AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಥಣಿ ಕಿಡ್ನ್ಯಾಪ್​​ ಪ್ರಕರಣ: ಮಕ್ಕಳ ರಕ್ಷಣೆ, ಮೂವರ ಬಂಧನ, ಓರ್ವನ ಕಾಲಿಕೆ ಗುಂಡು

ಅಥಣಿಯಲ್ಲಿ ನಡೆದ ಇಬ್ಬರು ಮಕ್ಕಳ ಅಪಹರಣ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರ ಮೇಲೆ ಕಲ್ಲು ತೂರಿ ಪರಾರಿಯಾಗಲು ಯತ್ನಿಸಿದ ಹಿನ್ನಲ್ಲೆ ಒಬ್ಬ ಆರೋಪಿಯ ಕಾಲಿಗೆ ಗುಂಡು ಹಾರಿಸಲಾಗಿದೆ. ಮಕ್ಕಳನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಆರೋಪಿಗಳು ಮಕ್ಕಳ ತಂದೆಯಿಂದ ಹಣ ಪಡೆದು ವಂಚಿಸಿದ್ದರು ಎನ್ನಲಾಗಿದೆ.

ಅಥಣಿ ಕಿಡ್ನ್ಯಾಪ್​​ ಪ್ರಕರಣ: ಮಕ್ಕಳ ರಕ್ಷಣೆ, ಮೂವರ ಬಂಧನ, ಓರ್ವನ ಕಾಲಿಕೆ ಗುಂಡು
ಅಥಣಿ ಕಿಡ್ನ್ಯಾಪ್​​ ಪ್ರಕರಣ: ಮಕ್ಕಳ ರಕ್ಷಣೆ, ಮೂವರ ಬಂಧನ, ಓರ್ವನ ಕಾಲಿಕೆ ಗುಂಡು
Sahadev Mane
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 25, 2024 | 3:26 PM

Share

ಬೆಳಗಾವಿ, ಅಕ್ಟೋಬರ್​ 25: ಹಾಡಹಗಲೇ ಮನೆಗೆ ನುಗ್ಗಿ ಇಬ್ಬರು ಮಕ್ಕಳ ಕಿಡ್ನ್ಯಾಪ್​​ (Kidnap) ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಆರೋಪಿಗಳನ್ನು ಅಥಣಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೂವರ ಪೈಕಿ ಓರ್ವನ ಕಾಲಿಗೆ ಗುಂಡು ಹಾರಿಸಿ ಅರೆಸ್ಟ್​ ಮಾಡಲಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರ ಮೂಲದ ಸಾಂಬಾ ರಾವಸಾಬ್ ಕಾಂಬಳೆ, ಜಿಲ್ಲೆಯ ಚಿಕ್ಕೂಡಿ ಮೂಲದ ರವಿಕಿರಣ್​​ ಕಮಲಾಕರ್​​​ ಹಾಗೂ ಬಿಹಾರ ಮೂಲದ ಶಾರುಖ್​​​ ಶೇಕ್​​​ ಬಂಧಿತ ಆರೋಪಿಗಳು. ಕಿಡ್ನ್ಯಾಪ್ ಆಗಿದ್ದ ಸ್ವಸ್ತಿ(4), ವಿಯೋಮ್(3) ರಕ್ಷಣೆ ಮಾಡಲಾಗಿದೆ.

ಪಿಎಸ್ಐ ಮತ್ತು ಸಿಬ್ಬಂದಿ ಮೇಲೆ ಕಲ್ಲು ತೂರಿ ಪರಾರಿಗೆ ಯತ್ನ: ಆರೋಪಿ ಕಾಲಿಗೆ ಗುಂಡು

ಅಥಣಿಯ ಸ್ವಾಮಿ ಫ್ಲಾಟ್​ನಲ್ಲಿ ಮನೆಗೆ ನುಗ್ಗಿ ಇಬ್ಬರು ಮಕ್ಕಳನ್ನು ಖದೀಮರು ನಿನ್ನೆ ಕಿಡ್ನ್ಯಾಪ್ ಮಾಡಿದ್ದರು. ಇಂದು ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನು ಬಂಧನದ ವೇಳೆ ಪಿಎಸ್ಐ ಮತ್ತು ಸಿಬ್ಬಂದಿ ಮೇಲೆ ಕಲ್ಲು ತೂರಿ ಪರಾರಿಗೆ ಯತ್ನಿಸಲಾಗಿದೆ. ಹೀಗಾಗಿ ಆತ್ಮ ರಕ್ಷಣೆಗೆ ಆರೋಪಿ ಸಾಂಬಾ ಮೇಲೆ ಪೊಲೀಸರಿಂದ ಫೈರಿಂಗ್​ ಮಾಡಲಾಗಿದೆ. ಈ ವೇಳೆ ಪಿಎಸ್ಐ ಮತ್ತು ಓರ್ವ ಪೊಲೀಸ್ ಕಾನ್ಸ್​ಟೇಬಲ್​​​​ ಕೈಗೆ ಗಾಯವಾಗಿದ್ದು, ಇಬ್ಬರನ್ನು ಅಥಣಿ ತಾಲೂಕು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.​

ಇದನ್ನೂ ಓದಿ: ಬೆಳಗಾವಿ: ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ಮಕ್ಕಳ ಕಿಡ್ನ್ಯಾಪ್​

