ಗೃಹಲಕ್ಷ್ಮಿ ಹಣದಲ್ಲಿ ಊಟ ಹಾಕಿಸಿದ್ದ ಅಜ್ಜಿಯನ್ನು ಭೇಟಿಯಾದ ಸಿಎಂ: ಅಕ್ಕಾತಾಯಿ ಬೇಡಿಕೆ ಇಟ್ಟಿದ್ದೇನು ಗೊತ್ತಾ?

| Updated By: ಗಂಗಾಧರ​ ಬ. ಸಾಬೋಜಿ

Updated on: Aug 26, 2024 | 9:25 PM

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ವೃದ್ಧೆಯಾದ ಅಕ್ಕಾತಾಯಿ ಲಂಗೋಟಿ ಅವರು ತನ್ನ ಹತ್ತು ಕಂತಿನ ಗೃಹಲಕ್ಷ್ಮಿ ಹಣವನ್ನ ಕೂಡಿಟ್ಟು ನಿನ್ನೆ ಗ್ರಾಮದೇವತೆಗೆ ಪೂಜೆ ಸಲ್ಲಿಸಿ ಊರಿಗೆ ಹೋಳಿಗೆ ಊಟ ಹಾಕಿಸಿದ್ದರು. ಇಂದು ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಗೃಹಲಕ್ಷ್ಮೀ ಯೋಜನೆ ನಿಲ್ಲಿಸಬೇಡಿ ಎಂದು ಸಿಎಂಗೆ ಮನವಿ ಮಾಡಿದ್ದಾರೆ.

ಗೃಹಲಕ್ಷ್ಮಿ ಹಣದಲ್ಲಿ ಊಟ ಹಾಕಿಸಿದ್ದ ಅಜ್ಜಿಯನ್ನು ಭೇಟಿಯಾದ ಸಿಎಂ: ಅಕ್ಕಾತಾಯಿ ಬೇಡಿಕೆ ಇಟ್ಟಿದ್ದೇನು ಗೊತ್ತಾ?
ಗೃಹಲಕ್ಷ್ಮಿ ಹಣದಲ್ಲಿ ಊಟ ಹಾಕಿಸಿದ್ದ ಅಜ್ಜಿಯನ್ನು ಭೇಟಿಯಾದ ಸಿಎಂ, ಅಕ್ಕಾತಾಯಿ ಬೇಡಿಕೆ ಇಟ್ಟಿದ್ದೇನು ಗೊತ್ತಾ?
Follow us on

ಬೆಳಗಾವಿ, ಆಗಸ್ಟ್​​ 26: ಗೃಹಲಕ್ಷ್ಮೀ ಹಣದಿಂದ ಹೋಳಿಗೆ ಊಟ ಹಾಕಿಸಿದ್ದ ಅಕ್ಕಾತಾಯಿ ಲಂಗೋಟಿಯನ್ನು ಸಿಎಂ ಸಿದ್ದರಾಮಯ್ಯ (Siddaramaiah) ಇಂದು ಬೆಳಗಾವಿ ಏರ್​ಪೋರ್ಟ್​ನಲ್ಲಿ ಭೇಟಿ ಮಾಡಿದ್ದಾರೆ. ಅಕ್ಕಾತಾಯಿಯನ್ನು ಸಿಎಂಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪರಿಚಯಿಸಿದರು. ಈ ವೇಳೆ​​ ಸಿಎಂಗೆ ಕಂಬಳಿ ಹೊದಿಸಿ, ಹಾರ ಹಾಕಿ ಹೋಳಿಗೆ ತಿನ್ನಿಸಿದ್ದಾರೆ. ಊಟ ಹಾಕಿಸಿದ ವಿಚಾರ ತಿಳಿದ ಸಿಎಂ ಸಂತಸ ವ್ಯಕ್ತಪಡಿಸಿದ್ದಾರೆ. ಗೃಹಲಕ್ಷ್ಮೀ ಯೋಜನೆ ನಿಲ್ಲಿಸಬೇಡಿ ಎಂದು ಅಕ್ಕಾತಾಯಿ ಮನವಿ ಮಾಡಿದ್ದು, ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲವೆಂದು ಸಿಎಂ ಭರವಸೆ ನೀಡಿದ್ದಾರೆ.

ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ವೃದ್ಧೆಯಾದ ಅಕ್ಕಾತಾಯಿ ಲಂಗೋಟಿ ಅವರು ತನ್ನ ಹತ್ತು ಕಂತಿನ ಗೃಹಲಕ್ಷ್ಮಿ ಹಣವನ್ನ ಕೂಡಿಟ್ಟು ನಿನ್ನೆ ಗ್ರಾಮದೇವತೆಗೆ ಪೂಜೆ ಸಲ್ಲಿಸಿ ಊರಿಗೆ ಹೋಳಿಗೆ ಊಟ ಹಾಕಿಸಿದ್ದರು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ಮಾಡಿ ಮಾತನಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಹೆಚ್.ಡಿ.ಕುಮಾರಸ್ವಾಮಿ ಹಿಟ್​ ಮತ್ತು ರನ್​ ಕೇಸ್​ ಇದ್ದಂತೆ: ಸಿಎಂ ವಾಗ್ದಾಳಿ

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನಮಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಜೈಲಿಗೆ ಹಾಕುವ ಉದ್ದೇಶವಿಲ್ಲ. ಕಾನೂನು ಉಲ್ಲಂಘನೆ ಮಾಡಿದರೆ ಏನು ಮಾಡುತ್ತಾರೆ? 100 ಸಿದ್ದರಾಮಯ್ಯ ಬಂದ್ರೂ ಬಂಧಿಸಲು ಆಗಲ್ಲ ಅಂದ್ರು. ಬಂಧಿಸಲು ಒಬ್ಬ ಕಾನ್ಸ್​ಟೇಬಲ್​​ ಸಾಕು ಎಂದು ಹೇಳಿದ್ದೆ. ಹೆಚ್.ಡಿ.ಕುಮಾರಸ್ವಾಮಿ ಹಿಟ್​ ಮತ್ತು ರನ್​ ಕೇಸ್​ ಇದ್ದಂತೆ. ಯಾವುದೇ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದಿಲ್ಲ ಎಂದು ವಾಗ್ದಾಳಿ ಮಾಡಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಿಂದ ಇಡೀ ಊರಿಗೆ ಹೋಳಿಗೆ ಊಟ ಹಾಕಿಸಿದ ಅಜ್ಜಿ

ರಾಜಕೀಯ ವೈರಿಗಳಿಂದ ನನಗೆ ಮಸಿ ಬಳಿಯುವ ಯತ್ನ ಮಾಡಲಾಗುತ್ತಿದೆ. ನಾನು ದಾಖಲೆ ತಿದ್ದಿದ್ದರೆ ಹೆಚ್​ಡಿ ಕುಮಾರಸ್ವಾಮಿ ಕೋರ್ಟ್​ಗೆ ಹೋಗಲಿ. ದೇವರಾಜು ಎಂಬುವರಿಂದ ನನ್ನ ಬಾಮೈದ ಖರೀದಿಸಿದ್ದ. ಆ ಭೂಮಿಯನ್ನ ನನ್ನ ಪತ್ನಿಗೆ ನೀಡಿದ್ದ. ಅದು ಕುಮಾರಸ್ವಾಮಿ ಜಮೀನಾ ಎಂದು ಸಿಎಂ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಹಣದಿಂದ ಊರಿಗೆ ಊಟ ಹಾಕಿಸಿದ ಅಜ್ಜಿಗೆ ಕರೆ ಮಾಡಿ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್

ಸೈಟ್​ ಹಂಚಿದವರು ಯಾರು ಮುಡಾ ಅಲ್ವಾ?. ಆವಾಗ ಅಧಿಕಾರದಲ್ಲಿ ಇದ್ದವರು ಯಾರು? ಕುಮಾರಸ್ವಾಮಿ ಬಳಿ ದಾಖಲೆ ಇದ್ರೆ ಹೋಗಿ ಕೊಡಲಿ. ಮುಡಾ ಅಕ್ರಮದ ತನಿಖೆಗೆ ರಚಿಸಿರುವ ಆಯೋಗಕ್ಕೆ ನೀಡಲಿ ಎಂದು ಕಿಡಿಕಾರಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.