ಹೆಚ್ಡಿ ಕುಮಾರಸ್ವಾಮಿ ಕೆಡಿಪಿ ಮೀಟಿಂಗ್ಗೆ ಗೈರಾದರೆ ಎನ್ ಚಲುವರಾಯಸ್ವಾಮಿ ದಿಶಾ ಸಭೆಗೆ!
ಮಂಡ್ಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನಡೆಸಿದ ಕೆಡಿಪಿ ಸಭೆಗೆ ಮಂಡ್ಯದ ಸಂಸದ ಗೈರಾಗಿದದ್ದರು. ಹಾಗಾಗಿ ಇವತ್ತು ಚಲುವರಾಯಸ್ವಾಮಿಯ ಟಿಟ್ ಫಾರ್ ಟ್ಯಾಟ್? ಆದರೆ, ರಾಜ್ಯದ ಅಭಿವೃದ್ಧಿ ವಿಷಯ ಬಂದಾಗ ನಮ್ಮ ನಾಯಕರು ತಮ್ಮ ಪ್ರತಿಷ್ಠೆಗಳನ್ನು ಪಕ್ಕಕ್ಕಿಟ್ಟು ಜೊತೆಯಾಗಿ ಕೆಲಸ ಮಾಡಬೇಕು. ರಾಜಕೀಯ ವೈಷಮ್ಯ ಅಭಿವೃದ್ಧಿ ಕಾರ್ಯಗಳಿಗೆ ತೊಡಕಾಗಬಾರದು.
ಮಂಡ್ಯ: ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿಯವರು ಇಂದು ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ದಿಶಾ ಸಭೆ ನಡೆಸಿದ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು. ಮಂಡ್ಯದ ಲೋಕಸಭಾ ಸದಸ್ಯರಾಗಿರುವ ಕುಮಾರಸ್ವಾಮಿಯವರು ಹಿಂದಿನ ಲೋಕಸಭಾ ಸದಸ್ಯರ ಅವಧಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಗಳು ಅನುಷ್ಠಾನಗೊಂಡಿರುವ ಬಗ್ಗೆ ಮಾಹಿತಿ ಸಂಗ್ರಹಿಸಿರುವುದಾಗಿ ಹೇಳಿದರು. ಹಳೆಯ ಯೋಜನೆಗಳಲ್ಲಿ ಹಲವು ಶೇಕಡ 100 ರಷ್ಟು ಜಾರಿಗೆ ಬಂದಿವೆ ಎಂದು ಹೇಳಿದ ಅವರು ಮುಂದಿನ ಯೊಜನೆಗಳನ್ನು ಜಾರಿಗೊಳಿಸುವ ಬಗ್ಗೆ ಅಧಿಕಾರಿಗಳೊಂದಿಗೆ ರೂಪುರೇಷೆಗಳನ್ನು ಚರ್ಚಿಸಿರುವುದಾಗಿ ಹೇಳಿದರು. ಇವತ್ತಿನ ದಿಶಾ ಸಭೆಯಲ್ಲಿ ರಾಜ್ಯದ ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಕೂಡ ಭಾಗಿಯಾಗಬೇಕಿತ್ತು. ಆದರೆ ಅವರು ಆಬ್ಸೆಂಟ್ ಅಗಿ ಗಮನ ಸೆಳೆದರು. ಅವರ ಗೈರು ಹಾಜರಿಯ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಪ್ರಾಯಶಃ ಅವರು ಬ್ಯೂಸಿಯಾಗಿರಬಹುದು, ಅದರೆ ಬರಲಿಲ್ಲ ಅಂತ ಸಭೆ ನಡೆಸಿದರಲು ಅಗಲ್ಲ, ಅವರು ಬರದಿದ್ದರೂ ಸಭೆ ನಡೆಯುತ್ತದೆ ಎಂದು ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಕಪ್ಪುಚುಕ್ಕೆಯನ್ನು ವೈಟ್ನರ್ ನುಂಗಿತ್ತಾ! ಮುಡಾ ದಾಖಲೆ ಸಮೇತ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

