ಬೆಳಗಾವಿ: ಉಪನ್ಯಾಸಕನೊಂದಿಗೆ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆ, ಮಗಳಿಗಾಗಿ ಕಣ್ಣೀರು ಹಾಕಿದ ಹೆತ್ತವರು
ಬೆಳಗಾವಿಯ ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯ ಕಾಲೇಜಿನ ವಿದ್ಯಾರ್ಥಿನಿ ಉಪನ್ಯಾಸಕನೊಂದಿಗೆ ಜೊತೆ ನಾಪತ್ತೆಯಾಗಿದ್ದಾರೆ. ಪೋಷಕರು ತಮ್ಮ ಮಗಳನ್ನು ಉಪನ್ಯಾಸಕರು ಅಪಹರಿಸಿದ್ದಾರೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 11 ದಿನಗಳಾದರೂ ಇಬ್ಬರೂ ಪತ್ತೆಯಾಗಿಲ್ಲ. ಕಾಲೇಜು ಆಡಳಿತ ಮಂಡಳಿ ವಿರುದ್ಧ ಪೋಷಕರು ಪ್ರತಿಭಟನೆ ನಡೆಸಿದ್ದು, ತನಿಖೆ ಮುಂದುವರಿದಿದೆ.

ಚಿಕ್ಕೋಡಿ, ಜ.21: ಉಪನ್ಯಾಸಕನೊಂದಿಗೆ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ನಾಪತ್ತೆಯಾಗಿರುವ (Athani student missing) ಘಟನೆ ಬೆಳಗಾವಿಯ ಅಥಣಿ ಪಟ್ಟಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದೀಗ ವಿದ್ಯಾರ್ಥಿನಿಯ ಮನೆಯವರು ಉಪನ್ಯಾಸಕ ನಮ್ಮ ಮಗಳನ್ನು ಕಿಡ್ನಾಪ್ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೂಡ ದೂರ ದಾಖಲಿಸಿಕೊಂಡಿದ್ದಾರೆ. ಬೆಳಗಾವಿಯ ಅಥಣಿ ಪಟ್ಟಣದ ಕಾಲೇಜ್ವೊಂದರಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಕಾಣೆಯಾಗಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯು ಸ್ಥಳೀಯವಾಗಿ ಸಾಕಷ್ಟು ಸಂಚಲನ ಮೂಡಿಸಿದೆ. ಹಾಗೂ ಸಾರ್ವಜನಿಕರಲ್ಲೂ ಕೂಡ ಆತಂಕ ವಾತಾವರಣ ಸೃಷ್ಟಿಸಿದೆ. ಕಾಲೇಜಿನಂತಹ ಪವಿತ್ರ ಸ್ಥಳದಲ್ಲಿ ಶಿಕ್ಷಕ ಮತ್ತು ವಿದ್ಯಾರ್ಥಿನಿಯ ನಡುವೆ ಇಂತಹ ಸಂಬಂಧ ಇರಬಾರದು. ಈ ಬಗ್ಗೆ ತಕ್ಷಣ ಕಾಲೇಜಿ ಸರಿಯಾದ ಕ್ರಮ ತೆಗೆದುಕೊಳ್ಳಬೇಕು ಎಂದು ಸ್ಥಳೀಯರು ಹೇಳಿದ್ದಾರೆ.
ಇನ್ನು ಈ ಪ್ರಕರಣದಲ್ಲಿ ಆರೋಪ ಹೊತ್ತಿರುವ ಉಪನ್ಯಾಸಕ ಕೂಡ ಅದೇ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದು, ಜನವರಿ 8ರಂದು ವಿದ್ಯಾರ್ಥಿನಿ ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ಹೇಳಿದ್ದಾರೆ. ಮಗಳು ಕಾಣೆಯಾದ ಮರುದಿನವೇ (ಜ.9) ವಿದ್ಯಾರ್ಥಿನಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರ ನೀಡಿ 11 ದಿನವಾದರೂ ವಿದ್ಯಾರ್ಥಿನಿ ಹಾಗೂ ಉಪನ್ಯಾಸಕರು ಪತ್ತೆಯಾಗಿಲ್ಲ. ನಮ್ಮ ಮಗಳನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಉಪನ್ಯಾಸಕ ಮದುವೆಯ ಆಮಿಷವೊಡ್ಡಿ ಅಥವಾ ಮಗಳಿಗೆ ದಾರಿ ತಪ್ಪಿಸಿ ಕರೆದೊಯ್ದಿರುವ ಸಾಧ್ಯತೆ ಎಂದು ಮನೆಯವರು ಹೇಳಿದ್ದಾರೆ.
ಇದನ್ನೂ ಓದಿ: ಮನೆಯಿಂದ ಹೊರ ಹೋಗಿದ್ದಾಕೆ ಶವವಾಗಿ ಪತ್ತೆ: ಕೊಲೆ ಮಾಡಿ ಆರೋಪಿಗಳು ಎಸ್ಕೇಪ್?
ವಿದ್ಯಾರ್ಥಿನಿಯ ಮನೆಯವರು ಇದೀಗ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ನಮ್ಮ ಮಗಳು ಕಾಣೆಯಾಗಿದರೂ ನಮಗೆ ವಿಷಯವನ್ನೇ ಹೇಳಿಲ್ಲ. ಇದಕ್ಕೆ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಕಾರಣ ಎಂದು ಹೇಳಿದ್ದಾರೆ. ಜತೆಗೆ ಕಾಲೇಜಿನ ಮುಂದೆ ಬಂದು ಕುಟುಂಬಸ್ಥರು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ವಿದ್ಯಾರ್ಥಿಗಳನ್ನು ಹೊರ ಕಳುಹಿಸಿ ಕಾಲೇಜು ಮುಚ್ಚಿಸಿದ್ದಾರೆ. ಕಾಲೇಜು ಆಡಳಿತ ಮಂಡಳಿ ವಿರುದ್ಧ ಧಿಕ್ಕಾರ ಕೂಡ ಕೂಗಿದ್ದಾರೆ, ನಮ್ಮ ಮಗಳನ್ನು ಹುಡುಕಿಕೊಡಿ ಎಂದು ಮಗಳಿಗಾಗಿ ಪೋಷಕರು ಕಣ್ಣೀರು ಹಾಕಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಥಣಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ. ಪೊಲೀಸರು ವಿದ್ಯಾರ್ಥಿನಿ ಮತ್ತು ಉಪನ್ಯಾಸಕನ ಮೊಬೈಲ್ ಫೋನ್ ಲೊಕೇಶನ್ ಆಧಾರದ ಮೇಲೆ ಪತ್ತೆ ಹಚ್ಚಲು ವಿಶೇಷ ತಂಡಗಳನ್ನು ರಚಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:54 pm, Wed, 21 January 26