ಬಾಲಕಿ ಮೇಲೆ ಮೂರು ನಾಯಿಗಳಿಂದ ಡೆಡ್ಲಿ ಅಟ್ಯಾಕ್: ಗಂಭೀರ ಗಾಯ, ICUನಲ್ಲಿ ಚಿಕಿತ್ಸೆ

ಬೆಳಗಾವಿಯ ಗಣೇಶಪುರದಲ್ಲಿ ಐದು ವರ್ಷದ ಬಾಲಕಿಯ ಮೇಲೆ ಮೂರು ಬೀದಿನಾಯಿಗಳು ಭೀಕರವಾಗಿ ದಾಳಿ ನಡೆಸಿವೆ. ಬಾಲಕಿಯ ಹೊಟ್ಟೆ, ಬೆನ್ನು ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದ್ದು, ಬಿಮ್ಸ್ ಆಸ್ಪತ್ರೆಯ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ನಾಯಿಗಳ ಕಾಟ ಹೆಚ್ಚಾಗುತ್ತಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಲಕಿ ಮೇಲೆ ಮೂರು ನಾಯಿಗಳಿಂದ ಡೆಡ್ಲಿ ಅಟ್ಯಾಕ್: ಗಂಭೀರ ಗಾಯ, ICUನಲ್ಲಿ ಚಿಕಿತ್ಸೆ
ಪ್ರಾತಿನಿಧಿಕ ಚಿತ್ರ
Edited By:

Updated on: Mar 17, 2025 | 4:40 PM

ಬೆಳಗಾವಿ, ಮಾರ್ಚ್​ 17: ಐದು ವರ್ಷದ ಬಾಲಕಿ (girl) ಮೇಲೆ ಮೂರು ಬೀದಿನಾಯಿಗಳಿಂದ (street dogs) ಭೀಕರ ದಾಳಿ ಮಾಡಿರುವಂತಹ ಘಟನೆ ಬೆಳಗಾವಿಯ ಗಣೇಶಪುರದಲ್ಲಿ ನಡೆದಿದೆ. ಪ್ರಾವೀಣ್ಯಾ ಬೋಯರ್​ ನಾಯಿ ದಾಳಿಗೊಳಗಾದ ಬಾಲಕಿ. ಹೊಟ್ಟೆ, ಬೆನ್ನು, ಕಾಲಿಗೆ ಬೀದಿ ನಾಯಿಗಳು ಕಚ್ಚಿದ್ದು, ಗಂಭೀರ ಗಾಯಗೊಂಡಿರುವ ಬಾಲಕಿಗೆ ಬಿಮ್ಸ್​ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದೆ.

ನಿನ್ನೆ ಇದೇ ಏರಿಯಾದಲ್ಲಿ ಬಾಲಕನಿಗೆ ಬೀದಿನಾಯಿಗಳು ಕಚ್ಚಿ ಗಂಭೀರ ಗಾಯಗೊಂಡಿದ್ದಾಳೆ. ನಿನ್ನೆಯಷ್ಟೇ ಇದೇ ಕಾಲೋನಿಯಲ್ಲಿ ಓರ್ವ ಬಾಲಕನಿಗೆ ನಾಯಿ ಕಚ್ಚಿದೆ. ಸದ್ಯ ನಾಯಿಗಳ ಕಾಟ ತಪ್ಪಿಸದ ಪಾಲಿಕೆ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಬೀದಿ ನಾಯಿಗಳ ಹಾವಳಿ: ಮನೆಯಿಂದ ಹೊರಬರದ ಶಿವಮೊಗ್ಗ ಜನ

ಶಿವಮೊಗ್ಗ ನಗರದಲ್ಲಿ ಬೀದಿ ನಾಯಿಗಳ ಹಾವಳಿ ದಿನೇ ದಿನೇ ಜಾಸ್ತಿ ಆಗುತ್ತಿದೆ. ಹೀಗಾಗಿ ನಿರ್ಭತಿಯಿಂದ ಜನರು ಓಡಾಡದಂತಾಗಿದೆ. ಗಲ್ಲಿ ಗಲ್ಲಿಯಲ್ಲಿ ನಾಯಿಗಳ ಗ್ಯಾಂಗ್​​ಗಳು ತಲೆಯೆತ್ತಿದೆ. ರಸ್ತೆ ಮೇಲೆ ಹೋಗುವ ಬರುವ ಜನರಿಗೆ ಮೇಲೆ ಬೀದಿ ನಾಯಿಗಳು ಅಟ್ಯಾಕ್ ಮಾಡುತ್ತಿವೆ.

