AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಳಗಾವಿಯಲ್ಲಿ ಚಿರತೆ ಸೆರೆಗೆ ಆಪರೇಷನ್ ಗಜಪಡೆ; ಇಂದೂ ಸಿಗದ ಚಿರತೆ

ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಚಿರತೆ ಪ್ರತ್ಯಕ್ಷ ಹಿನ್ನೆಲೆ ಚಿರತೆ ಸೆರೆಗೆ ನಡೆದ ಆಪರೇಷನ್ ಗಜಪಡೆ ​ ಮುಕ್ತಾಯಗೊಂಡಿದೆ.

ಬೆಳಗಾವಿಯಲ್ಲಿ ಚಿರತೆ ಸೆರೆಗೆ ಆಪರೇಷನ್ ಗಜಪಡೆ; ಇಂದೂ ಸಿಗದ ಚಿರತೆ
ಚಿರತೆ ಸೆರೆ ಹಿಡಿಯಲು ಆಫರೇಷನ್​ ಗಜಪಡೆ
TV9 Web
| Updated By: ವಿವೇಕ ಬಿರಾದಾರ|

Updated on:Aug 24, 2022 | 7:46 PM

Share

ಬೆಳಗಾವಿ: ಬೆಳಗಾವಿಯ (Belagavi) ಗಾಲ್ಫ್ ಮೈದಾನದಲ್ಲಿ ಚಿರತೆ (Leopard) ಪ್ರತ್ಯಕ್ಷ ಹಿನ್ನೆಲೆ ಚಿರತೆ ಸೆರೆಗೆ ನಡೆದ ಆಪರೇಷನ್ ಗಜಪಡೆ ​ ಮುಕ್ತಾಯಗೊಂಡಿದೆ. 250 ಎಕರೆ ಪ್ರದೇಶದಲ್ಲಿ 2 ಆನೆ (Elephant) ಬಳಸಿ ಮಧ್ಯಾಹ್ನ 12.30ರಿಂದ ಗಜಪಡೆ ಶೋಧ ಕಾರ್ಯ ನಡೆಸಿತ್ತು. ಆನೆ ಬಳಸಿ 7 ಕಿ.ಮೀ. ವ್ಯಾಪ್ತಿಯಲ್ಲಿ ಕೂಂಬಿಂಗ್ ನಡೆಸಲಾಗಿತ್ತು. ಈ ವೇಳೆ ಹಂದಿ ಬೇಟೆಯಾಡಿ ಅರ್ಧ ಮಾಂಸ ತಿಂದಿರುವುದು ಪತ್ತೆಯಾಗಿದೆ.

ಆನೆಗಳ ಜೊತೆ ತೆರಳಿದ್ದ ಅರಿವಳಿಕೆ ತಜ್ಞರು, ಅರಣ್ಯ ಇಲಾಖೆ ಸಿಬ್ಬಂದಿ, ಹುಕ್ಕೇರಿಯ ಹಂದಿ ಹಿಡಿಯುವ ತಂಡ ಮತ್ತು ಪೊಲೀಸರು ವಾಪಸ್​ ಆಗಿದ್ದಾರೆ. ಮತ್ತೆ ನಾಳೆ (ಆ 25) ಬೆಳಗ್ಗೆಯಿಂದ 2 ಆನೆ ಬಳಸಿ ಚಿರತೆಗಾಗಿ ಶೋಧ ಕಾರ್ಯ ಪ್ರಾರಂಭವಾಗುತ್ತದೆ.

