ಖುರೇಷಿ ಪತಿ ಮನೆ ಮೇಲೆ RSS ದಾಳಿ: ಸುಳ್ಳು ಪೋಸ್ಟ್ ಮಾಡಿದ್ದ ಅನೀಸ್ ವಿರುದ್ಧ FIR

ಪಾಕಿಸ್ತಾನ ಮೂಲದ ಉಗ್ರರ ಮಟ್ಟಹಾಕುವಲ್ಲಿ ಕೈಗೊಂಡ ಆಪರೇಷನ್ ಸಿಂದೂರ ಕಾರ್ಯಚರಣೆ ಬಗ್ಗೆ ಇಡೀ ದೇಶಕ್ಕೆ ವಿವರಣೆ ನೀಡಿದ ಬೆಳಗಾವಿಯ ಸೊಸೆ ಕರ್ನಲ್ ಸೋಫಿಯಾ ಖುರೇಷಿ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿ ಬರುತ್ತಿವೆ. ಇದರ ಮಧ್ಯ ಖುರೇಷಿ ಪತಿ ಮನೆ ಮೇಲೆ ದಾಳಿಯಾಗಿದೆ ಎಂದು ಕಿಡಿಗೇಡಿಯೊಬ್ಬ ಸುಳ್ಳು ಸುದ್ದಿ ಹಬ್ಬಿಸಿದ್ದಾನೆ. ಈ ಸಂಬಂಧ ಬೆಳಗಾವಿಯಲ್ಲಿ ಎಫ್​ಐಆರ್ ದಾಖಲಾಗಿದೆ.

ಖುರೇಷಿ ಪತಿ ಮನೆ ಮೇಲೆ RSS ದಾಳಿ: ಸುಳ್ಳು ಪೋಸ್ಟ್ ಮಾಡಿದ್ದ ಅನೀಸ್ ವಿರುದ್ಧ FIR
ವೈರಲ್ ಪೋಸ್ಟ್
Updated By: ರಮೇಶ್ ಬಿ. ಜವಳಗೇರಾ

Updated on: May 15, 2025 | 4:51 PM

ಬೆಂಗಳೂರು, (ಮೇ 15): ಬೆಳಗಾವಿಯ (Belagavi)ಸೊಸೆ ಕರ್ನಲ್ ಸೋಫಿಯಾ ಖುರೇಷಿ (colonel sophia qureshi) ಪತಿ ಮನೆ ಮೇಲೆ RSS ದಾಳಿ ಮಾಡಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ ಅನೀಸ್ ಉದ್ದೀನ್ ಇದೀಗ ಎಫ್​ಐಆರ್ ದಾಖಲಾಗಿದೆ. ಒಂದೆಡೆ ಆಪರೇಷನ್​ ಸಿಂದೂರ್​ ಯಶಸ್ವಿ ಬಗ್ಗೆ ಕರ್ನಲ್ ಸೋಫಿಯಾ ಖುರೇಷಿ ಕ್ಷಣ ಕ್ಷಣ ಮಾಹಿತಿಯನ್ನು ನೀಡುತ್ತಿದ್ದರೆ, ಇತ್ತ ಬೆಳಗಾವಿಯಲ್ಲಿರುವ  ಸೋಫಿಯಾ ಖುರೇಷಿ ಮನೆ ಮೇಲೆ ಆರ್​ಎಸ್​​ಎಸ್​ ದಾಳಿ ಮಾಡಿದೆ ಎಂದು ಅನೀಸ್ ಉದ್ದೀನ್ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪೋಸ್ಟ್ ಹಾಕಿದ್ದ. ಈ ಸಂಬಂಧ ಬೆಳಗಾವಿ ಪೊಲೀಸರು ಕೂಡಲೇ ಖುರೇಷಿ ಪತಿಯ ಮನೆಗೆ ತೆರಳಿ ಪರಿಶೀಲನೆ ಮಾಡಿದ್ದರು. ಇದೀಗ ಈ ಸಂಬಂಧ ಸಿಇಎನ್ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದಲ್ಲಿ ಕರ್ನಲ್ ಸೋಫಿಯಾ ಖುರೇಷಿ ಅವರ ಪತಿ ತಾಜುದ್ದೀನ್ ಮನೆ ಇದ್ದು, ಈ ಮನೆ ಮೇಲೆ ಆರ್​ಎಸ್​ಎಸ್​ ಅಟ್ಯಾಕ್ ಮಾಡಿದೆ ಎಂದು ಅನಿಸ್ ಉದ್ದೀನ್ ಎಂಬಾತ ಮನೆ ಧ್ವಂಸದ ಯಾವುದೋ ಹಳೇ ಫೋಟೋವನ್ನು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದ. ಅನಿಸ್ ಉದ್ದೀನ್ ಕೆನಡಾದಲ್ಲಿ ಕುಳಿತು ಈ ಸುಳ್ಳು ಪೋಸ್ಟ್​ ಹಾಕಿದ್ದ. ಈ ಸುದ್ದಿ ಭಾರೀ ಸದ್ದು ಮಾಡುತ್ತಿದ್ದಂತೆಯೇ ಖುರೇಷಿ ಪತಿಯ ಕೊಣ್ಣೂರು ಗ್ರಾಮಕ್ಕೆ ಎಸ್ಪಿ ಭೀಮಾಶಂಕರ್ ಗುಳೇದ್ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದರು. ಇದು ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ಎಸ್ಪಿ ಸ್ಪಷ್ಟನೆ ನೀಡಿದ್ದರು.

