ಬೆಳಗಾವಿ: ಗೃಹಲಕ್ಷ್ಮೀ ಯೋಜನೆ ಹಣದಿಂದ ಎತ್ತು ಖರೀದಿಸಿದ ರೈತ ಮಹಿಳೆ
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ತವಗ ಗ್ರಾಮದ ರೈತ ಮಹಿಳೆ ಗೃಹಲಕ್ಷ್ಮೀ ಯೋಜನೆಯಿಂದ ಬಂದ ಹಣದಲ್ಲಿ ಎತ್ತು ಖರೀದಿಸಿದ್ದಾರೆ. ಮಕ್ಕಳಿಲ್ಲದ ಬಸವ್ವ, ಶಿವಪ್ಪ ದಂಪತಿ ಎತ್ತುಗಳನ್ನೇ ಮಕ್ಕಳಂತೆ ಸಾಕುತ್ತಿದ್ದಾರೆ. ಬೇಸಾಯವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ದಂಪತಿಗೆ ಅನುಕೂಲವಾಗಿದೆ.
ಬೆಳಗಾವಿ, ಅಕ್ಟೋಬರ್ 19: ಕರ್ನಾಟಕ ಸರ್ಕಾರ (Karnataka Government) ಪ್ರತಿ ತಿಂಗಳು ಮನೆಯ ಯಜಮಾನಿಯರ ಖಾತೆಗೆ ಗೃಹಲಕ್ಷ್ಮೀ (Gruha Laxmi) ಹಣ ಜಮೆ ಮಾಡುತ್ತಿದೆ. ಗೃಹಲಕ್ಷ್ಮೀ ಯೋಜನೆ ಅಡಿ ಬಂದ ಹಣದಿಂದ ಗೋಕಾಕ್ ತಾಲೂಕಿನ ತವಗ ಗ್ರಾಮದ ರೈತ ಮಹಿಳೆ ಎತ್ತು ಖರೀದಿಸಿದ್ದಾರೆ. ತವಗ ಗ್ರಾಮದಲ್ಲಿ ಬಸವ್ವ ಮತ್ತು ಶಿವಪ್ಪ ದಂಪತಿ ವಾಸವಾಗಿದ್ದಾರೆ. ಇವರ ಮನೆಯಲ್ಲಿ ಬೇಸಾಯಕ್ಕಾಗಿ ಒಂದೇ ಎತ್ತು ಇತ್ತು. ಇದೀಗ ಗೃಹಲಕ್ಷ್ಮೀ ಯೋಜನೆ ಅಡಿ ಬಂದ 22 ಸಾವಿರ ರೂ. ಹಣದಿಂದ ಮತ್ತೊಂದು ಎತ್ತು ಖರೀದಿಸಿದ್ದಾರೆ.
ಮಕ್ಕಳಿಲ್ಲದ ಬಸವ್ವ, ಶಿವಪ್ಪ ದಂಪತಿ ಎತ್ತುಗಳನ್ನೇ ಮಕ್ಕಳಂತೆ ಸಾಕುತ್ತಿದ್ದಾರೆ. ಬಸವ್ವ ಮನೆಗೆ ಗೋಕಾಕ್ ತಾಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಮಹಾಂತೇಶ್ ಕಡಾಡಿ ಭೇಟಿ ನೀಡಿ, ದಂಪತಿಗೆ ವೈಯಕ್ತಿಕವಾಗಿ ನೆರವು ನೀಡಿದರು. ಬೇಸಾಯವನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿರುವ ದಂಪತಿಗೆ ಅನುಕೂಲವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