ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು -ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು. ಎಷ್ಟು ದೂರದಿಂದ ಬಂದು ತಮ್ಮ ಕೆಲಸ ಮಾಡಿಕೊಳ್ಳಬೇಕು? ಸಚಿವ ಉಮೇಶ ಕತ್ತಿ ನೇತೃತ್ವದ ನಿಯೋಗ ಸಿಎಂ ಬಳಿ ಹೋದರೆ ನಮ್ಮ ಬೆಂಬಲವಿದೆ ಎಂದರು.

ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು -ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
Follow us
TV9 Web
| Updated By: ಆಯೇಷಾ ಬಾನು

Updated on:Apr 04, 2022 | 4:16 PM

ಬೆಳಗಾವಿ: ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು. ಎಷ್ಟು ದೂರದಿಂದ ಬಂದು ತಮ್ಮ ಕೆಲಸ ಮಾಡಿಕೊಳ್ಳಬೇಕು? ಉಮೇಶ್ ಕತ್ತಿ(Umesh Katti) ನೇತೃತ್ವದ ನಿಯೋಗಕ್ಕೆ ನಮ್ಮ ಬೆಂಬಲ ಇದೆ. ನಿಯೋಗ ಸಿಎಂ ಬಳಿ ಹೋದರೆ ನಮ್ಮ ಬೆಂಬಲವಿದೆ. ಬೆಳಗಾವಿ ವಿಭಜನೆಯಾಗಿ ಮೂರು ಜಿಲ್ಲೆ ಆಗಬೇಕು. ಜಿಲ್ಲೆ ವಿಭಜನೆಗೆ ನಮ್ಮ ಪಕ್ಷಾತೀತವಾಗಿ ಬೆಂಬಲ ಇದೆ ಎಂದು ಬೆಳಗಾವಿಯಲ್ಲಿ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಹೇಳಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿ ಜಿಲ್ಲೆ ವಿಭಜನೆ ಆಗಬೇಕು. ಎಷ್ಟು ದೂರದಿಂದ ಬಂದು ತಮ್ಮ ಕೆಲಸ ಮಾಡಿಕೊಳ್ಳಬೇಕು? ಸಚಿವ ಉಮೇಶ ಕತ್ತಿ ನೇತೃತ್ವದ ನಿಯೋಗ ಸಿಎಂ ಬಳಿ ಹೋದರೆ ನಮ್ಮ ಬೆಂಬಲವಿದೆ. ಬೆಳಗಾವಿ ವಿಭಜನೆಯಾಗಿ ಮೂರು ಜಿಲ್ಲೆ ಆಗಬೇಕು. ಜಿಲ್ಲೆ ವಿಭಜನೆಗೆ ನಮ್ಮ ಪಕ್ಷಾತೀತವಾಗಿ ಬೆಂಬಲ ಇದೆ. ಈಗಾಗಲೇ ಬೆಳಗಾವಿ ತಾಲೂಕು ವಿಭಜನೆಗೆ ಮನವಿ ಮಾಡಿದ್ದೇನೆ. ನಮ್ಮ ಸರ್ಕಾರ ಬಂದ ಬಳಿಕ ಪ್ರತ್ಯೇಕ ತಾಲೂಕು ಮಾಡ್ತೇನೆ ಎಂದಿದ್ದಾರೆ.