18 ದಿನಗಳಿಂದ ಕಾಡುತ್ತಿದ್ದ ಚಿರತೆ ಹಿಡಿಯಲು ಆಪರೇಷನ್ ಗಜಪಡೆ

ಬೆಳಗ್ಗೆ 6.30ರ ಸುಮಾರಿಗೆ ಬೆಳಗಾವಿ ಹಿಂಡಲಗಾ ಗ್ರಾಮದ ಕ್ಯಾಂಪ್ ಪ್ರದೇಶದ ರಸ್ತೆಯಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಇದನ್ನ ನೋಡಿದ್ದ ಖಾಸಗಿ ಬಸ್ ಚಾಲಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಡಿಸಿ ನಿತೇಶ್ ಪಾಟೀಲ್ ನಗರ ಹಾಗೂ ಗ್ರಾಮೀಣ ಭಾಗದ 22 ಸರ್ಕಾರಿ, ಖಾಸಗಿ ಶಾಲೆಗಳಿಗೆ ರಜೆ ಘೋಷಿಸಿದ್ದರು. ಇತ್ತ ಚಿರತೆ ಹಿಡ್ಯೋಕೆ ಅರಣ್ಯ ಇಲಾಖೆಯ 20 ಸಿಬ್ಬಂದಿ ಫೀಲ್ಡಿಗಿಳದಿದ್ದಾರೆ. ಆದರೆ ಸರಿಯಾದ ಪ್ಲ್ಯಾನ್ ಮಾಡದ ಕಾರಣ ಅಧಿಕಾರಿಗಳ ಕಣ್ಮುಂದೆಯೇ ಗಾಲ್ಫ್ ಮೈದಾನದತ್ತ ಎಸ್ಕೇಪ್ ಆಗಿತ್ತು. ಸ್ಥಳಕ್ಕೆ ಬಂದ ಶಾಸಕ ಅನಿಲ್ ಬೆನಕೆ ಸಿಬ್ಬಂದಿ ಬೇಜವಾಬ್ದಾರಿಗೆ ಅಸಮಧಾನ ಹೊರ ಹಾಕಿದ್ರು.

ಪೊಲೀಸರು ಹಾಗೂ ಅರಣ್ಯಾಧಿಕಾರಿಗಳು 2 ಗಂಟೆಗಳು ಹುಡುಕಾಡಿದ್ರೂ 200 ಎಕರೆ ಅರಣ್ಯ ಪ್ರದೇಶದಲ್ಲಿ ಚಿರತೆ ಪತ್ತೆಯಾಗಿಲ್ಲ. ಕೊನೆಗೆ ಹುಕ್ಕೇರಿಯಿಂದ ಹಂದಿ ಹಿಡಿಯುವ ಕೆಲ ಯುವಕರ ಜತೆಗೆ 20 ನಾಯಿಗಳನ್ನ ಕರೆಸಿ ಮತ್ತೆ ಆಪರೇಷನ್ ಶುರು ಮಾಡಿದ್ರು. ಡ್ರೋನ್ ಹಾರಿಸಿದ್ರೂ ಚಿರತೆಯ ಸುಳಿವೇ ಸಿಗ್ಲಿಲ್ಲ. ಅರಣ್ಯ ಇಲಾಖೆ ಸಚಿವ ಉಮೇಶ್ ಕತ್ತಿ ಡಿಸಿ, ಎಸ್‌ಪಿ ಸೇರಿದಂತೆ ಕೆಲ ಸಿಬ್ಬಂದಿ ಜತೆ ಸಭೆ ಮಾಡಿ ಕಾರ್ಯಾಚರಣೆ ಕುರಿತು ಮಾಹಿತಿ ಪಡೆದ್ರು. ಸದ್ಯ ನಾಳೆ ಬೆಳಗ್ಗೆ ಇಬ್ಬರು ಶೂಟರ್ಸ್, 120ಅರಣ್ಯ ಇಲಾಖೆ ಸಿಬ್ಬಂದಿ, 80ಪೊಲೀಸ್ ಸಿಬ್ಬಂದಿಯನ್ನ ಬೇಟೆಗಿಳಿಸೋ ಪ್ಲ್ಯಾನ್ ಮಾಡಿದ್ದಾರೆ. ಹಾಗೇ ಸಕ್ರೇಬೈಲ್​ನಿಂದ ಸಾಕಾನೆಗಳನ್ನ ಕರೆಸೋಕೂ ತಯಾರಿ ನಡೆದಿದೆ. ಚಿರತೆ ಸಿಗದಿದ್ದಕ್ಕೆ ನಾಳೆಯೂ ಬೆಳಗಾವಿ ನಗರದ 22ಶಾಲೆಗಳಿಗೆ ರಜೆ ಮುಂದುವರಿಯಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:43 pm, Wed, 24 August 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?