ಇದನ್ನೂ ಓದಿ
ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ಹುಚ್ಚುನಾಯಿ: ದಾಳಿ
ಬಾಲಕನ ಮೇಲೆ ನಾಯಿ ಡೆಡ್ಲಿ ಅಟ್ಯಾಕ್: ರಕ್ತ ಸಿಕ್ತವಾದ ಮಗು
ನಾಯಿಗಳ ದಾಳಿ: ರಾಜ್ಯದಲ್ಲಿ ಈವರೆಗೂ 12ಕ್ಕೂ ಹೆಚ್ಚು ಜನರು ರೇಬಿಸ್​ಗೆ ಬಲಿ!
ಕೊರಟಗೆರೆಯಲ್ಲಿ ಹುಚ್ಚು ನಾಯಿ ದಾಳಿ; 10ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ

ಇದನ್ನೂ ಓದಿ: ಕೊರಟಗೆರೆಯಲ್ಲಿ ಹುಚ್ಚು ನಾಯಿ ದಾಳಿ; ವೃದ್ದೆ ಸೇರಿದಂತೆ 10ಕ್ಕೂ ಹೆಚ್ಚು ಜನರಿಗೆ ಗಾಯ

ಶಿವಮೊಗ್ಗ ನಗರದ 34 ವಾರ್ಡ್​ಗಳಲ್ಲಿ ಎಲ್ಲೇ ಹೋದರೂ ಬೀದಿ ನಾಯಿಗಳ ಗುಂಪು ಗೋಚರಿಸುತ್ತದೆ. ನಗರದಲ್ಲಿ ದಿನೇ ದಿನೇ ಬೀದಿ ನಾಯಿಗಳ ಸಂಖ್ಯೆ ಜಾಸ್ತಿ ಆಗುತ್ತಲೇ ಇದೆ. ಬೀದಿ ನಾಯಿಗಳ ಹಾವಳಿ ತಡೆಯಲು ಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳು ಕ್ರಮಕ್ಕೆ ಮುಂದಾಗುತ್ತಿಲ್ಲ. ಇದರಿಂದ ಬೀದಿ ನಾಯಿಗಳು ಮಕ್ಕಳು ಸೇರಿದಂತೆ ಎಲ್ಲ ವಯಸ್ಸಿನವರ ಮೇಲೆ ಅಟ್ಯಾಕ್ ಮಾಡುತ್ತಿವೆ. ಪ್ರತಿ ವರ್ಷ ಬೀದಿ ನಾಯಿಗಳ ನಿಯಂತ್ರಣಕ್ಕೆ ಲಕ್ಷಾಂತರ ರೂ. ಖರ್ಚು ಮಾಡಲಾಗುತ್ತಿದೆ. ಆದರೂ ಬೀದಿ ನಾಯಿಗಳ ಏರಿಕೆ ಮಾತ್ರ ಕಡಿಮೆ ಆಗುತ್ತಿಲ್ಲ. ಪರಿಣಾಮ ಜನರು ನೆಮ್ಮದಿಯಿಂದ ರಸ್ತೆಗಳ ಮೇಲೆ ಓಡಾಡದಂತಹ ಸ್ಥಿತಿ ನಿರ್ಮಾಣವಾಗಿದೆ.

ಮೂರು ವರ್ಷದಲ್ಲಿ ನಾಯಿ ದಾಳಿಗೆ ಆರು ಜನ ಸಾವು

ಈಗಾಗಲೇ ಅನೇಕ ಜನರಿಗೆ ನಾಯಿಗಳ ಕಚ್ಚಿವೆ. ಕಳೆದ ಮೂರು ವರ್ಷದ ಅವಧಿಯಲ್ಲಿ ಬರೋಬ್ಬರಿ 71 ಸಾವಿರ ನಾಯಿ ಕಡಿತ ಪ್ರಕರಣ ದಾಖಲಾಗಿದೆ. ಇದರಲ್ಲಿ ಆರು ಜನರು ಮೃತಪಟ್ಟಿದ್ದಾರೆ. 2022ರಲ್ಲಿ 19,593 ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದರೆ. 2023ರಲ್ಲಿ ನಾಯಿ ಕಡಿತದ ಪ್ರಕರಣಗಳು 25,764ಕ್ಕೆ ಏರಿಕೆಯಾಗಿತ್ತು,ಇನ್ನೂ ಕಳೆದ ವರ್ಷ 2024ರಲ್ಲಿ 26,950 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದಾರೆ ಲಕ್ಷಾಂತರ ರೂ. ಸುರಿದು ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿದರೂ ಬೀದಿ ನಾಯಿಗಳ ನಿಯಂತ್ರಣ ಮಾತ್ರ ಕಡಿಮೆ ಆಗುದೇ ಇರುವುದು ಮಾತ್ರ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.