ಇದನ್ನೂ ಓದಿ: ಬೆಳಗಾವಿ: ಕರ್ನಲ್ ಸೋಫಿಯಾ ಖುರೇಷಿ ಪತಿ ಮನೆ ಮೇಲೆ RSS ದಾಳಿ ಎಂದು ಸುಳ್ಳು ಸುದ್ದಿ ಹರಿಬಿಟ್ಟ ಕಿಡಿಗೇಡಿ

ಬಳಿಕ ಅನೀಸ್ ಉದ್ದೀನ್​ ಪೋಸ್ಟ್​ ಅನ್ನು ಡಿಲೀಟ್​ ಮಾಡಿಸಲಾಗಿತ್ತು. ಆದರೂ ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಎಸ್ಪಿ ಭೀಮಾಶಂಕರ್ ಗುಳೇದ್, ಅನೀಸ್ ಮೇಲೆ ಎಫ್‌ಐಆರ್ ದಾಖಲಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಈ ಸೂಚನೆ ಮೇರೆಗೆ ಸಿಇಎನ್ ಪೊಲೀಸರು, ಅನೀಸ್ ವಿರುದ್ಧ ಬಿಎನ್‌ಎಸ್ 353(2), 192 ಸೆಕ್ಷನ್ ಅಡಿಯಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಇದನ್ನೂ ಓದಿ
ಸೋಫಿಯಾ ಖುರೇಷಿ ಕುರಿತ ಹೇಳಿಕೆ; ಸುಪ್ರೀಂ ಕೋರ್ಟ್ ಮೊರೆಹೋದ ಸಚಿವ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಸೋಫಿಯಾ ಖುರೇಷಿ ಬೆಳಗಾವಿಯ ಸೊಸೆ: ಲೆಫ್ಟಿನೆಂಟ್ ಕರ್ನಲ್​ರ ಮಾವ ಹೇಳಿದ್ದೇನು?
ಪಾಕಿಸ್ತಾನಕ್ಕೆ ದಿಟ್ಟ ಉತ್ತರ ನೀಡಿದ ಕರ್ನಲ್ ಸೋಫಿಯಾ ಖುರೇಷಿ ಯಾರು?

ಆರೋಪಿಯನ್ನ ಹುಡುಕುತ್ತೇವೆ ಎಂದ ಎಸ್ಪಿ

ಈ ಸಂಬಂಧ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ್ ಗುಳೇದ್ ಪ್ರತಿಕ್ರಿಯಿಸಿ, ಟ್ವೀಟ್​ ಮಾಡಿದ ಆರೋಪಿ ಅನೀಸ್​ವುದ್ದೀನ್ ಬಗ್ಗೆ ಮಾಹಿತಿ ಕೇಳಿದ್ದೇವೆ. ಆರೋಪಿ ಎಲ್ಲಿಯವನು ಎಂದು ಲೀಗಲ್ ಸೆಲ್​ನಿಂದ ಮಾಹಿತಿ ಕೇಳಿದ್ದೇವೆ. ಅಕಸ್ಮಾತ್ ಭಾರತದಲ್ಲಿದ್ದರೆ ಆತನನ್ನು ಕೂಡಲೇ ಬಂಧಿಸುತ್ತೇವೆ. ಕೆನಡಾದಲ್ಲಿ ಕುಳಿತು ಕೃತ್ಯ ಮಾಡಿದ್ರೆ ರಾಜತಾಂತ್ರಿಕವಾಗಿ ಕ್ರಮ ಕೈಗೊಳ್ಳುತ್ತೇವೆ. ಈ ಸಂಬಂಧ ಕೇಂದ್ರ ಸರ್ಕಾರ ಜತೆ ಮಾತನಾಡುತ್ತೇವೆ. ಸದ್ಯ ಆರೋಪಿ ವಿರುದ್ಧ BNS ಕಾಯ್ದೆ 353,(2)192(a) ಅಡಿಯಲ್ಲಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.

ಮತ್ತೊಂದೆಡೆ ಮಧ್ಯಪ್ರದೇಶ ಸರ್ಕಾರದ ಬುಡಕಟ್ಟು ಸಚಿವ ಕುನ್ವರ್ ವಿಜಯ್ ಶಾ ಎನ್ನುವವರು, ಸೋಫಿಯಾ ಖುರೇಶಿ ಅವರನ್ನು ಉಗ್ರರ ಸಹೋದರಿ ಎಂದು ಕರೆಯುವ ಮೂಲಕ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಲ್ಲದೇ ಈ ಸಂಬಂಧ ಕೋರ್ಟ್​ ಸೂಚನೆ ಮೇರೆಗೆ ಸಚಿವ ವಿಜಯ್ ಶಾ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಇನ್ನು ಈ ಎಫ್​ಐಆರ್​ಗೆ ತಡೆ ಕೋರಿ ಮನವಿ ಸಲ್ಲಿಸಿದ್ದ ವಿಜಯ್ ಶಾಗೆ ಸುಪ್ರೀಂಕೋರ್ಟ್​ ಛೀಮಾರಿ ಹಾಕಿದೆ.

ಸಚಿವಸ್ಥಾನದಲ್ಲಿದ್ದವರು ಜವಾಬ್ದಾರಿಯಿಂದ ಮಾತನಾಡಬೇಕು . ಉಚ್ಚರಿಸುವ ಪ್ರತಿಯೊಂದು ವಾಕ್ಯವೂ ಜವಾಬ್ದಾರಿಯುತವಾಗಿರಬೇಕು ಎಂದು ವಿಜಯ್ ಶಾಗೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:40 pm, Thu, 15 May 25