AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾನೂನು ಬಾಹಿರ ಮಸೀದಿಯೋ ಇಲ್ಲವೋ ಎಂದು ನಿರ್ಧರಿಸಲು ನೀವು ಯಾರು? ಹಿಂದೂ ಸಂಘಟನೆಗಳಿಗೆ ಮುಸ್ಲಿಂ ಧರ್ಮಗುರುಗಳ ಪ್ರಶ್ನೆ

ಕೆಲವು ದಿನಗಳಿಂದ ಬೆಳಗಾವಿಯಲ್ಲಿ ವಾತಾವರಣ ಹಾಳು ಮಾಡಲು ಕೆಲವು ಜನರು ಯತ್ನಿಸುತ್ತಿದ್ದು, ಸಾರಥಿ ನಗರದಲ್ಲಿ ಫಾತೀಮಾ ಮಸೀದಿ ವಿವಾದವನ್ನ ಸೃಷ್ಟಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಈ ವಿವಾದ ಸೃಷ್ಟಿಸಲಾಗುತ್ತಿದೆ ಎಂದು ಮುಸ್ಲಿಂ ಮುಖಂಡ ಫಜಲ್ ಪಠಾಣ್ ಹೇಳಿದ್ದಾರೆ.

ಕಾನೂನು ಬಾಹಿರ  ಮಸೀದಿಯೋ ಇಲ್ಲವೋ ಎಂದು ನಿರ್ಧರಿಸಲು ನೀವು ಯಾರು? ಹಿಂದೂ ಸಂಘಟನೆಗಳಿಗೆ ಮುಸ್ಲಿಂ ಧರ್ಮಗುರುಗಳ ಪ್ರಶ್ನೆ
ಸಾರಥಿ ನಗರದಲ್ಲಿರುವ ಫಾತೀಮಾ ಮಸೀದಿ
TV9 Web
| Updated By: ರಮೇಶ್ ಬಿ. ಜವಳಗೇರಾ|

Updated on:Jan 10, 2023 | 6:39 PM

Share

ಬೆಳಗಾವಿ: ಸಾರಥಿ ನಗರದಲ್ಲಿ ಫಾತೀಮಾ ಮಸೀದಿ ವಿಚಾರವಾಗಿ ವಿವಾದ ಸೃಷ್ಟಿಸಲಾಗುತ್ತಿದೆ. ದಕ್ಷಿಣ ಭಾಗದಲ್ಲಿ ಜೈತುನ್ ಮಸೀದಿ ವಿವಾದ ಸೃಷ್ಟಿಸಿದ್ದು, ಸಾರಥಿ ನಗರದಲ್ಲಿ ಫಾತೀಮಾ ಮಸೀದಿ ವಿವಾದ ಸೃಷ್ಟಿಸಿದ್ದಾರೆ. ಚುನಾವಣೆ ಸಮೀಪಿಸುತ್ತಿದ್ದಂತೆ ಈ ವಿವಾದ ಸೃಷ್ಟಿಸಲಾಗುತ್ತಿದೆ. ಅದು ಕಾನೂನು ಪ್ರಕಾರ ಇದೆಯೋ ಅಥವಾ ಕಾನೂನು ಬಾಹಿರ ಇದೆಯೋ ಅದನ್ನ ನಿರ್ಧರಿಸಲು ಇವರಾರು, ಮಸೀದಿ ಮೇಲೆ ಅನುಮಾನ ಇದ್ದರೆ ಡಿಸಿ, ಮಹಾನಗರ ಪಾಲಿಕೆ ಆಯುಕ್ತರು ಅಥವಾ ನಗರ ಪೊಲೀಸ್ ಆಯುಕ್ತರ ಬಳಿ ಹೋಗಲಿ ಎಂದು ಫಾತೀಮಾ ಮಸೀದಿ ವಿವಾದ ವಿಚಾರವಾಗಿ ಬೆಳಗಾವಿಯಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮುಸ್ಲಿಂ ಮುಖಂಡ ಫಜಲ್ ಪಠಾಣ್ ಹೇಳಿದ್ದಾರೆ.

ಕಳೆದ 7 ವರ್ಷಗಳಿಂದ ಈ ಮಸೀದಿ ಇದ್ದು, ಈಗ ವಿವಾದ ಸೃಷ್ಟಿಸುತ್ತಿದ್ದಾರೆ. ನಮಗೆ ಕಿರುಕುಳ ನೀಡುವ ಹಕ್ಕು ಯಾರಿಗೂ ಇಲ್ಲ. ಗುಂಪು ಕಟ್ಟಿ ಬಂದು ಹೆದರಿಸಿದರೇ ನಡೆಯಲ್ಲ, ನಾವು ಹೆದರುವವರಲ್ಲ. ನಮ್ಮ ಮೇಲೆ ಸಂಶಯ ಇದ್ದರೆ ಪೊಲೀಸರಿಗೆ ಹೋಗಿ ದೂರು ನೀಡಲಿ. ಮೊನ್ನೆ ಹಿಂದೂ ಸಮಾವೇಶದಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ ಬಳಿಕ ಗದ್ದಲ ಆಗುತ್ತಿದೆ. ವಕ್ಫ್ ಬೋರ್ಡ್‌ದವರು ಅದಕ್ಕೆ ಸಮರ್ಪಕ ದಾಖಲೆ ಕೊಡುತ್ತಾರೆ. ಡಿಸಿ ಸಾಹೇಬರು ಕರೆಯಲಿ ನಾವು ದಾಖಲೆ ಕೊಡುತ್ತೇವೆ. ಆಮೇಲೆ ಅದು ಮನೆಗೆ ಅನುಮತಿ ಇತ್ತೋ ಅಥವಾ ಮಸೀದಿಗೆ ಅನುಮತಿ ಇತ್ತೋ ಎಂಬುದನ್ನ ಇಲಾಖೆಯವರು ನಿರ್ಧರಿಸಲಿ ಎಂದು ಹಿಂದು ಮುಖಂಡರ ವಿರುದ್ಧ ಮುಸ್ಲಿಂ ಮುಖಂಡರ ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ:ಧರ್ಮ ಸಭೆ ಅಲ್ಲ, ಶಿಕ್ಷಣದಲ್ಲಿ ಮೌಲ್ಯಗಳನ್ನು ನೀಡುವ ಪ್ರಯತ್ನ ಇದು: ಶಿಕ್ಷಣ ಸಚಿವ ಬಿ.ಸಿ.ನಾಗೇಶ್

ಇನ್ನು ಸುದ್ದಿಗೊಷ್ಠಿಯಲ್ಲಿ ಇಸ್ಲಾಂ ಧರ್ಮಗುರುಗಳು, ಮುಸ್ಲಿಂ ಸಮುದಾಯದ ಮುಖಂಡರುಗಳಾದ ಖಾಜಿ ಮುಫ್ತಿ ಮಂಜೂರ್ ಆಲಂ ಮಿಸ್ಬಾಯಿ, ಫಜಲ್ ಪಠಾಣ್ ಸೇರಿದಂತೆ ಪಕ್ಷೇತರ ಮಹಾನಗರ ಪಾಲಿಕೆ ಸದಸ್ಯ ಅಜಿಂ ಪಟವೇಗಾರ್ ಸೇರಿ ಹಲವರು ಇದ್ದರು.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Tue, 10 January 23