Sanjay Raut: ಶಿವಸೇನೆ ವಕ್ತಾರ ಸಂಜಯ್​ ರಾವತ್​​ಗೆ ಸಮನ್ಸ್​ ಜಾರಿ ಮಾಡಿದ ಬೆಳಗಾವಿ ಕೋರ್ಟ್​​

| Updated By: ವಿವೇಕ ಬಿರಾದಾರ

Updated on: Nov 28, 2022 | 9:45 PM

ಶಿವಸೇನೆ ವಕ್ತಾರ, ರಾಜ್ಯಸಭಾ ಸದಸ್ಯ ಸಂಜಯ್​ ರಾವತ್​​ಗೆ ಬೆಳಗಾವಿಯ 4ನೇ ಜೆಎಂಎಫ್​​ಸಿ ಕೋರ್ಟ್​​, ಡಿ.1ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್​​ ನೀಡಿದೆ.

Sanjay Raut: ಶಿವಸೇನೆ ವಕ್ತಾರ ಸಂಜಯ್​ ರಾವತ್​​ಗೆ ಸಮನ್ಸ್​ ಜಾರಿ ಮಾಡಿದ ಬೆಳಗಾವಿ ಕೋರ್ಟ್​​
ಸಂಜಯ್ ರಾವುತ್
Follow us on

ಬೆಳಗಾವಿ: ಶಿವಸೇನೆ ವಕ್ತಾರ (Shiv Sena), ರಾಜ್ಯಸಭಾ ಸದಸ್ಯ ಸಂಜಯ್​ ರಾವತ್​​ಗೆ (sanjay raut) ಸಂಕಷ್ಟ ಎದುರಾಗಿದೆ. ಸಂಜಯ್​ ರಾವತ್​​ಗೆ ಬೆಳಗಾವಿಯ 4ನೇ ಜೆಎಂಎಫ್​​ಸಿ ಕೋರ್ಟ್​​ (Belagavi Court), ಡಿ.1ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್​​ ನೀಡಿದೆ. ಸಂಜಯ್​ ರಾವತ್ 2018ರ ಮೇ 12ರಂದು ಬೆಳಗಾವಿಯಲ್ಲಿ ಚುನಾವಣಾ ನೀತಿ ಸಂಹಿತಿ ಉಲ್ಲಂಘಿಸಿ ಪ್ರಚೋದನಕಾರಿ ಭಾಷಣ​ ಮಾಡಿದ್ದರು. ಈ ಸಂಬಂಧ ಟಿಳಕವಾಡಿ ಠಾಣೆಯಲ್ಲಿ ಚುನಾವಣಾ ಆಯೋಗ ದೂರು ದಾಖಲಿಸಿತ್ತು.

ಅಕ್ರಮ ಹಣ ವರ್ಗಾವಣೆ ಪ್ರಕರಣ: ಶಿವಸೇನಾ ನಾಯಕ ಸಂಜಯ್ ರಾವುತ್​ಗೆ ಜಾಮೀನು

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಶಿವಸೇನಾ ಉದ್ಧವ್ ಠಾಕ್ರೆ ಬಣದ ಹಿರಿಯ ನಾಯಕ ಮತ್ತು ಅವರ ಆಪ್ತರಲ್ಲಿ ಒಬ್ಬರಾದ ಸಂಜಯ್ ರಾವುತ್ ಅವರಿಗೆ ವಿಶೇಷ ನ್ಯಾಯಾಲಯವು ಜಾಮೀನು ನೀಡಿದೆ. ರಾಜ್ಯಸಭಾ ಸದಸ್ಯರಾಗಿರುವ ರಾವುತ್ ಕಳೆದ ಮೂರೂವರೆ ತಿಂಗಳಿನಿಂದ ಜೈಲಿನಲ್ಲಿದ್ದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯ ಜಾಮೀನು ಅರ್ಜಿಯ ಆದೇಶವನ್ನು ಅಕ್ಟೋಬರ್ 21 ರಂದು ಕಾಯ್ದಿರಿಸಿತ್ತು.