ಇನ್ನು ಮಕ್ಕಳ ತಂದೆ ವಿಜಯ್ ದೇಸಾಯಿ ಹಣ ಡಬಲ್ ಮಾಡಿಕೊಡೋದಾಗಿ ಕೋಟ್ಯಂತರ ರೂ. ಹಣವನ್ನು ಆರೋಪಿಗಳಿಂದ ಪಡೆದಿದ್ದರು ಎನ್ನಲಾಗಿದೆ. ಹಲವು ದಿನಗಳಿಂದ ಹಣ ವಾಪಸ್ ನೀಡುವಂತೆ ಆರೋಪಿಗಳು ಕೇಳಿದ್ದಾರೆ. ಆದರೆ ಹಣ ವಾಪಸ್ ಕೊಡದಿದ್ದಕ್ಕೆ ಮಕ್ಕಳನ್ನು ಅಪಹರಿಸಿದ್ದಾರೆ.

ನಿನ್ನೆ ಮಧ್ಯಾಹ್ನ ಮನೆಗೆ ನುಗ್ಗಿ ಸ್ವಸ್ತಿ(4), ವಿಯೋಮ್(3) ಅಪಹರಣ ಮಾಡಿದ್ದು, ಹಣ ಕೊಟ್ಟು ಮಕ್ಕಳನ್ನು ಬಿಡಿಕೊಳ್ಳುವಂತೆ ವಿಜಯ್​ಗೆ ಆರೋಪಿಗಳು ಹೇಳಿದ್ದರು. ಈ ಬಗ್ಗೆ ಅಥಣಿ ಪೊಲೀಸ್ ಠಾಣೆಯಲ್ಲಿ ಕಿಡ್ನ್ಯಾಪ್​ ಕೇಸ್ ದಾಖಲಾಗಿತ್ತು.

ಎಸ್ಪಿ ಡಾ. ಭೀಮಾಶಂಕರ ಗುಳೇದ್ ಹೇಳಿದ್ದಿಷ್ಟು

ಬೆಳಗಾವಿ ಎಸ್ಪಿ ಡಾ. ಭೀಮಾಶಂಕರ ಗುಳೇದ್ ಪ್ರತಿಕ್ರಿಯಿಸಿದ್ದು, ಮೂವರು ವ್ಯಕ್ತಿಗಳು ಮನೆಗೆ ನುಗ್ಗಿ ಅಜ್ಜಿಯನ್ನ ಹೆದರಿಸಿ ಕಿಡ್ನ್ಯಾಪ್​ ಮಾಡಿದ್ದರು. ಮಧ್ಯರಾತ್ರಿ ಆರೋಪಿಗಳಿಂದ ಮಕ್ಕಳ ತಂದೆಗೆ ಕರೆ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ತಕ್ಷಣ ಹಣ ಕೊಡಬೇಕು. ಪೊಲೀಸರಿಗೆ ಹೇಳದಂತೆ ಕೂಡ ಬೆದರಿಕೆ ಹಾಕಿದ್ದರು ಎಂದಿದ್ದಾರೆ.

ಅಥಣಿ ಪೊಲೀಸರು ಆರೋಪಿಗಳ ಪತ್ತೆಗೆ ಮೂರು ತಂಡ ರಚಿಸಿ ಕಾರ್ಯಾಚರಣೆ ಮಾಡಿ, ಬೆಳಗ್ಗೆ 4 ಗಂಟೆಗೆ ಆರೋಪಿಗಳ ಕಾರು ತಡೆಯಲು ಪೊಲೀಸರು ಯತ್ನಿಸಿದ್ದಾರೆ. ಈ ವೇಳೆಯಲ್ಲಿ ಪೊಲೀಸರ ಮೇಲೆ ಆರೋಪಿಗಳಿಂದ ಹಲ್ಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಹತ್ಯೆಯಾದ ಉದ್ಯಮಿಯ ಹಾರ್ಡ್ ಡಿಸ್ಕ್​ನಲ್ಲಿವೆ ಮಹಿಳೆಯರ ಜೊತೆಗಿನ ಖಾಸಗಿ ಕ್ಷಣದ ವಿಡಿಯೋಗಳು!

ಅಪಹರಣಕ್ಕೆ ಒಳಗಾದ ಮಕ್ಕಳ ತಂದೆ ಒನ್ ಮಾರ್ಟ್ ಟ್ರೇಡಿಂಗ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ.  ಆನ್ ಲೈನ್ ಟ್ರೇಡಿಂಗ್ ಸೆಂಟರ್​ನಲ್ಲಿ ಆರೋಪಿತಗಳಾ ರವಿ ಕಿರಣ್ ಹಾಗೂ ಶಾರುಖ್​​​ ಶೇಕ್ ಮತ್ತು ರವಿ ಕಿರಣ್ 7 ಕೋಟಿ ರೂ ತೊಡಗಿಸಿದ್ದರು. ಕಂಪನಿ ಲಾಸ್​ ಆಗಿದ್ದು, ಅನೇಕ ಕಡೆ ಮೋಸದ ಪ್ರಕರಣ ದಾಖಲಾಗಿದೆ.  ಹಣದ ವ್ಯವಹಾರದ ಕಾರಣದಿಂದ ಕಿಡ್ನ್ಯಾಪ್ ಮಾಡಲಾಗಿದೆ. ಪ್ರಾಥಮಿಕವಾಗಿ ನೂರು ಕೋಟಿ ರೂಪಾಯಿ ವಂಚನೆ ಆಗಿರುವ ಸಾಧ್ಯತೆ ‌ಇದೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.