ಅವಧಿ ಪೂರ್ವ ವಿಧಾನಸಭೆ ಚುನಾವಣೆ ಎದುರಿಸಲು ಸಿದ್ದ ಇನ್ನು ಇದೇ ವೇಳೆ ಚುನಾವಣೆ ಸಂಬಂಧ ಮಾತನಾಡಿದ ಅವರು, ಅವಧಿ ಪೂರ್ವ ವಿಧಾನಸಭೆ ಚುನಾವಣೆ ಬಂದರೇ ಎದುರಿಸಲು ಸಿದ್ದ ಎಂದಿದ್ದಾರೆ. ಹಲಾಲ್ ಕಟ್, ಮಸೀದಿಗಳಲ್ಲಿ ಸ್ಪೀಕರ್ ವಿರುದ್ಧ ಅಭಿಯಾನ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯೆ ನೀಡಿದ್ದು, ಭಾರತ ದೇಶ ಪ್ರಜಾಪ್ರಭುತ್ವದ ದೇಶ. ಆರು ಧರ್ಮ, ಎಷ್ಟೋ ಭಾಷೆಗಳಿವೆ. ಹದಿನಾಲ್ಕನೂರು ಜಾತಿಗಳಿವೆ. ವಿವಿಧತೆಯಲ್ಲಿ ಏಕತೆ ಮೆರೆಯುತ್ತೇವೆ. ಅಂಬೇಡ್ಕರ್ ಅವರು ಬಹಳ ಚೆನ್ನಾಗಿ ಸಂವಿಧಾನದ ಹಕ್ಕನ್ನ ನಮಗೆ ಕೊಟ್ಟಿದ್ದಾರೆ. ಭ್ರಷ್ಟಾಚಾರ ಹೋಗಲಾಡಿಸುತ್ತೇವೆ ಅಂತಾ ಮೋದಿ ಅವರು ಮಾತನಾಡಿದರು. ಈಗ ಭ್ರಷ್ಟಾಚಾರ ನಿಂತಿದೆ, 40% ತೆಗೆದುಕೊಳ್ಳುವುದಿಲ್ಲ ಅಂತಾ ಭಾಷಣ ಮಾಡ್ತಾರಾ. ಪೆಟ್ರೋಲ್, ಡೀಸೆಲ್, ಸಿಲಿಂಡರ್ ಬೆಲೆ ಏರಿಕೆ ಆಗಿದೆ ಅಂತಾ ಹೇಳ್ತಾರಾ. ಅವರ ಕಡೆ ವಿಷಯ ಇಲ್ಲ, ವಿಷಯ ಇಲ್ಲ ಅಂದ ಮೇಲೆ ಇಂತಹವು ಬರ್ತವೆ. ಆದ್ರೇ ಜನರು ಬುದ್ಧಿವಂತರಾಗಬೇಕು ಅಂತಾ ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದ್ದಾರೆ.

ಎಲ್ಲವನ್ನೂ ಕಾನೂನಾತ್ಮಕವಾಗಿ ನೋಡಿಕೊಳ್ಳಬೇಕಾಗುತ್ತೆ. ಸಂವಿಧಾನದಲ್ಲಿ ಏನು ಬರೆದಿದ್ದಾರೆ, ಕೋರ್ಟ್ ಏನು ತೀರ್ಪು ಕೊಡುತ್ತೆ ನೋಡಬೇಕಾಗುತ್ತೆ. ಈ ವಿಚಾರದಲ್ಲಿ ನಮ್ಮ ಪಕ್ಷದ ಹಿರಿಯರು ಚರ್ಚೆ ಮಾಡುತ್ತಾರೆ. ಎಲ್ಲ ಜನರನ್ನ ಒಗ್ಗಟ್ಟಾಗಿ ತೆಗೆದುಕೊಂಡು ಹೋಗಬೇಕು ಅನ್ನೋದೇ ನಮ್ಮ ಪಕ್ಷದ ಉದ್ದೇಶ. ನಾವು ಯಾವತ್ತಿಗೂ ಒಡೆದು ಆಳುವುದಿಲ್ಲ ಒಂದುಗೂಡಿ ತೆಗೆದುಕೊಂಡು ಹೋಗುತ್ತೇವೆ ಎಂದು ಬಿಜೆಪಿ ನಾಯಕರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ತಿರುಗೇಟು ನೀಡಿದ್ದಾರೆ. ಹಲಾಲ್ ಆಗಲಿ ಅಥವಾ ಧ್ವನಿವರ್ಧಕ ಆಗಲಿ ಇದೆಲ್ಲವನ್ನೂ ಕಾನೂನು ಚೌಕಟ್ಟಿನಲ್ಲಿವೆ. ಏನಾಗಬೇಕು ಅದನ್ನ ನಮ್ಮ ಪಕ್ಷದ ಮುಖಂಡರು ಹೇಳ್ತಾರೆ. ಅದನ್ನ ಪಾಲೋ ಮಾಡ್ತೇವೆ ಎಂದರು.

ಇದನ್ನೂ ಓದಿ: ವಿದ್ಯುತ್​ ದರ ಏರಿಕೆಯ ಶಾಕ್: ಏಪ್ರಿಲ್​ 1ರಿಂದಲೇ ಯೂನಿಟ್​​ಗೆ 5 ಪೈಸೆ ಹೆಚ್ಚಳ, ಲೆಕ್ಕಚಾರ ಇಲ್ಲಿದೆ

ಹೊಸ ರೀತಿಯಲ್ಲಿ ಪ್ರೆಗ್ನೆನ್ಸಿ ಫೋಟೋಶೂಟ್​ ಮಾಡಿಸಿ ಗಮನ ಸೆಳೆದ ಸೋನಂ ಕಪೂರ್

Published On - 4:15 pm, Mon, 4 April 22