ಮುಂಬೈನ ವಸತಿ ಕಾಲೋನಿಯ ಪುನರಾಭಿವೃದ್ಧಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಸಂಜಯ್ ರಾವುತ್ ಅವರನ್ನು ಆಗಸ್ಟ್ 1 ರಂದು ಜಾರಿ ನಿರ್ದೇಶನಾಲಯವು ಕಸ್ಟಡಿಗೆ ತೆಗೆದುಕೊಂಡಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿಯಲ್ಲಿ ಬಂಧಿಸುವ ಮೊದಲು, ರಾವುತ್ ಎರಡು ಬಾರಿ ಏಜೆನ್ಸಿಯ ಸಮನ್ಸ್ ಗೆ ಗೈರಾಗಿದ್ದರು. ರಾಜಕೀಯ ದ್ವೇಷದಿಂದ ತಮ್ಮ ವಿರುದ್ಧ ಸುಳ್ಳು ಪ್ರಕರಣವನ್ನು ಹೊರಿಸಲಾಗಿದೆ ಎಂದು ರಾವುತ್ ಆರೋಪಿಸಿದ್ದರು. ಉದ್ಧವ್ ಠಾಕ್ರೆ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣಗಳ ನಡುವೆ ಶಿವಸೇನಾದ ನಿಯಂತ್ರಣಕ್ಕಾಗಿ ತೀವ್ರ ಜಟಾಪಟಿ ನಡೆಯುತ್ತಿರುವ ನಡುವೆಯೇ ರಾಜ್ಯಸಭಾ ಸಂಸದರ ಬಂಧನವಾಗಿತ್ತು.

ಇದನ್ನೂ ಓದಿ: ಭಯೋತ್ಪಾದನೆಗೆ ಹಣ ಸಂಗ್ರಹಕ್ಕಾಗಿ ಡಕಾಯಿತಿ ಮಾಡುತ್ತಿದ್ದ 3 ಆರೋಪಿಗಳಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್​​

ರಾವುತ್ ಅವರು ಠಾಕ್ರೆ ಬಣದ ದನಿಯಾಗಿದ್ದರು. ಶಿವಸೇನೆಯೊಳಗಿನ ಬಂಡಾಯವು ಉದ್ಧವ್ ಠಾಕ್ರೆ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿದ ನಂತರ ಶಿಂಧೆ ಪಾಳಯವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದರ ವಿರುದ್ಧ ಧ್ವನಿ ಎತ್ತಿದ್ದರು.

ಅವರ ಬಂಧನದ ನಂತರ, ಮುಖ್ಯಮಂತ್ರಿ ಶಿಂಧೆ ಅವರು ರಾವುತ್ ನಿರಪರಾಧಿಯಾಗಿದ್ದರೆ, ಅವರ ವಿರುದ್ಧ ಕೇಂದ್ರ ಏಜೆನ್ಸಿಯ ತನಿಖೆಗೆ ಹೆದರಬೇಕಾಗಿಲ್ಲ ಎಂದು ಹೇಳಿದರು.

ಮಧ್ಯರಾತ್ರಿಯಲ್ಲಿ ರಾವುತ್ ಬಂಧನವಾಗಿದ್ದು ಈ ಕ್ರಮ ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. ಅವರ ಬಂಧನದ ಬಗ್ಗೆ ಪ್ರತಿಕ್ರಿಯಿಸಿದ ಠಾಕ್ರೆ, “ನನಗೆ ಸಂಜಯ್ ರಾವತ್ ಬಗ್ಗೆ ಹೆಮ್ಮೆ ಇದೆ. ಇದು ನಮ್ಮನ್ನು ನಾಶಮಾಡುವ ಪಿತೂರಿಯಾಗಿದೆ. ನಮ್ಮ ವಿರುದ್ಧ ಯಾರೇ ಮಾತನಾಡಿದರೂ ನಾವು ನಾಶಪಡಿಸಬೇಕು. ಅಂತಹ ಮನಸ್ಥಿತಿಯ ಸೇಡಿನ ರಾಜಕಾರಣ ನಡೆಯುತ್ತಿದೆ” ಎಂದು ಹೇಳಿದ್ದಾರೆ. ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಕೇಂದ್ರ ಸಂಸ್ಥೆಯ ಕ್ರಮದ ವಿರುದ್ಧ ಮಾತನಾಡಿದ್ದು,ಬಿಜೆಪಿ ನೇತೃತ್ವದ ಸರ್ಕಾರವು ರಾಜಕೀಯ ಪ್ರತಿಸ್ಪರ್ಧಿಗಳನ್ನು ಗುರಿಯಾಗಿಸಲು ತನಿಖಾ ಸಂಸ್ಥೆಗಳನ್ನು ಬಳಸುತ್ತಿದೆ ಎಂದು ಆರೋಪಿಸಿದೆ.  ಆದರೆ ಇಡಿ, ರಾಜಕೀಯ ಸೇಡಿನ ಆರೋಪವನ್ನು ನಿರಾಕರಿಸಿದ್ದು ರಾವುತ್ ಅಕ್ರಮ ಹಣ ವ್ಯವಹಾರ ಅಪರಾಧದಲ್ಲಿ ಸಂಪೂರ್ಣವಾಗಿ ಭಾಗಿಯಾಗಿದ್ದಾರೆ ಎಂದು ಹೇಳಿದೆ.

