳೂರಿನ ಹಲವೆಡೆ ಜಿಟಿಜಿಟಿ ಮಳೆ: ಸಿಲಿಕಾನ್ ಸಿಟಿ ಫುಲ್ ಕೂಲ್ ಕೂಲ್

ಸರ್ಕಾರ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಸಿಟಿ ರೌಂಡ್ಸ್​ ವೇಳೆ ಮಳೆರಾಯ ಅಡ್ಡಿಪಡಿಸಿದ್ದು, ನಗರದ ಹಲವೆಡೆ ಜಿಟಿಜಿಟಿ ಮಳೆ ಶುರುವಾಗಿದೆ. ಸಿಲ್ಕ್ ಬೋರ್ಡ್, ಹೆಚ್​ಎಸ್​ಆರ್​ ಲೇಔಟ್ ಕಡೆ ಜಿಟಿಜಿಟಿ ಮಳೆ ಆರಂಭವಾಗಿದೆ.

Bengaluru Rains: ಬೆಂಗಳೂರಿನ ಹಲವೆಡೆ ಜಿಟಿಜಿಟಿ ಮಳೆ: ಸಿಲಿಕಾನ್ ಸಿಟಿ ಫುಲ್ ಕೂಲ್ ಕೂಲ್
ಬೆಂಗಳೂರಿನ ಹಲವೆಡೆ ಜಿಟಿಜಿಟಿ ಮಳೆ: ಸಿಲಿಕಾನ್ ಸಿಟಿ ಫುಲ್ ಕೂಲ್ ಕೂಲ್
Follow us
Anil Kalkere
| Updated By: ಗಂಗಾಧರ​ ಬ. ಸಾಬೋಜಿ

Updated on:May 22, 2024 | 4:08 PM

ಬೆಂಗಳೂರು, ಮೇ 22: ಸರ್ಕಾರ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​ ಸಿಟಿ ರೌಂಡ್ಸ್​ ವೇಳೆ ಮಳೆರಾಯ ಅಡ್ಡಿಪಡಿಸಿದ್ದು, ನಗರದ ಹಲವೆಡೆ ಜಿಟಿಜಿಟಿ ಮಳೆ (Rain) ಶುರುವಾಗಿದೆ. ಸಿಲ್ಕ್ ಬೋರ್ಡ್, ಹೆಚ್​ಎಸ್​ಆರ್​ ಲೇಔಟ್, ಟೌನ್ ಹಾಲ್, ಕೆಆರ್ ಮಾರ್ಕೆಟ್, ಕಾರ್ಪೋರೇಷನ್, ಕೆಆರ್​ ಸರ್ಕಲ್​ ಸೇರಿ ಬೆಂಗಳೂರಿನ (Bengaluru) ಹಲವೆಡೆ ಮಳೆ ಆರಂಭವಾಗಿದೆ. ಸದ್ಯ ಮಳೆ ಹಿನ್ನಲೆ ಸಿಲಿಕಾನ್ ಸಿಟಿ ಕೂಲ್ ಕೂಲ್​ ಆಗಿದ್ದು, ಇನ್ನೂ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆ ಆಗಲಿದೆ.

ಇನ್ನು ನಗರದಲ್ಲಿ ಬೆಳಿಗ್ಗೆಯಿಂದಲೇ ನಗರದಲ್ಲಿ ಎಲ್ಲೆಡೆ ಮೋಡ ಕವಿದ ವಾತಾವರಣವಿತ್ತು. ಸದ್ಯ ಮಳೆ ಆದರೂ ಕೂಡ ಇನ್ನು ಮೋಡ ಕವಿದ ವಾತಾವರಣವಿದ್ದು ಸಂಜೆ ಮತ್ತೆ ಮಳೆ ಆಗುವ ಸಾಧ್ಯತೆ ಇದೆ.

ಸಿಎಂ, ಡಿಸಿಎಂ ಬೆಂಗಳೂರು ಸಿಟಿ ರೌಂಡ್ಸ್‌ಗೆ ಮಳೆರಾಯ ಅಡ್ಡಿ

ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್​​ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಈ ವೇಳೆ ಮಳೆರಾಯ ಅಡ್ಡಿಪಡಿಸಿದ್ದಾನೆ. ಬೆಳ್ಳಂದೂರು, ಯಮಲೂರು, ದೊಮ್ಮಲೂರು, ಅಗರ ಸುತ್ತಮುತ್ತ ಮಳೆ ಧಾರಾಕಾರ ಮಳೆ ಆಗಿದೆ. ಹೀಗಾಗಿ ಸಿಟಿ ರೌಂಡ್ಸ್ ಮೊಟಕುಗೊಳಸಿದರು.

