ಬೆಳಗಾವಿ: 4 ಪ್ರಮುಖ ದೇಗುಲ ತೆರೆಯಲು ಷರತ್ತುಬದ್ಧ ಅನುಮತಿ; ಸವದತ್ತಿ ಯಲ್ಲಮ್ಮ ದೇಗುಲ ಸದ್ಯಕ್ಕಿಲ್ಲ ಓಪನ್

| Updated By: ganapathi bhat

Updated on: Sep 21, 2021 | 5:21 PM

ಆದರೆ ಸದ್ಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಲಾಗಿಲ್ಲ. ಕಳೆದ 18 ತಿಂಗಳಿಂದ ಬಂದ್ ಆಗಿರುವ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ತೆರೆಯಲು ಇನ್ನೂ ಆದೇಶ ಹೊರಬಿದ್ದಿಲ್ಲ.

ಬೆಳಗಾವಿ: 4 ಪ್ರಮುಖ ದೇಗುಲ ತೆರೆಯಲು ಷರತ್ತುಬದ್ಧ ಅನುಮತಿ; ಸವದತ್ತಿ ಯಲ್ಲಮ್ಮ ದೇಗುಲ ಸದ್ಯಕ್ಕಿಲ್ಲ ಓಪನ್
ಸವದತ್ತಿ ಯಲ್ಲಮ್ಮ ದೇಗುಲ ಸದ್ಯಕ್ಕೆ ಓಪನ್ ಇಲ್ಲ
Follow us on

ಬೆಳಗಾವಿ: ಕೊವಿಡ್ ಸಾಂಕ್ರಾಮಿಕ ಸೋಂಕು ಹೆಚ್ಚಳ ಹಾಗೂ ಲಾಕ್​ಡೌನ್ ಆದೇಶದ ಹಿನ್ನೆಲೆ ಬಂದ್ ಆಗಿದ್ದ 4 ಪ್ರಮುಖ ದೇಗುಲಗಳನ್ನು ತೆರೆಯಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. 4 ಪ್ರಮುಖ ದೇವಾಲಯಗಳು ಓಪನ್ ಆಗಲಿವೆ. ಆದರೆ, ಸವದತ್ತಿ ರೇಣುಕಾ ಯಲ್ಲಮ್ಮ ದೇಗುಲ ಸದ್ಯಕ್ಕೆ ಓಪನ್ ಇಲ್ಲ ಎಂದು ಮಾಹಿತಿ ನೀಡಲಾಗಿದೆ. ನಾಳೆಯಿಂದ ದೇಗುಲಗಳಿಗೆ ಭಕ್ತರ ಪ್ರವೇಶಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿದೆ.

ಸವದತ್ತಿಯ ಜೋಗುಳಬಾವಿ ಸತ್ಯಮ್ಮದೇವಿ ದೇವಸ್ಥಾನ, ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕದೇವಿ ದೇವಸ್ಥಾನ, ಹುಕ್ಕೇರಿ ತಾಲೂಕಿನ ಬಡಕುಂದ್ರಿ ಹೊಳೆಯಮ್ಮದೇವಿ ದೇಗುಲ, ಕಾಗವಾಡ ತಾಲೂಕಿನ ಮಂಗಸೂಳಿ ಮಲ್ಲಯ್ಯ ದೇವಸ್ಥಾನ ತೆರೆಯಲು ಅನುಮತಿ ನೀಡಲಾಗಿದೆ. ಷರತ್ತುಬದ್ಧ ಅನುಮತಿ ನೀಡಿ ಡಿಸಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.

ಆದರೆ ಸದ್ಯ ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಪ್ರವೇಶಕ್ಕೆ ಅವಕಾಶ ನೀಡಲಾಗಿಲ್ಲ. ಕಳೆದ 18 ತಿಂಗಳಿಂದ ಬಂದ್ ಆಗಿರುವ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ತೆರೆಯಲು ಇನ್ನೂ ಆದೇಶ ಹೊರಬಿದ್ದಿಲ್ಲ. ಉಳಿದ ನಾಲ್ಕು ಪ್ರಮುಖ ದೇಗುಲ ತೆರೆಯಲು ಷರತ್ತುಬದ್ಧ ಅನುಮತಿ ನೀಡಿ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಜನಸಂದಣಿ ಆಗುವಂತಹ ಉತ್ಸವ, ಜಾತ್ರೆ ಕಾರ್ಯಕ್ರಮ ನಡೆಸದಂತೆ‌ ನಿರ್ಬಂಧ ಹೇರಲಾಗಿದೆ.

ಬೆಂಗಳೂರಿನಲ್ಲಿ ಕೊರೊನಾ ಪರಿಸ್ಥಿತಿ ಬಗ್ಗೆ ಗೌರವ್ ಗುಪ್ತಾ ಮಾಹಿತಿ
ಕೊವಿಡ್ ಪರಿಸ್ಥಿತಿಯನ್ನು ನಿಯಂತ್ರಣ ಮಾಡಲಾಗುತ್ತಿದೆ. ಎಲ್ಲ ವಾಣಿಜ್ಯ ಚಟುವಟಿಕೆ, ಶಾಲೆಗಳು ಆರಂಭ ಆಗುತ್ತಿವೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 300-400 ಗಡಿಯಲ್ಲಿದೆ. ನಿತ್ಯ 20 ಜನ ಸೋಂಕಿತರು ಆಸ್ಪತ್ರೆಗಳಲ್ಲಿ ದಾಖಲಾಗುತ್ತಿದ್ದಾರೆ. ಸದ್ಯ 368 ಸೋಂಕಿತರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಎಲ್ಲರಿಗೂ ಜನರಲ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬೆಂಗಳೂರು ನಗರದಲ್ಲಿ ಕೊರೊನಾ ಪರಿಸ್ಥಿತಿಯ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಇಂದು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜಾನ್ಸನ್​ ಆ್ಯಂಡ್ ಜಾನ್ಸನ್​ ಕಂಪನಿಯ ಏಕ ಡೋಸ್ ಕೊರೊನಾ​ ಲಸಿಕೆ ಅಕ್ಟೋಬರ್​ನಿಂದ ದೇಶದಲ್ಲಿ ಲಭ್ಯ; ಅಭಿಯಾನಕ್ಕೆ ಮತ್ತಷ್ಟು ಬಲ

ಇದನ್ನೂ ಓದಿ: 5 ಡೋಸ್​ ಕೊರೊನಾ ಲಸಿಕೆ ಪಡೆದ ಬಿಜೆಪಿ ನಾಯಕ !-ಸರ್ಟಿಫಿಕೇಟ್​ ಡೌನ್​ಲೋಡ್​ ಮಾಡಿದಾಗ ಬೆಳಕಿಗೆ ಬಂತು ಪ್ರಮಾದ

Published On - 4:33 pm, Tue, 21 September 21