ಮಹಾರಾಷ್ಟ್ರ ವಸತಿ ಮತ್ತು ಪ್ರದೇಶಾಭಿವೃದ್ಧಿ ಪ್ರಾಧಿಕಾರ (MHADA) ನೊಂದಿಗೆ 672 ಬಾಡಿಗೆದಾರರಿಗೆ ಗುರು ಆಶಿಶ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ (GACPL) ಮೂಲಕ ಪತ್ರಾ ಚಾಲ್ ಅನ್ನು ಮರುಅಭಿವೃದ್ಧಿ ಮಾಡಬೇಕಾಗಿತ್ತು. ಆದರೆ GACPL ನಿರ್ಮಾಣಕ್ಕೂ ಮುಂಚೆಯೇ 1034 ಕೋಟಿ ಮೊತ್ತಕ್ಕೆ FSI ಅನ್ನು ಮೂರನೇ ವ್ಯಕ್ತಿ ಡೆವಲಪರ್‌ಗಳಿಗೆ ಮಾರಾಟ ಮಾಡಿತು. ಈ 1,034 ಕೋಟಿಯು ಡೆವಲಪರ್‌ಗಳಿಗೆ ಎಫ್‌ಎಸ್‌ಐ ಅನ್ನು ಅಕ್ರಮ ಮತ್ತು ಅನಧಿಕೃತ ಮಾರಾಟದಿಂದ ಅಪರಾಧದ (ಪಿಒಸಿ) ಆದಾಯದ ಮೊತ್ತವಾಗಿದೆ. 1034 ಕೋಟಿಯ ಪಿಒಸಿಯಲ್ಲಿ, ಪ್ರವೀಣ್ ರಾವುತ್ ತಮ್ಮ ಬ್ಯಾಂಕ್ ಖಾತೆಯಲ್ಲಿ ಹೌಸಿಂಗ್ ಡೆವಲಪ್‌ಮೆಂಟ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಚ್‌ಡಿಐಎಲ್) ಮೂಲಕ 112 ಕೋಟಿಗಳನ್ನು ಪಡೆದಿದ್ದಾರೆ” ಎಂದು ಇಡಿ ಹೇಳಿದೆ. “ಸೆಪ್ಟೆಂಬರ್ 15, 2022 ರಂದು ಸಲ್ಲಿಸಲಾದ ಪೂರಕ ಚಾರ್ಜ್ ಶೀಟ್‌ನಲ್ಲಿ ಸಂಜಯ್ ರಾವುತ್ ಅವರ ಪ್ರಾಕ್ಸಿ ಮತ್ತು ವಿಶ್ವಾಸಾರ್ಹ ಪ್ರವೀಣ್ ರಾವುತ್ ಅವರ ಪಾತ್ರವನ್ನು ಸಮಗ್ರವಾಗಿ ಹೊರತರಲಾಗಿದೆ. ವಿಚಾರಣೆಯನ್ನು ತಪ್ಪಿಸಲು ಸಂಜಯ್ ರಾವುತ್ ತೆರೆಮರೆಯ ಹಿಂದೆ ಇದ್ದು ಪ್ರವೀಣ್ ರಾವುತ್ ಅವರ ಮುಂದೆ ಇದ್ದಾರೆ ಎಂದು ಸಂಸ್ಥೆ ಆರೋಪಿಸಿದೆ.

ರಾಜ್ಯದ ಮತ್ತಷ್ಟು  ಸುದ್ದಿಗಳಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 9:27 pm, Mon, 28 November 22