ಇದನ್ನೂ ಓದಿ: ಬೆಂಗಳೂರು: ಮಳೆಯಿಂದಾಗಿ ಮತ್ತೆ ಬಾಯ್ದೆರೆದ ರಸ್ತೆಗುಂಡಿಗಳು, 15 ದಿನದ ಮಳೆಗೆ 5,500 ರಸ್ತೆಗುಂಡಿ ಸೃಷ್ಟಿ

ಕಳೆದ ಒಂದು ವಾರದಿಂದ ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಗೆ ಹಲವೆಡೆ ಅವಾಂತರಗಳೇ ಸಂಭವಿಸಿವೆ. ಪ್ರತಿಷ್ಠಿತ ವಿಲ್ಲಾಗಳೇ ನೀರುಪಾಲಾಗಿವೆ. ಮಳೆಯಿಂದಾಗಿ ಬೆಳೆಗಳೆಲ್ಲಾ ನಾಶವಾಗಿವೆ. ರಸ್ತೆಗಳು ಕೆರೆಗಳಂತಾಗಿವೆ. ಮನೆಯ ಮುಂದೆ ನದಿಯಂತೆ ನೀರು ಹರಿಯುತ್ತಿದೆ. ರಾಜ್ಯದಲ್ಲಿ ಸುರಿಯುತ್ತಿರುವ ಮಳೆ ತಂಪೆರೆಯುವ ಜೊತೆಗೆ ಹಲವು ಅವಾಂತರಗಳನ್ನು ಸೃಷ್ಟಿಸಿದೆ.

ಇದನ್ನೂ ಓದಿ: ಕೆಲವೇ ದಿನಗಳ ಮಳೆಗೆ ಬೆಂಗಳೂರಿನಲ್ಲಿ 800 ವಿದ್ಯುತ್ ಕಂಬ ಧರೆಗೆ! ವಾಲಿವೆ ಹಲವಾರು ಕಂಬ

ಮೈಸೂರು ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಪಿರಿಯಾಪಟ್ಟಣದ ಎಲ್ಲಾ ಕೆರೆಕಟ್ಟೆಗಳು ಕೋಡಿ ಒಡೆದಿವೆ. ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಆಟೋ ಉಳಿಸಿಕೊಳ್ಳಲು ಯುವಕ ಹರಸಾಹಸ ಪಟ್ಟಿದ್ದಾನೆ. ಹಗ್ಗದಲ್ಲಿ ಕಟ್ಟಿ ಆಟೋವನ್ನು ಉಳಿಸಿಕೊಂಡಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:36 pm, Wed, 22 May 24

Daily Devotional: ಇಂದು ಸೂರ್ಯಗ್ರಹಣ ಶನಿ ಪತ ಬದಲಾವಣೆ ಹೇಗೆ?
Daily Devotional: ಇಂದು ಸೂರ್ಯಗ್ರಹಣ ಶನಿ ಪತ ಬದಲಾವಣೆ ಹೇಗೆ?
Daily Horoscope: ಕರ್ಮಕಾರಕ ಶನಿ ಕುಂಭದಿಂದ ಮೀನ ರಾಶಿಯತ್ತ ಪ್ರವೇಶ
Daily Horoscope: ಕರ್ಮಕಾರಕ ಶನಿ ಕುಂಭದಿಂದ ಮೀನ ರಾಶಿಯತ್ತ ಪ್ರವೇಶ
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಪ್ರೇಕ್ಷಕರ ನಗು-ಅಳು ನೋಡಿ ‘ಮನದ ಕಡಲು’ ನಾಯಕಿಯರು ಹೇಳಿದ್ದೇನು ನೋಡಿ..
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
ಟಿವಿ9 ನೆಟ್​ವರ್ಕ್ ಜಾಗತಿಕ ಪ್ರೇಕ್ಷಕರನ್ನು ಸೃಷ್ಟಿಸುತ್ತಿದೆ; ಪಿಎಂ ಮೋದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಯುವಕರು, ಮಹಿಳೆಯರು, ಭಾರತೀಯ ವಲಸಿಗರ ಮೇಲೆ ಮೋದಿ ಗಮನ; ಬರುಣ್ ದಾಸ್
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಪ್ರಧಾನಿ ಮೋದಿ, ಅಮಿತ್ ಶಾ ಗಮನಕ್ಕೆ ತಾರದೆ ಯತ್ನಾಳ್ ಉಚ್ಚಾಟನೆ: ಬೆಂಬಲಿಗರು
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಮಚ್ಚು ಹಿಡಿದ ಕೇಸ್: ರಜತ್, ವಿನಯ್ ಗೌಡಗೆ ಜಾಮೀನು ಸಿಕ್ಕಿದ್ದು ಹೇಗೆ?
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಯತ್ನಾಳ್​ರನ್ನು ಉಚ್ಚಾಟಿಸಿ ವರಿಷ್ಠರು ಉತ್ತಮ ಕೆಲಸ ಮಾಡಿದ್ದಾರೆ: ಗೋಪಾಲ
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್
ಪ್ರಧಾನಿಗೆ ವೇದಿಕೆಯಲ್ಲಿ ಗೌರವಿಸಿದ ಡಾ. ರಾಮೇಶ್ವರ್ ರಾವ್